ಅಭಿವೃದ್ಧಿಯ ಹೆಸರಿನಲ್ಲಿ ತೀರ್ಥಕ್ಷೇತ್ರಗಳನ್ನು ಪ್ರವಾಸಿತಾಣಗಳನ್ನಾಗಿ ಮಾಡಬೇಡಿ !

೧೦ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿನ ಪ್ರಥಮ `ಹಿಂದೂ ರಾಷ್ಟ್ರ ಸಂಸತ್ತಿ’ನ ಆಗ್ರಹದ ಬೇಡಿಕೆ !

ರಾಮನಾಥಿ, ೧೪ ಜೂನ್ (ವಾರ್ತೆ.) – ಪುರಾತನ ಕಾಲದಲ್ಲಿ ಅಂಕೋರ ವಾಟ, ಹಂಪಿ, ಮುಂತಾದ ಭವ್ಯ ದೇವಾಲಯಗಳನ್ನು ಕಟ್ಟಿದ ರಾಜ-ಮಹಾರಾಜರು ಅವುಗಳನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿದ್ದರು. ಈ ದೇವಾಲಯಗಳ ಮಾಧ್ಯಮದಿಂದ ಗೋಶಾಲೆ, ಅನ್ನಭಂಡಾರ, ಧರ್ಮಶಾಲೆ, ಶಿಕ್ಷಣಕೆಂದ್ರಗಳನ್ನು ನಡೆಸಿ ಸಮಾಜಕ್ಕೆ ಅಮೂಲ್ಯ ಸಹಾಯವನ್ನು ಮಾಡಲಾಗುತ್ತಿತ್ತು. ಇದರಿಂದಾಗಿಯೇ ದೇವಾಲಯಗಳೊಂದಿಗೆ ಹಿಂದೂ ಸಮಾಜವು ಜೋಡಿಸಲ್ಪಟ್ಟಿತ್ತು. ಈಗ ಮಾತ್ರ ದೇವಾಲಯಗಳ ಎಷ್ಟು ವ್ಯಾಪಾರೀಕರಣವಾಗಿದೆಯೆಂದರೆ, ಅವು ವ್ಯಾಪಾರಿ ಸಂಕೀರ್ಣ (ಶಾಪಿಂಗ್ ಮಾಲ್)ಗಳಾಗತೊಡಗಿವೆ. ಹಾಗೆಯೇ ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಪ್ರವಾಸಿತಾಣಗಳನ್ನಾಗಿ ಬದಲಾಯಿಸಲಾಗುತ್ತಿದೆ. ಇದನ್ನು ತಡೆಗಟ್ಟುವುದು ಆವಶ್ಯಕವಾಗಿದೆ. ಆದುದರಿಂದ ದೇವಾಲಯಗಳ ವಿಶ್ವಸ್ಥರು, ಹಾಗೆಯೇ ಪುರೋಹಿತರು ದೇವಾಲಯಗಳ ಆದರ್ಶ ವ್ಯವಸ್ಥಾಪನೆಯನ್ನು ಮಾಡಬೇಕು. ಇದನ್ನು ಸಾಧಿಸಲು `ದೇವಾಲಯಗಳ ಆದರ್ಶ ವ್ಯವಸ್ಥಾಪನೆ’ (ದಿ ಟೆಂಪಲ್ ಮೆನೆಜಮೆಂಟ್) ಈ ಪಠ್ಯಕ್ರಮವನ್ನು ಆರಂಭಿಸಬೇಕು. ಈ ಬಗ್ಗೆ `ಹಿಂದೂ ರಾಷ್ಟç ಸಂಸತ್ತಿ’ನಲ್ಲಿ ಚರ್ಚೆ ಮಾಡಲಾಯಿತು. ೧೩ ಜೂನ್ ರಂದು ೧೦ ನೇ ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇಯ ದಿನದಂದು `ಮಂದಿರಗಳ ಸುವ್ಯವಸ್ಥಾಪನೆ’ ಈ ಬಗ್ಗೆ ಹಿಂದೂ ರಾಷ್ಟ್ರ ಸಂಸತ್ತಿನಲ್ಲಿ ವಿವಿಧ ದೇವಾಲಯಗಳ ವಿಶ್ವಸ್ಥರು, ಭಕ್ತರು, ನ್ಯಾಯವಾದಿಗಳು ಮತ್ತು ಹಿಂದುತ್ವವಾದಿಗಳು ಅಧ್ಯಯನಪೂರ್ವಕ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು. ಇತರ ಗಣ್ಯರು ಚರ್ಚೆ ಮಾಡಿದರು. ಈ ಸಂಸತ್ತಿನಲ್ಲಿ ಸಭಾಪತಿಯೆಂದು ಭುವನೇಶ್ವರ (ಓಡಿಶಾ)ದ `ಭಾರತ ರಕ್ಷಾ ಮಂಚ್’ನ ರಾಷ್ಟ್ರೀಯ ಮಹಾಮಂತ್ರಿ ಅನಿಲ ಧೀರ, ಉಪಸಭಾಪತಿ `ಹಿಂದೂ ಜನಜಾಗೃತಿ ಸಮಿತಿ’ಯ ಧರ್ಮಪ್ರಚಾರಕರಾದ ಸಂತ ಪೂ. ನೀಲೇಶ ಸಿಂಗಬಾಳ ಮತ್ತು ಕಾರ್ಯದರ್ಶಿಗಳೆಂದು `ಹಿಂದೂ ಜನಜಾಗೃತಿ ಸಮಿತಿಯ’ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯ ಸಮನ್ವಯಕರಾದ ಶ್ರೀ. ಆನಂದ ಜಾಖೋಟಿಯಾ ಇವರು ಕಾರ್ಯಕಲಾಪಗಳ ಉಸ್ತುವಾರಿಯನ್ನು ನೋಡಿದರು.

