೧. ಅಮಲು ಪದಾರ್ಥಗಳಿಗೆ ಬಲಿಯಾಗುವ ಯುವಕರನ್ನು ಅದರಿಂದ ಹೊರಗೆ ತೆಗೆಯಬೇಕೆಂದು, ನಟ-ನಟಿಯರಿಗೆ ಮತ್ತು ಆಡಳಿತಗಾರರಿಗೆ ಏಕೆ ಅನಿಸುವುದಿಲ್ಲ
ನಟ-ನಟಿಯರು ಮತ್ತು ಆಡಳಿತಗಾರರು ಪೋಲಿಯೋ ನಿರ್ಮೂಲನೆಗಾಗಿ ಸಮರೋಪಾದಿಯಲ್ಲಿ ಪ್ರಯತ್ನಿಸಿ ಅದನ್ನು ಯಶಸ್ವಿಗೊಳಿಸಿದರು. ಇಂದು ನಮ್ಮ ದೇಶದಲ್ಲಿನ ಬಹಳಷ್ಟು ಯುವಕರು ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿದ್ದಾರೆ, ಆದರೆ ‘ಈ ಯುವಕರನ್ನು ಅದರಿಂದ ಹೊರಗೆ ತಗೆಯಲು ಸಮರೋಪಾದಿಯಲ್ಲಿ ಪ್ರಯತ್ನಿಸಬೇಕೆಂದು ಅವರಿಗೆ (ನಟ-ನಟಿಯರಿಗೆ ಮತ್ತು ಆಡಳಿತಗಾರರಿಗೆ) ಅನಿಸುವುದಿಲ್ಲ’, ಇದು ಈ ಪೀಳಿಗೆಯ ದುರ್ಭಾಗ್ಯವಾಗಿದೆ.
೨. ಡ್ರಗ್ ಮಾಫಿಯಾ (ಅಮಲು ಪದಾರ್ಥಗಳ ಮಾರಾಟವನ್ನು ಮಾಡುವವರು) ಚಲನಚಿತ್ರಗಳ ನಿರ್ಮಿತಿಗಾಗಿ ಹಣವನ್ನು ಪೂರೈಸುವುದರಿಂದ ನಟ-ನಟಿಯರು ಅಮಲು ಪದಾರ್ಥಗಳ ಸೇವನೆಗೆ ಬಲಿಯಾದ ಯುವಕರಿಗಾಗಿ ಹೋರಾಡುವುದಿಲ್ಲ.
ಉತ್ತರಪ್ರದೇಶ ಮತ್ತು ಪಂಜಾಬ ರಾಜ್ಯಗಳಲ್ಲಿ ಲಕ್ಷಗಟ್ಟಲೆ ಯುವಕರು ಅಮಲು ಪದಾರ್ಥಗಳ ಸೇವನೆಯಿಂದ (‘ಡ್ರಗ್ ಜಿಹಾದ್’ದಿಂದ) ಸಾಯುತ್ತಿದ್ದಾರೆ, ಆದರೆ ಒಬ್ಬ ನಟನೂ ಇದನ್ನು ತಡೆಯಲು ಮುಂದೆ ಬಂದಿಲ್ಲ. ಇದರ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ, ಈ ಅಮಲು ಪದಾರ್ಥಗಳನ್ನು ಮಾರಾಟ ಮಾಡುವವರೇ (ಡ್ರಗ್ ಮಾಫಿಯಾಯಗಳೇ) ಚಲನಚಿತ್ರಗಳ ನಿರ್ಮಿತಿಗಾಗಿ ಬೇಕಾಗುವ ಹಣವನ್ನು ಪೂರೈಸುತ್ತಾರೆ ಎಂಬುದು ನನ್ನ ಗಮನಕ್ಕೆ ಬಂದಿತು. ಇದರಿಂದಾಗಿಯೇ ನಟ-ಮಟಿಯರು, ಈ ಅಮಲು ಪದಾರ್ಥಗಳ ಸೇವನೆಗೆ (‘ಡ್ರಗ್ ಜಿಹಾದ್’ಗೆ) ಬಲಿಯಾಗುವ ಯುವಕರಿಗಾಗಿ ಹೋರಾಡುವುದಿಲ್ಲ. ಇನ್ನೊಂದು ಕಡೆ ಈ ಯುವ ಪೀಳಿಗೆಗೆ ಯೋಗ್ಯ ದಿಶೆಯನ್ನು ಕೊಡುವವರು ಯಾರೂ ಇಲ್ಲದಿರುವುದರಿಂದ ಈ ಸ್ಥಿತಿಯು ನಿರ್ಮಾಣವಾಗಿದೆ.
