ಧರ್ಮಕಾರ್ಯದಲ್ಲಿ ದೃಢವಾದ ಹೆಜ್ಜೆಗಳೊಂದಿಗೆ ಎದ್ದು ನಿಲ್ಲುವ ಆವಶ್ಯಕತೆ!- ವಕೀಲ ಭರತ ಶರ್ಮಾ, ಸಂರಕ್ಷಕ, ಧರೋಹರ ಬಚಾವೊ ಸಮಿತಿ, ರಾಜಸ್ಥಾನ
ರಾಮನಾಥಿ, ೧೪ ಜೂನ (ವಾರ್ತೆ)- ಯಾವ ರೀತಿ ಅಂಗದನು ರಾವಣನ ಸಭೆಯಲ್ಲಿ ಸ್ವತಃ ತನ್ನ ಕಾಲನ್ನು ಭೂಮಿಯ ಮೇಲೆ ಊರಿದನೋ, ಅದೇ ರೀತಿ ಹಿಂದುತ್ವನಿಷ್ಠರು ಧರ್ಮಕಾರ್ಯ ಮಾಡಲು ಹೆಜ್ಜೆಯನ್ನೂರಿ ದೃಢವಾಗಿ ನಿಲ್ಲಬೇಕಾಗಿದೆ, ಆಗ ಮಾತ್ರ ನಾವು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮಹತ್ವಪೂರ್ಣ ಯೋಗದಾನವನ್ನು ನೀಡಬಲ್ಲೆವು ಎಂದು ರಾಜಸ್ಥಾನದ `ಧರೋಹರ ಬಚಾವೊ ಸಮಿತಿ’ಯ ಸಂರಕ್ಷಕರಾದ ವಕೀಲ ಭಾರತ ಶರ್ಮಾ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
೧೦ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ `ಮಂದಿರ ಸಂರಕ್ಷಣೆಗಾಗಿ ಕಾರ್ಯನಿರತ ಹಿಂದುತ್ವನಿಷ್ಠರ ಅನುಭವ ಕಥನ’ ದ ಸತ್ರದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಅಖಿಲ ಭಾರತೀಯ ವಿಜ್ಞಾನದಳ ಸಂಸ್ಥಾಪಕರಾದ ಡಾ. ಮೃದುಲ ಶುಕ್ಲಾ, ಬೆಂಗಳೂರಿನ `ಶಬರಿಮಲಾ ಅಯ್ಯಪ್ಪ ಸೇವಾ ಸಮಾಜಮ್ ‘ನ ಉಪಾಧ್ಯಕ್ಷರಾದ ಶ್ರೀ ಜಯರಾಮ ಎನ್, ಕರ್ನಾಟಕ ಭಾಜಪದ `ಬಿಜಿನೆಸ್ ಅಂಡ್ ಟ್ರೇಡಿಂಗ ಟೂರಿಸ್ಟ ಉದ್ಯಮ’ದ ಉಪನಿರ್ದೇಶಕರಾದ ದಿನೇಶ ಕುಮಾರ ಜೈನ ಮತ್ತು ಸೋಲಾಪೂರ(ಮಹಾರಾಷ್ಟ್ರ)ದ `ವಾರಕರಿ ಸಂಪ್ರದಾಯ ಪಾಯಿಕ್ ಸಂಘ’ ದ ರಾಷ್ಟ್ರೀಯ ವಕ್ತಾರರಾದ ಹ.ಭ.ಪ. ರಾಮಕೃಷ್ಣ ಹನುಮಂತ ಮಹಾರಾಜ ವೀರ ಇವರು ಉಪಸ್ಥಿತರಿದ್ದರು.
