ಸನಾತನದ ಆಶ್ರಮದಲ್ಲಿದ್ದು ಪೂರ್ಣವೇಳೆ ಸಾಧನೆ ಮಾಡುವ ಬಗ್ಗೆ ಪೂ. ಭಾವೂ (ಸದಾಶಿವ) ಪರಬ (೭೯ ವರ್ಷ) ಇವರ ಬಗ್ಗೆ ಸಮಾಜದವರು ಕೇಳಿದ ಪ್ರಶ್ನೆ ಮತ್ತು ಪೂ. ಭಾವೂ ನೀಡಿದ ಉತ್ತರಗಳು

ಪೂ. ಭಾವೂ (ಸದಾಶಿವ) ಪರಬ

‘ನಾನು ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುತ್ತೇನೆ. ಸದ್ಯ ನಾನು ದೇವದ (ಪನವೇಲ) ದಲ್ಲಿನ ಸನಾತನದ ಆಶ್ರಮದಲ್ಲಿದ್ದು ಸಾಧನೆ ಮತ್ತು ಸೇವೆಯನ್ನು ಮಾಡುತ್ತೇನೆ. (ಸದ್ಯ ಪೂ. ಭಾವೂ (ಸದಾಶಿವ) ಪರಬ ಇವರು ಮಿರಜ ಆಶ್ರಮದಲ್ಲಿರುತ್ತಾರೆ.) ನನ್ನ ಮಾನಸ ಸಹೋದರಿ ಸೌ. ಮನಿಷಾ ಕೃಷ್ಣ ಮಣೇರಿಕರ ಇವಳಲ್ಲಿ (ಅವಳ ಮದುವೆಯ ಮೊದಲಿನ ಹೆಸರು ಪ್ರಮೀಳಾ ಮಾಧವ ಕುಡಕೆ ಹೀಗಿತ್ತು.) ಸಮಾಜದಲ್ಲಿನ ಜನರು ನನ್ನ ಬಗ್ಗೆ ಅನೇಕ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ. ಶ್ರೀ ಗುರುದೇವರಲ್ಲಿ ಅನನ್ಯಭಾವದಿಂದ ಪ್ರಾರ್ಥನೆಯನ್ನು ಮಾಡಿ ನಾನು ಇಲ್ಲಿ ಸಮಾಜದಲ್ಲಿನ ಜನರು ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ಪ್ರಯತ್ನಿಸುತ್ತಿದ್ದೇನೆ. ‘ಹೇ ಗುರುದೇವರೇ, ‘ನನ್ನ ಮಾಧ್ಯಮದಿಂದ ನೀವೇ ಸರಿಯಾದ ಮತ್ತು ಅಪೇಕ್ಷಿತವಿರುವ ಉತ್ತರಗಳನ್ನು ಕೊಡಿರಿ, ಇದೇ ತಮ್ಮ ಸುಕೋಮಲ ಚರಣಗಳಲ್ಲಿ ಪ್ರಾರ್ಥನೆ’.

ಪ್ರಶ್ನೆ : ಶ್ರೀ. ಭಾವೂ (ಸದಾಶಿವ) ಪರಬ ಇವರು ಸನಾತನದ ಕಡೆಗೆ ಹೊರಳಲು ಕಾರಣವೇನು ?

೧ ಅ. ಉತ್ತರ : ೮೪ ಲಕ್ಷ ಯೋನಿಗಳನ್ನು ದಾಟಿ ಬಂದ (ಅನುಭವಿಸಿ) ನಂತರ ದೇವರು ಮನುಷ್ಯಜನ್ಮವನ್ನು ನೀಡಿದ್ದಾನೆ. ಈ ಜನ್ಮವನ್ನು ಸಾರ್ಥಕಗೊಳಿಸಲು, ಅಂದರೆ ಜನ್ಮ-ಮೃತ್ಯುವಿನ ಚಕ್ರಗಳಿಂದ ಮುಕ್ತನಾಗಲು ನನಗೆ ಸನಾತನ ಸಂಸ್ಥೆಯಲ್ಲಿ ಹೇಳಿದ ಗುರುಕೃಪಾಯೋಗಾನುಸಾರ ಸಾಧನೆಯು ಶೇ. ೧೦೦ ರಷ್ಟು ಒಪ್ಪಿಗೆಯಾಯಿತು; ಆದ್ದರಿಂದ ನಾನು ಸನಾತನ ಸಂಸ್ಥೆಯೆಡೆಗೆ ಹೊರಳಿದೆನು ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ ಇವರ ಮಾರ್ಗದರ್ಶನದಲ್ಲಿ ನನ್ನ ಸಾಧನೆ ನಡೆಯುತ್ತಿದೆ.

