ಹಣ್ಣಿನ ಗಿಡಗಳ ಕೃಷಿಯನ್ನು ಮಾಡುವಾಗ ವಹಿಸಬೇಕಾದ ಕಾಳಜಿ !

ಜೂನ್ ತಿಂಗಳಿನಲ್ಲಿ ಮಳೆಗಾಲವು ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ಹಣ್ಣಿನ ಗಿಡಗಳ ಕೃಷಿಯನ್ನು ಮಾಡಿದರೆ ಸುಲಭವಾಗುತ್ತದೆ. ಆದರೂ ಅದರ ಪೂರ್ವಸಿದ್ಧತೆಯನ್ನು ಇಂದಿನಿಂದಲೇ ಹೇಗೆ ಮಾಡ ಬೇಕು, ಎಂಬುದರ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.

ಡಾ. ನಿವೃತ್ತಿರಾಮಚಂದ್ರ ಚವ್ಹಾಣ

೧. ಹಣ್ಣಿನ ಗಿಡಗಳ ಕೃಷಿಮಾಡಲು ಹೊಂಡ ತುಂಬುವ ಪದ್ಧತಿ

ಅ. ತಗ್ಗುಗಳ ಗಾತ್ರ : ೧ x ೧ x ೧ ಮೀಟರ್ (ತಗ್ಗಿನ ಉದ್ದ, ಅಗಲ ಮತ್ತು ಆಳ)

ಆ. ಹೊಂಡ ತುಂಬಲು ಬೇಕಾಗುವ ಸಾಹಿತ್ಯಗಳು : ಬೇವಿನ ಹಿಂಡಿ ೧ ರಿಂದ ೨ ಕಿಲೋ ಮತ್ತು ಕ್ಲೊರೋಪೈರಿಫ್ಯಾಸ್ ಶೇ. ೧.೫ ಪುಡಿ ೧೦೦ ಗ್ರಾಮ್, ಸೆಗಣಿಗೊಬ್ಬರ ೨ ರಿಂದ ೩ ಬುಟ್ಟಿ, ಸಿಂಗಲ್ ಸುಪರ್ ಫಾಸ್ಫೆಟ್ ೧ ಕೆಜಿ

ಇ. ಹೊಂಡ ತುಂಬುವ ಪದ್ಧತಿ : ಮೊದಲು ಹೊಂಡದಲ್ಲಿರುವ ಮಣ್ಣು ತೆಗೆದು ಬದಿಗಿಡಬೇಕು ಮತ್ತು ಹೊಂಡಕ್ಕೆ ಸರಿಯಾದ ಆಕಾರವನ್ನು ಕೊಡಬೇಕು. ಹೊಂಡ ತುಂಬುವ ಮೊದಲು ಶೇ. ೧.೫ ರಷ್ಟು ಕ್ಲೋರೊಪೈರಿಪಾಸ್ ೧೦೦ ಗ್ರಾಮ್ ನಷ್ಟು ಪುಡಿಯನ್ನು ಹೊಂಡದ ಬುಡದಲ್ಲಿ ಮತ್ತು ಅಕ್ಕಪಕ್ಕದಲ್ಲಿ ಉದುರಿಸಬೇಕು. ಮೇಲಿನ ಎಲ್ಲ ಸಾಹಿತ್ಯಗಳನ್ನು ಹೊಂಡದಿಂದ ತೆಗೆದ ಮಣ್ಣಿನಲ್ಲಿ ಸೇರಿಸಬೇಕು. ಪುನಃ ಎಲ್ಲ ಮಣ್ಣನ್ನು ಹೊಂಡದಲ್ಲಿ ಹಾಕಬೇಕು; ಆದರೆ ಅದನ್ನು ಭೂಮಿಗಿಂತ ೬ ರಿಂದ ೯ ಇಂಚು ಮೇಲಿಡಬೇಕು.

ಈ. ಹೊಂಡ ತೆಗೆಯುವುದು ಮತ್ತು ತುಂಬುವುದು ಇವುಗಳ ಕಾಲಾವಧಿ : ಮೇ ತಿಂಗಳಿನ ೩ ನೇ ವಾರದಿಂದ ಮೇ ಕೊನೆಯ ವರೆಗೆ

