ಸ್ವಾ. ಸಾವರಕರ ಇವರ ವಿಚಾರಗಳನ್ನು ನಿರ್ಲಕ್ಷಿಸಿದಕ್ಕೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳು ಕುತಂತ್ರ ಮಾಡುತ್ತಿವೆ ! – ಶ್ರೀ. ನರೇಂದ್ರ ಸುರ್ವೆ

ಸ್ವಾ. ಸಾವರಕರ ಜಯಂತಿಯ ನಿಮಿತ್ತ ‘ವೀರ ಸಾವರಕರ ಇವರ ದೃಷ್ಟಿಯಲ್ಲಿ ಇಂದಿನ ಭಾರತ’ ಎಂಬ ವಿಷಯದ ಕುರಿತು ಸಂವಾದ !

ಸ್ವಾತಂತ್ರ್ಯವೀರ ಸಾವರಕರರು ಒಬ್ಬ ದಾರ್ಶನಿಕ ಕ್ರಾಂತಿಕಾರಿಯಾಗಿದ್ದರು. ಭಾರತದ ಸ್ವಾತಂತ್ರ್ಯದ ನಂತರ, ಚೀನಾ ಮತ್ತು ಪಾಕಿಸ್ತಾನದಂತಹ ನೆರೆಯ ದೇಶಗಳ ಪರಿಸ್ಥಿತಿಯನ್ನು ಗಮನಿಸಿ, ಭದ್ರತೆಯ ವಿಷಯದಲ್ಲಿ ಭಾರತದ ವಿದೇಶಾಂಗ ನೀತಿ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆಯನ್ನು ಅವರು ನೀಡಿದ್ದರು. ದೇಶದ ಗಡಿಯನ್ನು ಸುಭದ್ರಗೊಳಿಸಲು ಭಾರತೀಯ ಯುವಕರನ್ನು ಸಜ್ಜುಗೊಳಿಸುವುದು ಸಾವರಕರರ ಭೂಮಿಕೆಯಾಗಿತ್ತು. ಈ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಸಾಕಷ್ಟು ಜಾಗೃತಿ ಮಾಡಿದರು. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ ಕಳೆದ 70 ವರ್ಷಗಳಲ್ಲಿ, ಆಡಳಿತಗಾರರು ಸ್ವಾತಂತ್ರ್ಯವೀರ ಸಾವರಕರ ಅವರ ವಿಚಾರಗಳನ್ನು ನಿರ್ಲಕ್ಷಿಸಿದ್ದಾರೆ. ಇದರ ಪರಿಣಾಮವಾಗಿ ತೇಜಸ್ವೀ ಪರಂಪರೆಯನ್ನು ಹೊಂದಿರುವ ಮಹಾನ ಭಾರತದ ನಾಡನ್ನು ಚೀನಾ ಕಬಳಿಕೆ ಮಾಡಿದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ಸಣ್ಣ ರಾಷ್ಟ್ರಗಳು ಕಿತಾಪತಿ ಮಾಡುತ್ತಿವೆ ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ನರೇಂದ್ರ ಸುರ್ವೆ ಇವರು ಪ್ರತಿಪಾದಿಸಿದರು. ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ‘ವೀರ ಸಾವರಕರ ದೃಷ್ಟಿಕೋನದಿಂದ ಇಂದಿನ ಭಾರತ’ ಈ ಆನ್‌ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಶ್ರೀ. ನರೇಂದ್ರ ಸುರ್ವೆ