ವಕೀಲ ಶರ್ಮಾ ಇವರು ಮಾತನಾಡುತ್ತಾ,` ಜಯಪುರದಲ್ಲಿ ಅಭಿವೃದ್ಧಿಯ ಹೆಸರಿನಡಿಯಲ್ಲಿ ಅನೇಕ ಮಂದಿರಗಳನ್ನು ಕೆಡವಲಾಯಿತು. ಕಾಮಾಗಡದ ಪ್ರಾಚೀನ ಶಿವಮಂದಿರವನ್ನು ಕೆಡವಲಾಯಿತು. ಸ್ಥಳೀಯ ಹಿಂದೂಗಳ ಸಹಾಯದಿಂದ ನಾವು ಅಲ್ಲಿ ಶಿವಲಿಂಗವನ್ನು ಪುನರ್ ಪ್ರತಿಷ್ಠಾಪಿಸಿದೆವು. ಈ ಮಂದಿರವನ್ನು ಧ್ವಂಸಗೊಳಿಸಿದ ಮತಾಂಧನನ್ನು ಅದೇ ದಿನ ಬಂಧಿಸಲಾಯಿತು. ಧರ್ಮಕಾರ್ಯಕ್ಕಾಗಿ ಹಿಂದೂಗಳು ಸ್ವಯಂಪ್ರೇರಣೆಯಿಂದ ಮುಂದೆ ಬಂದರೆ, ನಮಗೆ ಖಂಡಿತವಾಗಿಯೂ ಜಯ ದೊರೆಯಲಿದೆ.’’ ಎಂದರು
೧.ಧರ್ಮಪಾಲನೆಯ ಕೃತಿಯನ್ನು ಕಲಿತು ಸಮಾಜದಲ್ಲಿ ಸನಾತನ ಧರ್ಮವನ್ನು ಪುನಃ ಬಲಪಡಿಸೋಣ!- ಡಾ. ಮೃದುಲ ಶುಕ್ಲಾ, ಸಂಸ್ಥಾಪಕರು, ಅಖಿಲ ಭಾರತೀಯ ವಿಜ್ಞಾನ ದಳ
ಸನಾತನ ಧರ್ಮವು ಹೇಗೆ ವೈಜ್ಞಾನಿಕವಾಗಿದೆ ಎನ್ನುವುದನ್ನು ಸಮಾಜಕ್ಕೆ ತಿಳಿಸಲು ನಾವು `ಅಖಿಲ ಭಾರತೀಯ ವಿಜ್ಞಾನದಳ’ವನ್ನು ಸ್ಥಾಪಿಸಿದ್ದೇವೆ. ಈ ಮಾಧ್ಯಮದಿಂದ ನಾವು ಅನೇಕ ಜನರಿಗೆ ಸನಾತನ ಧರ್ಮವನ್ನು ಅಧ್ಯಯನ ಮಾಡಲು ಪ್ರವೃತ್ತಗೊಳಿಸಿದೆವು. ಹುಟ್ಟುಹಬ್ಬದಂದು ಕೇಕ ಕತ್ತರಿಸದೇ ಆರತಿ ಮಾಡುವುದು, ಯಜ್ಞ ಸಂಸ್ಕೃತಿಯನ್ನು ಪಾಲಿಸುವುದು ಮುಂತಾದ ಸಣ್ಣ ಕೃತಿಗಳಿಂದ ನಾವೂ ಕೂಡ ಸನಾತನ ಧರ್ಮವನ್ನು ಸಮಾಜದಲ್ಲಿ ಪುನಃ ನಿರ್ಮಾಣ ಮಾಡೋಣ.
