ದೇಹೂ(ಜಿಲ್ಲಾ ಪುಣೆ) – ಜಗದ್ಗುರು ತುಕಾರಮ ಮಹಾರಾಜರ ೧೧ನೇ ತಲೆಮಾರಿನ ಶಿರೀಷ ಮೋರೆ ಮಹಾರಾಜ(ವಯಸ್ಸು ೩೧ ವರ್ಷ) ಅವರು ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಬಿಕಟ್ಟನ್ನು ಎದುರಿಸಲಾಗದೆ ಈ ನಿರ್ಣಯ ತೆಗೆದುಕೊಂಡಿದ್ದಾರೆಂದು ಅಂದಾಜಿಸಲಾಗಿದೆ, ಆದರೆ ತನಿಖೆ ನಡೆದ ಬಳಿಕವೇ ನಿಜವಾದ ಕಾರಣ ಬಹಿರಂಗಪಡಿಸಲಾಗುವುದು ಎಂದು ದೇಹೂ ರೋಡ್ ಪೋಲೀಸ್ ಠಾಣೆಯ ಹಿರಿಯ ಅಧಿಕಾರಿ ವಿಕ್ರಮ ಬನಸೋಡೆ ಅವರು ಹೇಳಿದ್ದಾರೆ.
ಮೋರೆ ಅವರ ಅನಿರೀಕ್ಷಿತ ನಿಧನದ ಬಳಿಕ ಸಂಪೂರ್ಣ ದೇಹೂ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಅವರ ನಿಧನಕ್ಕೆ ದೇಹೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. ಮೋರೆ ಅವರ ಅಂತ್ಯಸಂಸ್ಕಾರ ವೈಕುಂಠ ಸ್ಮಶಾನ ಭೂಮಿ, ಶ್ರೀ ಕ್ಷೇತ್ರ ದೇಹೂ ಗ್ರಾಮದಲ್ಲಿ ನೆರವೇರಿತು.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮೋರೆ ಅವರು ಮನೆಯ ಛಾವಣಿಯ ಫ್ಯಾನಿಗೆ ನೇಣು ಬಿಗಿದಿದ್ದರು. ಆತ್ಮಹತ್ಯೆಯ ಮೊದಲು ಅವರು ಒಂದು ಪತ್ರ ಬರೆದಿರುವುದು ಪತ್ತೆಯಾಗಿದೆ. ಪೊಲೀಸರು ಈ ಪತ್ರ ವಶಕ್ಕೆ ಪಡೆದು ಅದರ ತನಿಖೆ ನಡೆಸುತ್ತಿದ್ದಾರೆ.
ಶಿರೀಷ ಮೋರೆ ಮಹಾರಾಜ ಅವರ ವಿವಾಹ ಫೆಬ್ರುವರಿ ೨೦ಕ್ಕೆ ನಿಶ್ಚಯವಾಗಿತ್ತು. ಅವರು ಇತ್ತೀಚಿಗೆ ಹೊಸದಾದ ಮನೆಯನ್ನು ಕಟ್ಟಿದ್ದರು. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿರುವುದಾಗಿ ಪ್ರಾಥಮಿಕ ಮಟ್ಟದಲ್ಲಿ ಪೊಲೀಸರು ಅಂದಾಜಿಸಿದ್ದಾರೆ. ಆದರೂ ಮನೆ ಕಟ್ಟಿದ ಬಳಿಕ ದೊಡ್ಡ ಪ್ರಮಾಣದಲ್ಲಿ ಸಾಲದ ಭಾರ ಹೆಚ್ಚಾಗಿತ್ತೆ ಎಂಬುದರ ಇದರ ತನಿಖೆ ನಡೆಯುತ್ತಿದೆ.
ಪ್ರಖರ ಹಿಂದುತ್ವವಾದಿ ಚಿಂತಕ!
ಶಿವಾಜಿ ಮಹಾರಾಜರ ವ್ಯಾಖ್ಯಾನಕಾರರು ಎಂದು ಮೋರೆ ಅವರು ಹೆಸರುವಾಸಿಯಾಗಿದ್ದರು. ‘ಯಾರ ಹಣೆಯ ಮೇಲೆ ತಿಲಕವಿಲ್ಲವೋ, ಅಂತವರಿಂದ ವಸ್ತು ಖರೀದಿಸಬೇಡಿ,’ ಎಂದು ಶಿರೀಷ ಮಹಾರಾಜರು ಹಿಂದುಗಳಿಗೆ ಕರೆ ನೀಡುತ್ತಿದ್ದರು. ಹಿಂದುಗಳ ಮೇಲೆ ನಡೆಯುವ ಅನ್ಯಾಯ ಅತ್ಯಾಚಾರದ ಕುರಿತು ಅವರು ಯಾವಾಗಲೂ ಟೀಕೆ ಮಾಡುತ್ತಿದ್ದರು.’ ಲವ್ ಜಿಹಾದ್ ‘, ‘ಉದ್ಯೋಗ ಜಿಹಾದ್’, ‘ಲ್ಯಾಂಡ್ ಜಿಹಾದ್ ‘, ‘ಅನ್ನ ಜಿಹಾದ್ ‘, ಮತಾಂತರ ಇಂತಹ ವಿಷಯಗಳ ಬಗ್ಗೆ ಅವರ ವ್ಯಾಖ್ಯಾನಗಳು ಪ್ರಸಿದ್ಧವಾಗಿವೆ. ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ಪ್ರಯತ್ನಪೂರ್ವಕವಾಗಿ ಇಸ್ಲಾಮಿಕರಣ ಮಾಡುವವರಿಗೆ ಖಡಕ್ ಉತ್ತರ ನೀಡುವಲ್ಲಿ ಮಹಾರಾಜರು ಮುಂಚೂಣಿಯಲ್ಲಿದ್ದರು.
ಹಿಂದುತ್ವದ ನಿಲುವನ್ನು ದೃಢವಾಗಿ ಮಂಡಿಸುವುವ ನೇತೃತ್ವ ತೆರೆ ಹಿಂದೆ ಸರಿದಿದೆ ! – ಪರಾಗ ಗೋಖಲೆ, ಹಿಂದೂ ಜನಜಾಗೃತಿ ಸಮಿತಿ
ವಾರ್ಕರಿ ಸಂಪ್ರದಾಯ, ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂತಹ ವಿವಿಧ ಮಾಧ್ಯಮದಿಂದ ದೇವರು, ದೇಶ ಮತ್ತು ಧರ್ಮಕ್ಕಾಗಿ ಅವರು ನಿರಂತರ ಕಾರ್ಯನಿರತವಾಗಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಲ್ಲಿಯೂ ಕೂಡ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಹಿಂದುತ್ವದ ನಿಲುವು ದೃಢವಾಗಿ ಮಂಡಿಸುವವರು, ವಾರ್ಕರಿ ಸಂಪ್ರದಾಯದ ಒಂದು ಸಮರ್ಥ ನೇತೃತ್ವ ತೆರೆ ಹಿಂದೆ ಸರಿದಿದೆ!