ಬಾಲಸತ್ಸಂಗದಲ್ಲಿನ ದೈವೀ ಬಾಲಕರು ಮತ್ತು ಯುವ ಸಾಧಕರು ಪೂ. ಭಾರ್ಗವರಾಮ ಪ್ರಭು (೪ ವರ್ಷ) ಹಾಗೂ ಪೂ. ವಾಮನ ರಾಜಂದೇಕರ (೩ ವರ್ಷ) ಈ ಬಾಲಸಂತರಿಂದ ಅನುಭವಿಸಿದ ಸಹಜತೆ, ಆನಂದ ಮತ್ತು ಚೈತನ್ಯ !

ಪೂ. ಭಾರ್ಗವರಾಮ ಪ್ರಭು ಮತ್ತು ಪೂ. ವಾಮನರಾಜಂದೇಕರ ಇವರ ಮಂದಹಾಸದ ಒಂದು ಮುದ್ರೆ !

೯.೧೨.೨೦೨೧ ರಿಂದ ೧೧.೧೨.೨೦೨೧ ಈ ಕಾಲಾವಧಿಯಲ್ಲಾದ ಬಾಲಸತ್ಸಂಗದಲ್ಲಿ ಪೂ. ಭಾರ್ಗವರಾಮ ಪ್ರಭು (ವಯಸ್ಸು ೪ ವರ್ಷ) ಮತ್ತು ಪೂ. ವಾಮನ ರಾಜಂದೇಕರ (ವಯಸ್ಸು ೩ ವರ್ಷ) ಈ ಬಾಲಸಂತರು ಉಪಸ್ಥಿತರಿದ್ದರು. ಈ ಸತ್ಸಂಗದಲ್ಲಿ ಉಪಸ್ಥಿತ ಬಾಲ ಮತ್ತು ಯುವ ಸಾಧಕರಿಗೆ ಪೂ. ಭಾರ್ಗವರಾಮ ಪ್ರಭು ಮತ್ತು ಪೂ. ವಾಮನ ರಾಜಂದೇಕರ ಈ ಬಾಲಸಂತರಿಂದ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಬಂದ ಅನುಭೂತಿಗಳನ್ನು ಇಲ್ಲಿ ಕೊಟ್ಟಿದ್ದೇವೆ.

ಕು. ಸೃಷ್ಟಿ ಸೂರ್ಯವಂಶಿ (೧೮ ವರ್ಷ), ಠಾಣೆ

೧ ಅ. ಪೂ. ವಾಮನ ರಾಜಂದೇಕರ ಇವರ ಬಗ್ಗೆ ಅರಿವಾದ ಅಂಶ : ‘ಪೂ. ವಾಮನ ಇವರು ಕೈಗಳ ವಿವಿಧ ಮುದ್ರೆಯನ್ನು ಮಾಡುತ್ತಿದ್ದರು ಮತ್ತು ಎದೆಯನ್ನು ಮುಂದೆ ಮಾಡಿ ಕುಳಿತಿದ್ದರು. ಆಗ ನನಗೆ ‘ಅವರು ಸೂಕ್ಷ್ಮದಿಂದ ಕೆಟ್ಟ ಶಕ್ತಿಗಳೊಂದಿಗೆ ಯುದ್ಧವನ್ನು ಮಾಡುತ್ತಿದ್ದಾರೆ’, ಎಂದು ಅನಿಸುತ್ತಿತ್ತು.

೧ ಆ. ಅನುಭೂತಿ

. ನನ್ನ ಮೇಲೆ ಬಂದಿರುವ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣವನ್ನು ದೂರಗೊಳಿಸಲು ನಾನು ಬಾಲಸಂತರಿಗೆ ಪ್ರಾರ್ಥನೆ ಮಾಡಿದ ನಂತರ ನನಗೆ ಆಕಳಿಕೆ ಬರತೊಡಗಿದವು.

. ನನಗೆ ಪೂ. ಭಾರ್ಗವರಾಮ ಪ್ರಭು ಮತ್ತು ಪೂ. ವಾಮನ ರಾಜಂದೇಕರ ಇವರ ಸುತ್ತಲೂ ಹಳದಿ ಬೆಳಕು ಕಾಣಿಸುತ್ತಿತ್ತು.

೨. ಕು. ಅನುರಾಗ ರಾವೂತ, ಫೋಂಡಾ, ಗೋವಾ.