೨.ಶಬರಿಮಲಾ ಮಂದಿರದ ಆಡಳಿತದಲ್ಲಿ ಇತರ ಧರ್ಮದವರಿಂದ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ !- ಜಯರಾಮ ಎನ್., ಉಪಾಧ್ಯಕ್ಷರು, ಶಬರಿಮಲಾ ಅಯ್ಯಪ್ಪ ಸೇವಾ ಸಮಾಜಮ್, ಬೆಂಗಳೂರು( ನಗರ)
ಶ್ರೀ ಅಯ್ಯಪ್ಪ ಮಂದಿರದಲ್ಲಿ ೧೦ ರಿಂದ ೫೦ ವರ್ಷ ವಯಸ್ಸಿನ ಸ್ತ್ರೀಯರಿಗೆ ಪ್ರವೇಶ ನೀಡದಿರುವ ಪರಂಪರೆಯನ್ನು ನಾಶಗೊಳಿಸುವ ಪ್ರಯತ್ನವನ್ನು ಕೇರಳದ ಸಾಮ್ಯವಾದಿ ಸರಕಾರ ಮಾಡಿತು. ಇದನ್ನು ವಿರೋಧಿಸಿ ನಾವೂ ಕೂಡ ಪ್ರತಿಭಟನೆ ಮಾಡಿದೆವು. ಕೇರಳದ ಮಂದಿರದ ಆಡಳಿತವು ಮುಸಲ್ಮಾನ ಮತ್ತು ಕ್ರಿಶ್ಚಿಯನ್ನರ ಕೈಯಲ್ಲಿದೆ. ಇದರಿಂದ ಅನೇಕ ಅಯೋಗ್ಯ ಪದ್ಧತಿಗಳು ಜರುಗುತ್ತಿರುತ್ತವೆ. ಮಂದಿರದ ಪ್ರಸಾದವನ್ನು ತಯಾರಿಸಲು ಬೇಕಾಗುವ ಅಕ್ಕಿ, ತುಪ್ಪ ಇತ್ಯಾದಿ ಸಾಮಗ್ರಿಗಳನ್ನು ಅನ್ಯ ಮತೀಯರಿಂದ ಖರೀದಿಸಲಾಗುತ್ತದೆ. ಈ ಮಾಧ್ಯಮದಿಂದ ೪ ರಿಂದ ೧೦ ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ಈ ಬಗ್ಗೆ ನಾವು ಪ್ರತಿಭಟನೆ ಮಾಡಿದೆವು. ಶಬರಿಮಲಾ ಮಂದಿರದಲ್ಲಿ ದೇವರಿಗೆ ಅರ್ಪಿಸಲು `ಇರುಮುಂಡಿ ಕಟ್ಟ’ (ವಿಶಿಷ್ಟ ರೀತಿಯ ಪೂಜೆಯ ಸಾಮಗ್ರಿ) ತೆಗೆದುಕೊಂಡು ಹೋಗಲಾಗುತ್ತದೆ. ಲಿಲಾವಿನಲ್ಲಿ ಇತರ ಮತೀಯರು ಅಕ್ಕಿಯನ್ನು ಖರೀದಿಸುತ್ತಾರೆ ಮತ್ತು ಬಳಿಕ ೬ ರೂಪಾಯಿಗೆ ೧ಕಿಲೋ ದರದಲ್ಲಿ ಸರಕಾರಕ್ಕೆ ಮಾರಾಟ ಮಾಡುತ್ತಾರೆ. ಸರಕಾರ ಜನರಿಗೆ ಉಚಿತವಾಗಿ ನೀಡುವ ಅಕ್ಕಿಯಲ್ಲಿ, ಈ ಅಕ್ಕಿಯನ್ನು ಮಿಶ್ರಣ ಮಾಡಲಾಗುತ್ತದೆ. ಈ ರೀತಿ ಮಂದಿರದ ಪ್ರಸಾದದಲ್ಲಿ ಇತರೆ ಮತೀಯರು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ.
