ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಹಿಂದೂ ರಾಷ್ಟ್ರ ಅಧಿವೇಶನ ಸಂಪನ್ನ
ಬೆಂಗಳೂರು – ಇಂದು ಹಲಾಲ್ ಸರ್ಟಿಫಿಕೇಟ್ ಹೆಸರಿನಲ್ಲಿ ಆಹಾರ ಪದ್ಧತಿಗಳಲ್ಲಿ ಜಾತಿಪದ್ಧತಿಯ ಮೊಹರು ಹಾಕಿ ವಿತರಿಸಲಾಗುತ್ತಿದೆ. ಇಂದು ಮತಾಂಧರು ತಮ್ಮ ಮತದವರು ನಿಮ್ಮ ಆಹಾರ ಉತ್ಪನ್ನಗಳನ್ನು ಸೇವಿಸಬೇಕೆಂದರೆ ‘ಹಲಾಲ್ ಸರ್ಟಿಫಿಕೇಟ್’ ಮಾಡಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಅದಕ್ಕಾಗಿ ನಿಮ್ಮ ನೌಕರಿಯಲ್ಲಿ ಶೇ. ೧೦ ರಷ್ಟು ನೌಕರರು ತಮ್ಮ ಮತದವರು ಇರಬೇಕೆಂದು ಷರತ್ತು ವಿಧಿಸುತ್ತಾರೆ. ಇದರಿಂದ ಹಿಂದೂ ಯುವಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಅದರೊಂದಿಗೆ ವರ್ಷಕ್ಕೆ ಲಕ್ಷಗಟ್ಟಲೆ ಹಣವನ್ನೂ ನೀಡಬೇಕಾಗುತ್ತಿದೆ. ನಾವು ಕೊಟ್ಟ ಆ ಹಣವು ಮುಂದೆ ಬಾಂಬ್ ಹಾಕುವಂತಹ ವಿಧ್ವಂಸಕ ಕೃತ್ಯಗಳಿಗೆ ಬಳಸಲಾಗುತ್ತಿದೆ. ರಾಜ್ಯದಲ್ಲಾದ ವಿವಿಧ ದಂಗೆಗಳಲ್ಲಿ ಮತಾಂಧರ ಪರ ನ್ಯಾಯಾಲಯದಲ್ಲಿ ಹೋರಾಡಲು ಇದೇ ಹಣದ ಬಳಕೆಯಾಗುತ್ತಿದೆ. ಅಂದರೆ ನಮ್ಮಿಂದ ಪಡೆದ ಹಣವನ್ನೇ ಇಂದು ನಮ್ಮ ವಿರುದ್ಧ ಬಳಸಲಾಗುತ್ತಿದೆ. ಹಾಗಾಗಿ ಹಲಾಲ್ ಉತ್ಪನ್ನದ ವಿರುದ್ಧ ಹೋರಾಟ ಮಾಡಲು ‘ಹಲಾಲ ವಿರೋಧಿ ಸಮಿತಿಯ ರಚನೆ ಮಾಡಬೇಕು’, ಎಂದು ಉದ್ಯಮಿಗಳು ಹಾಗೂ ಹಿಂದೂಪರ ಹೋರಾಟಗಾರರಾದ ಶ್ರೀ. ಪ್ರಶಾಂತ ಸಂಬರಗಿಯವರು ಕರೆ ನೀಡಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಂಗಳೂರಿನಲ್ಲಿ ಮೇ ೮ ರಂದು ಆಯೋಜಿಸಲಾಗಿದ್ದ ‘ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಮಾತನಾಡುತ್ತಿದ್ದರು. ಅಧಿವೇಶನದಲ್ಲಿ ೨೦೦ ಕ್ಕೂ ಅಧಿಕ ಹಿಂದುತ್ವವಾದಿಗಳು ಉಪಸ್ಥಿತರಿದ್ದರು.
ಈ ವೇಳೆ ಮಾಹಿತಿ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಶ್ರೀ. ವೀರೇಶ, ಪತ್ರಕರ್ತೆ ಸೌ. ಶ್ರೀಲಕ್ಷ್ಮಿ ರಾಜಕುಮಾರ, ವಿಶ್ವ ಸನಾತನ ಪರಿಷತ್ತಿನ ಅಧ್ಯಕ್ಷರಾದ ಎಸ್. ಭಾಸ್ಕರನ್, ಬೆಂಗಳೂರು ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಎಂ.ಪಿ ಅಮೃತೇಶ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಮತ್ತಿತರರು ಮಾತನಾಡಿದರು. ವಂದೇ ಮಾತರಮ್ ಗೀತೆಯೊಂದಿಗೆ ಅಧಿವೇಶನದ ಸಮಾರೋಪ ಮಾಡಲಾಯಿತು. ೧೦ ಕ್ಕೂ ಹೆಚ್ಚು ವಾಹಿನಿಗಳು ಈ ಕಾರ್ಯಕ್ರಮದ ನೇರಪ್ರಸಾರ ಮಾಡಿದವು