ಕೇರಳದಲ್ಲಿ 8 ವರ್ಷಗಳಲ್ಲಿ ಪೋಕ್ಸೋ ಕಾಯ್ದೆಯಡಿ 31 ಸಾವಿರ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ
ತಿರುವನಂತಪುರಂ (ಕೇರಳ) – ಕೇರಳದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಗಂಭೀರ ಕಳವಳಕಾರಿ ವಿಷಯವಾಗಿದೆ. 2016 ರಿಂದ 44 ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ 8 ವರ್ಷಗಳಲ್ಲಿ 31 ಸಾವಿರ ಕ್ಕೂ ಹೆಚ್ಚು ಅಪರಾಧಗಳು ಪೋಕ್ಸೊ ಕಾಯ್ದೆಯಡಿ ದಾಖಲಾಗಿವೆ.
1. ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಕಳವಳ ವ್ಯಕ್ತಪಡಿಸುತ್ತಾ, “ಸಂತ್ರಸ್ತರಿಗೆ ಸರಿಯಾದ ಮಾನಸಿಕ ಆಧಾರದ ಅಗತ್ಯವಿದೆ. ಆಘಾತಕ್ಕೊಳಗಾದ ಮಕ್ಕಳು ಹೆಚ್ಚಾಗಿ ತೀವ್ರ ಖಿನ್ನತೆಯನ್ನು ಎದುರಿಸುತ್ತಾರೆ, ಇದು ಅವರ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆಯೋಗವು ಎಲ್ಲಾ ಸಂಬಂಧಿತ ಇಲಾಖೆಗಳಿಗೆ ‘ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಬೇಕು’ ಎಂದು ನಿರ್ದೇಶಿಸಿದೆ.
2. ಸರಕಾರಿ ಅಂಕಿಅಂಶಗಳ ಪ್ರಕಾರ, ಜೂನ್ 2016 ರಿಂದ 2024 ರವರೆಗೆ ಕೇರಳದಲ್ಲಿ 31 ಸಾವಿರದ 171 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಇದರ ಅಡಿಯಲ್ಲಿ 28 ಸಾವಿರದ 728 ಜನರನ್ನು ಬಂಧಿಸಲಾಯಿತು. 2022 ರಿಂದ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಎಂದು ವರದಿಯಲ್ಲಿ ಹೇಳಲಾಗಿದೆ.
3. 2016 ರಿಂದ 2021 ರವರೆಗೆ, ವಾರ್ಷಿಕವಾಗಿ ಅಂದಾಜು 3 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದರೆ, 2022 ರಲ್ಲಿ ಈ ಸಂಖ್ಯೆ 4 ಸಾವಿರದ 518 ಕ್ಕೆ ಏರಿದೆ. ಇದರ ನಂತರ 2023 ರಲ್ಲಿ 4 ಸಾವಿರದ 641 ಪ್ರಕರಣಗಳು ಮತ್ತು 2024 ರಲ್ಲಿ 4 ಸಾವಿರದ 594 ಪ್ರಕರಣಗಳು ದಾಖಲಾಗಿವೆ.
4. ಇತ್ತೀಚೆಗೆ, ಪತ್ತನಂತಿಟ್ಟದ ದಲಿತ ಹುಡುಗಿಯೊಬ್ಬಳು 62 ಜನರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮಾಡಿದ್ದಳು. ಇದರಲ್ಲಿ ಅವಳ ಸಂಬಂಧಿಕರು, ಶಿಕ್ಷಕರು ಮತ್ತು ಸ್ನೇಹಿತರು ಸೇರಿದ್ದಾರೆ. ಬಾಲಕಿಯ ದೂರಿನ ನಂತರ, ರಾಜ್ಯದಲ್ಲಿ ಇತರ ಪ್ರಕರಣಗಳ ಕುರಿತು ಚರ್ಚೆಗಳು ಪ್ರಾರಂಭವಾದವು ಮತ್ತು ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಮಾತ್ರವಲ್ಲದೆ, ಅವರ ಆತ್ಮಹತ್ಯೆಗಳ ವರದಿಗಳೂ ಬಂದಿವೆ ಎಂದು ತಿಳಿದುಬಂದಿದೆ.
ಸಂಪಾದಕೀಯ ನಿಲುವುಕೇರಳದಲ್ಲಿ ಮಾಕಪ ನೇತೃತ್ವದ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯುತ್ತಿವೆ, ಈ ಬಗ್ಗೆ ಯಾರೂ ಏಕೆ ಮಾತನಾಡುತ್ತಿಲ್ಲ ? ಇಲ್ಲಿ ಭಾಜಪ ಸರಕಾರ ಇದ್ದಿದ್ದರೆ, ಜಾತ್ಯತೀತ ಮತ್ತು ಮಹಿಳಾ ಸಂಘಟನೆಗಳು ಎಂದು ಕರೆಯಲ್ಪಡುವ ಸಂಘಟನೆಗಳು ಕೂಗಾಡುತ್ತಿದ್ದವು ! |