೩.ಮಂದಿರದಿಂದಲೇ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡಬೇಕು!- ದಿನೇಶ ಕುಮಾರ ಜೈನ, ಉಪನಿರ್ದೇಶಕರು, ಭಾಜಪ ಬಿಜನೆಸ ಅಂಡ್ ಟ್ರೇಡಿಂಗ ಟೂರಿಸ್ಟ ಉದ್ಯಮ, ದಕ್ಷಿಣ ಕನ್ನಡ, ಕರ್ನಾಟಕ
ಕರ್ನಾಟಕದ ಮಾಣಗೇಶ್ವರ ಮಂದಿರದ ಪಕ್ಕದಲ್ಲಿ ಕ್ರಿಶ್ಚಿಯನ್ ಮತ್ತು ಮುಸಲ್ಮಾನರಿಂದ ಕಾಮಗಾರಿ ಮಾಡಲಾಗುತ್ತಿತ್ತು. ಈ ಮಂದಿರ ರಾಜಾ ರವಿ ವರ್ಮರ ಕಾಲದಿಂದಲೂ ಇದೆ. ಇದರ ವಿರುದ್ಧ ನಾವು ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಹಿಂದೂ ಭಕ್ತರಿಂದ ಮಂದಿರದಲ್ಲಿ ನೀಡುವ ನಿಧಿಯನ್ನು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಉಪಯೋಗಿಸಬೇಕು. ಪ್ರತಿಯೊಂದು ಊರಿನ ಮಂದಿರದಿಂದ ಈ ರೀತಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಆವಶ್ಯಕತೆಯಿದೆ.
೪.ಆಂದೋಲನದಿಂದ ಪಂಢರಪುರದ ಮಂದಿರದ ಟೋಕನ ಪದ್ಧತಿ ಸ್ಥಗಿತ !- ಹ.ಭ.ಪ. ರಾಮಕೃಷ್ಣ ಹನುಮಂತ ಮಹಾರಾಜ ವೀರ
ನಾವೂ ಕೂಡ ಪಂಢರಪುರ ಮಂದಿರದಲ್ಲಿ ದೇವರ ದರ್ಶನ ಪಡೆಯಲು ಮಾಡಲಾಗಿದ್ದ ಟೋಕನ ಪದ್ಧತಿಯನ್ನು ವಿರೋಧಿಸಿದೆವು. ಇತರ ಮಂದಿರಗಳಲ್ಲಿ ನಡೆಯುತ್ತಿರುವುದನ್ನು ಪಂಢರಪುರದಲ್ಲಿ ನಡೆಯಲು ಬಿಡಲಿಲ್ಲ. ಈಶ್ವರನ ದರ್ಶನ ಪಡೆಯಲು ೧೦೦ ರಿಂದ ೨೦೦ ರೂಪಾಯಿಗಳು ಏಕೆ ಕೊಡಬೇಕು? ಕಾನೂನು ಉಲ್ಲಂಘಿಸಿರುವ ಪ್ರಕರಣದಲ್ಲಿ ನಾವು ಸಂಬಂಧಿಸಿದವರಿಗೆ ಕಾನೂನಾತ್ಮಕ ನೊಟೀಸು ಕಳುಹಿಸಿದೆವು. `ಟೋಕನ ಪದ್ಧತಿಯಿಂದ ಪಂಢರಪುರದಲ್ಲಿ ಒಂದು ವರ್ಷದಲ್ಲಿ ಭಕ್ತರ ದರ್ಶನದಿಂದ ೧೪ ಕೋಟಿ ರೂಪಾಯಿ ಸಂಗ್ರಹಿಸಬಹುದು’,ಎನ್ನುವುದು ಮಂದಿರ ಆಡಳಿತ ಮಂಡಳಿಯ ಲೆಕ್ಕಾಚಾರವಾಗಿತ್ತು; ಆದರೆ ಹಾಗೆ ಆಗಲಿಲ್ಲ. ಮಂದಿರದ ಅತಿಗಣ್ಯ ವ್ಯಕ್ತಿಗಳಿಗಾಗಿ ಪ್ರತ್ಯೇಕ ದರ್ಶನದ ಪದ್ಧತಿಯೂ ಸ್ಥಗಿತಗೊಳ್ಳಬೇಕಾಗಿದೆ.
