ಅಂತ್ಯವಿಲ್ಲದ ಮತಾಂತರದ ವಿವಿಧ ಕುಯುಕ್ತಿಗಳು !

ಮತಾಂಧ ಮುಸಲ್ಮಾನರು ಒಂದಲ್ಲೊಂದು ನೆಪದಲ್ಲಿ ಹಿಂದೂಗಳ ಮೇಲೆ ಹಲ್ಲೆ ಮಾಡುತ್ತಿರುವಂತೆಯೇ ಕ್ರೈಸ್ತರು ಕೂಡ ಹಿಂದೂಗಳನ್ನು ಕ್ರೈಸ್ತರನ್ನಾಗಿಸಲು ಸತತವಾಗಿ ಅನೇಕ ಕುಯುಕ್ತಿಗಳನ್ನು ಹುಡುಕುತ್ತಿರುತ್ತಾರೆ. ಅದಕ್ಕಾಗಿ ಅವರು ಕೆಲವೊಮ್ಮೆ ಯೇಸುವನ್ನು ಧ್ಯಾನಮುದ್ರೆಯಲ್ಲಿ ತೋರಿಸುತ್ತಾರೆ, ಕೆಲವೊಮ್ಮೆ ಪಾದ್ರಿಗಳಿಗೆ ಕೇಸರಿ ವಸ್ತ್ರ ಧಾರಣೆ ಮಾಡಲು ಹೇಳುತ್ತಾರೆ, ಕೆಲವೊಮ್ಮೆ ಸಂಸ್ಕೃತ ಶ್ಲೋಕವನ್ನು ಓದುವ ನಾಟಕ ಮಾಡುತ್ತಾರೆ ಮತ್ತು ಕೆಲವೊಮ್ಮೆ ಯೇಸುವಿನ ಮಹಾತ್ಮೆಯನ್ನು ಹೇಳುವ ವಿವಿಧ ಪುಸ್ತಕಗಳನ್ನು ಹಂಚುತ್ತಾರೆ. ಕೆಲವೊಮ್ಮೆ ಪ್ರಾರ್ಥನೆಯಿಂದ ರೋಗಿಗಳನ್ನು ಗುಣಪಡಿಸುವ ಢೋಂಗಿತನವನ್ನು ರಚಿಸುತ್ತಾರೆ, ಕೆಲವೊಮ್ಮೆ ಎಣ್ಣೆ ಅಥವಾ ನೀರನ್ನು ಕೊಟ್ಟು ಹಿಂದೂಗಳನ್ನು ಮೋಸಗೊಳಿಸುತ್ತಾರೆ. ಇದೇ ರೀತಿಯಲ್ಲಿ ಕಾನ್ವೆಂಟ್ ಶಾಲೆಗಳಿಂದ ಹೊರಬರುವ ಲಕ್ಷಗಟ್ಟಲೆ ಹಿಂದೂ ವಿದ್ಯಾರ್ಥಿಗಳನ್ನು ಕ್ರಿಸ್ತೀಕರಣ ಮಾಡಿ ಅವರನ್ನು ‘ಜನ್ಮಹಿಂದೂ’ಗಳನ್ನಾಗಿ ಮಾಡುವುದರಲ್ಲಿ ಕ್ರೈಸ್ತ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿವೆ. ಪೋಪ್ ಫ್ರಾನ್ಸಿಸ್ ಇವರ ‘ಸಂಪೂರ್ಣ ಭಾರತವನ್ನು ಕ್ರೈಸ್ತಮಯಗೊಳಿಸುವ’ ಕಲ್ಪನೆಗೆ ಅವರು ಸಾಕಷ್ಟು ಒತ್ತು ಕೊಟ್ಟಿದ್ದಾರೆ. ಕಳೆದ ಕೆಲವು ದಶಕಗಳಿಂದ ಕಾನ್ವೆಂಟ್ ಶಾಲೆಗಳಿಂದ ಹಿಂದೂ ವಿದ್ಯಾರ್ಥಿಗಳ ಮೇಲೆ ವಿವಿಧ ಮಾಧ್ಯಮಗಳಿಂದ ಮಾಡಲ್ಪಡುವ ಅನ್ಯಾಯಗಳ ವಿರುದ್ಧ ವಿವಿಧ ಹಿಂದುತ್ವನಿಷ್ಠರು ಮತ್ತು ಅವರ ಸಂಘಟನೆಗಳು ಧ್ವನಿಯೆತ್ತಲು ಆರಂಭಿಸಿದ್ದಾರೆ; ಆದರೂ ಕ್ರೈಸ್ತ ನನ್‌ಗಳಿಂದ ಮತ್ತು ಶಿಕ್ಷಕರಿಂದ ಶಾಲೆಗಳ ಮೂಲಕ ನಡೆಯುವ ಮತಾಂತರದ ಕಾರ್ಯವು ಸ್ವಲ್ಪವೂ ನಿಲ್ಲಲು ತಯಾರಿಲ್ಲ. ಹಿಂದೂ ವಿದ್ಯಾರ್ಥಿನಿಯರು ಮದರಂಗಿ ಹಚ್ಚಿದರೆ ಅಥವಾ ಬಳೆಗಳನ್ನು ತೊಟ್ಟರೆ ಹಾಗೂ ಹಿಂದೂ ವಿದ್ಯಾರ್ಥಿಗಳು ತಿಲಕವನ್ನು ಹಚ್ಚಿದರೆ ಶಿಕ್ಷೆ ನೀಡುವುದು ಅಥವಾ ಹೊಡೆಯುವುದು, ಕ್ರೈಸ್ತ ಪ್ರಾರ್ಥನೆಯನ್ನು ಕಡ್ಡಾಯಗೊಳಿಸುವುದು ಇತ್ಯಾದಿ ದಬ್ಬಾಳಿಕೆ ದಿನ ನಿತ್ಯ ನಡೆಯುತ್ತಿರುವಾಗ ಬೆಂಗಳೂರಿನ ‘ಕ್ಲಾರೆನ್ಸ್ ಹೈಸ್ಕೂಲ್’ ಶಾಲೆಯು ಬೈಬಲ್ ಕಡ್ಡಾಯಗೊಳಿಸುವ ಆದೇಶ ನೀಡಿದೆ.

ಕ್ರೈಸ್ತರಿಗೆ ಕಾನೂನಿನ ಭಯವಿಲ್ಲ !

ಕರ್ನಾಟಕದಲ್ಲಿ ಮತಾಂತರವಿರೋಧಿ ಕಾನೂನನ್ನು ತರುವ ಸಿದ್ಧತೆಯಲ್ಲಿರುವ ಭಾಜಪ ಆಡಳಿತವಿರುವ ಪ್ರದೇಶಗಳಲ್ಲಿ ಹಾಗೂ ಹಿಂದುತ್ವನಿಷ್ಠರು ಸಕ್ರಿಯವಾಗಿ ಕಾರ್ಯನಿರತರಾಗಿರುವಲ್ಲಿ ಕ್ರೈಸ್ತರಿಂದ ವಿದ್ಯಾರ್ಥಿಗಳಿಗೆ ‘ಬೈಬಲ್’ ತರಬೇಕೆಂದು ಬಹಿರಂಗವಾಗಿ ಒತ್ತಡ ಹೇರಲಾಗುತ್ತದೆಯೊ, ಅಂತಹದ್ದರಲ್ಲಿ ಭಾರತದಾದ್ಯಂತ ಕ್ರೈಸ್ತರು ಎಷ್ಟು ನಿರ್ಭೀತರಾಗಿ ತೆರೆಮರೆಯಲ್ಲಿ ಅಥವಾ ಬಹಿರಂಗವಾಗಿ ಮತಾಂತರಿಸಲು ಪ್ರಯತ್ನಿಸುತ್ತಿರಬಹುದು, ಎಂಬುದರ ಕಲ್ಪನೆ ಬರುತ್ತದೆ. ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನನ್ನು ತರುವ ಚಟುವಟಿಕೆ ಆರಂಭವಾಗಿದೆ. ಕ್ರೈಸ್ತರು ಹೀಗೆ ಕಣ್ಣುಮುಚ್ಚಾಲೆ ಆಟವಾಡುತ್ತಾ ಹಿಂದೂಗಳ ಮನಃಪರಿವರ್ತನೆ ಮಾಡಿ ಮತಾಂತರಿಸುವ ಪ್ರಯತ್ನವು ಕಾನೂನಿನ ತಾಂತ್ರಿಕ ವ್ಯಾಪ್ತಿಯಲ್ಲಿ ಹೇಗೆ ಬರುತ್ತದೆ, ಎಂಬುದನ್ನು ನೋಡಬೇಕಾಗುತ್ತದೆ. ಕ್ರೈಸ್ತರು ಇಂತಹ ಮತಾಂತರದ ಪ್ರಯತ್ನವನ್ನು ಹೀಗೆಯೆ ಮುಂದುವರಿಸಿದರೆ ಆ ಪ್ರಯತ್ನಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಅಳವಡಿಸಬಹುದು, ಎಂಬುದು ಸರಕಾರ ಮತ್ತು ಆಡಳಿತದವರಿಗೆ ಸವಾಲಾಗಬಹುದು; ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕ್ರೈಸ್ತರಿಗೆ ಮತಾಂತರ ನಿಷೇಧ ಕಾನೂನು ಬರುವುದರಲ್ಲಿದ್ದರೂ ಯಾವುದೇ ಭಯವೆನಿಸುವುದಿಲ್ಲ. ಕ್ರೈಸ್ತರು ನಿರಂತರ ಮತಾಂತರ ಮಾಡುತ್ತಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗದಿರುವುದರಿಂದಲೆ ಅವರಿಂದ ಮತಾಂತರ ಮಾಡಲು ವಿವಿಧ ಪ್ರಕಾರದ ಕುಯುಕ್ತಿಗಳನ್ನು ಕಂಡುಹಿಡಿಯುವ ಪ್ರಯತ್ನ ಮುಂದುವರಿದಿದೆ. ಕರ್ನಾಟಕದ ಈ ಉದಾಹರಣೆಯಿಂದ ದೇಶದಾದ್ಯಂತ ಈ ಕಾನೂನನ್ನು ಮಾಡಿ ಅದನ್ನು ಎಷ್ಟು ಕಠಿಣವಾಗಿ ಅನುಷ್ಠಾನಗೊಳಿಸಬೇಕು, ಎನ್ನುವುದು ಅರಿವಾಗುತ್ತದೆ.

