ಬರ್ಲಿನ (ಜರ್ಮನಿ) – ಜಾಗತಿಕ ಮಟ್ಟದಲ್ಲಿ ಆಹಾರ ಬೆಲೆ ಏರಿಕೆಗೆ ರಷ್ಯಾದ ಯುದ್ಧ ನೀತಿಯೇ ಕಾರಣ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೆರಬಾಕ ಹೇಳಿದ್ದಾರೆ. ಯುಕ್ರೇನ ವಿರುದ್ಧ ರಷ್ಯಾ ಯುದ್ಧ ಕಾರ್ಯಾಚರಣೆಯನ್ನು ಪಿತೂರಿಯಿಂದ ‘ಧಾನ್ಯ ಯುದ್ಧ’ವಾಗಿ ಪರಿವರ್ತಿಸಲಾಗಿದೆ. ಇದು ಅನೇಕ ದೇಶಗಳ ಮೇಲೆ ವಿಶೇಷವಾಗಿ ಅಫ್ರಿಕನ ದೇಶಗಳ ಮೇಲೆ ಪರಿಣಾಮ ಬೀರುತ್ತಲಿದೆ. ಅದ್ದರಿಂದ ಮಾಹಾಭಯಂಲರ ಜಾಗತಿಕ ಕ್ಷಾಮ ಉಂಟಾಗುವ ಸಾಧ್ಯತೆಯ ಬಗ್ಗೆ ಬೆರಬಾಕ ಎಚ್ಚರಿಕೆಯನ್ನು ನೀಡಿರುತ್ತಾರೆ.
G7 warns of global hunger crisis unless Russia lifts Ukraine blockade https://t.co/R0p0AlHFE2
— FT Europe (@ftbrussels) May 14, 2022
ಆದಾಗ್ಯೂ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ರಷ್ಯಾ ಆರೋಪಗಳನ್ನು ನಿರಾಕರಿಸಿತು. ಬೆಲೆಯೇರಿಕೆಯ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾ ಮೇಲೆ ಹೇರಲಾಗಿರುವ ವಿವಿಧ ನಿರ್ಬಂಧಗಳೇ ಕಾರಣ ಎಂದು ಹೇಳಿದೆ. ಕಳೆದ ವಾರ ಅಮೇರಿಕೆಯು ‘ಯುಕ್ರೇನನಿಂದ ವಿಶ್ವದಾದ್ಯಂತ ಪ್ರತಿ ತಿಂಗಳಿಗೆ ೫೦ ಲಕ್ಷ ಟನ ಧಾನ್ಯವನ್ನು ರಫ್ತು ಮಾಡಲಾಗುತ್ತಿತ್ತು. ಆದರೆ ರಷ್ಯಾ ಯುಕ್ರೇನಿನ ಬಂದರುಗಳನ್ನು ಮುಚ್ಚಿರುವುದರಿಂದ ಎಲ್ಲೆಡೆ ಆಹಾರದ ಕೊರತೆ ಸೃಷ್ಟಿಯಾಗಿದೆ. ಇದರಿಂದಾಗಿ ಅನೇಕ ದೇಶಗಳಲ್ಲಿ ಬರಗಾಲದ ಪರಿಸ್ಥಿತಿ ಬಂದಿದೆ’ ಎಂದು ಆರೋಪಿಸಿದೆ.