ಪ್ರಶ್ನೆ : ಶ್ರೀ. ಭಾವೂ (ಸದಾಶಿವ) ಪರಬ ಇವರು ಮನೆಮಠವನ್ನು ಬಿಟ್ಟು ಒಬ್ಬರೇ ಆಶ್ರಮಕ್ಕೆ ಏಕೆ ಹೋದರು ?

೨ ಅ. ಉತ್ತರ : ನಾನು ಆಶ್ರಮದಲ್ಲಿದ್ದು ಸಾಧನೆ ಮಾಡುವುದಕ್ಕಾಗಿ ನನ್ನ ಕುಟುಂಬದವರೆಲ್ಲರಿಂದ ಪೂರ್ಣ ಅನುಮತಿಯನ್ನು ಪಡೆದು ಆಶ್ರಮಕ್ಕೆ ಬಂದಿದ್ದೇನೆ. ನನಗೊಬ್ಬನಿಗೇ ದೇವರು ಸಾಧನೆ ಮಾಡಲಿಕ್ಕಾಗಿ ಸನಾತನದ ಆಶ್ರಮಕ್ಕೆ ಕರೆದೊಯ್ದರು. ‘ಗುರುಗಳು ನನ್ನಿಂದ ಅವರಿಗೆ ಅಪೇಕ್ಷಿತವಿದ್ದಂತೆ ಸಾಧನೆಯನ್ನು ಮಾಡಿಸಿಕೊಂಡು ನನಗೆ ಪೂರ್ಣತ್ವಕ್ಕೆ ಒಯ್ಯುವರಿದ್ದಾರೆ, ಎಂಬುದು ನನಗೆ ಶೇ. ೧೦೦ ರಷ್ಟು ಖಾತ್ರಿಯಿದೆ ಮತ್ತು ನನ್ನ ಮೇಲೆ ಹಾಗೆ ಕೃಪೆಯೂ ಆಗಿದೆ.

ಪ್ರಶ್ನೆ : ವಾನಪ್ರಸ್ಥಾಶ್ರಮಕ್ಕೆ ಹೋಗುವಾಗ ಅವರು ಪತ್ನಿಯನ್ನು ಏಕೆ ತಮ್ಮ ಜೊತೆಗೆ ಕರೆದುಕೊಂಡು ಹೋಗಲಿಲ್ಲ ?

೩ ಅ. ಉತ್ತರ : ‘ನಾನು ವಾನಪ್ರಸ್ಥಾಶ್ರಮಕ್ಕಾಗಿ ಸನಾತನ ಸಂಸ್ಥೆಗೆ ಹೋದದ್ದಲ್ಲ. ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಪೂರ್ಣವೇಳೆ ಸಾಧನೆಯನ್ನು ಮಾಡುವ ಸಾಧಕನು ಸನ್ಯಾಸಾಶ್ರಮದಲ್ಲಿರುತ್ತಾನೆ. ಅವರಿಗೆ ವಾನಪ್ರಸ್ಥಾಶ್ರಮದ ಅವಶ್ಯಕತೆ ಇರುವುದಿಲ್ಲ. ನನ್ನ ಪತ್ನಿಯ ಸಾಧನೆ ಅಷ್ಟೊಂದು ಇಲ್ಲದ ಕಾರಣ ಅವಳನ್ನು ನನ್ನ ಜೊತೆ ಆಶ್ರಮಕ್ಕೆ ಕರೆದೊಯ್ಯಲು ಆಗಲಿಲ್ಲ. ‘ಎಷ್ಟು ವ್ಯಕ್ತಿಗಳೋ, ಅಷ್ಟು ಪ್ರಕೃತಿಗಳು ಅಷ್ಟೇ ಸಾಧನಾಮಾರ್ಗಗಳು’, ಎಂಬುದು ಸನಾತನದ ಬೊಧನೆಯಾಗಿದೆ. ಅದರಂತೆ ಮುಂದೆ ಅವಳ ಸಾಧನೆಯಾದರೆ, ಗುರುಗಳೇ ಅವಳನ್ನು ಆಶ್ರಮಕ್ಕೆ ಕರೆತರುವರು. ಸನಾತನ ಸಂಸ್ಥೆಯಲ್ಲಿ ಇಂತಹ ಅನೇಕ ಉದಾಹರಣೆಗಳಿವೆ’.