೨. ಸಸಿಗಳನ್ನು ನೆಡುವ ಪದ್ಧತಿ

ಅ. ತೆಂಗಿನಗಿಡ : ತೆಂಗಿನ ಎಳತಾದ ಬೇರಿನ ೩ ರಿಂದ ೪ ಇಂಚಿನಷ್ಟು ಭಾಗವು ಮಣ್ಣಿನಲ್ಲಿರಬೇಕು, ಆ ರೀತಿ ತುಂಬಿದ ಹೊಂಡದ ಮಧ್ಯಭಾಗದಲ್ಲಿ ಗುದ್ದಲಿಯಿಂದ ಹೊಂಡ ತೋಡಬೇಕು. ಅದರಲ್ಲಿ ಬುಡದಲ್ಲಿ ಒಂದು ಬೊಗಸೆಯಷ್ಟು ಬೇವಿನ ಹಿಂಡಿಯನ್ನು ಚೆಲ್ಲಬೇಕು.  ಅದರ ನಂತರ ತೆಂಗಿನ ಮೇಲೆ ಮತ್ತು ೨ ಇಂಚು ಗೆಲ್ಲುಗಳ ತನಕ ೧.೫ ಶೇ. ಕ್ಲೊರೊಪಾಯರಿಫಾಸ್ ಪೌಡರ ಹಾಕಬೇಕು. ಇದರಿಂದಾಗಿ ಗೆದ್ದಲು ಮತ್ತು ಇತರ ಕೀಟಕಗಳಿಂದ ವನಸ್ಪತಿಗಳ ರಕ್ಷಣೆಯಾಗುತ್ತದೆ. ಗಿಡವನ್ನುನೆಟ್ಟ ನಂತರ ಮಣ್ಣನ್ನು ಕಾಲಿನಿಂದ ಒತ್ತಬೇಕು. ಮೇಲಿನ ಪದ್ಧತಿಯನ್ನು ಇತರ ಹಣ್ಣಿನ ಗಿಡಗಳ ಸಲುವಾಗಿಯೂ ಉಪಯೋಗಿಸಬಹುದು. ಗಿಡಗಳು ಸಾಧ್ಯವಾದಷ್ಟು ೧ ವರ್ಷದ್ದಾಗಿರಬೇಕು. ತುಂಬಾ ಹಳೆಯ ಗಿಡಗಳನ್ನು ಉಪಯೋಗಿಸಬಾರದು. ವನಸ್ಪತಿಗಳನ್ನು ನೆಟ್ಟ ನಂತರ ಮಳೆಯಿಂದ ಹೊಂಡ ಇನ್ನೂ ಮುಚ್ಚಿ ಹೋಗಬಹುದು. ಆದುದರಿಂದ ಹೊಂಡದಲ್ಲಿ ನೀರು ನಿಲ್ಲಬಾರದು, ಈ ರೀತಿಯಿಂದ ಪುನಃ ಮಣ್ಣನ್ನು ತುಂಬಬೇಕು. ಮಣ್ಣಿನಲ್ಲಿ ೫ ಕೆಜಿ ಸೆಗಣಿಯನ್ನು ಉಪಯೋಗಿಸಬಹುದು.

ಟಿಪ್ಪಣಿ ೧ : ಕಸಿ ಮಾಡಿದ ಗಿಡಗಳ ಕೃಷಿಯನ್ನು ಮಾಡುವ ಮೊದಲು ಅದಕ್ಕೆ ಇರುವ ಪ್ಲ್ಯಾಸ್ಟಿಕ್ ಚೀಲವನ್ನು ಚೂಪಾದ ಚಾಕುವಿನಿಂದ ನಿಧಾನವಾಗಿ ಹೊರಗೆ ತೆಗೆದುಕೊಳ್ಳಬೇಕು. ಕಸಿ ಜೋಡಿಸಿದ ಜಾಗದಲ್ಲಿ ಕಟ್ಟಿದ ಪ್ಲ್ಯಾಸ್ಟಿಕ್ಕಿನ ಕಾಗದವನ್ನೂ ತೆಗೆಯಬೇಕು.

ಟಿಪ್ಪಣಿ ೨ : ಮಾವಿನಹಣ್ಣು, ಚಿಕ್ಕು, ಗೇರು ಮತ್ತು ಇತರ ಹಣ್ಣಿನ ಗಿಡಗಳ ಕಸಿ ಮಾಡಿದ ಭಾಗವು ಭೂಮಿಯಿಂದ ೪ ರಿಂದ ೬ ಇಂಚು ಮೇಲಿರಬೇಕು, ಆ ರೀತಿ ಕಾಳಜಿ ತೆಗೆದುಕೊಳ್ಳಬೇಕು.

ಟಿಪ್ಪಣಿ ೩ : ಮಳೆಗಾಲದಲ್ಲಿ ಗಿಡಗಳ ಹೊಂಡದಲ್ಲಿ ನೀರು ಸಂಗ್ರಹವಾಗದಂತೆ ಕಾಳಜಿಯನ್ನು ತೆಗೆದುಕೊಳ್ಳಬೇಕು.