೧. ಸಮಾಜದಲ್ಲಿ ನೈತಿಕತೆ ತರಲು ದೇವಾಲಯಗಳ ಆವಶ್ಯಕತೆ ಇದೆ ! – (ಸುಶ್ರೀ) ರಾಮಪ್ರಿಯಾಶ್ರೀ (ಮಾಯೀ) ಅವಘಡ, ಅಧ್ಯಕ್ಷೆ, `ರಾಮಪ್ರಿಯಾ ಫೌಂಡೇಶನ್’, ಅಮರಾವತಿ

(ಸುಶ್ರೀ) ರಾಮಪ್ರಿಯಾಶ್ರೀ (ಮಾಯೀ)

ಹಿಂದೂ ಸಮಾಜವು ಶರೀರದಿಂದ ಹಿಂದೂ ಆಗಿದ್ದರೂ ಅದರ ಬುದ್ಧಿ ಮಾತ್ರ ಆಂಗ್ಲರದ್ದಾಗಿದೆ. ದೇವಾಲಯಗಳು ನಮ್ಮ ಶ್ರದ್ಧೆ ಮತ್ತು ಪ್ರೇರಣೆಯ ಕೇಂದ್ರಗಳಾಗಿವೆ; ಆದರೆ ಇದೇ ಶ್ರದ್ಧೆಗಳ ಮೇಲೆ ಆಕ್ರಮಣ ಮಾಡಿ ೫ ಲಕ್ಷಗಳಿಗಿಂತ ಹೆಚ್ಚು ದೇವಾಲಯಗಳನ್ನು ಭಗ್ನಗೊಳಿಸಲಾಗಿದೆ. ಈಗಲಾದರೂ ದೇವಸ್ಥಾನಗಳ ರಕ್ಷಣೆಗೆ ವ್ಯವಸ್ಥೆ ಕಲ್ಪಿಸಬೇಕಿದೆ. ಈ ವ್ಯವಸ್ಥೆಯನ್ನು ಹಿಂದೂ ಜನಜಾಗೃತಿ ಸಮಿತಿಯು ಮಾಡುತ್ತಿದೆ. ನಮ್ಮ ದೇಶದಲ್ಲಿ ಅನೇಕ ದೇವಾಲಯಗಳಿವೆ. ಈ ದೇವಾಲಯಗಳು ಸದ್ವಿಚಾರಗಳ ಪ್ರೇರಣೆಯನ್ನು ನೀಡುತ್ತವೆ. ಯಾವ ಸ್ಥಳದಲ್ಲಿ ದೇವಾಲಯಗಳಿರುತ್ತವೋ, ಅಲ್ಲಿನ ಪರಿಸರದಲ್ಲಿ ಚೈತನ್ಯವು ನಿರ್ಮಾಣವಾಗುತ್ತದೆ. ದೇವಾಲಯಗಳಲ್ಲಿ ಪ್ರತಿದಿನ ದೇವತೆಗಳ ಉಪಾಸನೆ ಮಾಡುತ್ತಾ ಮಾಡುತ್ತಾ ಭಕ್ತರಲ್ಲಿನ ದೇವತ್ವವೂ ಜಾಗೃತವಾಗುತ್ತದೆ. ಅದಕ್ಕಾಗಿ ದೇವಾಲಯಗಳಲ್ಲಿ ಬರುವ ಹಿಂದೂ ಭಕ್ತರನ್ನು ಸಂಘಟಿಸಿ ಅವರಿಗೆ ಧರ್ಮಶಾಸ್ತçವನ್ನು ಕಲಿಸಬೇಕು. ವಿಶೇಷವಾಗಿ ಚಿಕ್ಕ ಮಕ್ಕಳು ಮತ್ತು ಯುವಕರನ್ನು ದೇವಾಲಯಗಳೊಂದಿಗೆ ಜೋಡಿಸುವ ಆವಶ್ಯಕತೆ ಇದೆ. ಜನರಲ್ಲಿ ನೈತಿಕತೆ ಬರಲು ದೇವಾಲಯಗಳ ಆವಶ್ಯಕತೆ ಇದೆ. ಕೇವಲ ರಾಮನಾಮನದ ನಾಮಜಪವನ್ನು ಮಾಡಿ ಉಪಯೋಗವಿಲ್ಲ, ರಾಮಕಾರ್ಯದಲ್ಲಿ ಕೊಡುಗೆಯನ್ನು ನೀಡಿದರೆ ಭಕ್ತಿಯು ಯಶಸ್ವಿಯಾಗುತ್ತದೆ. ಕೊಡುಗೆಯನ್ನು ನೀಡದಿದ್ದರೆ ಭಕ್ತಿ ಯಶಸ್ವಿಯಾಗುವುದಿಲ್ಲ. ಸಂತರು ಹೇಳಿದಂತೆ ೨೦೨೫ ರಲ್ಲಿ ಹಿಂದೂ ರಾಷ್ಟçದ ಸ್ಥಾಪನೆಯಾಗಲಿಕ್ಕೇ ಇದೆ ; ಆದರೆ ಆ ಕಾರ್ಯದಲ್ಲಿ ನಾವೆಲ್ಲರೂ ಕೊಡುಗೆಯನ್ನು ನೀಡುವುದು ಆವಶ್ಯಕವಾಗಿದೆ.”

