ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ನೀತಿಗಳನ್ನು ಅನುಸರಿಸಿದರೆ ಹಿಂದೂ ರಾಷ್ಟ್ರ ಸ್ಥಾಪನೆ ಸಾಧ್ಯ ! – ಮಂಜಿರಿ ಮರಾಠೆ, ಖಜಾಂಚಿ, ಸ್ವಾತಂತ್ರ್ಯ ವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ, ಮುಂಬಯಿ

ಮಂಜಿರಿ ಮರಾಠೆ

‘ಸಂಖ್ಯಾಬಲದಲ್ಲಿ ಶಕ್ತಿ ಇದೆ’ ಎಂದು ಸ್ವಾತಂತ್ರ್ಯ ವೀರ ಸಾವರ್ಕರ್ ಹೇಳಿದ್ದರು. ಅವರ ಮಾತು ಹಿಂದೂಗಳು ಕೇಳಲಿಲ್ಲ; ಆದರೆ ಮುಸ್ಲಿಮರು ಅದನ್ನು ತೆಗೆದುಕೊಂಡರು. ಆದ್ದರಿಂದ ಅವರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಹಿಂದೂಗಳು 1 ಅಥವಾ 2 ಮಕ್ಕಳೊಂದಿಗೆ ತೃಪ್ತರಾಗಿದ್ದಾರೆ. ಹಾಗಾಗಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ ಮತ್ತು ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ. ಅಷ್ಟೇ ಅಲ್ಲ ಪ್ರತಿದಿನ ಸಾವಿರಾರು ಬಾಂಗ್ಲಾದೇಶಿಗಳು ಭಾರತದೊಳಗೆ ನುಸುಳುತ್ತಿದ್ದಾರೆ. ಆದ್ದರಿಂದ, ದೇಶದಲ್ಲಿ ಅನೇಕ ಸಣ್ಣ ಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ವಿರ ಸಾವರ್ಕರ್ ಹೇಳಿದ ನೀತಿಗಳನ್ನು ಅನುಸರಿಸಬೇಕು ಮತ್ತು ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕು, ಆಗ ಮಾತ್ರ ಹಿಂದೂ ರಾಷ್ಟ್ರ ಸ್ಥಾಪನೆಯಾಗುತ್ತದೆ ಮತ್ತು ನಮ್ಮ ದೇಶ ಉಳಿಸುತ್ತದೆ.