ಆ. ವನಸ್ಪತಿಗಳನ್ನು ಕಸಿ ಮಾಡುವ ಸಮಯ : ಜೂನನಲ್ಲಿ ಮಳೆ ಬಿದ್ದನಂತರ ಮತ್ತು ಗಾಳಿಯಲ್ಲಿನ ಉಷ್ಣತೆಯು ಕಡಿಮೆಯಾಗಿ ಹವಾಮಾನದಲ್ಲಿ ಬದಲಾವಣೆ ಆದನಂತರ ಜೂನ್ ತಿಂಗಳಿನ ಕೊನೆಯವರೆಗೆ ಎಳೆಯ ಗಿಡದ ಕಸಿ ಮಾಡಿಕೊಳ್ಳಬೇಕು, ಅಂದರೆ ಜುಲೈನಲ್ಲಿ ದೊಡ್ಡ ಮಳೆ ಪ್ರಾರಂಭವಾಗುವ ಮೊದಲು ಗಿಡಗಳು ಬೆಳೆಯುವವು.

ಗಿಡಗಳನ್ನು ನೆಟ್ಟ ನಂತರ

ಅ. ಮಾವಿನಗಿಡ

ಪಾರಂಪರಿಕ ಕೃಷಿ ಪದ್ಧತಿ : ೧೦ x ೧೦ ಮೀಟರ್‌ಘನ ಕೃಷಿ ಪದ್ಧತಿ : ೫ x ೫ ಮೀ (ಹೈ ಡೆನ್ಸಿಟಿ)

ಅತಿಘನ ಕೃಷಿ ಪದ್ಧತಿ : ೪ x ೨ ಮಿ (ಅಲ್ಟ್ರಾಹೈ ಡೆನ್ಸಿಟಿ)

ಆ. ತೆಂಗಿನಗಿಡ : ಮಣ್ಣಿನ ಪ್ರಕಾರಗಳಿಗನುಸಾರ ೭.೫ x ೭.೫ ಮೀಟರ್ ಅಥವಾ ೮ x ೮ ಮೀಟರ್ ಅಂತರದಲ್ಲಿ ನೆಡಬೇಕು.

ಇ. ಚಿಕ್ಕುಗಿಡ : ೧೦ x ೧೦ ಮೀಟರ್ ಅಂತರ

  ಡಹಾಣು ತಾಲೂಕಿನ (ಪಾಲಘರ ಜಿಲ್ಲೆ) ರೈತರು ಚಿಕ್ಕುಗಿಡಗಳನ್ನು ಕೃಷಿ ಮಾಡಲು ಹೊಸ ಪದ್ಧತಿಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಮೊದಲು ೧೦ x ೫ ಮೀಟರ್ ಅಂತರದಲ್ಲಿ ಗಿಡಗಳನ್ನು ನೆಟ್ಟರು. ಕೆಲವು ವರ್ಷಗಳ ನಂತರ ಗಿಡಗಳು ದಟ್ಟವಾದಾಗ ೫ ಮೀಟರ್ ಅಂತರದಷ್ಟು ಜಾಗವನ್ನು ಬಿಟ್ಟು ಎರಡು ಗಿಡಗಳ ನಡುವೆ ಇರುವ ಗಿಡಗಳನ್ನು ತೆಗೆದು ಇತರ ಗಿಡಗಳಿಗೆ ಬೆಳೆಯಲು ಜಾಗವನ್ನು ಕೊಡಲಾಯಿತು. ೧೦ x ೧೦ ಮೀಟರನಷ್ಟು ಅಂತರದಲ್ಲಿ ಕೃಷಿಯನ್ನು ಮಾಡಲಾಯಿತು. ಆದುದರಿಂದ ಜಾಗವನ್ನು ಪೂರ್ಣವಾಗಿ ಬಳಸಿರುವುದರಿಂದ ಮೊದಲನೇ ಕೆಲವು ವರ್ಷಗಳಲ್ಲಿ ಹೆಚ್ಚಿನ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಯಿತು.

ಈ. ಗೇರು : ಮಣ್ಣಿನ ಪ್ರಕಾರಗಳಿಗನುಸಾರ ೭ x ೭ ಅಥವಾ ೮ x ೮ ಮೀ ಅಂತರದಲ್ಲಿ ನೆಡಬೇಕು.