೨. ದೇವಾಲಯಗಳಲ್ಲಿ ವ್ಯಕ್ತಿಸ್ವಾತಂತ್ರ್ಯಕ್ಕಲ್ಲ, ಆದರೆ ಧಮಾಚರಣೆಗೇ ಮಹತ್ವವಿರುವುದರಿಂದ ವಸ್ತುಸಂಹಿತೆಯನ್ನು ಅನ್ವಯಗೊಳಿಸಿ ! – ಸದ್ಗುರು ನಂದಕುಮಾರ ಜಾಧವ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಸದ್ಗುರು ನಂದಕುಮಾರ ಜಾಧವ

ಸನಾತನದ ಸಂತ ಸದ್ಗುರು ನಂದಕುಮಾರ ಜಾಧವ ಇವರು ತಮ್ಮ ಮಾರ್ಗದರ್ಶನದಲ್ಲಿ, “ಸದ್ಯ ಹಿಂದೂ ಧರ್ಮವನ್ನು ಒಪ್ಪಿಕೊಳ್ಳದ ಅಥವಾ ದೇವತೆಗಳ ಮೇಲೆ ಶ್ರದ್ಧೆ ಇಲ್ಲದ ಆಧುನಿಕತಾವಾದಿಗಳೇ ದೇವಾಲಯಗಳಲ್ಲಿ ವಸ್ತçಸಂಹಿತೆಯನ್ನು ವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ವಿರೋಧಿಸುತ್ತಿರುತ್ತಾರೆ. ದೇವಾಲಯಗಳಲ್ಲಿ ದೇವರ ದರ್ಶನ ಪಡೆಯಲು ತುಂಡು ಬಟ್ಟೆಗಳಲ್ಲಿ ಅಥವಾ ಅಸಾಂಪ್ರದಾಯಿಕ ಉಡುಗೆಯಲ್ಲಿ ಹೋಗುವುದು, ಇದಕ್ಕೆ `ವ್ಯಕ್ತಿಸ್ವಾತಂತ್ರ್ಯವೆಂದು ಹೇಳುವುದಿಲ್ಲ. ಪ್ರತಿಯೊಬ್ಬರಿಗೆ `ತಮ್ಮ ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವ ಬಟ್ಟೆಗಳನ್ನು ಧರಿಸಬೇಕು’, ಎಂಬುದಕ್ಕೆ ವ್ಯಕ್ತಿಸ್ವಾತಂತ್ರ್ಯ ಇದೆ; ಆದರೆ ದೇವಾಲಯಗಳು ಧಾರ್ಮಿಕಸ್ಥಳಗಳಾಗಿವೆ. ಇಲ್ಲಿ ಧಾರ್ಮಿಕತೆಯನ್ನು ಅನುಸರಿಸಿಯೇ ಆಚರಣೆಯಾಗಬೇಕು. ಅಲ್ಲಿ ವ್ಯಕ್ತಿಸ್ವಾತಂತ್ರ್ಯಕ್ಕೆ ಮಹತ್ವವಿರದೇ ಧರ್ಮಾಚರಣೆಗೆ ಮಹತ್ವವಿದೆ,” ಎಂದು ಹೇಳಿದರು. `ಹಿಂದೂ ರಾಷ್ಟç ಸಂಸತ್ತಿನಲ್ಲಿ `ಮಂದಿರ ವ್ಯವಸ್ಥಾಪನ’ ಈ ಚರ್ಚೆಯಲ್ಲಿ ನಾನು `ಮಂದಿರಮಧ್ಯೆ ಭಾವಿಕಾಂಸಾಠಿ ವಸ್ತುಸಂಹಿತಾ ಲಾಗೂ ಕರಾವಿ !’ ಈ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದರು.

ಸದ್ಗುರು ನಂದಕುಮಾರ ಜಾಧವ ಇವರು ಮುಂದೆ ಮಾತನಾಡುತ್ತಾ ಹೀಗೆಂದರು,

೧. ತಮಿಳುನಾಡು ಉಚ್ಚ ನ್ಯಾಯಲಯವೂ `೧ ಜನವರಿ ೨೦೧೬ ರಿಂದ ವಸ್ತುಸಂಹಿತೆಯನ್ನು ಜಾರಿಗೆ ತಂದಿದ್ದು, ಅಲ್ಲಿನ ದೇವಾಲಯಗಳಲ್ಲಿ ಪ್ರವೇಶಿಸಲು ಸಾತ್ತ್ವಿಕ ಉಡುಗೆ ತೊಡಬೇಕು’, ಎಂದು ಒಪ್ಪಿಕೊಂಡಿದೆ. ಅದಕ್ಕನುಸಾರ ಭಕ್ತರು ಕೇವಲ ಭಾರತೀಯ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

೨. ೧೨ ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ಉಜ್ಜೆನ್‌ನ ಶ್ರೀ ಮಹಾಕಾಲೇಶ್ವರ ದೇವಾಲಯ, ಮಹಾರಾಷ್ಟದ ಶ್ರೀ ಘೃಷ್ಣೇಶ್ವರ ದೇವಾಲಯ, ವಾರಾಣಸಿಯ ಶ್ರೀ ಕಾಶಿ-ವಿಶ್ವೇಶ್ವರ ದೇವಾಲಯ, ಆಂಧ್ರಪ್ರದೇಶದ ಶ್ರೀ ತಿರುಪತಿ ಬಾಲಾಜಿ ದೇವಾಲಯ, ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಾಲಯ, ಕನ್ಯಾಕುಮಾರಿಯ ಶ್ರೀ ಮಾತಾ ದೇವಾಲಯ ಇಂತಹ ಕೆಲವು ಪ್ರಖ್ಯಾತ ದೇವಾಲಯಗಳಲ್ಲಿ ಭಕ್ತರಿಗಾಗಿ ಸಾತ್ತ್ವಿಕವಸ್ತುಸಂಹಿತೆಯನ್ನು ಅನ್ವಯಿಸಲಾಗಿದೆ.

