‘ಗುರುಕೃಪಾಯೋಗಾನುಸಾರ ಸಾಧನೆ’ಯ ಅಂತರ್ಗತ ಇಲ್ಲಿಯವರೆಗೆ ಅಷ್ಟಾಂಗ ಸಾಧನೆಯ ಹಂತಗಳ ಕ್ರಮ ಈ ರೀತಿ ಇತ್ತು –
೧. ಸ್ವಭಾವದೋಷ-ನಿರ್ಮೂಲನೆ, ೨. ಅಹಂ-ನಿರ್ಮೂಲನೆ, ೩. ನಾಮಜಪ, ೪. ಸತ್ಸಂಗ, ೫. ಸತ್ಸೇವೆ, ೬. ಭಾವಜಾಗೃತಿಗಾಗಿ ಮಾಡಬೇಕಾದ ಪ್ರಯತ್ನ, ೭. ಸತ್‍ಗಾಗಿ ತ್ಯಾಗ ಮತ್ತು 8. ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೀತಿ) ಸದ್ಯ ಮಹಾಭಯಂಕರ ಆಪತ್ಕಾಲವು ಹತ್ತಿರ ಬರುತ್ತಿದೆ. ಇಂತಹ ಆಪತ್ಕಾಲದಲ್ಲಿ ಕೇವಲ ದೇವರೇ ನಮ್ಮನ್ನು ರಕ್ಷಿಸಬಹುದು. ‘ಭಾವವಿದ್ದಲ್ಲಿ ದೇವ’ ಈ ವಚನಕ್ಕನುಸಾರ ನಮ್ಮಲ್ಲಿ ಭಾವವಿದ್ದರೆ, ನಮಗೆ ದೇವರ ಸಹಾಯ ಬೇಗನೆ ಸಿಗುತ್ತದೆ. ಇದಕ್ಕಾಗಿ ನಮ್ಮಲ್ಲಿ ಭಾವವನ್ನು ನಿರ್ಮಿಸುವುದು ಅತ್ಯಂತ ಆವಶ್ಯಕವಾಗಿದೆ. ಇದಕ್ಕಾಗಿ ಈಗ ‘ಭಾವಜಾಗೃತಿಗಾಗಿ ಮಾಡಬೇಕಾದ ಪ್ರಯತ್ನ’ ಇದು ಅಷ್ಟಾಂಗ ಸಾಧನೆಯಲ್ಲಿನ ನಾಲ್ಕನೇಯ ಹಂತ (ಅಂಗ) ವಾಗಲಿದೆ. ಅಷ್ಟಾಂಗ ಸಾಧನೆಯ ಹಂತಗಳ ಸುಧಾರಿತ ಕ್ರಮ ಹೀಗಿದೆ –
೧. ಸ್ವಭಾವದೋಷ-ನಿರ್ಮೂಲನೆ ಮತ್ತು ಗುಣ-ಸಂವರ್ಧನೆ, ೨. ಅಹಂ-ನಿರ್ಮೂಲನೆ, ೩. ನಾಮಜಪ, ೪. ಭಾವಜಾಗೃತಿಗಾಗಿ ಮಾಡಬೇಕಾದ ಪ್ರಯತ್ನ, ೫. ಸತ್ಸಂಗ, ೬. ಸತ್ಸೇವೆ ೭. ಸತ್‍ಗಾಗಿ ತ್ಯಾಗ ಮತ್ತು 8. ಪ್ರೀತಿ (ಇತರರ ಬಗ್ಗೆ ನಿರಪೇಕ್ಷ ಪ್ರೀತಿ) – (ಪರಾತ್ಪರ ಗುರು) ಡಾ. ಜಯಂತ ಆಠವಲೆ
(೧೨-೪-೨೦೨೨)