ಜೀವಕ್ಕೆ ತಟ್ಟಿದ ಬಿಸಿ…

ಭಾರತದಲ್ಲಿ ಬೇಸಿಗೆ ಆರಂಭವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಿಸರ್ಗಚಕ್ರವು ಹದಗೆಟ್ಟಿರುವುದು ಕಂಡು ಬರುತ್ತದೆ. ಕೆಲವು ದಕ್ಷಿಣ ಮತ್ತು ಪೂರ್ವ ರಾಜ್ಯಗಳನ್ನು ಹೊರತುಪಡಿಸಿ ದೇಶವು ಮಳೆಗಾಲದಲ್ಲಿ ಬೇಸಿಗೆಯನ್ನು ಅನುಭವಿಸುತ್ತಿರುವುದು ಕಂಡು ಬರುತ್ತದೆ. ಚಳಿಗಾಲವು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿರುತ್ತದೆ. ಈಗ ಬೇಸಿಗೆ ಇರುವಾಗ ದೇಶದೆಲ್ಲೆಡೆ ಬಿಸಿಲಿನ ಬೇಗೆ ಇದೆ. ಈ ಅಲೆಯಿಂದ ಪ್ರತಿಯೊಬ್ಬರಿಗೂ ಬಿಸಿ ತಟ್ಟುತ್ತಿದೆ; ಆದರೆ ಇದರಲ್ಲಿ ಎಂತಹ ಕೆಲವು ಜನರಿದ್ದಾರೆ, ಎಂದರೆ ಅವರಿಗೆ ಉಷ್ಣತೆ ಎಂದರೇನೆಂದು ಗೊತ್ತಿರುವುದಿಲ್ಲ. ಯಾರು ವಾತಾನುಕೂಲ ಮನೆಯಲ್ಲಿರುತ್ತಾರೋ, ವಾತಾನುಕೂಲಿತ ವಾಹನದಲ್ಲಿ ಹೋಗುತ್ತಾರೋ, ವಾತಾನುಕೂಲಿತ ಕಾರ್ಯಾಲಯದಲ್ಲಿ ಕುಳಿತುಕೊಳ್ಳುತ್ತಾರೋ, ಅವರಿಗೆ ಇದರ ಬಿಸಿ ತಟ್ಟುವುದಿಲ್ಲ. ‘ಈ ತಾಪತ್ರಯಕ್ಕೆ ನಾವೇ ಉಪಾಯ ಕಂಡುಕೊಳ್ಳಬೇಕು’, ಎನ್ನುವವರೇ ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ; ಅಂದರೆ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಮುಂತಾದವರು ಇಂತಹ ಜೀವನಪದ್ಧತಿಯಲ್ಲಿ ಜೀವಿಸುತ್ತಿರುತ್ತಾರೆ. ಅವರು ವಾತಾವರಣದಲ್ಲಿನ ಉಷ್ಣತೆಯನ್ನು ಕಡಿಮೆ ಮಾಡಲು ಶಾಶ್ವತವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ; ಆದರೆ ಅವರಿಂದ ಆ ರೀತಿ ಆಗದಿರುವುದರಿಂದ ಕೇವಲ ಭಾರತವಷ್ಟೇ ಅಲ್ಲ ಬದಲಾಗಿ ಇಡೀ ಜಗತ್ತಿನ ಉಷ್ಣತೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಹೆಚ್ಚಳ ಇದೇ ರೀತಿ ಮುಂದುವರಿದರೆ ಮುಂದಿನ ಕೆಲವು ವರ್ಷಗಳಲ್ಲಿ ಜಗತ್ತಿನಲ್ಲಿ ಜೀವಸೃಷ್ಟಿಯು ನಾಶವಾಗುವ ಅಪಾಯವಿದೆ. ಕೇವಲ ಪ್ರಳಯವಾದರೆ ಮಾತ್ರ ಜೀವಸೃಷ್ಟಿ ನಾಶವಾಗುತ್ತದೆ ಎಂದೇನಿಲ್ಲ, ಆದರೆ ಶಾಖದಿಂದಲೂ ಇದು ನಾಶವಾಗಬಹುದು, ಎಂಬುದನ್ನು ಗಮನದಲ್ಲಿಡಬೇಕು. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ‘ಏರುತ್ತಿರುವ ಭೂಮಿಯ ಮತ್ತು ಸಮುದ್ರದ ತಾಪಮಾನವು ಜಗತ್ತಿನಾದ್ಯಂತ, ಬಿರುಗಾಳಿ, ಅತಿವೃಷ್ಟಿ ಮತ್ತು ಬರಗಾಲಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮಣ್ಣಿನ ತೇವಾಂಶ ಮತ್ತು ಸಾಮರ್ಥ್ಯ ಕಡಿಮೆ ಆಗುತ್ತದೆ. ಇದು ಆಹಾರ ಭದ್ರತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹಿಮನದಿಗಳು ಕರಗುತ್ತವೆ, ಪ್ರವಾಹದ ಭೀತಿ ಎದುರಾಗಲಿದೆ. ಮಳೆ ಬಾರದಿದ್ದರೆ ಬರಗಾಲ ಎದುರಾಗುತ್ತದೆ. ಆಹಾರ ಮತ್ತು ನೀರಿನ ಸಮಸ್ಯೆ ಉಂಟಾಗಲಿದೆ. ಈ ಬದಲಾವಣೆಗಳು ಬಹಳ ವೇಗವಾಗಿ ನಡೆಯುತ್ತಿವೆ. ಹವಾಮಾನ ಬದಲಾವಣೆಯನ್ನು ತಡೆಯದೇ ಪಾರಾಗಲು ಸಾಧ್ಯವಿಲ್ಲ.

ಶಾಖಕ್ಕೆ ಕಾರಣವಾದ ವಿದ್ಯುತ್ !

ಸದ್ಯ ಹವಾಮಾನದಲ್ಲಿನ ಪರಿವರ್ತನೆಯನ್ನು ತಡೆಗಟ್ಟಲು ಕಳೆದ ವರ್ಷದಿಂದ ಪ್ರಯತ್ನವು ನಡೆದಿದೆ. ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವೂ ಇದೆ; ಆದರೆ ಇದನ್ನು ಎಷ್ಟು ಜನ ಗಾಂಭೀರ್ಯದಿಂದ ತೆಗೆದುಕೊಂಡಿದ್ದಾರೆ ? ಎಂಬುದೇ ಪ್ರಶ್ನೆಯಾಗಿದೆ. ಜಗತ್ತಿನಲ್ಲಿ ಶಾಖವನ್ನು ನಿರ್ಮಿಸುವ ಯಾವ ಸ್ರೋತವಿದೆಯೋ, ಅದಕ್ಕೆ ಮಾಡಲಾಗುವ ಉಪಾಯಯೋಜನೆ ಸಮರೋಪಾದಿಯಲ್ಲಿ ನಡೆದಿದೆಯೇ ? ಎಂಬುದರ ಉತ್ತರವನ್ನು ನೋಡಿದರೆ ಅದು ‘ಇಲ್ಲ’ವೆಂದು ಆಗುತ್ತದೆ. ‘ಅದು ಸಾಧ್ಯವೇ ಇಲ್ಲ’, ಎಂಬ ಮಾನಸಿಕತೆಯಿಂದ ಜವಾಬ್ದಾರಿಯುತರು ಅದರ ಕಡೆಗೆ ನೋಡುತ್ತಿದ್ದಾರೆ; ಏಕೆಂದರೆ ತೆಗೆದುಕೊಳ್ಳಬೇಕಾದ ಕ್ರಮಗಳಲ್ಲಿ ಪ್ರಮುಖವಾದದ್ದು ಕಲ್ಲಿದ್ದಲಿನ ವಿದ್ಯುತ್ ಉತ್ಪಾದನೆ, ಹವಾನಿಯಂತ್ರಣ ವ್ಯವಸ್ಥೆಗಳು, ವಾಹನಗಳು ಮತ್ತು ಕೈಗಾರಿಕೆಗಳು. ಜಗತ್ತಿನಾದ್ಯಂತದ ಹವಾನಿಯಂತ್ರಣ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದರೆ ಜಗತ್ತಿನ ಶೇ. ೪೫ ರಷ್ಟು ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ. ಅಂದರೆ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತದೆ. ಅದು ಕಡಿಮೆಯಾದರೆ, ಅದಕ್ಕಾಗಿ ಬೇಕಾಗುವ ಕಲ್ಲಿದ್ದಲಿನ ಬಳಕೆ ಕಡಿಮೆಯಾಗಿ ಅದರಿಂದಾಗುವ ಮಾಲಿನ್ಯ ಮತ್ತು ಶಾಖವೂ ಕಡಿಮೆಯಾಗಲಿದೆ. ಒಂದು ವಿದ್ಯುತ್‌ನಿಂದಾಗಿ ಎಷ್ಟೋ ಪ್ರಮಾಣದಲ್ಲಿ ಉಷ್ಣತೆ ಮತ್ತು ಪ್ರದೂಷಣೆ ನಿರ್ಮಾಣವಾಗುತ್ತಿದೆ. ನಮಗೆ ಪ್ರಯೋಜನವಾಗುವ ವಿದ್ಯುತ್‌ನಿಂದ ಉಂಟಾಗುವ ಹಾನಿಯ ಪ್ರಮಾಣವನ್ನು ಗಮನಿಸುವುದು ಮಹತ್ವದ್ದಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಅದರ ಬಳಕೆಯನ್ನು ಕಡಿಮೆ ಮಾಡಲು ಹೇಳಿದರೆ, ಅದು ಅಸಾಧ್ಯವಿದೆ. ತದ್ವಿರುದ್ಧ ಜಗತ್ತಿನಲ್ಲಿ ಇಂಧನದ ಸಂಗ್ರಹ ಎಂದಾದರೂ ಮುಗಿಯಲೇಬೇಕು, ಇದರಿಂದ ಸದ್ಯ ವಾಹನಗಳನ್ನು ವಿದ್ಯುತ್‌ನಿಂದ ನಡೆಸುವ ಪ್ರಯತ್ನವನ್ನು ಮಾಡಲಾಗುತ್ತಿದೆ; ಅಂದರೆ ಹೆಚ್ಚು ವಿದ್ಯುತ್ ಉತ್ಪಾದನೆಯನ್ನು ಮಾಡಬೇಕಾಗುತ್ತದೆ. ಒಂದು ಬದಿಗೆ ಇದು ನಡೆದಿರುವಾಗ ಇನ್ನೊಂದೆಡೆ ಭಾರತದಲ್ಲಿ ಕಲ್ಲಿದ್ದಲಿನ ಅಭಾವದಿಂದ ಕೆಲವು ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆ ಕುಸಿಯುವ ಸಾಧ್ಯತೆ ಉದ್ಭವಿಸಿದೆ. ಇದು ಎಂದಾದರೂ ಆಗಲಿಕ್ಕೇ ಇರುವುದರಿಂದ ವಿದೇಶಗಳಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಿವೆ. ಭಾರತದಲ್ಲಿ ಇಂತಹ ಕೇಂದ್ರಗಳು ಬಹಳ ಕಡಿಮೆ ಇವೆ.

ಆಮ್ಲಜನಕ ಹೇಗೆ ಉತ್ಪತ್ತಿಯಾಗುತ್ತದೆ ?