೨ ಅ. ಅನುಭೂತಿ

೨ ಅ ೧. ಬಾಲಸಂತರ ಸತ್ಸಂಗಕ್ಕೆ ಬರುವ ಮೊದಲು ಮನಸ್ಸು ಚಂಚಲವಾಗುವುದು : ‘ಸತ್ಸಂಗವನ್ನು ತೆಗೆದುಕೊಳ್ಳುವ ದೈವೀ ಬಾಲಕಿ ಕು. ಅಪಾಲಾ ಔಂಧಕರ (ಆಧ್ಯಾತ್ಮಿಕ ಮಟ್ಟ ಶೇ. ೬೧, ೧೫ ವರ್ಷ) ಇವಳು ಭಾವಪ್ರಯೋಗವನ್ನು ತೆಗೆದುಕೊಳ್ಳುತ್ತಿದ್ದಳು. ಆಗ ನನ್ನ ಮನಸ್ಸು ಚಂಚಲವಾಗಿ ನನ್ನ ಮನಸ್ಸಿನಲ್ಲಿ ವಿಚಾರಗಳು ಬರುತ್ತಿದ್ದವು.

೨ ಅ ೨. ಇದ್ದಕ್ಕಿದ್ದಂತೆ ‘ಏನೋ ಘಟಿಸಿದಂತಾಯಿತು ಮತ್ತು ಮನಸ್ಸು ಅಸ್ತಿತ್ವರಹಿತ ಹಾಗೂ ನಿರ್ವಿಚಾರವಾಯಿತು’, ಎಂಬ ಅರಿವಾಗುವುದು : ನಾನು ಕಣ್ಣುಗಳನ್ನು ಮುಚ್ಚಿರುವಾಗ ಇದ್ದಕ್ಕಿದ್ದಂತೆ ನನಗೆ ಅಕ್ಕಪಕ್ಕದಲ್ಲಿ ಹಳದಿ ಬೆಳಕು ಕಾಣಿಸತೊಡಗಿತು. ಕೆಲವು ಕ್ಷಣಗಳ ಹಿಂದೆ ನನ್ನ ಮನಸ್ಸಿನಲ್ಲಿ ಬರುವ ವಿಚಾರಗಳು ನಿಂತು ನನ್ನ ಮನಸ್ಸು ಏಕಾಗ್ರವಾಯಿತು. ಆಗ ನನಗೆ, ‘ಮನಸ್ಸಿನಲ್ಲಿ ಏನೇನೋ ನಡೆಯುತ್ತಿತ್ತು. ಅದು ಆಕಸ್ಮಿಕವಾಗಿ ಅಸ್ತಿತ್ವರಹಿತ ಮತ್ತು ನಿರ್ವಿಚಾರವಾಯಿತು.’

೨ ಅ ೩. ವಾತಾವರಣವು ಸಕಾರಾತ್ಮಕ ಮತ್ತು ಶಾಂತವೆನಿಸುವುದು : ಅಪಾಲಾ ಅಕ್ಕ ಬಾಲಸಾಧಕರಿಗೆ ಕೃತಜ್ಞತೆಯನ್ನು ವ್ಯಕ್ತ ಮಾಡಲು ಹೇಳಿದಳು. ನಾನು ಕಣ್ಣುಗಳನ್ನು ತೆರೆದಾಗ ಸತ್ಸಂಗದಲ್ಲಿ ಪೂ. ಭಾರ್ಗವರಾಮ ಪ್ರಭು ಮತ್ತು ಪೂ. ವಾಮನ ರಾಜಂದೇಕರ ಈ ಬಾಲಸಂತರು ಬಂದಿದ್ದರು. ಆಗ ನನಗೆ, ಅವರು ಬಂದಿರುವುದರಿಂದ ‘ವಾತಾವರಣದಲ್ಲಿ ಸಕಾರಾತ್ಮಕತೆ ಮತ್ತು ಶಾಂತತೆ ಹೆಚ್ಚಾಗಿದೆ’, ಎಂದು ಅರಿವಾಯಿತು.

ಕು. ಸಾನಿಕಾ ಸೋನಿಕರ (ಆಧ್ಯಾತ್ಮಿಕ ಮಟ್ಟ ಶೇ. ೫೧, ವಯಸ್ಸು ೧೫), ಸನಾತನ ಆಶ್ರಮ, ರಾಮನಾಥಿ, ಗೋವಾ.