ತಮಿಳುನಾಡಿನಲ್ಲಿ ಕ್ರೈಸ್ತರಿಂದ ಮತಾಂತರದ ಪ್ರಯತ್ನ !

ಮತಾಂತರವಾಗಿರುವ ಹಿಂದೂಗಳು ತಮ್ಮ ಹಿಂದೂ ಹೆಸರನ್ನು ಬದಲಾಯಿಸದೆ ರಾಜಾರೋಷವಾಗಿ ಕ್ರೈಸ್ತಧರ್ಮವನ್ನು ಪ್ರಸಾರ ಮಾಡುತ್ತಿದ್ದಾರೆ. ಹಿಂದೂ ಹೆಸರನ್ನು ನೋಡಿ ಹಿಂದೂಗಳು ಮೋಸಹೋಗುತ್ತಾರೆ ಹಾಗೂ ಅವರ ಪ್ರಸಾರತಂತ್ರಕ್ಕೆ ಬಲಿಯಾಗುತ್ತಾರೆ. ತಿರುಪತಿ ದೇವಸ್ಥಾನದಲ್ಲಿ ಕ್ರೈಸ್ತರು ವಿವಿಧ ಮಾಧ್ಯಮಗಳಿಂದ ಎಷ್ಟು ಪ್ರಮಾಣದಲ್ಲಿ ಆಕ್ರಮಣ ಮಾಡಿದ್ದಾರೆಂದರೆ, ನಾಳೆ ‘ತಿರುಪತಿ ಬಾಲಾಜಿ ಯೇಸುವಿನ ಅವತಾರ’ವೆಂದು ಹೇಳಲು ಕೂಡ ಅವರು ಹಿಂಜರಿಯಲಿಕ್ಕಿಲ್ಲ. ತಿರುಮಲ ತಿರುಪತಿ ದೇವಸ್ಥಾನದ ನ್ಯಾಸದಲ್ಲಿ ಅನೇಕ ಕ್ರೈಸ್ತರು ಸೇರಿಕೊಂಡಿದ್ದಾರೆ. ೨೦೧೨ ಮತ್ತು ೨೦೧೮ ರಲ್ಲಿ ಮತಾಂತರ ಮಾಡುವ ಸದಸ್ಯರನ್ನು ಸೆರೆಮನೆಗೆ ಅಟ್ಟಲಾಗಿತ್ತು. ಆದರೂ ಸದ್ಯ ತಿರುಪತಿ ದೇವಸ್ಥಾನದ ನ್ಯಾಸದಲ್ಲಿ ಇತರ ಪಂಥೀಯರನ್ನು ತೆಗೆದುಕೊಳ್ಳಬಾರದು ಎನ್ನುವ ಕಾನೂನನ್ನು ಮುರಿದು ಅದರ ‘ಐಸೀ ಕಿ ತೈಸೀ’ ಮಾಡಲಾಗಿದೆ. ಅಲ್ಲಿನ ಬೆಟ್ಟದ ಮೇಲೆ ದೊಡ್ಡ ಪ್ರಮಾಣದಲ್ಲಿ ಚರ್ಚ್‌ಗಳನ್ನು ನಿರ್ಮಿಸಲು ಭರದಿಂದ ಪ್ರಯತ್ನ ನಡೆದಿದೆ. ಕ್ರೈಸ್ತ ದೇಶಗಳಲ್ಲಿ ಅಭಿಮಾನದಿಂದ ಹಿಂದೂ ಧರ್ಮದ ಡಂಗುರ ಸಾರಿದ ಸ್ವಾಮಿ ವಿವೇಕಾನಂದರ ಸ್ಮಾರಕವಿರುವ ಕನ್ಯಾಕುಮಾರಿಯಲ್ಲಿ ಶೇ. ೪೬ ಕ್ಕಿಂತಲೂ ಹೆಚ್ಚು ಕ್ರೈಸ್ತರಿದ್ದಾರೆ ಹಾಗೂ ಜಿಲ್ಲೆಯಲ್ಲಿ ೪೦೦ ಚರ್ಚ್‌ಗಳಿವೆ. ತಮಿಳುನಾಡುವಿನ ಶಾಲೆಗಳಲ್ಲಿ ‘ಯೇಸುವಿನ ಪೂಜೆ ಮಾಡಿದರೆ ಹೆಚ್ಚು ಅಂಕಗಳನ್ನು ಕೊಡಲಾಗುತ್ತದೆ’, ಎಂದು ವಿದ್ಯಾರ್ಥಿಗಳನ್ನು ಪುಸಲಾಯಿಸುತ್ತಿರುವ ವಾರ್ತೆಯನ್ನು ಒಂದು ವಾರ್ತಾವಾಹಿನಿಯು ಬಹಿರಂಗಗೊಳಿಸಿತು.

