ಪರಾತ್ಪರ ಗುರುಗಳಾಗಿದ್ದರೂ ತಮ್ಮನ್ನು ಪ.ಪೂ. ಭಕ್ತರಾಜ ಮಹಾರಾಜರ ಶಿಷ್ಯನೆಂದು ಸಂಬೋಧಿಸುತ್ತಾ ನಿರಂತರ ಶಿಷ್ಯಭಾವದಲ್ಲಿರುವ ಪರಾತ್ಪರ ಗುರು ಡಾ. ಆಠವಲೆ !

೧. ನಿರಂತರ ಶಿಷ್ಯಭಾವದಲ್ಲಿರುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು ನಿರಂತರ ಶಿಷ್ಯಭಾವದಲ್ಲಿರುತ್ತಾರೆ. ರಾಮನಾಥಿ ಆಶ್ರಮದ ಧ್ಯಾನಮಂದಿರದಲ್ಲಿ ಸನಾತನದ ಗುರುಪರಂಪರೆಯನ್ನು ತೋರಿಸುವ ೫ ಛಾಯಾ ಚಿತ್ರಗಳನ್ನು (ಶ್ರೀಮದ್ ಪರಮಹಂಸ ಚಂದ್ರ ಶೇಖರಾನಂದ, ಶ್ರೀ ಅನಂತಾನಂದ ಸಾಯೀಶ, ಪ.ಪೂ.ಭಕ್ತರಾಜ ಮಹಾರಾಜ, ಪ.ಪೂ. ರಾಮಾನಂದ ಮಹಾರಾಜ (ಪ.ಪೂ.ಭಕ್ತರಾಜ ಮಹಾರಾಜರ ಉತ್ತರಾಧಿಕಾರಿ) ಮತ್ತು ಶಿಷ್ಯ ಡಾ. ಜಯಂತ ಆಠವಲೆ ಇವರ ಛಾಯಾಚಿತ್ರಗಳನ್ನು) ಇಡಲಾಗಿದೆ. ಅವುಗಳಲ್ಲಿ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರದ ಕೆಳಗೆ ‘ಶಿಷ್ಯ ಡಾ. ಜಯಂತ ಬಾಳಾಜಿ ಆಠವಲೆ’, ಎಂದು ಬರೆಯಲಾಗಿದೆ.

ಪರಾತ್ಪರ ಗುರು ಡಾಕ್ಟರರು ಪ.ಪೂ. ಭಕ್ತರಾಜ ಮಹಾರಾಜರು ಅನಾರೋಗ್ಯದಲ್ಲಿರುವಾಗ ಕೊನೆಯ ಹಂತದಲ್ಲಿ ಹಗಲಿರುಳು ಅತ್ಯಂತ ಪ್ರೇಮ ಹಾಗೂ ಶಿಷ್ಯಭಾವದಿಂದ ಮತ್ತು ತಳಮಳದಿಂದ ಸಗುಣಸೇವೆ ಮಾಡಿದರು. ಆಗ ಅವರು ಪದೇ ಪದೇ ‘ಶ್ರೀ ಗುರುಗಳ ಸಗುಣಸೇವೆಯ ಮಹತ್ವ, ಗುರುಸೇವೆಯಲ್ಲಿ ಆಗಿರುವ ತಪ್ಪುಗಳು ಮತ್ತು ಕಲಿತ ವಿಷಯಗಳನ್ನು’, ಅಭ್ಯಾಸವರ್ಗದಲ್ಲಿ ಹೇಳುತ್ತಿದ್ದರು.

ಸೌ. ಶಾಲಿನಿ ಮರಾಠೆ

೨. ಪ. ಪೂ. ಭಕ್ತರಾಜ ಮಹಾರಾಜರ ಶಿಷ್ಯೋತ್ತಮರಾಗಿದ್ದ ಪರಾತ್ಪರ ಗುರು ಡಾಕ್ಟರರು ಶ್ರೀ ಗುರುಗಳ ಆಜ್ಞೆಗನುಸಾರ ವಿಶ್ವದಾದ್ಯಂತ ಆಧ್ಯಾತ್ಮ ಪ್ರಸಾರ ಮಾಡಿದರು ಹಾಗೂ ಆ ಕಾರ್ಯವನ್ನು ಪ.ಪೂ. ಭಕ್ತರಾಜಮಹಾರಾಜರ ಚರಣಗಳಿಗೆ ಅರ್ಪಿಸಿದರು

