ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ನಿರ್ಮಿಸಿದ ‘ಗುರುಕೃಪಾಯೋಗ ಎಂಬ ಅಷ್ಟಾಂಗ ಸಾಧನಾ ಮಾರ್ಗವು ಕಲಿಯುಗಕ್ಕಾಗಿ ಅತ್ಯಂತ ಆವಶ್ಯಕ ಮತ್ತು ಮುಂದೆ ಪುನಃ ಬರುವ ತ್ರೇತಾ ಮತ್ತು ದ್ವಾಪರ ಯುಗಗಳಿಗೂ ಉಪಯುಕ್ತ

೧. ಗುರುತತ್ತ್ವವು ಅನಾದಿ ಕಾಲದಿಂದಲೂ ಇದೆ ಮತ್ತು ಅದರ ಮಹಿಮೆಯೂ ಅನಾದಿಕಾಲದಿಂದ ಇದೆ

ಅ. ಶಿವನು ಮೊದಲ ಗುರು ಮತ್ತು ಪಾರ್ವತಿಯು ಮೊದಲ ಶಿಷ್ಯೆ.  ಶಿವನು ಪಾರ್ವತಿಗೆ ‘ಗುರುಗೀತೆಯನ್ನು ಹೇಳಿದನು. ಅದರಲ್ಲಿ ಶಿವನು ಪಾರ್ವತಿಗೆ ಗುರು ಮತ್ತು ಗುರುಕೃಪೆಯ ಮಹತ್ವವನ್ನು ವಿಸ್ತಾರವಾಗಿ ಹೇಳಿದ್ದಾನೆ. ಶಿವನು ಹೇಳಿರುವ ‘ಗುರುಕೃಪಾ ಹೀ ಕೇವಲಂ ಶಿಷ್ಯ ಪರಮಮಂಗಲಮ್ | (ಅರ್ಥ : ಕೇವಲ ಗುರುಕೃಪೆಯಿಂದಲೇ ಶಿಷ್ಯನ ಪರಮ ಮಂಗಲವಾಗುತ್ತದೆ.) ಈ ಶ್ಲೋಕವೂ ಸುಪರಿಚಿತವಾಗಿದೆ.

ಆ. ಗುರುದೇವ ದತ್ತಾತ್ರೇಯರಿಗೂ ಅನೇಕ ಶಿಷ್ಯರಿದ್ದರು. ಗುರು-ಶಿಷ್ಯರ ಅನೇಕ ಪೌರಾಣಿಕ ಕಥೆಗಳೂ ಇವೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ‘ಗುರುಕೃಪಾ ಮಹಾತ್ಮೆಯು ಅನಾದಿ ಕಾಲದಿಂದಲೂ ಇದೆ.

(ಪೂ.) ಶ್ರೀ. ಸಂದೀಪ ಆಳಶಿ,

೨. ಪರಾತ್ಪರ ಗುರು ಡಾ.ಆಠವಲೆಯವರ ‘ಗುರುಕೃಪಾ ಯೋಗ ಅಷ್ಟಾಂಗ ಸಾಧನಾ ಮಾರ್ಗದ ವೈಶಿಷ್ಟ್ಯಗಳು  

ಪರಾತ್ಪರ ಗುರು ಡಾ. ಆಠವಲೆಯವರು ‘ಗುರುಕೃಪಾಯೋಗದ ಅಂತರ್ಗತ ‘ಸ್ವಭಾವದೋಷ-ನಿರ್ಮೂಲನೆ ಮತ್ತು ಗುಣ-ಸಂವರ್ಧನೆ, ಅಹಂ ನಿರ್ಮೂಲನೆ, ನಾಮಜಪ, ಭಾವಜಾಗೃತಿಗಾಗಿ ಮಾಡಬೇಕಾದ ಪ್ರಯತ್ನ, ಸತ್ಸಂಗ, ಸತ್ಸೇವೆ, ಸತ್‌ಗಾಗಿ ತ್ಯಾಗ ಮತ್ತು ಪ್ರೀತಿ (ಇತರರ ಬಗ್ಗೆ ನಿರಪೇಕ್ಷ ಪ್ರೇಮ) ಈ ೮ ಅಂಗಗಳನ್ನು ಹೇಳಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ‘ಗುರುಕೃಪಾಯೋಗದ ಅಂತರ್ಗತ ಈ ೮ ಅಂಗಗಳನ್ನು ಎಷ್ಟು ಸೂತ್ರಬದ್ಧ, ಶಿಸ್ತುಬದ್ಧ ಮತ್ತು ಪ್ರಾಯೋಗಿಕ ಸ್ತರದಲ್ಲಿ ವಿಚಾರ ಮಾಡಿದ್ದಾರೆಯೊ, ಅಷ್ಟು ಇಷ್ಟರವರೆಗೆ ಯಾರೂ ವಿಚಾರ ಮಾಡಿರಲಿಕ್ಕಿಲ್ಲ ! ಆದುದರಿಂದಲೇ ‘ಗುರು ಕೃಪಾಯೋಗ ಈ ಸಾಧನಾ ಮಾರ್ಗವನ್ನು ಆಚರಿಸುವುದರಿಂದ ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತಿದೆ. ೧೩.೫.೨೦೨೨ ರ ವರೆಗೆ ೧೨೧ ಜನ ಸಾಧಕರು ಸಂತರಾಗಿದ್ದು ೧೧೨೧ ಸಾಧಕರು ಸಂತರಾಗುವ ಮಾರ್ಗದಲ್ಲಿದ್ದಾರೆ !- ಪೂ. ಸಂದೀಪ ಆಳಶಿ

