ತಪ್ಪು ದಾರಿಯನ್ನು ತೋರಿಸುವ ಚಲನಚಿತ್ರ ಮತ್ತು ದೂರದರ್ಶನ ವಾಹಿನಿಗಳೆಂಬ ಅಸುರರು !

ಕು. ಮಾಯಾ ಪಾಟೀಲ

ಕೆಲವು ಚಲನಚಿತ್ರಗಳನ್ನು ಹೊರತುಪಡಿಸಿ ಹೆಚ್ಚಿನ ಚಲನಚಿತ್ರಗಳು ಯುವಪೀಳಿಗೆಯ ಮೇಲೆ  ಅಯೋಗ್ಯ ಸಂಸ್ಕಾರಗಳನ್ನೇ ಮಾಡಿವೆ. ಅದರಿಂದಾಗಿ ವಾಸ್ತವ (ಸತ್ಯ) ಮತ್ತು ಚಲನಚಿತ್ರಗಳಲ್ಲಿನ ಜಗತ್ತು ಇವು ಬೇರೆ ಬೇರೆ ಆಗಿರುತ್ತವೆ, ಎಂಬುದನ್ನು ತಿಳಿದುಕೊಳ್ಳುವ ಬುದ್ಧಿಯನ್ನೇ ಯುವಕರು ಕಳೆದುಕೊಂಡಿದ್ದಾರೆ. ಚಲನಚಿತ್ರಗಳಲ್ಲಿನ ಸಿರಿವಂತಿಕೆಯ ಆಡಂಬರದ ಸಂಸ್ಕಾರ ಮತ್ತು ನವರೂಢಿ(ಫ್ಯಾಶನ್)ಗಳಂತೆ ನಡೆದುಕೊಳ್ಳುವುದೆಂದರೆ ನಾವು ಗಣ್ಯರು ಅಥವಾ ದೊಡ್ಡ ವ್ಯಕ್ತಿಗಳು ಎಂಬ ತಪ್ಪು ಸಂಸ್ಕಾರ ಅವರ ಮೇಲಾಗಿದೆ. ಈಗ ಚಲನಚಿತ್ರಗಳಲ್ಲಿ ತೋರಿಸಿದಂತೆ ಕೇಶಾಲಂಕಾರ ಮಾಡುವುದು, ಉಡುಗೆತೊಡುಗೆ ಮಾಡುವುದು ಮಹಾವಿದ್ಯಾಲಯಗಳಲ್ಲಿನ ಯುವಕರ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ತಾರುಣ್ಯದಲ್ಲಿನ ಲೈಂಗಿಕ ಆಕರ್ಷಣೆಯಿಂದ ನಿರ್ಮಾಣವಾಗುವ ಪ್ರೇಮವೇ ಬಹಳಷ್ಟು ಭಾರತೀಯ ಚಲನಚಿತ್ರಗಳ ಕೇಂದ್ರಬಿಂದು ಆಗಿರುವುದರಿಂದ ಕಳೆದ ಕಲವು ದಶಕಗಳಿಂದ ಕೆಲವೊಂದು ಪ್ರಮಾಣದಲ್ಲಿ ಹೆಚ್ಚಿನ ಭಾರತೀಯ ಯುವಕರ ಭಾವವಿಶ್ವವು ಅಷ್ಟಕ್ಕೇ ಸೀಮಿತವಾಗಿದೆ. ಈಗ ಈ ಪ್ರೇಮದ ಜಾಗವನ್ನು ‘ಓಟಿಟಿ ಪ್ಲಾಟ್‌ಫಾರ್ಮ್’ ನಂತಹ ಮಾಧ್ಯಮಗಳಿಂದ ತೋರಿಸಲಾಗುವ ಚಲನಚಿತ್ರಗಳು ಅಥವಾ ಧಾರಾವಾಹಿಗಳು ತೆಗೆದುಕೊಂಡಿವೆ. ಅಶ್ಲೀಲತೆ ಮತ್ತು ಹಿಂಸಾಚಾರಗಳಿಂದ ತುಂಬಿ ತುಳುಕುವ ಈ ಚಲನಚಿತ್ರಗಳು ಅಥವಾ ಧಾರಾವಾಹಿಗಳು ಯುವಕರ ಮನಸ್ಸಿನ ಮೇಲೆ ಬಹಳಷ್ಟು ಪ್ರಮಾಣದಲ್ಲಿ ಕುಸಂಸ್ಕಾರಗಳನ್ನು ಮಾಡುತ್ತಿವೆ. ಅದರಿಂದ ಬಲಾತ್ಕಾರ ಮತ್ತು ಇತರ ಗಂಭೀರ ಅಪರಾಧಗಳು ಬಹಳಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ.

ಯುವಕರೇ, ಚಲನಚಿತ್ರಗಳ ಪ್ರಶಂಸೆಯನ್ನು ತಡೆಯಿರಿ !