೩. ಭಾರತದ ಎಲ್ಲ ದೇವಾಲಯಗಳು ಈ ರೀತಿ ವಸ್ತçಸಂಹಿತೆಯನ್ನು ಜಾರಿಗೆ ತಂದು ದೇವಾಲಯಗಳಲ್ಲಿ ಧರ್ಮಾಚರಣೆಗೆ ಪ್ರಾಧಾನ್ಯತೆ ನೀಡಬೇಕು, ಎಂದು ನಾವು ಕರೆ ನೀಡುತ್ತೇವೆ’, ಎಂದು ಹೇಳಿದರು.

ಸರಕಾರವು ದೇವಾಲಯಗಳ ಕಡೆಗೆ ಧನಪ್ರಾಪ್ತಿಯ ಸಾಧನವೆಂದು ನೋಡುತ್ತಿದೆ ! – ಪೂ. ನೀಲೇಶ ಸಿಂಗಬಾಳ, ಧರ್ಮಪ್ರಚಾರಕ ಸಂತ, ಹಿಂದೂ ಜನಜಾಗೃತಿ ಸಮಿತಿ

ಪೂ. ನೀಲೇಶ ಸಿಂಗಬಾಳ

ದೇವಾಲಯಗಳು ಚೈತನ್ಯದ ಸ್ರೋತ(ಚಿಲುಮೆ)ವಾಗಿರುವುದರಿಂದ ದೇಶ-ವಿದೇಶಗಳಲ್ಲಿರುವ ತೀರ್ಥಕ್ಷೇತ್ರಗಳಿಗೆ ಭಕ್ತರು ಹೋಗುತ್ತಾರೆ. ಆಕ್ರಮಣಕಾರರು ಸಾವಿರಗಟ್ಟಲೆ ದೇವಾಲಯಗಳನ್ನು ಧ್ವಂಸ ಮಾಡಿದ್ದಾರೆ. ಈ ದೇವಾಲಯಗಳನ್ನು ಪುನಃ ಕಟ್ಟಲು ಹಿಂದೂಗಳು ಇಂದಿಗೂ ಪರಿಶ್ರಮ ಪಡುತ್ತಿದ್ದಾರೆ. ಇನ್ನೊಂದು ಬದಿಗೆ ಮಾತ್ರ ಜಾತ್ಯತೀತ ಸರಕಾರಗಳು ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿವೆ. ದೇವಾಲಯಗಳನ್ನು ಕಟ್ಟುವುದಕ್ಕಾಗಿ ಯಾವುದೇ ಕೊಡುಗೆ ಇಲ್ಲದಿರುವಾಗ ಸರಕಾರ ದೇವಾಲಯಗಳ ಕಡೆಗೆ ಧನಪ್ರಾಪ್ತಿಯ ಸಾಧನವೆಂದು ನೋಡುತ್ತಿದೆ. ದೇವನಿಧಿಯನ್ನು ದುರುಪಯೋಗ ಪಡಿಸಲಾಗುತ್ತಿದೆ. ಅನೇಕ ದೇವಾಲಯಗಳ ಸಮಿತಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ನಡೆಸಿವೆ. ಹಿಂದೂ ದೇವಾಲಯಗಳಲ್ಲಿ ಮಾಡಲಾದ ದಾನದ ಯೋಗ್ಯ ವಿನಿಯೋಗವಾಗುವುದು, ಸಹ ಮಹತ್ವದ್ದಾಗಿದೆ. ಇದಕ್ಕಾಗಿ ದೇವಾಲಯಗಳ ಸುನಿಯೋಜನೆಯಾಗುವುದು ಆವಶ್ಯಕವಾಗಿದೆ.

ದೇವಾಲಯಗಳು ಕೇವಲ ಶ್ರೀಮಂತರಿಗಾಗಿ ಅಲ್ಲ, ಆದರೆ ಸಾಮಾನ್ಯರಿಗಾಗಿಯೂ ಇವೆ ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ ರಮೇಶ ಶಿಂದೆ

`ಹಿಂದೂ ಧರ್ಮ ಮತ್ತು ದೇವಾಲಯಗಳ ಸಂಬಂಧ ಪ್ರಾಚೀನವಾದುದಾಗಿದೆ. ಧರ್ಮದ ರಕ್ಷಣೆಯಲ್ಲಿ ದೇವಾಲಯಗಳ ಕೊಡುಗೆ ಅಗಾಧವಾಗಿದೆ. ಆದುದರಿಂದ ದೇವಾಲಯಗಳ ಸುನಿಯೋಜನೆ ಇರಬೇಕು. ದೇವಾಲಯಗಳು ಕೇವಲ ಶ್ರೀಮಂತರಿಗಲ್ಲ, ಸಾಮಾನ್ಯರಿಗಾಗಿಯೂ ಇದೆ. ಆದುದರಿಂದ ದೇವಾಲಯಗಳಲ್ಲಿ ವ್ಯವಸ್ಥೆಯನ್ನು ಮಾಡುವಾಗ ಸರ್ವಸಾಮಾನ್ಯರ ವಿಚಾರ ಮಾಡಬೇಕು”, ಎಂಬ ಹೇಳಿಕೆಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ರಮೇಶ. ಶಿಂದೆ ಇವರು ನೀಡಿದರು.

