ರಾಜಸ್ಥಾನದ ಬಿಜೆಪಿ ಸರಕಾರದಿಂದ ಸಾವರಕರ ಜಯಂತಿ ಮತ್ತು 370 ಕಲಂ ರದ್ದುಗೊಳಿಸಿರುವ ಬಗ್ಗೆ ‘ಸುವರ್ಣ ಮುಕುಟ ಮಸ್ತಕ ದಿವಸ’ ಆಚರಣೆ !

ಜೈಪುರ – ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರಕಾರವು ರಾಜ್ಯದ ಶಾಲೆಗಳಲ್ಲಿ ಮೇ 28 ರಂದು ಸ್ವಾತಂತ್ರ್ಯವೀರ ಸಾವರಕರ ಅವರ ಜಯಂತಿಯನ್ನು ಆಚರಿಸಲು ಸೂಚನೆ ನೀಡಿದೆ. ಇದರೊಂದಿಗೆ ಮೇ 29ರಂದು ಮಹಾರಾಣಾ ಪ್ರತಾಪ ಅವರ ಜಯಂತಿ ನಿಮಿತ್ತ ರಜೆ ನೀಡಲಾಗಿದೆ. ಇದರೊಂದಿಗೆ ಜಮ್ಮು-ಕಾಶ್ಮೀರದಿಂದ ಕಲಂ 370 ರದ್ದುಗೊಳಿಸಿರುವ ಬಗ್ಗೆ ಅಗಸ್ಟ 5 ರಂದು `ಸುವರ್ಣ ಮುಕುಟ ಮಸ್ತಕ ದಿವಸ’ (ಗೋಲ್ಡನ ಕ್ರೌನ ಹೆಡ್ ಡೇ) ಆಚರಿಸಲು ಮತ್ತು ಆಗಸ್ಟ್ 13 ರಂದು ವೀರ ದುರ್ಗಾದಾಸ ರಾಥೋಡ ಜಯಂತಿಯನ್ನು ಆಚರಿಸಲು ತಿಳಿಸಲಾಗಿದೆ.

ರಾಜಸ್ಥಾನ ಶಿಕ್ಷಣ ಇಲಾಖೆಯ ನಿರ್ದೇಶಕ ಆಶಿಶ್ ಮೋದಿ ಅವರು ಇತ್ತೀಚೆಗೆ ರಾಜ್ಯದ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ 2024-25 ರ ಕ್ಯಾಲೆಂಡರ್ ಅನ್ನು ಪ್ರಕಟಿಸಿದ್ದಾರೆ. ಈ ಕ್ಯಾಲೆಂಡರ್ ಪ್ರಕಾರ, ಆಗಸ್ಟ್ 19 ಅನ್ನು ರಕ್ಷಾಬಂಧನ ಮತ್ತು ಸಂಸ್ಕೃತ ದಿನವಾಗಿ ಆಚರಿಸಲಾಗುತ್ತದೆ. ದೀಪಾವಳಿ ರಜೆ ಅಕ್ಟೋಬರ್ 27 ರಿಂದ ನವೆಂಬರ್ 7 ರವರೆಗೆ, ಅಂದರೆ 12 ದಿನಗಳವರೆಗೆ ಇರಲಿದೆ. ಪ್ರತಿ ವರ್ಷದಂತೆ, ಚಳಿಗಾಲವು ಡಿಸೆಂಬರ್ 25 ರಿಂದ ಪ್ರಾರಂಭವಾಗಿ ಜನವರಿ 5 ರವರೆಗೆ ನಡೆಯುತ್ತದೆ.

ಶಿಕ್ಷಣ ಇಲಾಖೆಯು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರವನ್ನು ‘ನೋ ಬ್ಯಾಗ್ ಡೇ’ ಎಂದು ಘೋಷಿಸಿದೆ. ಈ ದಿನ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.