ಪ್ರಶ್ನೆ : ಪತ್ನಿಯ ಇಚ್ಛೆಯ ವಿರುದ್ಧ ಹೀಗೆ ಆಶ್ರಮಕ್ಕೆ ಹೋಗುವುದು ಸರಿಯಿದೆಯೇ ?

೪ ಅ. ಉತ್ತರ : ಪತ್ನಿಯು ಸಾಧನೆ ಮಾಡಲಿಕ್ಕೆ ಆಶ್ರಮಕ್ಕೆ ಹೋಗುವ ಇಚ್ಛೆಯನ್ನೇ ವ್ಯಕ್ತಪಡಿಸಲಿಲ್ಲ, ಹಾಗೆಯೇ ಸಾಧನೆಯನ್ನು ಮಾಡಲು ಬೇಕಾದಂತಹ ತಳಮಳ ಮತ್ತು ಜಿಗುಟುತನ ಅವಳಲ್ಲಿಲ್ಲ. ಅವಳು ಸಂಸಾರದಲ್ಲಿ ಸಿಲುಕಿದ್ದಾಳೆ; ಆದುದರಿಂದ ಅವಳನ್ನು ಆಶ್ರಮಕ್ಕೆ ಕರೆದುಕೊಂಡು ಹೋಗಲು ಆಗಲಿಲ್ಲ. ಇದಕ್ಕಾಗಿ ಸಂತ ತುಕಾರಾಮ ಮಹಾರಾಜರ ಪತ್ನಿಯ ಉದಾಹರಣೆಯನ್ನು ಕೊಡಬಹುದು. ಸಾಧನೆಗಾಗಿ ಆಶ್ರಮದಲ್ಲಿರುವಾಗ ಸ್ವೇಚ್ಛೆಗೆ ಮಹತ್ವವನ್ನು ನೀಡದೇ ಪರೇಚ್ಛೆ ಮತ್ತು ಈಶ್ವರೇಚ್ಛೆ ಇವುಗಳಿಗೆ ಮಹತ್ವವನ್ನು ಕೊಡಲಾಗುತ್ತದೆ. ಇದು ಎಲ್ಲರಿಗೂ ಹೊಂದುವುದು ಕಠಿಣವಿರುತ್ತದೆ.

ಪ್ರಶ್ನೆ : ಆಧುನಿಕ ಜಗತ್ತಿನಲ್ಲಿ ವೃದ್ಧಾಶ್ರಮವು ನಿರ್ಮಾಣವಾಗುತ್ತಿದೆ. ಇದು ಎಷ್ಟು ಯೋಗ್ಯವಾಗಿದೆ ?

೫ ಅ. ಉತ್ತರ : ಸನಾತನ ಸಂಸ್ಥೆಯಲ್ಲಿ ವೃದ್ಧಾಶ್ರಮ ಎಂದೇನಿಲ್ಲ. ಇಂದಿನ ಮಕ್ಕಳಿಗೆ ವೃದ್ಧರಾಗಿರುವ ತಮ್ಮ ಕುಟುಂಬದವರನ್ನು ಮನೆಯಲ್ಲಿ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲವೋ, ಆ ಮಕ್ಕಳು ಹಣ ಕೊಟ್ಟು ಅವರನ್ನು ವೃದ್ಧಾಶ್ರಮದಲ್ಲಿಡುತ್ತಾರೆ. ಇದು ಸರಿಯಲ್ಲ.

ಪ್ರಶ್ನೆ : ಪ್ರಸ್ತುತ ಕಾಲದಲ್ಲಿ ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯ ಪ್ರೀತಿ ಮತ್ತು ಸುಸಂಸ್ಕಾರ ಇವುಗಳ ಅವಶ್ಯಕತೆ ಇರುತ್ತದೆ; ಅದು ಭಾವೂರವರ ಗಮನಕ್ಕೆ ಬರುವುದಿಲ್ಲವೇ ?

