ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ತಿಥಿಗಳಂದು ಕಣ್ಣುಗಳಿಗೆ ಆವರಣ ಬರುವುದರಿಂದ ನಮ್ಮ ತೊಂದರೆಗಳು ಹೆಚ್ಚಾಗಬಾರದೆಂದು ಅದನ್ನು ತಕ್ಷಣ ದೂರ ಮಾಡಿ !

ಸದ್ಗುರು (ಡಾ.) ಮುಕುಲ ಗಾಡಗೀಳ

‘ಅಮಾವಾಸ್ಯೆ ಮತ್ತು ಹುಣ್ಣಿಮೆ’ ಈ ತಿಥಿಗಳಂದು ಕೆಟ್ಟ ಶಕ್ತಿಗಳ ತೊಂದರೆಯು ಹೆಚ್ಚಾಗಿರುತ್ತದೆ. ಅದರಿಂದ ವಾತಾವರಣದಲ್ಲಿ ತೊಂದರೆದಾಯಕ ಶಕ್ತಿಯ ಪ್ರಮಾಣವು ಹೆಚ್ಚಾಗಿರುತ್ತದೆ. ನಾವು ಪಂಚಜ್ಞಾನೇಂದ್ರಿಯಗಳ ಪೈಕಿ ಹೆಚ್ಚಾಗಿ ಕಣ್ಣುಗಳಿಂದಲೇ ನೋಡಿ ಎಲ್ಲ ಸಂಗತಿಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಅವುಗಳಿಗೆ (ಕಣ್ಣುಗಳು) ಕಾಣುವ ದೃಶ್ಯಗಳಲ್ಲಿ ಒಳ್ಳೆಯ ಅಥವಾ ಕೆಟ್ಟ ಸ್ಪಂದನಗಳಿಂದ ಕೂಡಿರುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಯ ತಿಥಿಗಳಲ್ಲಿ ವಾತಾವರಣದಲ್ಲಿ ತೊಂದರೆದಾಯಕ ಶಕ್ತಿಗಳ ಪ್ರಮಾಣವು ಹೆಚ್ಚಾಗಿರುವುದರಿಂದ ನಮ್ಮ ಕಣ್ಣುಗಳು ಆ ಸೂಕ್ಷ್ಮದಲ್ಲಿನ ತೊಂದರೆದಾಯಕ ಸ್ಪಂದನಗಳಿಂದ ಯುಕ್ತವಾಗುತ್ತವೆ, ಅಂದರೆ ಅವುಗಳ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣವು ಬರುತ್ತದೆ. ಆದುದರಿಂದ ಕಣ್ಣುಗಳಿಗೆ ಒತ್ತಡದ ಅರಿವಾಗುವುದು, ಗ್ಲಾನಿ ಬರುವುದು, ಕತ್ತಲೆ ಬರುವುದು ಇಂತಹ ತೊಂದರೆಗಳಾಗತ್ತವೆ. ನಾವು ಕಣ್ಣುಗಳ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತಕ್ಷಣವೇ ತೆಗೆಯದಿದ್ದರೆ, ತೊಂದರೆದಾಯಕ ಶಕ್ತಿಯು ಶರೀರದಲ್ಲಿ ಪ್ರವೇಶಿಸಿ ಅದು ಕುಂಡಲಿನಿಚಕ್ರಗಳನ್ನು ಭಾರಿತ ಮಾಡುತ್ತದೆ, ಮುಂದೆ ಶರೀರದ ಇನ್ನಿತರ ಅವಯವಗಳ ಮೇಲೂ ಆವರಣವು ಬರುತ್ತದೆ; ಆದುದರಿಂದ ಅಮಾವಾಸ್ಯೆ ಮತ್ತು ಹುಣ್ಣಿಮಯ ತಿಥಿಗಳಲ್ಲಿ ನಮ್ಮ ತೊಂದರೆಗಳು ಹೆಚ್ಚಾಗಬಾರದೆಂದು ಕಣ್ಣುಗಳ ಮೇಲೆ ಆವರಣದ ಅರಿವಾದ ತಕ್ಷಣ ಅದನ್ನು ತೆಗೆಯುವುದು ಆವಶ್ಯಕವಾಗಿದೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಸ್ವಾಭಿಮಾನಿ ಲೋಕಮಾನ್ಯ ತಿಲಕ : ಒಮ್ಮೆ ಮಹಾಯುದ್ಧದ ಸಮಯದಲ್ಲಿ ಸೈನ್ಯಕ್ಕೆ ಭರ್ತಿಯಾಗಲು ಮುಂಬೈಯ ಗವರ್ನರ ಲಾರ್ಡ ವಿಲಿಂಗ್ಡನರು ಸಭೆಯನ್ನು ಸೇರಿಸಿದ್ದರು ಅದಕ್ಕೆ ಲೋಕಮಾನ್ಯ ತಿಲಕರನ್ನು ಕರೆಯಲಾಗಿತ್ತು. ಸಭೆಯಲ್ಲಿ ತಿಲಕರ ಮುಖದಿಂದ ಸ್ವರಾಜ್ಯ ಹಾಗೂ ಸ್ವದೇಶ ಎಂಬ ಹೆಸರು ಬರುತ್ತಲೆ ಗವರ್ನರರು ಲೋಕಮಾನ್ಯ ತಿಲಕರನ್ನು ಸ್ವದೇಶದ ಬಗ್ಗೆ ಏನನ್ನು ಮಾತನಾಡಬಾರದೆಂದು ಹೇಳಿದರು ಆಗ ತಿಲಕರು ಹಾಗಿದ್ದರೆ ಸ್ವಾಭಿಮಾನಿಗೆ ಸಭೆಯನ್ನು ಬಿಟ್ಟು ಹೋಗುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದರು. ಹಾಗೆಯೇ ಕೂಡಲೆ ಸಭೆಯನ್ನು ಬಿಟ್ಟು ಹೊರಬಂದರು.