ಪರಾತ್ಪರ ಗುರು ಡಾಕ್ಟರರು ಪ.ಪೂ. ಭಕ್ತರಾಜ ಮಹಾರಾಜರ ಆಜ್ಞೆಗನುಸಾರ ಕೇವಲ ಮಹಾರಾಷ್ಟ್ರದಲ್ಲಿ ಅಥವಾ ಭಾರತದಲ್ಲಿಯೆ ಅಲ್ಲ, ವಿಶ್ವದಾದ್ಯಂತ ಅಧ್ಯಾತ್ಮ (ನಾಮವನ್ನು) ಪ್ರಸಾರ ಮಾಡಿದರು. ಅವರು ಇವೆಲ್ಲ ಕಾರ್ಯವನ್ನು ಒಬ್ಬ ಪರಮ ಶಿಷ್ಯನ ಹಾಗೆ ಪ.ಪೂ.ಭಕ್ತರಾಜ ಮಹಾರಾಜರ ಚರಣಗಳಿಗೆ ಸಮರ್ಪಿಸಿ ಅವರುಸ್ವತಃ ಮರೆಯಲ್ಲಿದ್ದರು. ‘ಸನಾತನದ ಆಶ್ರಮವು ಪ.ಪೂ.ಬಾಬಾರವರ (ಪ.ಪೂ. ಭಕ್ತರಾಜ ಮಹಾರಾಜರ) ಆಶ್ರಮವಾಗಿದೆ’, ಎನ್ನುವ ಭಾವ ಇರುವುದರಿಂದ ಅವರು ಆಶ್ರಮದ ಸ್ವಾಗತಕಕ್ಷೆಯಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ದೊಡ್ಡ ಗಾತ್ರದ ಛಾಯಾಚಿತ್ರವನ್ನಿಟ್ಟಿದ್ದಾರೆ.

೩. ಪರಾತ್ಪರ ಗುರು ಡಾ. ಆಠವಲೆಯವರು ಪ.ಪೂ. ಭಕ್ತರಾಜ ಮಹಾರಾಜರ ‘ಅಮೃತ ಮಹೋತ್ಸವ’ ಸಮಾರಂಭದ ನಿಯೋಜನೆಯನ್ನು ಸುಂದರವಾಗಿ ಮಾಡಿ ಅಭೂತಪೂರ್ವ ಸಮಾರಂಭವನ್ನು ನೆರವೇರಿಸಿದರು, ಅದಕ್ಕಾಗಿ ಪ.ಪೂ.ಭಕ್ತರಾಜ ಮಹಾರಾಜರು ಕೂಡ ತಮ್ಮ ಶಿಷ್ಯೋತ್ತಮರನ್ನು ಬಾಯಿ ತುಂಬಾ ಹೊಗಳಿದರು

೧೯೯೫ ರಲ್ಲಿ ಪರಾತ್ಪರ ಗುರು ಡಾಕ್ಟರರು ಮಧ್ಯಪ್ರದೇಶದ ಇಂದೂರಿನಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ೭೫ ನೇ ಹುಟ್ಟುಹಬ್ಬ, ಅಂದರೆ ‘ಅಮೃತ ಮಹೋತ್ಸವ’ವನ್ನು ಆಚರಿಸಿದರು. ಅದಕ್ಕಾಗಿ ಅವರು ಹಸಿವು-ಬಾಯಾರಿಕೆಯನ್ನು ಮರೆತು ಅತ್ಯಂತ ಶ್ರಮಪಟ್ಟರು. ಅವರು ಶಿಷ್ಯಭಾವದಲ್ಲಿದ್ದು ಮಾಡಿದ ಸೇವೆಯನ್ನು ನೋಡುವ ಭಾಗ್ಯ ಇತರ ಸಾಧಕರ ಹಾಗೆ ನಮಗೂ (ನಾನು ಮತ್ತು ನನ್ನ ಯಜಮಾನ ಶ್ರೀ. ಪ್ರಕಾಶ ಮರಾಠೆ ಇವರಿಗೂ) ಸಿಕ್ಕಿತು. ‘ಇಂತಹ ಭವ್ಯ-ದಿವ್ಯ ಆಧ್ಯಾತ್ಮಿಕ ಸಮಾರಂಭವು ಮುಂದಿನ ೫೦೦ ವರ್ಷಗಳ ವರೆಗೆ ನಡೆಯಲಿಕ್ಕಿಲ್ಲ’, ಎಂದು ಹೇಳಿ ಪ.ಪೂ. ಬಾಬಾರವರು ಪರಾತ್ಪರ ಗುರು ಡಾಕ್ಟರರನ್ನು ಕೊಂಡಾಡಿದ್ದರು.

– ಗುರುಚರಣಗಳಲ್ಲಿ ಶರಣಾಗತ, ಸೌ. ಶಾಲಿನಿ ಮರಾಠೆ (ಆಧ್ಯಾತ್ಮಿಕ ಮಟ್ಟ ಶೇ. ೬೬), ಸನಾತನ ಆಶ್ರಮ, ರಾಮನಾಥಿ ಗೋವಾ. (೩.೩.೨೦೨೧)