ಗ್ರಾಮ ರಕ್ಷಾ ದಳವನ್ನು ಸ್ಥಾಪಿಸುವ ಮೂಲಕ ಯುವಕರಲ್ಲಿ ರಾಷ್ಟ್ರ ಮತ್ತು ಧರ್ಮದ ರಕ್ಷಣೆಯ ಭಾವನೆ ಮೂಡಿಸುವುದು ಅಗತ್ಯವಾಗಿದೆ ! – ಪ್ರಶಾಂತ ಜುವೇಕರ, ಜಲಗಾವ ಜಿಲ್ಲಾ ಸಮನ್ವಯಕ, ಹಿಂದೂ ಜನಜಾಗೃತಿ ಸಮಿತಿ

ಪ್ರಶಾಂತ ಜುವೇಕರ

ಪ್ರಸ್ತುತ, ಹಿಂದೂಗಳು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಶಿವಾಜಿ ಮಹಾರಾಜರು ಮಾವಳೆಯರನ್ನು ಸಂಘಟಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಅದರಂತೆ ರಣತಂತ್ರವನ್ನು ನಿರ್ಧರಿಸಿ ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯ ಮಾಡಬೇಕಿದೆ. ಇದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ಗ್ರಾಮ ರಕ್ಷಾ ದಳವನ್ನು ಸ್ಥಾಪಿಸುವ ಮೂಲಕ ಯುವಕ-ಯುವತಿಯರಲ್ಲಿ ರಾಷ್ಟ್ರ ಮತ್ತು ಧರ್ಮದ ರಕ್ಷಣೆಯ ಭಾವನೆ ಮೂಡಿಸಬೇಕಿದೆ. ಗ್ರಾಮದ ಎಲ್ಲ ಯುವಕ-ಯುವತಿಯರಿಗೆ ಸ್ವರಕ್ಷಣಾ ತರಬೇತಿ ನೀಡಬೇಕು. ಗ್ರಾಮದಲ್ಲಿ ಯಾವುದೇ ಬಿಕ್ಕಟ್ಟು ಉಂಟಾದರೆ ಗ್ರಾಮ ರಕ್ಷಾ ದಳದವರು ತಾವಾಗಿಯೇ ಗ್ರಾಮ ರಕ್ಷಣೆ ಮಾಡುವರು. ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸ್ವರಕ್ಷಣಾ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ದೇವಸ್ಥಾನಗಳು ಹಿಂದೂಗಳ ಶಕ್ತಿಸ್ಥಾನವಾಗಿವೆ. ‘ಮತಾಂಧರು ಮೊದಲು ದೇವಸ್ಥಾನಗಳ ಮೇಲೆ ದಾಳಿ ಮಾಡುತ್ತಾರೆ’ ಎಂಬುದನ್ನು ಗಮನದಲ್ಲಿಟ್ಟುಕೊಂಡು ದೇವಸ್ಥಾನಗಳ ರಕ್ಷಣೆಗೆ ಗ್ರಾಮ ರಕ್ಷಾ ದಳದವರು ಯೋಜನೆ ರೂಪಿಸಬೇಕು. ‘ನಾನೊಬ್ಬ ಹಿಂದೂ, ರಾಷ್ಟ್ರ ಮತ್ತು ಧರ್ಮವನ್ನು ರಕ್ಷಿಸುವುದು ನನ್ನ ಕರ್ತವ್ಯ’ ಎಂಬ ಭಾವನೆಯನ್ನು ಯುವಕ-ಯುವತಿಯರಲ್ಲಿ ಮೂಡಿಸುವುದು ಅಗತ್ಯವಾಗಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಜಳಗಾವ ಜಿಲ್ಲೆಯ ಸಮನ್ವಯಕ ಶ್ರೀ. ಪ್ರಶಾಂತ ಜುವೇಕರ ಇವರು ಕರೆ ನೀಡಿದರು. ‘ಗ್ರಾಮ ರಕ್ಷಾ ದಳದ ಸ್ಥಾಪನೆಯ ಅವಶ್ಯಕತೆ’ ಈ ಕುರಿತು ಶ್ರೀ. ಜುವೇಕರ ಇವರು ಮಾರ್ಗದರ್ಶನ ಮಾಡಿದರು.