ಶ್ರೀ. ರಮೇಶ ಶಿಂದೆ ತಮ್ಮ ಮಾತನ್ನು ಮುಂದುವರೆಸುತ್ತಾ ಹೀಗೆಂದರು,

೧. ಆಧುನಿಕ ದೇವಾಲಯಗಳಲ್ಲಿನ ಪಾದಚಾರಿ ಮಾರ್ಗಗಳು `ಮಾರ್ಬಲ’ ಅಥವಾ `ಗ್ರಾನೈಟ್’ನಿಂದ ಮಾಡಲ್ಪಟಿರುತ್ತವೆ, ಇದರಿಂದ ಭಕ್ತರ ಕಾಲುಗಳಿಗೆ ತೊಂದರೆಯಾಗುತ್ತದೆ. ಇದಕ್ಕೆ ಪರಿಹಾರವೆಂದು ಗುರುದ್ವಾರದ ಮಾರ್ಗದಲ್ಲಿ ನೀರಿನ ವ್ಯವಸ್ಥೆ ಇರುತ್ತದೆ, ಅದರಂತೆ ದೇವಾಲಯಗಳ ಸ್ಥಳಗಳಲ್ಲಿ ಈ ರೀತಿಯ ವ್ಯವಸ್ಥೆ ಮಾಡಬಹುದೇನು ? ದೇವಾಲಯದ ಪ್ರದೇಶದಲ್ಲಿ ತೇವ ಕಾಪಾಡಲು ದೇವಾಲಯದ ಪರಿಸರಗಳಲ್ಲಿ ಮರಗಳನ್ನು ನೆಡಬಹುದು.

೨. ದೇವಾಲಯಕ್ಕೆ ಬರುವ ಕಾಣಿಕೆಯನ್ನು ಬಳಸಿಕೊಳ್ಳುವ ವ್ಯವಸ್ಥೆ ಪಾರದರ್ಶಕವಾಗಿರಬೇಕು. ದೇವಾಲಯಗಳ ಹಣವು ಧರ್ಮಪ್ರಚಾರಕ್ಕಾಗಿಯೇ ವಿನಿಯೋಗವಾಗಬೇಕು. ಸಂಸ್ಕೃತಿ ಯ ಬಗ್ಗೆ ಮಾಹಿತಿ ನೀಡಲಾಗಬೇಕು.

೪. ಕೆಲವು ದೇವಾಲಯಗಳಲ್ಲಿ ದರ್ಶನಕ್ಕೆ ಶುಲ್ಕ ವಿಧಿಸಲಾಗುತ್ತದೆ. ಸಂಪತ್ತಿನ ಆಧಾರದಲ್ಲಿ ಅಲ್ಲ, ಭಾವ ಇರುವವರಿಗೆ ದೇವರ ದರ್ಶನ ಸಿಗುವಂತಾಗಬೇಕು.

ಸರಕಾರ ತನ್ನದೇ ಕಾರ್ಯಕಲಾಪಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಹೀಗಿರುವಾಗ ದೇವಾಲಯದ ನಿರ್ವಹಣೆ ಹೇಗೆ ನೋಡಿಕೊಳ್ಳಲಿದೆ ? – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ತು

ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ

ಇಂದು ದೇವಾಲಯಗಳ ರಕ್ಷಣೆಗಾಗಿ ಹಿಂದೂಗಳ ಒತ್ತಡದ ತಂತ್ರಗಾರಿಕೆಯನ್ನು ರಚಿಸುವುದು ಅನಿವಾರ್ಯವಾಗಿದೆ. ದೇವಾಲಯಗಳಲ್ಲಿರುವ ಸಂಪತ್ತು ಹಿಂದೂಗಳಿಗಾಗಿ ಬಳಕೆಯಾಗಬೇಕು; ಆದರೆ ಹಾಗಾಗದೇ ಹಲವೆಡೆ ದೇವಾಲಯದ ಹಣವನ್ನು ಸಮಾಜಸೇವೆಗಾಗಿ ಬಳಸಲಾಗುತ್ತಿದೆ. ಅಣೆಕಟ್ಟು ನಿರ್ಮಾಣಕ್ಕೆ ಶಿರಡಿ ದೇವಸ್ಥಾನವು ೫೦೦ ಕೋಟಿ ರೂಪಾಯಿ ಹಣವನ್ನು ನೀಡಿದೆ. ವಾಸ್ತವದಲ್ಲಿ ರೈತರಿಗೆ ಈ ನಿಧಿಯನ್ನು ನೀಡದೆ ಸ್ಥಳೀಯ ರಾಜಕೀಯ ನಾಯಕನ ರಾಜಕೀಯ ಲಾಭಕ್ಕಾಗಿ ನೀಡಲಾಗಿತ್ತು. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೆಲಸದಲ್ಲಿ ಮೈಗಳ್ಳತನ ಮಾಡಿದರೆ ಅವರಿಗೆ ದಂಡ ವಿಧಿಸಲಾಗುತ್ತದೆ; ಹಾಗಾದರೆ ದೇವಾಲಯಗಳ ನಿರ್ವಹಣೆಯು ಅಸಮರ್ಪಕವಾದಲ್ಲಿ ಶಿಕ್ಷೆಯನ್ನು ದ್ವಿಗುಣಗೊಳಿಸಬೇಕು. ಸರಕಾರವು ತನ್ನದೇ ಕಾರ್ಯಕಲಾಪಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಹೀಗಿರುವಾಗ ದೇವಾಲಯಗಳನ್ನು ಹೇಗೆ ನಿರ್ವಹಿಸಬಲ್ಲದು ? ಸರಕಾರದ ಈ ಅಕಾರ್ಯಕ್ಷಮತೆಯನ್ನು ನಾವು ಸತತವಾಗಿ ತೋರಿಸಬೇಕಾಗಿದೆ.