ಈ ವೇಳೆ ಖ್ಯಾತ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಶ್ರೀ. ದುರ್ಗೇಶ ಪರುಳಕರ ಇವರು ಮಾತನಾಡುತ್ತಾ, ಸಾವರಕರ ಅವರು ಯಾವಾಗಲೂ ವೈಯಕ್ತಿಕ ಹಿತಾಸಕ್ತಿಗಳ ಬದಲಾಗಿ ರಾಷ್ಟ್ರದ ಹಿತಾಸಕ್ತಿ ಮತ್ತು ರಾಷ್ಟ್ರದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು ಮತ್ತು ಇದರಿಂದ ಅವರನ್ನು ಅರ್ಥಮಾಡಿಕೊಳ್ಳಲು ಜನರಿಗೆ ಕಷ್ಟವಾಗುತ್ತಿತ್ತು. ‘ರಾಷ್ಟ್ರದ ಹಿತಾಸಕ್ತಿಗಳನ್ನು ನೋಡಿಕೊಳ್ಳುವವನು ಸ್ನೇಹಿತ ಮತ್ತು ಅಹಿತವನ್ನು ಮಾಡುವವನು ಶತ್ರು’, ಎಂದು ಸಾವರಕರರು ಹೇಳುತ್ತಿದ್ದರು. ಸಾವರಕರ ಇವರ ಚರಿತ್ರೆಯನ್ನು ಪ್ರತಿಯೊಬ್ಬ ಯುವಕನು ಅಧ್ಯಯನ ಮಾಡಬೇಕು. ಯುವಕರು ಅವರ ಗುಣಗಳನ್ನು ಅಳವಡಿಸಿಕೊಳ್ಳಲು ಮಾತ್ರವಲ್ಲ, ರಾಷ್ಟ್ರದ ಉದ್ಧಾರಕ್ಕಾಗಿ ಈ ಅಧ್ಯಯನ ಮಾಡಬೇಕು. ರಾಷ್ಟ್ರದ ಉದ್ಧಾರವೇ ಗುರಿ ಎಂದು ನಿರ್ಧರಿಸಿ ತಮ್ಮನ್ನು ಸಮರ್ಪಿಸಿಕೊಳ್ಳಬೇಕು. ಮಾತೃಭಾಷೆಯ ಶಿಕ್ಷಣ ಪಡೆಯುವುದು ನಮ್ಮ ಸ್ವಾಭಿಮಾನ ಮತ್ತು ಅಸ್ತಿತ್ವದ ಪ್ರಶ್ನೆಯಾಗಿದೆ. ರಾಷ್ಟ್ರಭಕ್ತಿ, ದೇಶಪ್ರೇಮ, ರಾಷ್ಟ್ರನಿಷ್ಠೆ ತ್ಯಜಿಸುವುದು ದೇಶದ್ರೋಹವಾಗಿದೆ. ಸ್ವದೇಶಿಯ ಪಾಲನೆ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಈ ವೇಳೆ ‘ಇತಿಹಾಸದ ಹೆಜ್ಜೆ ಗುರುತುಗಳು’ (ಇತಿಹಾಸಾಚಾ ಪಾವೂಲಖೂಣಾ) ಸಂಸ್ಥೆಯ ಕಾರ್ಯದರ್ಶಿ ನ್ಯಾಯವಾದಿ ಶುಭಂಕರ ಅತ್ರೆ ಇವರು ಮಾತನಾಡುತ್ತಾ, ವಿದೇಶಕ್ಕೆ ತೆರಳುವ ಯುವಕರು ಸಾವರಕರ ಇವರಂತೆ ದೇಶಪ್ರೇಮಕ್ಕೆ ಮೊದಲ ಆದ್ಯತೆ ನೀಡಬೇಕು. ಸ್ವಾ. ಸಾವರಕರರು ತಮ್ಮ ಕ್ರಾಂತಿಕಾರಿ ಸಂಸ್ಥೆಯಾದ ‘ಅಭಿನವ ಭಾರತ’ದ ಕೆಲಸವನ್ನು ಹೆಚ್ಚಿಸಲು ವಿದೇಶಕ್ಕೆ ಹೋದರು. ವಿದೇಶಕ್ಕೆ ಹೋಗುವ ಯುವಕರು ಮಾತೃಭೂಮಿಯ ಮೇಲಿನ ನಿಷ್ಠೆಯನ್ನು ಶಾಶ್ವತವಾಗಿರಿಸಿಕೊಂಡು ಶಿಕ್ಷಣವನ್ನು ದೇಶದ ಹಿತಕ್ಕಾಗಿ ಬಳಸಬೇಕು. ಇಂದು ಜಾತಿಗಳಾಗಿ ಒಡೆದ ಹಿಂದೂಗಳನ್ನು ಒಗ್ಗೂಡಿಸಬೇಕು. ಮತಾಂತರಗೊಂಡ ಹಿಂದೂಗಳ ‘ಘರವಾಪಸಿ’ಗೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.