ಆಂಸ್ಟರ್ಡ್ಯಾಮ್ (ನೆದರ್ಲ್ಯಾಂಡ್ಸ್) – ನೂಪುರ ಶರ್ಮ ಇವರನ್ನು ಸಮರ್ಥಿಸುವ ನೆದರ್ಲ್ಯಾಂಡ್‌ನ ಪಾರ್ಟಿ ಆಫ್ ಫ್ರೀಡಂ ಪಕ್ಷದ ಅಧ್ಯಕ್ಷ ಮತ್ತು ಸಂಸದ ಗಿರ್ಟ ವಿಲ್ಡರ್ಸ್ ಇವರು ಮತ್ತೆ ಭಾರತದ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ. ವಿಲ್ಡರ್ಸ್ ಮುಂದಿನಂತೆ ಹೇಳಿದರು, ಸಾಂಸ್ಕೃತಿಕ ಸಾಪೇಕ್ಷತೆ ವಾದ ಇದು ಒಂದು ಭ್ರಾಮಕ ಪರಿಕಲ್ಪನೆಯಾಗಿದೆ. ಜನರು ಸಮಾನ ವಾಗಿದ್ದರು ಸಂಸ್ಕೃತಿ ಬೇರೆಬೇರೆಯಾಗಿರುತ್ತದೆ. ಮಾನವೀಯತೆ ಮತ್ತು ಸ್ವಾತಂತ್ರ್ಯ ಇದನ್ನು ಆಧರಿಸಿದ ಸಂಸ್ಕೃತಿಯು ಅಸಹಿಷ್ಣುತೆ ಮತ್ತು ದಾಸ್ಯತ್ವ ಇದರ ಮೇಲೆ ಆಧಾರಿತ ಸಂಸ್ಕೃತಿಯ ಗಿಂತಲೂ ಎಂದಿಗೂ ಒಳ್ಳೆಯದೇ ಆಗಿರುತ್ತದೆ. ಆದ್ದರಿಂದ ನಾನು ಇಸ್ಲಾಂಗಿಂತ ಹಿಂದೂ ಧರ್ಮವನ್ನು ಲಕ್ಷ ಪಟ್ಟು ಹೆಚ್ಚು ಗೌರವಿಸುತ್ತೇನೆ . ವಿಲ್ಡರ್ಸ್ ಇವರ ಟ್ವೀಟ್ ನಲ್ಲಿ #supportNupurSharma (ನಾನು ನೂಪುರ ಶರ್ಮ ಇವರನ್ನು ಸಮರ್ಥಿಸುತ್ತ್ತೇನೆ) ಈ ಹ್ಯಾಶ್ ಟ್ಯಾಗ್ ಉಪಯೋಗಿಸಿದ್ದಾರೆ.
Cultural relativism is a misleading concept. People are equal but cultures are not. A culture based on humanity and freedom is always better than a culture based on intolerance and submission. Therefore I respect Hinduism a million times more than Islam. #IsupportNupurSharma
— Geert Wilders (@geertwilderspvv) June 13, 2022