ಆಗ್ರಾ (ಉತ್ತರ ಪ್ರದೇಶ) – 2021 ರಲ್ಲಿ ಪತ್ನಿ ವರ್ಷಾ ರಘುವಂಶಿಗೆ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಫಯೀಮ ಖುರೇಷಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಅವನಿಗೆ ವರದಕ್ಷಿಣೆ ಹಿಂಸೆ ಮತ್ತು ಕ್ರೌರ್ಯಕ್ಕಾಗಿ ಭಾರತೀಯ ದಂಡ ಸಂಹಿತೆಯ ಕಲಂ 304ಬಿ ಮತ್ತು 498ಎ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
1. ಈ ಪ್ರಕರಣದಲ್ಲಿ, ಫಯೀಮನ ತಂದೆ ಖಯೂಮ ಖುರೇಷಿ, ತಾಯಿ ಫಿರದೌಸ ಖುರೇಷಿ, ಸಹೋದರ ನಯೀಮ ಖುರೇಷಿ ಮತ್ತು ಸಹೋದರಿ ತಬಸ್ಸುಮ ಖುರೇಷಿ ಅವರನ್ನು ಅಪರಾಧಕ್ಕೆ ನೇರವಾಗಿ ಸಂಬಂಧಿಸಿರುವ ಸಾಕಷ್ಟು ಪುರಾವೆಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಯಿತು.
2. ವರ್ಷಾಳನ್ನು ವರದಕ್ಷಿಣೆಗಾಗಿ ಮಾತ್ರವಲ್ಲದೆ, ಮತಾಂತರಿಸಲು ಸಹ ಚಿತ್ರಹಿಂಸೆ ನೀಡಲಾಗಿದೆ ಎಂದು ಸರಕಾರಿ ವಕೀಲರು ವಾದಿಸಿದರು; ಆದರೆ, ಇದಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಏನಿದು ಪ್ರಕರಣ ?ನವೆಂಬರ್ 12, 2021 ರಂದು, ವರ್ಷಾ ಅತ್ತೆಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ವರ್ಷಾಳ ಅತ್ತೆ-ಮಾವಂದಿರು ಪದೇ ಪದೇ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದರು, ಇದರಿಂದಾಗಿ ವರ್ಷಾ ಅನೇಕ ತಿಂಗಳು ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಬೇಕಾಯಿತು. ಅವರು ವರದಕ್ಷಿಣೆಯಾಗಿ 5 ಲಕ್ಷ ರೂಪಾಯಿ ಮತ್ತು ಕಾರು ತರುವಂತೆ ಬೇಡಿಕೆ ಇಟ್ಟಿದ್ದರು. ಬೇಡಿಕೆಗಳನ್ನು ಈಡೇರಿಸದ ಕಾರಣ ಅವಳನ್ನು ಹಿಂಸಿಸಲಾಯಿತು. ಆಕೆಯ ಅತ್ತೆ-ಮಾವ ಹಿಂದೂ ಧರ್ಮವನ್ನು ತ್ಯಜಿಸಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದರು ಮತ್ತು ಮಾಂಸ ಬೇಯಿಸಿ ತಿನ್ನುವಂತೆಯೂ ಒತ್ತಾಯಿಸಲಾಯಿತು’, ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ವರ್ಷಾ ಪೂಜೆ ಮಾಡಿದ್ದಕ್ಕಾಗಿ ಅಪಹಾಸ್ಯ ಮಾಡಲಾಯಿತು ಮತ್ತು ಹಿಂದೂ ಸಂಪ್ರದಾಯಗಳನ್ನು ಅನುಸರಿಸಿದ್ದಕ್ಕಾಗಿ ಅವಮಾನಿಸಲಾಯಿತು ಎಂದು ಸಾಕ್ಷಿದಾರರು ಹೇಳಿದರು. ಅವಳು ಇಸ್ಲಾಂ ಸ್ವೀಕರಿಸಲು ನಿರಾಕರಿಸಿದರೆ, ಅವಳು ತನ್ನ ಪ್ರಾಣವನ್ನು ಕಳೆದುಕೊಳ್ಳಬೇಕಾಗುವುದು ಎಂದು ಬೆದರಿಕೆ ಹಾಕಿದ್ದರು. ವರ್ಷಾಳನ್ನು ಕೊಲೆ ಮಾಡಿ ನಂತರ ಅದನ್ನು ಆತ್ಮಹತ್ಯೆಯಂತೆ ಬಿಂಬಿಸಲು ನೇಣು ಹಾಕಲಾಗಿದೆ ಎಂದು ವರ್ಷಾಳ ಕುಟುಂಬ ಕೂಡ ಹೇಳಿದೆ. |
ಸಂಪಾದಕೀಯ ನಿಲುವುಮತಾಂಧರೊಂದಿಗೆ ಮದುವೆಯಾಗುವುದೆಂದರೆ; ತಮ್ಮ ಜೀವನವನ್ನು ತಾವೇ ನಾಶಪಡಿಸಿಕೊಳ್ಳುವುದು ಎನ್ನುವುದು ಈಗಲಾದರೂ ಹಿಂದೂ ಹುಡುಗಿಯರು ಅರಿತುಕೊಳ್ಳುತ್ತಾರೆಯೇ ? |