ಹಿಂದೂಗಳ ಮುಂದಿನ ಪೀಳಿಗೆಯನ್ನು ಕ್ರೈಸ್ತರನ್ನಾಗಿಸುವ ಷಡ್ಯಂತ್ರ !

ಕರ್ನಾಟಕವಿರಲಿ ಅಥವಾ ತಮಿಳುನಾಡಿರಲಿ ಇಡೀ ದೇಶದಾದ್ಯಂತ ವಿದ್ಯಾರ್ಥಿಗಳನ್ನು ಗುರಿಪಡಿಸಿ ಅವರ ಮೇಲೆ ಕ್ರೈಸ್ತ ಪಂಥದ ‘(ಕು)ಸಂಸ್ಕಾರ’ವನ್ನು ಮಾಡಲು ಕ್ರೈಸ್ತರಿಗೆ ಸುಲಭ ಹಾಗೂ ಪರಿಣಾಮಕಾರಿಯೆಂದು ಅನಿಸುತ್ತಿರಬಹುದು, ಎಂದು ಅರಿವಾಗುತ್ತದೆ. ಕರ್ನಾಟಕದಲ್ಲಿ ಈಗ ಪಾಲಕರನ್ನು ಮತ್ತು ವಿದ್ಯಾರ್ಥಿಗಳನ್ನು ದಾರಿತಪ್ಪಿಸಿ ಅವರಿಗೆ ಕ್ರೈಸ್ತರ ಬೈಬಲನ್ನು ಓದಲು ಬಾಧ್ಯಗೊಳಿಸಿದರೆ ಕ್ರಮೇಣ ಆ ವಿದ್ಯಾರ್ಥಿಗಳು ‘ಬೈಬಲ್‌ನ ಮೇಲೆಯೆ ಶ್ರದ್ಧೆಯನ್ನಿಡುವ ಕ್ರೈಸ್ತರಾಗುವರು’, ಎಂದು ಹೇಳಲು ಯಾವುದೇ ಜ್ಯೋತಿಷ್ಯರ ಅವಶ್ಯಕತೆಯಿಲ್ಲ. ಇಂದು ಕೂಡ ದೇಶದಲ್ಲಿ ಕಾನ್ವೆಂಟ್‌ನಿಂದ ಹೊರಬಂದಿರುವ ಪೀಳಿಗೆಗಳಲ್ಲಿ ಹೆಚ್ಚಿನ ಮಕ್ಕಳು ಪಾಶ್ಚಾತ್ಯಕರಣವಾಗಿರುವುದು ನೋಡಲು ಸಿಗುತ್ತದೆ. ಇದೇ ಪೀಳಿಗೆ ತಥಾಕಥಿತ ‘ಸರ್ವಧರ್ಮಸಮಭಾವಿ’ಗಳೆಂದು ಸಮಾಜದಲ್ಲಿ ಅಲೆದಾಡುತ್ತಿದ್ದಾರೆ ಹಾಗೂ ನಂತರ ಪರೋಕ್ಷವಾಗಿ ಹಿಂದೂವಿರೋಧಿ ಹಾಗೂ ಕೆಲವೊಮ್ಮೆ ರಾಷ್ಟ್ರವಿರೋಧಿ ಕೂಡ ಆಗುತ್ತಾರೆ. ಇದು ಹಿಂದೂಗಳ ಮುಂದಿನ ಪೀಳಿಗೆಯನ್ನು ಪಾಶ್ಚಾತ್ಯಕರಣಗೊಳಿಸುವ ಅಂತರರಾಷ್ಟ್ರೀಯ ಷಡ್ಯಂತ್ರವಾಗಿದೆ.