ದೇವಾಲಯಗಳ ಆದರ್ಶ ನಿರ್ವಹಣೆ ಹೇಗಿರಬೇಕು ಎಂಬುದನ್ನು ತೋರಿಸಿ ಕೊಡಬೇಕು ! – ಅನಿಲ ಧೀರ, ರಾಷ್ಟ್ರೀಯ ಮಹಾಮಂತ್ರಿ, ಭಾರತ ರಕ್ಷಾ ಮಂಚ, ಭುವನೇಶ್ವರ, ಒಡಿಶಾ.

ಶ್ರೀ ಅನಿಲ ಧೀರ

ಅನೇಕ ದೇವಾಲಯಗಳಿರುವಲ್ಲಿ ಮಾಲ್‌ಗಳು ಆಗುತ್ತಿವೆ. ಈ ಮಾಲ್‌ಗಳು ಪ್ರವಾಸಿಗರಿಗಾಗಿ ಆಗುತ್ತಿವೆ. ದೇವಾಲಯಗಳು ಪ್ರವಾಸಿ ತಾಣವಲ್ಲ, ಧಾರ್ಮಿಕ ಕೇಂದ್ರಗಳಾಗಿವೆ. ಪ್ರವಾಸಿಗರು ತುಂಡು ಬಟ್ಟೆಯಲ್ಲಿ ದೇವಾಲಯಗಳನ್ನು ಪ್ರವೇಶಿಸುತ್ತಾರೆ. ದೇವಸ್ಥಾನಗಳಲ್ಲಿ ವಸ್ತç ಸಂಹಿತೆ ನಿಗದಿ ಮಾಡಬೇಕು. ಕೆಲವು ದೇವಾಲಯಗಳು ಉತ್ತಮವಾಗಿ ನಿರ್ವಹಿಸಲ್ಪಡುತ್ತವೆ. ದೇವಸ್ಥಾನಗಳ ಆದರ್ಶ ನಿರ್ವಹಣೆ ಹೇಗಿರಬೇಕು ಎಂಬುದನ್ನು ಹಿಂದೂಗಳು ಜಗತ್ತಿಗೆ ತೋರಿಸಬೇಕು ಎಂದು ಹೇಳಿದರು.

ಸಂಸತ್ತಿನಲ್ಲಿ ಭಾಗವಹಿಸಿದ್ದ ಇತರ ಗಣ್ಯರು ವ್ಯಕ್ತಪಡಿಸಿದ ಅನುಭವಗಳು !

೧. ಹ.ಭ.ಪ. ಮದನ ತಿರಮಾರೆ, ಗಜಾನನ ಮಹಾರಾಜ ಸೇವಾ ಸಮಿತಿ, ಅಮರಾವತಿ – ಗ್ರಾಮಸ್ಥರು ದೇವಾಲಯಗಳಲ್ಲಿ ಒಟ್ಟಾಗಿ ಉಪಾಸನೆ ಮಾಡಿದರೆ ಅವರಿಗೆ ಅದರ ಲಾಭವಾಗುತ್ತದೆ, ಎಂಬ ವಿಚಾರದಿಂದ ಗ್ರಾಮಸ್ಥರು ಹಲವು ದೇವಾಲಯಗಳಲ್ಲಿ ಎಲ್ಲ ವಯೋಮಾನದವರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದರು. ಸಾಮೂಹಿಕ ಉಪಾಸನೆಯಿಂದ ಗ್ರಾಮದ ಜನರಲ್ಲಿ ಒಗ್ಗಟ್ಟುತನ ನಿರ್ಮಾಣವಾಗಿದ್ದು, ಅವರಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುತ್ತಿವೆ ಎಂದು ಹೇಳಿದರು.

೨. ಶ್ರೀ. ಸುಧಾಕರ ಟಾಕ, ಅಧ್ಯಕ್ಷರು, ರಾಷ್ಟ್ರಸಂತ ಶ್ರೀ ಸಂತ ಪಾಚಲೆಗಾವಕರ ಮಹಾರಾಜ, ಮುಕ್ತೇಶ್ವರ ಆಶ್ರಮ, ನಾಂದೇಡ – ನಾವು ನಮ್ಮ ಆಶ್ರಮದಲ್ಲಿನ ಎಲ್ಲಾ ವಹಿವಾಟುಗಳನ್ನು ಪಾರದರ್ಶಕವಾಗಿರಿಸಿಟ್ಟಿದ್ದೇವೆ. `ಜೀನ್ಸ್ ಪ್ಯಾಂಟ್’ ಧರಿಸಿ ಆಶ್ರಮಕ್ಕೆ ಪ್ರವೇಶ ನೀಡುವುದಿಲ್ಲ ಎಂದು ಹೇಳಿದರು.