೩. ಯುವಕರು ತಮ್ಮ ಹಣದಿಂದಲೇ ವಿಷವನ್ನು ಖರೀದಿಸಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವುದು
ಇದರ ಅರ್ಥವೇನೆಂದರೆ, ಯುವಕರ ಹಣದಿಂದಲೇ ಈ ಮಾಫಿಯಾಗಳ ವ್ಯವಸಾಯ ನಡೆದಿದೆ. ಒಂದು ದೃಷ್ಟಿಯಿಂದ ನೋಡಿದರೆ ಈ ಯುವಕರು ತಮ್ಮ ಹಣದಿಂದಲೇ ವಿಷವನ್ನು ಖರೀದಿಸುತ್ತಿದ್ದಾರೆ ಮತ್ತು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ.
– ಶ್ರೀ. ವೆಂಕಟೇಶ ಅಯ್ಯಂಗಾರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೮.೨೦೧೬)
ಯುವಕರೆ, ‘ಲಿವ್ ಇನ್ ರಿಲೇಶನ್‌ಶಿಪ್’ನಂತಹ ಅಸಂಬದ್ಧ ರೂಢಿಯನ್ನು ಅಂಗೀಕರಿಸಬೇಡಿ !ಇಂದು ಸಮಾಜದ ಅನೇಕ ಯುವಕ-ಯುವತಿಯರು ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ ಜೊತೆಯಾಗಿ ವಾಸಿಸುತ್ತಾರೆ. ಚಲನಚಿತ್ರದ ಕಲಾವಿದರ ಅಂಧಾನುಕರಣೆ ಮಾಡಿ ಈ ವಿಕೃತಿಯನ್ನು ಜೋಪಾನ ಮಾಡಲಾಗುತ್ತದೆ. ಆಘಾತಕಾರಿ ವಿಷಯವೆಂದರೆ ಚಿಕ್ಕ ವಯಸ್ಸಿನ ಹುಡುಗರು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ. ಇಂದು ರಾಷ್ಟ್ರ-ಧರ್ಮ ಸಂಕಟದಲ್ಲಿರುವಾಗ ‘ಲಿವ್ ಇನ್ ರಿಲೇಶನ್‌ಶಿಪ್’ನ ಹಿಂದೆ ಭಾವನಾವಶರಾಗಿ ಯುವ ಪೀಳಿಗೆ ತನ್ನ ಜೀವನವನ್ನು ನಾಶಮಾಡಿಕೊಳ್ಳುತ್ತಿದೆ. ಹಿಂದೆ ದೇಶ ಪಾರತಂತ್ರದಲ್ಲಿರುವಾಗ ಯುವ ಕ್ರಾಂತಿಕಾರರು ಭಾರತಮಾತೆಯ ಸೇವೆ ಮಾಡುವಾಗ ಪ್ರಸಂಗಾನುಸಾರ ಪ್ರಾಣವನ್ನೂ ಆಹುತಿ ನೀಡುತ್ತಿದ್ದರು. ಮೃತ್ಯುವನ್ನು ಎದುರಿಸುತ್ತಾ ಕ್ರಾಂತಿಯ ಹೋಳಿ ಆಡುತ್ತಿದ್ದರು. ಇಂದಿನ ಯುವಕರು ವಾಸನೆಗೆ ಬಲಿಯಾಗಿ ಯೌವ್ವನ ಹೋಳಿ ಆಡುತ್ತಿದ್ದಾರೆ. – ಕು. ಮಧುರಾ ಚತುರ್ಭುಜ, ಪುಣೆ |