ಜಾಗತಿಕ ತಾಪಮಾನ ಏರಿಕೆಗೆ ಇಂಗಾಲದ ಡೈಆಕ್ಸೈಡ್ ಪ್ರಮುಖ ಕಾರಣವಾಗಿದೆ. ಮುಂಚಿನ ಕಾಲದಲ್ಲಿ ಪೃಥ್ವಿಯ ಮೇಲೆ ದಟ್ಟ ಅರಣ್ಯಗಳಿದ್ದವು. ಮನುಷ್ಯನು ಕಥಿತ ಅಭಿವೃದ್ಧಿಯ ಹೆಸರಿನಲ್ಲಿ ಮತ್ತು ಜನಸಂಖ್ಯೆಯ ಹೆಚ್ಚಳದಿಂದ ಈ ಅರಣ್ಯಗಳನ್ನು ನಾಶ ಮಾಡಿ ಅಲ್ಲಿ ಕಾಂಕ್ರಿಟ್ ಅರಣ್ಯಗಳನ್ನು ನಿರ್ಮಿಸಿದ್ದಾನೆ. ಸಸ್ಯಗಳು ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್‌ಅನ್ನು ಹೀರಿಕೊಂಡು ಆಮ್ಲಜನಕವನ್ನು ಹೊರಸೂಸುತ್ತವೆ. ಸದ್ಯ ಜಗತ್ತಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಇಂಗಾಲ ಡೈಆಕ್ಸೈಡ್ ಹೊರಸೂಸಿ ಆಮ್ಲಜನಕವನ್ನು ಹೊರಸೂಸುವ ಅರಣ್ಯಗಳೇ ನಾಶವಾದುದರಿಂದ ಈ ಇಂಗಾಲದ ಡೈಆಕ್ಸೈಡ್‌ನ ವಾತಾವರಣದಲ್ಲಿನ ಪ್ರಮಾಣವು ಹೆಚ್ಚಾಗುತ್ತಲೇ ಇದೆ ಮತ್ತು ಅದರಿಂದ ಉಷ್ಣತೆಯು ನಿರ್ಮಾಣವಾಗುತ್ತಿದೆ. ‘ಮನುಷ್ಯನು ವಿಜ್ಞಾನದ ಮೂಲಕ ಪ್ರಗತಿ ಮಾಡಿಕೊಂಡನು’, ಎಂದು ಹೇಳಲಾಗುತ್ತದೆ; ಆದರೆ ಮನುಷ್ಯನಿಗೆ ಇಂದಿನವರೆಗೆ ಇಂಗಾಲದ ಡೈಆಕ್ಸೈಡ್‌ಅನ್ನು ಹೀರಿಕೊಂಡು ದೊಡ್ಡ ಪ್ರಮಾಣದಲ್ಲಿ ಆಮ್ಲಜನಕವನ್ನು ಹೊರಸೂಸುವ ಯಂತ್ರವನ್ನು ತಯಾರಿಸಲು ಸಾಧ್ಯವಾಗಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ಆಮ್ಲಜನಕ ಪ್ಲಾಂಟ್ ಇದ್ದರೂ ಅದಕ್ಕೆ ಮಿತಿ ಇದೆ ಎಂದು ಗಮನದಲ್ಲಿಡಬೇಕು. ಅಂದರೆ ‘ವಿಜ್ಞಾನದ ಪ್ರಗತಿಯಾದರೆ ವಿಜ್ಞಾನವು ಮನುಷ್ಯನನ್ನು ಮತ್ತು ಈ ಜೀವಸೃಷ್ಟಿಯನ್ನು ವಿನಾಶದ ಕಡೆಗೆ ಕರೆದೊಯ್ಯುತ್ತಿದೆ ?’, ಎಂಬ ವಿಚಾರ ಎಂದಾಗುವುದು ?, ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಸದ್ಯದ ಜಗತ್ತಿನ ಜೀವನಪದ್ಧತಿಯನ್ನು ನೋಡಿದರೆ ಉಷ್ಣತೆಯನ್ನು