೩. ಶ್ರೀ. ಮಹೇಶ ಡಗಲಾ, ಹಿಂದೂ ಉಪಾಧ್ಯಾಯ ಸಮಿತಿ, ಅಧ್ಯಕ್ಷರು, ಆಂಧ್ರಪ್ರದೇಶ – ತಿರುಪತಿ ಬಾಲಾಜಿ ದೇವಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರದಿಂದ ಹಿಂದೂಗಳು, ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಬೇಕು ಎಂದು ಅರಿತುಕೊಳ್ಳಬೇಕು ಎಂದು ಹೇಳಿದರು.

೪. ಶ್ರೀ. ಗಣೇಶ ಮಹಾಜನ, ಅಧ್ಯಕ್ಷರು, ಶ್ರೀದ್ವಾದಶ ಜ್ಯೋತಿರ್ಲಿಂಗ ಆರ್ಯ ವೈಶ್ಯ ನಿತ್ಯಾನ್ನ ಸತರಾಮ ಟ್ರಸ್ಟ್, ನಾಂದೇಡ್ – ಕಳೆದ ೭೫ ವರ್ಷಗಳಿಂದ, ನನ್ನ ಪೂರ್ವಜರು ಅನ್ನದಾನದ ದೊಡ್ಡ ಕಾರ್ಯವನ್ನು ಮಾಡಿದ್ದಾರೆ. ನಾನು ಆ ಕಾರ್ಯವನ್ನು ಮುಂದುವರಿಸುತ್ತೇನೆ ಮತ್ತು ನನ್ನ ಉಳಿದ ಜೀವನವನ್ನು ಅನ್ನದಾನಕ್ಕಾಗಿ ಮೀಸಲಿಡುತ್ತೇನೆ ಎಂದು ಹೇಳಿದರು.

೫. ಶ್ರೀ. ಶಂಕರ್ ಖರೇಲ, ನೇಪಾಳ – ಅನೇಕ ಸ್ಥಳಗಳಲ್ಲಿ, ದೇವಾಲಯಗಳಿಗೆ ದರ್ಶನಕ್ಕಾಗಿ ತಲುಪಿದ ತಕ್ಷಣ ದಲ್ಲಾಳಿ ಪ್ರಾರಂಭವಾಗಿರುತ್ತದೆ. ದೇವಾಲಯಗಳು ವ್ಯಾಪಾರದ ಅಖಾಡವಾಗುತ್ತಿವೆ. ಕಳೆದ ೩೨ ವರ್ಷಗಳಿಂದ ನೇಪಾಳದಲ್ಲಿ ಕಮ್ಯುನಿಸ್ಟರು ಹಿಂದೂ ದೇವಾಲಯಗಳ ಭೂಮಿಯನ್ನು ಕಬಳಿಸಿದ್ದಾರೆ. ಆದ್ದರಿಂದ ದೇವಾಲಯಗಳನ್ನು ರಕ್ಷಿಸುವುದು ಅಗತ್ಯವಿದೆ ಎಂದು ಹೇಳಿದರು.

೬. ಸ್ವಾಮಿ ಸಂಯುಕ್ತಾನಂದ ಮಹಾರಾಜ, ಭಾರತ ಸೇವಾಶ್ರಮ ಸಂಘ – ಭಾರತವು ದೇವಾಲಯಗಳಿಗೆ ಹೆಸರುವಾಸಿಯಾದ ದೇಶವಾಗಿದೆ. ಇಲ್ಲಿ ಶ್ರದ್ಧೆಯಿಂದ ದೇವತೆಗಳನ್ನು ಪೂಜಿಸಲಾಗುತ್ತಿದೆ. ದೇವಾಲಯಗಳಿಂದ ವ್ಯಕ್ತಿಯು ದೇವತೆಯೊಂದಿಗೆ ವೈಯಕ್ತಿಕವಾಗಿ ಜೋಡಿಸಲ್ಪಡುತ್ತಾನೆ. ಪ್ರಸ್ತುತ ದೇವಾಲಯಗಳು ವಾಣಿಜ್ಯ ಸಂಕೀರ್ಣಗಳ ರೂಪದಲ್ಲಿವೆ. ಭಾರತದಲ್ಲಿರುವ ಎಲ್ಲಾ ಹಿಂದೂಗಳು ಒಗ್ಗೂಡಿ ಇದನ್ನು ದೂರ ಮಾಡಲು ಶ್ರಮಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

೭. ಶ್ರೀ. ಮದನ ಉಪಾಧ್ಯಾಯ, ಶ್ರೀ ರಾಮ ಶಕ್ತಿ ಸಮಾಜ ರಕ್ಷಣಾ ಕೇಂದ್ರ, ಛತ್ತೀಸಗಡ – ದೇವಾಲಯಗಳಲ್ಲಿ ವೇತನ ಪಡೆಯುವ ಅರ್ಚಕರನ್ನು ನೇಮಿಸುವ ಮೂಲಕ ದೇವರನ್ನು ಪೂಜಿಸುವುದು ನೌಕರಿ ಎಂದು ಮಾಡಲಾಗುತ್ತದೆ. ಆದ್ದರಿಂದ ಅರ್ಚಕರಿಗೂ ದೇವಸ್ಥಾನಗಳ ನಿರ್ವಹಣೆ ಕಲಿಸಬೇಕು ಎಂದು ಹೇಳಿದರು.

