ಸತ್ಯ ಏನಾದರೂ ಬಚ್ಚಿಟ್ಟು ವಾತಾವರಣ ಶಾಂತ ಮಾಡುವ ಪ್ರಯತ್ನ ನಡೆಯುತ್ತಿದ್ದರೆ ಅದು ಸ್ವೀಕಾರರ್ಹವಿಲ್ಲ ! ಹಿಂದೂ ಪಕ್ಷದ ನ್ಯಾಯವಾದಿ (ಪೂ.) ಹರಿಶಂಕರ್ ಜೈನ್

ಜ್ಞಾನವಾಪಿ ಪ್ರಕರಣ

ವಾರಾಣಸಿ (ಉತ್ತರ ಪ್ರದೇಶ) – ಸತ್ಯ ಏನಾದರೂ ಬಚ್ಚಿಟ್ಟು ವಾತಾವರಣ ಶಾಂತ ಮಾಡಲಾಗುತ್ತಿದ್ದರೆ ನಮಗೆ ಒಪ್ಪಿಗೆ ಇಲ್ಲ. ಅದರ ವಿರುದ್ಧ ಅವರಿಗೆ ನಾಚಿಕೆ ಆಗಬೇಕು, ಎಷ್ಟು ವರ್ಷಗಳ ಕಾಲ ಸತ್ಯ ಏಕೆ ಬಚ್ಚಿಡಲಾಯಿತು ! ವಾತಾವರಣ ಹಾಳು ಮಾಡುವುದರ ಕುರಿತು ಯಾರೆಲ್ಲಾ ಬೆದರಿಕೆ ನೀಡುತ್ತಿದ್ದಾರೆ ಅವರು ಶರಣಾಗಬೇಕು. ಏನಾದರೂ ‘ವಜೂ ಖಾನ್ ಹತ್ತಿರ (ನಮಾಜ್ ಮಾಡುವ ಮೊದಲು ಕೈಕಾಲು ತೊಳೆಯುವ ಜಾಗ) ಸಿಕ್ಕಿರುವ ಶಿವಲಿಂಗ ಅಲ್ಲ ಕಾರಂಜಿ ಇರುವುದು’, ಎಂದು ಹೇಳುತ್ತಿದ್ದರೆ ಅವರು ಕಾರಂಜಿಯನ್ನು ತೋರಿಸಿ. ಮೂಲಕ ಕಾರಂಜಿ ಆಗುತ್ತಿತ್ತು ? ಎಂಬ ತಂತ್ರಜ್ಞಾನ ಮೂರುವರೆನೂರು ವರ್ಷಗಳ ಮೊದಲು ಎಲ್ಲಿ ಇತ್ತು ? ಎಂದು ಜ್ಞಾನವಾಪಿ ಪ್ರಕರಣದ ನ್ಯಾಯವಾದಿ (ಪೂ.) ಹರಿಶಂಕರ ಜೈನ್ ಇವರು ಪ್ರಸಾರ ಮಾಧ್ಯಮಗಳ ಜೊತೆ ಮಾತನಾಡುವಾಗ ಕೇಳಿದರು. ಪೂ. ಜೈನ ಇವರ ಆರೋಗ್ಯ ಹಾಳಾಗಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಹಿಂತಿರುಗಿ ಬಂದನಂತರ ಅವರು ಪ್ರಸಾರ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು.

 (ಸೌಜನ್ಯ : News India )

೧. ಪೂ. (ನ್ಯಾಯವಾದಿ) ಜೈನ್ ಇವರು ಮಾತು ಮುಂದುವರಿಸುತ್ತಾ, ಶಿವಲಿಂಗ ಪರಿಸರದ ಒಳಗಿನ ಭಾಗದಲ್ಲಿ ಇದೆ. ಇಲ್ಲಿಯ ವ್ಯಾಸ ಕೊಠಡಿಯ ಪರೀಕ್ಷೆ ನಡೆಸಿದರೆ ಆಗ ಇನ್ನು ಸತ್ಯ ಬೆಳಕಿಗೆ ಬರುವುದು; ಆದರೆ ಸೌಹಾರ್ದತೆ ಹೆಸರಿನಲ್ಲಿ ನಮ್ಮ ಕಾನೂನಿನ ಅಧಿಕಾರ ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.

೨. ಎಂಐಎಂ ಅಧ್ಯಕ್ಷ ಮತ್ತು ಸಂಸದ ಅಸದುದ್ದಿನ್ ಓವೈಸಿ ಇವರೂ ಸಹ ಶಿವಲಿಂಗದ ಬದಲು ಕಾರಂಜಿ ಇರುವುದು ಹೇಳಿದ್ದಾರೆ. ಅದಕ್ಕೆ ಪೂಜ್ಯ (ನ್ಯಾಯವಾದಿ) ಜೈನ್ ಇವರು, ಅವರ ಜ್ಞಾನ ಹೆಚ್ಚು ಇರಬಹುದು; ಆದರೆ ಎಲ್ಲಿ ಶಿವಲಿಂಗ ಸಿಕ್ಕಿದೆಯೋ, ಆ ಜಾಗ ಭಗವಾನ ಶಿವನ ಸ್ಥಾನವಾಗಿದೆ. ಅಲ್ಲಿ ಮಸೀದಿ ಇರಲು ಸಾಧ್ಯವಿಲ್ಲ. ಅಗೆಯುವುದರಿಂದ ಇನ್ನೂ ಕೆಲವು ವಿಷಯ ಬೆಳಕಿಗೆ ಬರಬಹುದು ಎಂದು ಹೇಳಿದರು.