೩ ಅ. ಪೂ. ಭಾರ್ಗವರಾಮ ಇವರ ಅಂತರ್ಮುಖತೆ : ‘ಬಾಲಸತ್ಸಂಗವು ಮುಗಿದ ನಂತರ ಬಾಲಸಾಧಕರು ಪೂ. ಭಾರ್ಗವರಾಮ ಇವರೊಂದಿಗೆ ಮಾತನಾಡಲು ಬರುತ್ತಾರೆ; ಆದರೆ ಪೂ. ಭಾರ್ಗವರಾಮ ಇವರು ಶಾಂತ ಮತ್ತು ಸ್ಥಿರವಾಗಿರುತ್ತಾರೆ. ಆ ಸಮಯದಲ್ಲಿ ಅವರು ಯಾರ ಜೊತೆಗೂ ಮಾತನಾಡುವುದಿಲ್ಲ. ನಾನು ಅವರ ತಂದೆಯ ಬಳಿ ಈ ಕುರಿತು ಕೇಳಿದಾಗ ಅವರು, “ಸತ್ಸಂಗವು ಮುಗಿದ ನಂತರ ಪೂ. ಭಾರ್ಗವರಾಮ ಇವರು ಅಂತರ್ಮುಖರಾಗುತ್ತಾರೆ. ಆದುದರಿಂದ ಸತ್ಸಂಗವು ಮುಗಿದ ನಂತರ ತಕ್ಷಣ ಸ್ಪಂದಿಸುವುದಿಲ್ಲ” ಎಂದು ಹೇಳಿದರು.

೩ ಆ. ‘ತಪ್ಪುಗಳ ಖೇದವು ಹೇಗಿರಬೇಕು ?’, ಎಂಬುದರ ಅರಿವಾಗುವುದು : ಬಾಲಸತ್ಸಂಗದಲ್ಲಿ ತಪ್ಪುಗಳ ವರದಿಯನ್ನು ತೆಗೆದುಕೊಳ್ಳುತ್ತಿರುವಾಗ ಪೂ. ಭಾರ್ಗವರಾಮ ಇವರು ತಮ್ಮ ತಂದೆಯ ಬಳಿ, “ಇಂತಹ ತಪ್ಪುಗಳಾಗುತ್ತಿದ್ದರೆ, ನಾವು ದೇವರಿಂದ ದೂರವಾಗುತ್ತೇವಲ್ಲವೇ !” ಎಂದು ಹೇಳಿದರು. ಆಗ ನನಗೆ ‘ನನ್ನಲ್ಲಿ ತಪ್ಪುಗಳ ಕುರಿತು ನನಗೆ ಎಷ್ಟು ಖೇದವೆನಿಸುತ್ತದೆ ? ಮತ್ತು ಪ್ರತ್ಯಕ್ಷದಲ್ಲಿಎಷ್ಟು ಇರಬೇಕು ?’, ಎಂಬುದು ಅರಿವಾಯಿತು.’

ಕು. ಆದಿತ್ಯ ರಾವೂತ (ಆಧ್ಯಾತ್ಮಿಕ ಮಟ್ಟಶೇ. ೫೫, ವಯಸ್ಸು ೧೨), ಫೋಂಡಾ, ಗೋವಾ.

೪ ಅ. ಪೂ. ವಾಮನ ಇವರಲ್ಲಿ ಚೈತನ್ಯದ ಅರಿವಾಗುವುದು : ‘ಪೂ. ವಾಮನ ಇವರು ಬಾಲಕೃಷ್ಣನೇ ಇದ್ದಾರೆ. ‘ಅವರು ನಮಗೆ ಮಾರ್ಗವನ್ನು ತೋರಿಸಲಿದ್ದಾರೆ’, ಎಂದು ನನಗೆ ಎನಿಸಿತು. ಅವರು ನಗುತ್ತಿರುವಾಗ ನನಗೆ ಅವರ ಮುಖದ ಮೇಲೆ ಚೈತನ್ಯ ಕಾಣಿಸುತ್ತದೆ.’

ಕು. ಚೈತ್ರಾಲಿ ಪ್ರಸಾದ ಕುಲಕರ್ಣಿ (ಆಧ್ಯಾತ್ಮಿಕ ಮಟ್ಟ ಶೇ. ೫೫, ವಯಸ್ಸು ೧೪), ಸನಾತನ ಆಶ್ರಮ,ರಾಮನಾಥಿ, ಗೋವಾ.