ನಿರ್ಮಿಸುವ ಸ್ರೋತವನ್ನು ನಾಶ ಮಾಡುವುದು ಅಸಾಧ್ಯವಿದೆ. ಆದ್ದರಿಂದ ಮೊದಲು ಜೀವನಪದ್ಧತಿಯನ್ನು ಪರಿವರ್ತಿಸುವುದು ಆವಶ್ಯಕವಾಗಿದೆ. ಔದ್ಯೋಗಿಕ ಕ್ರಾಂತಿಯ ಮೊದಲು ಸಂಪೂರ್ಣ ಜಗತ್ತಿನಲ್ಲಿ ವಿದ್ಯುತ್ ಇರಲಿಲ್ಲ. ಆದ್ದರಿಂದ ವಿದ್ಯುತ್‌ನಿಂದ ನಡೆಯುವ ಉದ್ಯೋಗಗಳು ಮತ್ತು ಯಂತ್ರಗಳು ಇರಲಿಲ್ಲ. ಆದ್ದರಿಂದ ನಿಸರ್ಗವು ಸ್ವಚ್ಛವಾಗಿತ್ತು. ಕೊರೊನಾದ ೨ ವರ್ಷಗಳಲ್ಲಿ ನಾವು ಇದರಲ್ಲಿನ ಬಹಳಷ್ಟು ವಿಷಯಗಳನ್ನು ನಿಲ್ಲಿಸಿದುದರಿಂದ ಸ್ವಚ್ಛ ನಿಸರ್ಗ ಎಲ್ಲರಿಗೂ ಎಂದರೆ ಜಗತ್ತಿನಾದ್ಯಂತದ ಜನರಿಗೆ ಅನುಭವಿಸಲು ಸಿಕ್ಕಿತ್ತು. ಅದರಿಂದ ಬಹಳಷ್ಟು ವಿಷಯಗಳು ಸ್ಪಷ್ಟವಾಗಿವೆ. ಅಂದರೆ ಎಲ್ಲವೂ ಸರಿಯಾಗಿ ನಡೆದರೆ ಭೂಮಿಯನ್ನು ಉಳಿಸಬಹುದು. ಒಂದು ವೇಳೆ ಹೀಗೆ ಮಾಡುವುದಿದ್ದರೆ, ಜೀವನಶೈಲಿಯನ್ನೇ ಬದಲಾಯಿಸಬೇಕಾಗುತ್ತದೆ ಮತ್ತು ಇದು ವಿಕಾಸವಾಗಿದೆ, ಆದರೆ ಈ ಜೀವನಶೈಲಿಯನ್ನು ಬದಲಾಯಿಸುವುದು ಅಸಾಧ್ಯವಲ್ಲ.

ಜೀವನಶೈಲಿಯನ್ನು ಬದಲಾಯಿಸಲು ಮನುಷ್ಯನಿಗೆ ಬಹಳಷ್ಟು ತ್ಯಾಗವನ್ನು ಮಾಡಬೇಕಾಗುತ್ತದೆ. ಸಾಧನೆಯನ್ನು ಮಾಡುವ ವ್ಯಕ್ತಿಗೆ ತ್ಯಾಗ ಮಾಡಲು ಯಾವುದೇ ಸಮಸ್ಯೆ ಇರುವುದಿಲ್ಲ; ಆದರೆ ಉಪಭೋಗಿಸುವ ಕಡೆಗೆ ಹೆಚ್ಚು ಒಲವು ಇರುವವರಿಗೆ ಇದು ಕಠಿಣವಾಗುತ್ತದೆ. ಜೀವಸೃಷ್ಟಿಯ ರಕ್ಷಣೆಯನ್ನು ಮಾಡಲು ಸಾಧನೆಯಿಂದ ನಿರ್ಮಾಣವಾಗುವ ತ್ಯಾಗವು ಈಗ ಅತ್ಯಂತ ಆವಶ್ಯಕವಾಗಿದೆ. ಇಂತಹ ತ್ಯಾಗಿ ಜೀವಗಳ ರಕ್ಷಣೆಯನ್ನು ನಿಸರ್ಗ ಮಾಡುವುದು ಎಂಬುದರಲ್ಲಿ ಸಂದೇಹವಿಲ್ಲ; ಏಕೆಂದರೆ ಹಿಂದೂ ಧರ್ಮಕ್ಕನುಸಾರ ನಿಸರ್ಗದಲ್ಲಿಯೂ ದೇವರಿದ್ದಾರೆ ! ಹವಾಮಾನ ಬದಲಾವಣೆಯಿಂದ ಆಗುವ ಜೀವಸೃಷ್ಟಿಯ ವಿನಾಶವನ್ನು ತಡೆಗಟ್ಟಲು ಸಮರೋಪಾದಿಯಲ್ಲಿ ಪ್ರಯತ್ನ ನಡೆಯಬೇಕು !