ಮಂದಿರಗಳು ಸರಕಾರದ ವಶಕ್ಕೆ ಒಳಪಡಲು ಹಿಂದೂಗಳೇ ಜವಾಬ್ದಾರರಾಗಿದ್ದಾರೆ. ಮಂದಿರದ ಪೂಜಾರಿ ಸರಕಾರದವರಾಗಿದ್ದಾರೆ. ಇದರಿಂದ ಅವರಿಗೆ ಆಯಾ ದೇವತೆಗಳ ಮಂತ್ರಗಳನ್ನು ಪಠಿಸಲು ಬರುವುದಿಲ್ಲ. ಪಂಢರಪೂರದ ಮಂದಿರದಲ್ಲಿ ನಡೆಯು ಭ್ರಷ್ಟಾಚಾರದ ಕುರಿತು ರಸ್ತೆಯ ಮೇಲೆ ಫಲಕವನ್ನು ಅಳವಡಿಸಿ ನಾವು ಧ್ವನಿಯೆತ್ತಿದೆವು. ಆಗ ಸಂಬಂಧಪಟ್ಟ ಅಧಿಕಾರಿಗಳು ನಮಗೆ ಈ ಫಲಕವನ್ನು ತೆಗೆಯುವಂತೆ ವಿನಂತಿಸಿದರು. ನಾವು ಫಲಕವನ್ನು ತೆಗೆದೆವು; ಆದರೆ ಅಲ್ಲಿಯವರೆಗೆ ಫೇಸಬುಕ್ ಮತ್ತು ವ್ಯಾಟ್ಸ ಅಪ್ ಮುಖಾಂತರ ಈ ವಾರ್ತೆ ಎಲ್ಲೆಡೆ ಪ್ರಸಾರವಾಗಿತ್ತು. ಈ ಮೂಲಕವೂ ನಾವು ಜನಜಾಗೃತಿ ಮಾಡಬಹುದು.
ಹಿಂದುತ್ವನಿಷ್ಠ ಸಂಘಟನೆಗಳು ಪಂಢರಪುರ ಮಂದಿರವನ್ನು ಸರಕಾರಿಕರಣದಿಂದ ಮುಕ್ತಗೊಳಿಸಲು ಮುಂದಾಗಬೇಕು!- ಹ.ಭ.ಪ. ರಾಮಕೃಷ್ಣ ಹನುಮಂತ ಮಹಾರಾಜ ವೀರ “ಹಿಂದೂಗಳನ್ನು ಜಾಗೃತಗೊಳಿಸುವ ಕೆಲಸವನ್ನು ಹಿಂದೂ ಜನಜಾಗೃತಿ ಸಮಿತಿ ಮಾಡುತ್ತಿದೆ. ಕಾನೂನಿನ ವಿಷಯದಲ್ಲಿ ನಮಗೆ ಹಿಂದೂ ಜನಜಾಗೃತಿ ಸಮಿತಿಯ ಸಹಕಾರ ಲಭಿಸುತ್ತದೆ. ಮಂದಿರ ಸರಕಾರೀಕರಣದ ಏನು ಪ್ರಯೋಜನವಿದೆ? ಈ ವಿಷಯದಲ್ಲಿ ನಾವೂ ಸಭೆ ತೆಗೆದುಕೊಂಡೆವು. ಅದಕ್ಕೆ ಚೆನ್ನಾಗಿ ಪ್ರತಿಸ್ಪಂದನ ದೊರಕಿತು. ಇದರಿಂದ ನಾನು ಹಿಂದುತ್ವನಿಷ್ಠ ಸಂಘಟನೆಗಳಿಗೆ ಪಂಢರಪುರವನ್ನು ಮಂದಿರ ಸರಕಾರಿಕರಣದಿಂದ ಮುಕ್ತಗೊಳಿಸಲು ಮುಂದಾಗಬೇಕೆಂದು ವಿನಂತಿಸುತ್ತೇನೆ. |