ಹಿಂದೂಗಳೆ, ಧರ್ಮಾಚರಣೆಯ ಮಹತ್ವವನ್ನು ಗಮನದಲ್ಲಿಡಿ !

ಕಳೆದ ಶತಮಾನದಿಂದ ಹಿಂದೂಗಳ ಉಡುಗೆತೊಡುಗೆ, ಕೇಶವಿನ್ಯಾಸ, ತಿಂಡಿ-ತಿನಸು, ಆಹಾರ-ವಿಹಾರದ ಪದ್ಧತಿ ಇತ್ಯಾದಿ ಕ್ರೈಸ್ತ ಸಂಸ್ಕೃತಿಗನುಸಾರವೆ ಆಗುತ್ತಿದ್ದು ಈಗ ಅದು ಮಿತಿಮೀರಿದೆ. ಅನೇಕ ಹಿಂದೂ ಮಹಿಳೆಯರು ಕುಂಕುಮ ಹಚ್ಚುವುದು, ಮಾಂಗಲ್ಯ ಧರಿಸುವುದು ಹಾಗೂ ಪವಿತ್ರ ವಿಷಯವನ್ನು ಬಿಟ್ಟುಬಿಟ್ಟಿದ್ದಾರೆ ಅಥವಾ ಪ್ರಾಸಂಗಿಕಗೊಳಿಸಿದ್ದಾರೆ. ಹಿಂದೂಗಳು ತಮ್ಮ ರೀತಿ ನೀತಿಗಳ ಪಾರಂಪರಿಕ ಧರ್ಮಾಧಿಷ್ಠಿತ ರೂಪವನ್ನು ಬದಲಾಯಿಸಿದ್ದಾರೆ. ಕೆಲವರು ಚಮಚವಿಲ್ಲದೆ ಭೋಜನದ ಬಗ್ಗೆ ಕಲ್ಪನೆಯನ್ನೂ ಮಾಡುವುದಿಲ್ಲ ಮತ್ತು ಕೆಲವರು ಮದ್ಯದ ಪೆಗ್ ಒಳಗೆ ಸೇರದೆ ನಿದ್ರಾಧೀನರಾಗುವುದಿಲ್ಲ. ಆಂಗ್ಲರು ಕ್ರೈಸ್ತರ ರೂಢಿಪರಂಪರೆಗಳನ್ನು ನಮಗೆ ಕೊಟ್ಟು ಹೋದರು ಹಾಗೂ ನಾವು ಅದಕ್ಕೆ ಅಧೀನರಾಗಿರುವುದರಿಂದ ಅವರಿಗೆ ಮತಾಂತರಗೊಳಿಸಲು ಸುಲಭವಾಗುತ್ತಿದೆ. ಹಿಂದೂಗಳು ಸ್ವಧರ್ಮದ ಮಹತ್ವವನ್ನು ತಿಳಿದು ಧರ್ಮಾಚರಣೆ ಮಾಡಿದರೆ ಮಾತ್ರ ಅವರ ಕ್ರೈಸ್ತೀಕರಣವನ್ನು ನಿಲ್ಲಿಸಬಹುದು, ಎಂಬುದನ್ನು ಹಿಂದುತ್ವನಿಷ್ಠರು ಗಮನದಲ್ಲಿಡಬೇಕು.