ಹಣ್ಣಿನ ಮರಗಳ ಸುಧಾರಿತ ಪ್ರಭೇದಗಳು (ಜಾತಿಗಳು)

ಅ. ಮಾವಿನಹಣ್ಣು : ಹಾಪೂಸ್, ರತ್ನಾಗಿರಿ, ಸಿಂಧೂ, ಕೆಸರ, ಪಾಯರಿ (ಮಾವಿನರಸಕ್ಕಾಗಿ), ಕೊಂಕಣ ರುಚಿ (ಉಪ್ಪಿನಕಾಯಿಗಾಗಿ), ಸುವರ್ಣಾ, ಕೊಕಣರಾಜಾ, ಕೊಕಣಸಾಮ್ರಾಟ, ಆ್ಯಸ್ಟಿನ್, ಲಿಲಿ

ಆ. ತೆಂಗಿನಕಾಯಿ : ಬಾಣವಲಿ, ಪ್ರತಾಪ, ಲಕ್ಷ ದೀಪ ಮತ್ತು ಎಳೆನೀರಿಗಾಗಿ ಆರೇಂಜ್ ಡ್ವಾರ್ಫ (Orange dwarf)

ಟಿಪ್ಪಣಿ : ಹೈಬ್ರಿಡ್ ಜಾತಿಗಳಲ್ಲಿ ಅನೇಕ ಸಮಸ್ಯೆಗಳಿರುತ್ತವೆ. ಆದುದರಿಂದ ಸಾಧ್ಯವಾದಷ್ಟು ಅವುಗಳನ್ನು ಬಳಸಬಾರದು.

ಇ. ಚಿಕ್ಕುಹಣ್ಣು : ಕಾಳಿಪತಿ (ಕಾಳಿಪತಿ ಜಾತಿಯು ತಿನ್ನಲು ಒಳ್ಳೆಯದು ಮತ್ತು ಅದರಿಂದ ಒಳ್ಳೆಯ ಆದಾಯವಾಗುತ್ತದೆ), ಕ್ರಿಕೆಟ್ ಬಾಲ್

ಈ. ಗೇರು : ವೆಂಗುರ್ಲೆ ೧, ವೆಂಗುರ್ಲೆ ೪, ವೆಂಗುರ್ಲೆ ೭, ವೆಂಗುರ್ಲೆ ಮತ್ತು ವೆಂಗುರ್ಲೆ ೮ (ಟಿಪ್ಪಣಿ : ವೆಂಗುರ್ಲೆ ೪ ಮತ್ತು ೭ರಲ್ಲಿ ಗೋಡಂಬಿಯ ಆಕಾರವು ದೊಡ್ಡದಾಗಿರು ವುದರಿಂದ ರಫ್ತಿಗೆ ಒಳ್ಳೆಯದು.)

ಉ. ಪುನರ್ಪುಳಿ : ಕೊಕಣ ಅಮೃತಾ, ಕೊಕಶ್ ಹಾತೀಸ್

ಊ. ಹಲಸಿನ ಹಣ್ಣು : ಕೊಂಕಣ ಪ್ರಾಲಿಫಿಕ್ (ಕಾಪಾಹಲಸಿನ ಹಣ್ಣು), ಬರಕಾ ಹಲಸಿನ ಹಣ್ಣು, ದೀವಿಹಲಸು

ಏ. ನೇರಳೆ ಹಣ್ಣು : ಕೊಂಕಣ ಬಹಾಡೊಲಿ

ಐ. ನೆಲ್ಲಿಕಾಯಿ : ಕೃಷ್ಣಾ, ಕಾಂಚನ, ಎನ್.ಎ. ೭, ಎನ್.ಎ. ೧೦ ಮತ್ತು ಚಾಕಯ್ಯ

ಓ. ಕವಳಿ ಹಣ್ಣು : ಕೊಂಕಣ ಬೋಲ್ಡ್

ಔ. ಅಡಿಕೆ : ಶ್ರೀವರ್ಧನಿ

ಅಂ. ಅನಾನಸ : ಕ್ಯೂ, ಕ್ವೀನ್

ಕ. ಬಾಳೆಹಣ್ಣು : ಬಸರಾಯಿ, ಜಿ ೯, ಶ್ರೀಮಂತಿ, ಹರಿಸಾಲ, ಕೊಕಣ ಬಿಳಿ ಯಾಲಕ್ಕಿ, ಮುತೇಲಿ, ರಾಜೇಲಿ

ಖ. ಮಸಾಲೆ ಬೆಳೆಗಳು

ದಾಲಚಿನ್ನಿ : ಕೊಕಣ ತೇಜ

ಜಾಜೀಕಾಯಿ : ಕೊಂಕಣ ಸುಗಂಧ, ಕೊಂಕಣ ಸ್ವಾದ,ಕೊಂಕಣ ಶ್ರೀಮಂತಿ ಮತ್ತು ಕೊಕಣ ಸಂಯುಕ್ತಾ

– ಡಾ. ನಿವೃತ್ತಿ ರಾಮಚಂದ್ರ ಚವ್ಹಾಣ (ಎಮ್.ಎಸ್.ಸಿ. (ಕೃಷಿ), ಪಿ. ಎಚ್‌ಡಿ), ಸನಾತನ ಆಶ್ರಮ, ರಾಮನಾಥಿ, ಗೋವಾ.