೮. ಶ್ರೀ. ಗಣೇಶ ಸಿಂಗ ಠಾಕೂರ ಕ್ಷತ್ರಿಯ ಸಮಾಜ ರಜಪೂತ ಸಂಘಟನೆ ಇವರು ಮಾತನಾಡುತ್ತಾ, – ನಾಂದೇಡನಲ್ಲಿನ ಶ್ರೀ ರೇಣುಕಾಮಾತಾ ದೇವಾಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನ್ಯಾಯಾಲಯದ ಹೋರಾಟ ನಡೆಸಿದೆವು. ಇದರಿಂದ ಸಂಬಂಧಿತರಿಗೆ ಶಿಕ್ಷೆಯಾಯಿತು. ನಮ್ಮೊಂದಿಗೆ ಶ್ರೀ ರೇಣುಕಾಮಾತೆಯ ಆಶೀರ್ವಾದ ಇತ್ತು. ಆದ್ದರಿಂದಲೇ ಇದು ಸಾಧ್ಯವಾಯಿತು ಎಂದರು.

೯. ಶ್ರೀ. ನಿಧಿಶ ಗೋಯಲ, `ಜಂಬು ಟಾಕ್’ ಯೂಟ್ಯೂಬ್ ಚಾನೆಲ್, ಜೈಪುರ – ದೇವಾಲಯಗಳ ಗರ್ಭಗುಡಿಯು ಸೂರ್ಯನ ಬೆಳಕಿನಂತೆ ಎಲ್ಲಾಕಡೆಗಳಲ್ಲಿ ಚೈತನ್ಯವನ್ನು ಪ್ರಕ್ಷೇಪಿಸುವ ಕೆಲಸ ಮಾಡುತ್ತದೆ. ದೇವಾಲಯಗಳ ನಿರ್ಮಾಣದ ಹಿಂದಿನ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

೧೦. ಡಾ. ನೀಲೇಶ ಲೋಣಕರ, ಅಧ್ಯಕ್ಷರು, ಸ್ವಾತಂತ್ರ್ಯವೀರ ಸಾವರಕರ ಯುವ ವಿಚಾರ ಮಂಚ, ಪುಣೆ – ದೇವಾಲಯಗಳಲ್ಲಿ ಸ್ವಚ್ಛತೆ ಮತ್ತು ಶಾಂತಿ ಇರಬೇಕು, ಜೊತೆಗೆ ದೇವತೆಗಳ ವಿಧಿವತ್ತಾಗಿ ಪೂಜೆಯೂ ಆಗಬೇಕು. ದೇವಾಲಯಗಳಲ್ಲಿ ಹಿಂದೂಯೇತರ ನೌಕರರು ಇರಬಾರದು, ದೇವಸ್ಥಾನದಲ್ಲಿ ಕೆಲಸ ಮಾಡಲು ಇಚ್ಛೆಯಿದ್ದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಬೇಕು.

೧೧. ಶ್ರೀ. ಶರದ ಕುಲಕರ್ಣಿ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಮಂಗಳಗ್ರಹ ದೇವಸ್ಥಾನ, ಜಲಗಾವ : ಜಲಗಾವ (ಮಹಾರಾಷ್ಟç)ದ ಅಮಳನೇರನಲ್ಲಿ ಭಗವಾನ ಮಂಗಳನ ವಿಗ್ರಹವಿದೆ. ಈ ದೇವಾಲಯ ಬಹಳ ಪುರಾತನವಾದದ್ದು. ದೇವಾಲಯದಲ್ಲಿ ದೇವತೆಗಳನ್ನು ಶಾಸ್ತೊçÃಕ್ತವಾಗಿ ಪೂಜಿಸಲಾಗುತ್ತದೆ. ದೇವಾಲಯದಲ್ಲಿ ಅರ್ಚಕರು ಪಂಚೆ ಧರಿಸಿ ಪೂಜೆ ಮಾಡುತ್ತಾರೆ. ಇದರಿಂದಾಗಿ ದೇವಾಲಯದಲ್ಲಿ ಚೈತನ್ಯ ಉಳಿದುಕೊಂಡಿದೆ. ದೇವಾಲಯಗಳಲ್ಲಿ ಧರ್ಮಾಚರಣೆ ಕುರಿತು ಫಲಕಗಳನ್ನು ಹಾಕಲಾಗಿದೆ.

`ಜಯತು ಜಯತು ಹಿಂದುರಾಷ್ಟçಮ್’ ಘೋಷಣೆಯಿಂದ ಹಿಂದೂ ರಾಷ್ಟç ಸಂಸತ್ತಿನಲ್ಲಿ ಅಂಗೀಕರಿಸಲಾದ ಠರಾವಗಳು !

ಅ. ಸರಕಾರದ ನಿಯಂತ್ರಣ ತೆಗೆದು ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು.

ಆ. ದೇವಾಲಯದಲ್ಲಿ ಬೇರೆ ಪಂಥೀಯರನ್ನು ಯಾವುದೇ ಕೆಲಸಕ್ಕೆ ನಿಯೋಜಿಸಬಾರದು.

ಇ. ದೇವಸ್ಥಾನ ಪ್ರದೇಶದಲ್ಲಿ ಮತಾಂತರ, ಅನ್ಯ ಧರ್ಮ ಪ್ರಚಾರ, ಮದ್ಯ ಮತ್ತು ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು.