ಭಾರತೀಯ ಸಂಸ್ಕೃತಿಯಲ್ಲಿ ಹರಿದ ಬಟ್ಟೆ ಧರಿಸುವುದನ್ನು ಅಶುಭವೆಂದು ಭಾವಿಸಲಾಗುತ್ತದೆ. ಅದನ್ನು ದಾರಿದ್ರ್ಯದ ಲಕ್ಷಣವೆಂದು ತಿಳಿಯುತ್ತಾರೆ. ಅದರಿಂದ ವ್ಯಕ್ತಿಯ ಸುತ್ತ ಮುತ್ತಲಿನ ರಜ-ತಮದಿಂದ ಕಪ್ಪು ಶಕ್ತಿಗಳ ಆವರಣವು ಹೆಚ್ಚಾಗಿ ಕೆಟ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ ಉದ್ದೇಶಪೂರ್ವಕವಾಗಿ ಹರಿದ ಬಟ್ಟೆಗಳನ್ನು ಧರಿಸಿ ಭಿಕ್ಷುಕರ ಹಾಗೆ ತಿರುಗುವುದು ಇದು ದುರ್ದೈವವಲ್ಲದೆ ಮತ್ತಿನ್ನೇನು ?
ಫ್ಯಾಶನ್ ಹೆಸರಿನಲ್ಲಿ ಹರಿದ ಜೀನ್ಸ್ ತೊಡುವ ಭಾರತದ ನತದೃಷ್ಟ ಯುವ ಪೀಳಿಗೆ
ಹರಿದ ಬಟ್ಟೆಗಳನ್ನುಡುವ ಫ್ಯಾಶನ್ ಬಹುಬೇಗ ಪ್ರಚಲಿತವಾಗಿದೆ. ‘ಜೀನ್ಸ್’ ಬಟ್ಟೆಯ ಹರಿದ ಪ್ಯಾಂಟನ್ನು ಧರಿಸುವ ಯುವಕ-ಯುವತಿಯರು ಪಟ್ಟಣಗಳಲ್ಲಿ ನೋಡಲು ಸಿಗುತ್ತಾರೆ. ಸದ್ಯ ಇದು ಎಷ್ಟು ಹೆಚ್ಚಿದೆಯೆಂದರೆ, ಮುಂಬೈಯಲ್ಲಿ ‘ಜೀನ್ಸ್’ನ ಪ್ಯಾಂಟನ್ನು ಧರಿಸುವ ಪ್ರತಿ ಮೂರು ವ್ಯಕ್ತಿಗಳ ಪೈಕಿ ಒಬ್ಬನ ಪ್ಯಾಂಟು ಹರಿದ ಬಟ್ಟೆಯಿಂದ ತಯಾರಿಸಲ್ಪಟ್ಟಿರುತ್ತದೆ ಅಥವಾ ಅದನ್ನು ತಯಾರಿಸಿದ ನಂತರ ಹರಿದಿರುತ್ತಾರೆ. ಇದರ ಪ್ರಸಾರವು ಗ್ರಾಮೀಣ ಭಾಗದಲ್ಲೂ ಆಗಿದೆ. ಮಕ್ಕಳ ಬಟ್ಟೆಗಳ ಅಂಗಡಿಗಳಲ್ಲಿಯೂ ಈ ‘ರಿಪ್ಡ ಜೀನ್ಸ’ ಹೆಚ್ಚಿನ ಬೆಲೆಗೆ ಸಿಗುತ್ತಿದೆ. – ಶ್ರೀ ಗಜಾನನ ಘಾಣೇಕರ
ಪಂಜಾಬಿ ಉಡುಪನ್ನು ಧರಿಸಿ ಮಹಾವಿದ್ಯಾಲಯಕ್ಕೆ ಹೊದಾಗ ಸ್ನೇಹಿತೆಯರು ಟೀಕಿಸಿ ‘ಜೀನ್ಸ’ ಧರಿಸಲು ಹೇಳುವುದು
ನಾನು ಮಹಾವಿದ್ಯಾಲಯದಲ್ಲಿ ವ್ಯಾಸಂಗಕ್ಕಾಗಿ ಹೋಗುವಾಗ ಮಧ್ಯದಲ್ಲಿ ಬೈತಲೆಯನ್ನು ತೆಗೆಯುತ್ತಿದ್ದೆ, ಕುಂಕುಮವನ್ನು ಹಚ್ಚುತ್ತಿದ್ದೆ ಮತ್ತು ಪಂಜಾಬಿ ಉಡುಪನ್ನು ಧರಿಸುತ್ತಿದ್ದೆ. ಆದುದರಿಂದ ಇತರ ಹುಡುಗಿಯರು ನನಗೆ ‘ಅಜ್ಜಿ’ ಎನ್ನುತ್ತಿದ್ದರು. ಅವರು ನನಗೆ ‘ಬೈತಲೆ ತಗೆಯಬೇಡ’. ‘ಜೀನ್ಸ’ ಇಲ್ಲದಿದ್ದರೆ ‘ಲೆಗೀನ್ಸ’ ಅನ್ನಾದರೂ ಧರಿಸು ಎಂದು ಹೇಳುತ್ತಿದ್ದರು. ನನಗೆ ಅದನ್ನು ಧರಿಸಲು ಇಷ್ಟವಾಗುತ್ತಿರಲಿಲ್ಲ; ಅದುದರಿಂದ ನಾನು ಎಂದಿಗೂ ಹಾಗೆ ಮಾಡಲಿಲ್ಲ – ಓರ್ವ ಸಾಧಕಿ
ತುಂಡುಡುಗೆ ಬೆಂಬಲಿಸುವ ಯುವಪೀಳಿಗೆಯು ದೇಶವನ್ನು ಆದರ್ಶವನ್ನಾಗಿಸಲು ಸಾಧ್ಯವೇ ?
‘ಬೆಂಗಳೂರಿನ ‘ನ್ಯಾಶನಲ್ ಲಾ ಸ್ಕೂಲ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ’ ತುಂಡು ಬಟ್ಟೆಯನ್ನು ಕುರಿತು ಓರ್ವ ವಿದ್ಯಾರ್ಥಿನಿಯ ಮೇಲೆ ಪ್ರಾಧ್ಯಾಪಕರು ತರಗತಿಯಲ್ಲಿ ಸಿಟ್ಟಿಗೆದ್ದುದರಿಂದ ವಿದ್ಯಾರ್ಥಿಗಳು ಪ್ರಾಧ್ಯಾಪಕರ ವಿರುದ್ಧ ಪ್ರತಿಭಟನೆ ಮಾಡಿದರು. ಇದನ್ನು ಖಂಡಿಸಲು ಮರುದಿನ ವಿದ್ಯಾರ್ಥಿಗಳು ತುಂಡು ಬಟ್ಟೆಗಳನ್ನು ಧರಿಸಿ ಆ ಪ್ರಾಧ್ಯಾಪಕರ ತರಗತಿಗೆ ಉಪಸ್ಥಿತರಾದರು.