೫ ಅ. ಪೂ. ಭಾರ್ಗವರಾಮ ಭರತ ಪ್ರಭು

೫ ಅ ೧. ತಪ್ಪು ಹೇಳಿ ಕ್ಷಮೆಯಾಚನೆಯನ್ನು ಮಾಡುವುದು : ‘ಪೂ. ಭಾರ್ಗವರಾಮ ಇವರು ದೈವೀ ಬಾಲಸಾಧಕರ ಸತ್ಸಂಗದಲ್ಲಿ ಬಂದ ನಂತರ ಅವರು ‘ಒಂದು ಸತ್ಸಂಗದಲ್ಲಿ ನಾನು ಕುರ್ಚಿಯನ್ನು ಅಲುಗಾಡಿಸಿ ಶಬ್ದ ಮಾಡಿದೆನು’, ಎಂಬ ತಪ್ಪು ಹೇಳಿ ಗುರುಚರಣಗಳಲ್ಲಿ ಕ್ಷಮೆಯಾಚನೆಯನ್ನು ಮಾಡಿದರು. ಆಗ ‘ಅವರು ಎಷ್ಟು ಸಹಜಭಾವದಲ್ಲಿರುತ್ತಾರೆ ಮತ್ತು ಅವರಲ್ಲಿ ಸ್ವಲ್ಪವೂ ಅಹಂ ಇಲ್ಲ’, ಎಂದೆನಿಸಿ ನನ್ನ ಭಾವಜಾಗೃತವಾಯಿತು ಮತ್ತು ನನಗೂ ಅವರಂತೆ ‘ಸಹಜವಾಗಿ ವರ್ತಿಸಬೇಕಾಗಿದೆ’, ಎಂದರಿವಾಯಿತು.

೫ ಅ ೨. ಶ್ರೀ ಗುರುಗಳ ಬಗೆಗಿನ ಭಾವ : ಸತ್ಸಂಗವು ಮುಗಿದ ನಂತರ ನಾವು ಸದ್ಗುರುಗಳ ಶ್ಲೋಕವನ್ನು ಹೇಳಲು ಮರೆತೆವು; ಆದರೆ ಪೂ. ಭಾರ್ಗವರಾಮ ಇವರು ತಕ್ಷಣ ಕೈಗಳನ್ನು ಜೋಡಿಸಿ ‘ಜ್ಯಾ ಜ್ಯಾಠಿಕಾಣಿ …’ ಈ ಶ್ಲೋಕವನ್ನು ಹೇಳಿದಾಗ ನಮಗೆ ನೆನಪಾಯಿತು.

೫ ಅ ೩. ಬಾಲಕೃಷ್ಣನ ರೂಪವು ಕಾಣಿಸುವುದು : ಪೂ. ಭಾರ್ಗವರಾಮ ಇವರಲ್ಲಿ ನನಗೆ ಬಾಲಕೃಷ್ಣನು ಕಾಣಿಸುತ್ತಾನೆ. ‘ಅವರು ಬಾಲಕೃಷ್ಣನಂತೆಯೇ ಆಡುತ್ತಾರೆ ಮತ್ತು ಮಾತನಾಡುತ್ತಾರೆ’, ಎಂದು ನನಗೆ ಎನಿಸುತ್ತದೆ.

೫ ಆ. ಪೂ. ವಾಮನ ರಾಜಂದೇಕರ

೫ ಆ ೧. ಆಜ್ಞಾಪಾಲನೆ ಮತ್ತು ಸಹಜತೆ : ಪೂ. ವಾಮನ ಇವರಿಗೆ ಅವರ ತಾಯಿ-ತಂದೆ ಮತ್ತು ಸಹೋದರಿಯು ಏನು ಹೇಳುತ್ತಾರೆಯೋ, ಅದನ್ನು ಅವರು ತಕ್ಷಣ ಮಾಡುತ್ತಾರೆ. ಇದರಿಂದ ನನಗೆ ಅವರಲ್ಲಿನ ಆಜ್ಞಾಪಾಲನೆ (ಪರೇಚ್ಛೆಯಿಂದ ನಡೆದುಕೊಳ್ಳುವುದು) ಮತ್ತು ಸಹಜತೆ ಈ ಗುಣಗಳು ಕಂಡುಬಂದವು.

೫ ಆ ೨. ವಿನಯತೆ ಮತ್ತು ಪ್ರೇಮಭಾವ : ಪೂ. ವಾಮನ ಇವರು ಮಾತನಾಡುವಾಗ ನಾನು ಅವರ ಮಾತುಗಳನ್ನು ಕೇಳುವುದರಲ್ಲಿಯೇ ತಲ್ಲೀನಳಾಗುತ್ತೇನೆ. ಅವರ ಮಾತಿನಲ್ಲಿ ತುಂಬಾ ವಿನಯ ಮತ್ತು ಪ್ರೇಮಭಾವವಿದೆ.