೩. ಕಲಿಯುಗದಲ್ಲಿ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯು ಮಹತ್ವದ್ದಾಗಿದ್ದು‘ಗುರುಕೃಪಾಯೋಗಕ್ಕನುಸಾರ ಸಾಧನೆಯನ್ನು ಮಾಡುವುದು ಶ್ರೇಯಸ್ಕರ !

‘ಸತ್ಯಯುಗದಲ್ಲಿ ಸರ್ವಸಾಮಾನ್ಯ ವ್ಯಕ್ತಿಯಲ್ಲಿ ಸ್ವಭಾವದೋಷಗಳು ಮತ್ತು ಅಹಂ ಇರಲಿಲ್ಲ. ತ್ರೇತಾ ಮತ್ತು ದ್ವಾಪರಯುಗದಲ್ಲಿ ಸರ್ವಸಾಮಾನ್ಯ ವ್ಯಕ್ತಿಯಲ್ಲಿ ಸ್ವಭಾವ ದೋಷ ಮತ್ತು ಅಹಂ ಸ್ವಲ್ಪ ಪ್ರಮಾಣ ದಲ್ಲಿ ಇದ್ದವು. ಆದ್ದರಿಂದ ಅವರಿಗೆ ಆ ಕಾಲದಲ್ಲಿ ಜ್ಞಾನಯೋಗ, ಧ್ಯಾನ ಯೋಗ, ಕರ್ಮ ಯೋಗ, ಭಕ್ತಿಯೋಗದಂತಹ ವಿವಿಧ ಸಾಧನಾ ಮಾರ್ಗಗಳಂತೆ ಸಾಧನೆಯನ್ನು ಮಾಡುವುದು ಸುಲಭವಾಗಿತ್ತು. ಕಲಿಯುಗದಲ್ಲಿ ಸರ್ವಸಾಮಾನ್ಯ ವ್ಯಕ್ತಿಗಳಲ್ಲಿ ಸ್ವಭಾವದೋಷ ಮತ್ತು ಅಹಂ ಹೆಚ್ಚು ಪ್ರಮಾಣ ದಲ್ಲಿರುವುದರಿಂದ ಯಾವುದೇ ಮಾರ್ಗದಿಂದ ಸಾಧನೆಯನ್ನು ಮಾಡುವ ಮೊದಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿಯೇ ಕಲಿಯುಗದ ದೃಷ್ಟಿಯಿಂದ ‘ಗುರುಕೃಪಾಯೋಗ ಈ ಸಾಧನಾಮಾರ್ಗದಲ್ಲಿ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ‘ಗುರುಕೃಪಾಯೋಗವು ಕಲಿಯುಗಕ್ಕಾಗಿ ಅತ್ಯಂತ ಆವಶ್ಯಕವಾಗಿದೆ.

– (ಪರಾತ್ಪರ ಗುರು) ಡಾ. ಜಯಂತ ಆಠವಲೆ (೧೬.೧೨.೨೦೨೧, ಬೆಳಗ್ಗೆ ೯.೫೫)

೪. ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯು ತ್ರೇತಾ ಮತ್ತು ದ್ವಾಪರ ಯುಗಗಳಿಗೂ ಉಪಯೋಗವಾಗಿದೆ 

‘ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ಮಾನವನಲ್ಲಿ ಸ್ವಭಾವದೋಷಗಳು ಮತ್ತು ಅಹಂ ಇರವುದಿಲ್ಲ ಎಂದಿಲ್ಲ, ಆದರೆ ಕಲಿಯುಗದಲ್ಲಿನ ಮಾನವನ ತುಲನೆಯಲ್ಲಿ ಅವುಗಳ ಪ್ರಮಾಣ ಕಡಿಮೆಯಿರುವುದು. ಆದ್ದರಿಂದ ಪರಾತ್ಪರ ಗುರು ಡಾ. ಆಠವಲೆಯವರು ‘ಗುರುಕೃಪಾಯೋಗದ ಅಂತರ್ಗತ ಹೇಳಿರುವ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯು ಕಲಿಯುಗ ಮುಗಿದ ನಂತರ ಬರುವ ತ್ರೇತಾ ಮತ್ತು ದ್ವಾಪರಯುಗದಲ್ಲಿಯೂ ಉಪಯುಕ್ತವಾಗಲಿವೆ. – ಪೂ. ಸಂದೀಪ ಆಳಶಿ (೧೭.೧೨.೨೦೨೧)