ಬಾಂಗ್ಲಾದೇಶ: ಸಾರ್ವಜನಿಕ ಪ್ರದೇಶದಲ್ಲಿ ಕಿರುಕುಳ ನೀಡಿದ ಮುಸ್ಲಿಂ ಯುವಕ; ಹಿಂದೂ ವಿದ್ಯಾರ್ಥಿನಿಯ ಆತ್ಮಹತ್ಯೆ

ಶ್ರೀ ಸರಸ್ವತಿ ದೇವಿಯ ಪೂಜೆಯ ನಂತರ ಉಪಾಹಾರ ಗೃಹದಲ್ಲಿ ನಡೆದ ಘಟನೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ರೆಹಾನ್ ಬಾಫಲ್ ಎಂಬ ಮುಸಲ್ಮಾನ ಯುವಕನು ಸಾರ್ವಜನಿಕ ಉಪಾಹಾರ ಗೃಹದಲ್ಲಿ ತನಗೆ ಕಿರುಕುಳ ನೀಡಿದ್ದಕ್ಕೆ ನೊಂದ ೧೯ ವರ್ಷದ ಹಿಂದೂ ವಿದ್ಯಾರ್ಥಿನಿ ಮನೆಗೆ ಹಿಂತಿರುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿ ರೇಹಾನ್ ಬಾಫಲ್ (ವಯಸ್ಸು ೩೦ ವರ್ಷ) ಎಂಬವನು ಅಲ್ಲಿನ ರಾಷ್ಟ್ರೀಯ ಪಕ್ಷದ ಉಪಜಿಲ್ಲಾ ಅಧ್ಯಕ್ಷ ಮೋಹಸೀನ್ ಹವಾಲದಾರ್ ನ ಪುತ್ರನಾಗಿದ್ದಾನೆ. ಮೃತ ವಿದ್ಯಾರ್ಥಿನಿ ಶ್ರೀ ಸರಸ್ವತಿ ದೇವಿಯ ಪೂಜೆಗೆ ಹಾಜರಾದ ನಂತರ ಆಕೆ ತನ್ನ ಸ್ನೇಹಿತೆಯರ ಜೊತೆಗೆ ಉಪಾಹಾರ ಗೃಹಕ್ಕೆ ಹೋಗಿದ್ದಳು . ಮೃತ ವಿದ್ಯಾರ್ಥಿನಿಯ ತಂದೆ ಈ ಬಗ್ಗೆ ಮಾತನಾಡಿ, ನನ್ನ ಮಗಳು ಮಧ್ಯಾಹ್ನ ಮನೆಗೆ ಹಿಂತಿರುಗಿದಳು, ರೇಹಾನ್ ಸಾರ್ವಜನಿಕ ಸ್ಥಳದಲ್ಲಿ ನನಗೆ ಕಿರುಕುಳ ನೀಡಿ ಹೊಡೆದನೆಂದು ಹೇಳಿದಳು. ಅದರ ನಂತರ ಆಕೆ ತನ್ನ ಕೋಣೆಗೆ ಹೋದಳು. ಮನೆಯ ಸದಸ್ಯರು ಆಕೆಗೆ ಭೋಜನಕ್ಕೆ ಕರೆದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆಗ ನಾವು ಆಕೆಯ ಕೋಣೆಯ ಬಾಗಿಲು ಮುರಿದು ಒಳಗೆ ಹೋದೆವು. ಆಗ ಆಕೆ ಛಾವಣಿಯ ಫ್ಯಾನಿಗೆ ನೇಣು ಬಿಗಿದ ಅವಸ್ಥೆಯಲ್ಲಿ ಕಂಡು ಬಂದಳು. ಹುಡುಗಿಯ ತಂದೆಯು ನೀಡಿರುವ ದೂರಿನ ನಂತರ ಪೊಲೀಸರು ರೇಹಾನ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಹಿಂದುಗಳ ದಯನೀಯ ಸ್ಥಿತಿ !