೫ ಆ ೩. ಧ್ಯಾನಾವಸ್ಥೆಯಲ್ಲಿ ಮತ್ತು ಶಿವದಶೆಯಲ್ಲಿರುವುದು : ‘ಪೂ. ವಾಮನ ಇವರ ರೂಪವು ಅತ್ಯಂತ ತೇಜಸ್ವಿ ಮತ್ತು ಸುಂದರವಾಗಿದೆ. ಅವರ ಕಡೆಗೆ ನೋಡಿದಾಗ ‘ಅವರು ಧ್ಯಾನಾವಸ್ಥೆಯಲ್ಲಿ ಮತ್ತು ಶಿವದಶೆಯಲ್ಲಿದ್ದಾರೆ,’ ಎಂದೆನಿಸಿತು.’

೬. ಕು. ಶ್ರೀಯಾ ರಾಜಂದೇಕರ (ಆಧ್ಯಾತ್ಮಿಕ ಮಟ್ಟ ಶೇ. ೬೬, ವಯಸ್ಸು ೧೦),ಸನಾತನ ಆಶ್ರಮ, ರಾಮನಾಥಿ, ಗೋವಾ.

೬ ಅ. ಪೂ. ಭಾರ್ಗವರಾಮ ಪ್ರಭು

೬ ಅ ೧. ಯಾವಾಗಲೂ ಆನಂದದಿಂದಿರುವುದು : ‘ಪೂ. ಭಾರ್ಗವರಾಮ ಇವರನ್ನು ಯಾವಾಗ ನೋಡಿದರೂ, ಅವರು ಆನಂದದಿಂದಿರುವುದು ಕಾಣಿಸುತ್ತದೆ’.

೬ ಅ ೨. ಪ್ರೇಮಭಾವ : ಒಮ್ಮೆ ನನಗೆ ಸ್ವಲ್ಪ ಕೆಮ್ಮು ಬರುತ್ತಿತ್ತು. ಆಗ ಪೂ. ಭಾರ್ಗವರಾಮ ಇವರು ಅಲ್ಲಿಯೇ ಇದ್ದರು. ಆಗ ಅವರು ತಕ್ಷಣ ನನಗೆ, “ನಿಮಗೆ ನೀರು ಬೇಕಾ ?” ಎಂದು ಕೇಳಿದರು.

೬ ಆ. ಪೂ. ವಾಮನ ರಾಜಂದೇಕರ

೬ ಆ ೧. ಸ್ಥಿರತೆ : ಸ್ಥಿರತೆಯು ಪೂ. ವಾಮನ ಇವರಲ್ಲಿನ ಸಹಜಭಾವವಾಗಿದೆ.

೬ ಆ ೨. ಕಲಿಯುವ ವೃತ್ತಿ : ಪೂ. ವಾಮನ ಇವರು ಪ್ರತಿಯೊಂದು ಕೃತಿಯನ್ನು ತಿಳಿದುಕೊಂಡು ಮಾಡುತ್ತಾರೆ.

೬ ಆ ೩. ಕೇಳಿ ಮಾಡುವ ವೃತ್ತಿ : ಒಮ್ಮೆ ಪೂ. ವಾಮನ ಇವರಿಗೆ ಒಂದು ಆಟವನ್ನು ಆಡುವುದಿತ್ತು. ಆಗ ಅವರು ತಾಯಿಗೆ, ‘ನಾನು ಈಗ ಆಡಬಹುದಾ ?’ ಎಂದು ಕೇಳಿದರು.

೬ ಆ ೪. ಇತರರಿಗೆ ಸಹಾಯ ಮಾಡುವುದು : ಒಮ್ಮೆ ನನ್ನ ‘ಬ್ಯಾಗ್’ ಸಿಗುತ್ತಿರಲಿಲ್ಲ. ಆಗ ಪೂ. ವಾಮನ ಇವರು ನನಗೆ, “ನಿನ್ನ ‘ಬ್ಯಾಗ್’ ಸಿಗುತ್ತಿಲ್ಲವೇ ?” ಎಂದು ಕೇಳಿದರು. ತಕ್ಷಣ ಅವರು ನನಗೆ ‘ಬ್ಯಾಗ್’ ಹುಡುಕಲು ಸಹಾಯ ಮಾಡಿದರು.’

(ಎಲ್ಲ ಅಂಶಗಳ ದಿನಾಂಕ ೧೧.೧೨.೨೦೨೧)