ಕೆಲವು ವರ್ಷಗಳ ಹಿಂದೆ ನಟ ರಜನೀಕಾಂತ ಇವರ ‘ಕಬಾಲೀ’ ಎಂಬ ಹಿಂದಿ ಭಾಷೆಯಲ್ಲಿನ ಚಲನಚಿತ್ರವು ಚಲನಚಿತ್ರಗೃಹಗಳಲ್ಲಿ ಬಿಡುಗಡೆ ಆಯಿತು. ೧೬೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ ಈ ಚಲನಚಿತ್ರವು ೨೫೦ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಗಳಿಕೆಯನ್ನು ಮಾಡಿತು. ಚಲನಚಿತ್ರವು ಬಿಡುಗಡೆಯಾಗುವ ಮೊದಲು ಮತ್ತು ಪ್ರದರ್ಶನದ ಮೊದಲನೆಯ ದಿನದಂದು, ಎಂತಹ ಘಟನೆಗಳು ಭಾರತದಲ್ಲಿ ಮತ್ತು ಭಾರತದ ಹೊರಗೆ ಘಟಿಸಿದವೋ ಅವು ಅಚ್ಚರಿಗೊಳಿಸುವಂತಿತ್ತು. ಸದ್ಯ ದೇಶದಲ್ಲಿನ ಸಮಸ್ಯೆಗಳ ವಿಚಾರವನ್ನು ಮಾಡಿದರೆ ಭ್ರಷ್ಟಾಚಾರ, ಬೆಲೆ ಏರಿಕೆ, ಬರಗಾಲ, ನೆರೆಹಾವಳಿ, ಭಯೋತ್ಪಾದಕರ ಆಕ್ರಮಣಗಳು, ಹಿಂದೂಗಳ ಮೇಲೆ ಆಗುವ ಅತ್ಯಾಚಾರಗಳು, ಬಲಾತ್ಕಾರ ಇವು ಮತ್ತು ಇವುಗಳಂತಹ ಇನ್ನೂ ಅನೇಕ ಸಮಸ್ಯೆಗಳಿಂದ ಸಾಮಾನ್ಯ ಜನರ ಜೀವನವು ಕಠಿಣವಾಗಿದೆ. ಈ ಹಿನ್ನೆಲೆಯಲ್ಲಿ ‘ಕಬಾಲೀ’ ಚಲನಚಿತ್ರ ಮತ್ತು ರಜನೀಕಾಂತ ಇವರ ಮೇಲಿನ ಪ್ರೇಮದಿಂದ ಯುವಕರು ಮುಂಜಾನೆಯಿಂದಲೇ ಚಲನಚಿತ್ರಗೃಹಗಳಲ್ಲಿ ಟಿಕೇಟಿಗಾಗಿ ಸಾಲು ಹಚ್ಚುವುದು, ಪಟಾಕಿಗಳನ್ನು ಹಾರಿಸುವುದು, ಸಮಾರಂಭಗಳನ್ನು ಮಾಡುವುದು ಇತ್ಯಾದಿ ಕೃತಿಗಳು ತಲೆನೋವು ತರುವಂತಹವುಗಳು ಆಗಿವೆ. – ಕು. ಮಾಯಾ ಪಾಟೀಲ, ಸನಾತನ ಆಶ್ರಮ ದೇವದ, ಪನವೇಲ.

ಯುವಕರು ಚಲನಚಿತ್ರಗಳ ಮಾಧ್ಯಮದಿಂದ ಕಳ್ಳತನದ ಹೊಸ ಹೊಸ ಕಲೆಗಳು, ದುಷ್ಚಟಗಳು ಮತ್ತು ವ್ಯಭಿಚಾರನ್ನು ಕಲಿಯುತ್ತಿದ್ದಾರೆ !

ಚಲನಚಿತ್ರಗಳಿಂದ ಯುವಕರು ಕಳ್ಳತನದ ಹೊಸ ಹೊಸ ಕಲೆಗಳು, ಬ್ಯಾಂಕ್‌ಗಳಿಗೆ ದರೋಡೆ ಹಾಕುವುದು, ಸರಾಯಿ ಕುಡಿಯುವುದು ಮತ್ತು ವ್ಯಾಭಿಚಾರವನ್ನು ಕಲಿಯುತ್ತಿದ್ದಾರೆ. ಚಲನಚಿತ್ರಗಳಿಂದ ನಮ್ಮ ಯುವಕ-ಯುವತಿಯರಲ್ಲಿ ಸ್ವೇಚ್ಛೆಯಿಂದ (ತಮ್ಮ ಮನಸ್ಸಿನಂತೆ ಮಾಡುವುದು) ನಡೆದುಕೊಳ್ಳುವುದು ಹೆಚ್ಚಾಗುತ್ತಿದೆ. ಇದರ ಎಷ್ಟೋ ಉದಾಹರಣೆಗಳಂತು ನಮ್ಮ ಮುಂದೆಯೇ ಇವೆ. ಕೋಟಿಗಟ್ಟಲೆ ಯುವಕ-ಯುವತಿಯರ ಮನಸ್ಸಿನ ಮೇಲೆ ಈ ವಿಷಯದ ಪರಿಣಾಮ ಎಷ್ಟು ಆಗಿರಬಹುದು ? ಎಂಬುದು ಯಾರಿಗೆ ಗೋತ್ತು, ಆದರೂ ಇದಕ್ಕೆ ನಾವು ಮನೋರಂಜನೆಯ ಸಾಧನವೆಂದೇ ತಿಳಿದುಕೊಳ್ಳುತ್ತಿದ್ದೇವೆ, ಇದು ಎಷ್ಟೊಂದು ದೊಡ್ಡ ಅಜ್ಞಾನವಾಗಿದೆ !