೬ ಅ. ಉತ್ತರ : ಪ್ರಸ್ತುತ ಕಾಲದಲ್ಲಿ ನನ್ನ ಮನೆಯಲ್ಲಿನ ಮಕ್ಕಳ ಮೇಲೆ ಅವರ ತಂದೆ-ತಾಯಿ ಮತ್ತು ಅಜ್ಜಿ ಇವರಿಂದ ಪ್ರೀತಿ ಕೊಡುವುದು ಮತ್ತು ಸುಸಂಸ್ಕಾರವನ್ನು ಮೂಡಿಸುವುದು ನಡೆದೇ ಇದೆ. ನಾನು ವರ್ಷದಲ್ಲಿ ೨-೩ ಬಾರಿ ಹಬ್ಬಹರಿದಿನಕ್ಕೆ ಮನೆಗೆ ಹೋದಾಗ ಮೊಮ್ಮಕ್ಕಳಿಗೆ ಸಾಧನೆಯನ್ನು ಹೇಳುತ್ತೇನೆ. ‘ಮನೆಯಲ್ಲಿನ ಮಕ್ಕಳ ಮೇಲೆ ಸಾಧನೆಯ ಸಂಸ್ಕಾರವನ್ನು ಮಾಡಬೇಕು’, ಎಂದು ನನಗೆ ಅರಿವು ಇದೆ.

ಪ್ರಶ್ನೆ : ಭಾವೂರವರಿಗೆ ಗೋವಾದಲ್ಲಿದ್ದು ಸನಾತನದ ಸಾಧನೆಯನ್ನು ಮಾಡಲು ಬರುತ್ತಿರಲಿಲ್ಲವೇ ?

೭ ಅ. ಉತ್ತರ : ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಲು ಜಗತ್ತಿನಲ್ಲಿ ಎಲ್ಲಿಯಾದರೂ ಸಾಧನೆ ಮಾಡಬಹುದು. ಅದಕ್ಕೆ ಸ್ಥಳ-ಕಾಲದ ಮಿತಿ ಇರುವುದಿಲ್ಲ. ನನ್ನ ಬಗ್ಗೆ ಹೇಳುವುದಾದರೆ, ನನ್ನ ಸಾಧನೆಯ ಬಗ್ಗೆ ನನಗಿಂತ ನನ್ನ ಗುರುಗಳಿಗೆ ಹೆಚ್ಚು ಕಾಳಜಿಯಿದೆ; ಆದ್ದರಿಂದ ಗುರುಗಳೇ ನನ್ನ ಸಾಧನೆಯಲ್ಲಿ ಪ್ರಗತಿ ಆಗಬೇಕೆಂದು ಅವರಿಗೆ ಎಲ್ಲಿ ಯೋಗ್ಯವೆನಿಸುತ್ತದೆಯೋ ಆ ಸ್ಥಳದಲ್ಲಿಟ್ಟಿದ್ದಾರೆ. ಅಧ್ಯಾತ್ಮದಲ್ಲಿ ಸ್ವೇಚ್ಛೆಗೆ ಮಹತ್ವವಿಲ್ಲ; ಬದಲಾಗಿ ಪರೇಚ್ಛೆ ಮತ್ತು ಈಶ್ವರೇಚ್ಛೆ ಇವುಗಳಿಗೆ ಮಹತ್ವವಿದೆ; ಆದುದರಿಂದ ನಾನು ಗೋವಾದಲ್ಲಿರುವ ಪ್ರಶ್ನೆಯೇ ಬರುವುದಿಲ್ಲ.

ಪ್ರಶ್ನೆ : ‘ಭಾವೂ ಇವರು ಕರ್ತವ್ಯದಕ್ಷ, ಶ್ರಮಜೀವಿ ಮತ್ತು ಪ್ರೇಮಮಯರಾಗಿದ್ದಾರೆ, ಎಂದು ನೀವು ಹೇಳುತ್ತೀರಿ, ಆದರೆ ಈಗ ಮಾಡುತ್ತಿರುವ ಕಾರ್ಯವು (ಅಂದರೆ ಆಶ್ರಮದಲ್ಲಿದ್ದು ಸಾಧನೆ ಮಾಡುವುದು), ಸರಿಯಿದೆಯೇ ?’

೮ ಅ. ಉತ್ತರ : ಹೌದು, ಅತ್ಯಂತ ಯೋಗ್ಯವಿದೆ. ನಾನು ಮನುಷ್ಯ ಜನ್ಮದ ೬೦ ವರ್ಷಗಳು ಮತ್ತು ಈಗ ಜೀವನದ ಕೊನೆಯ ಹಂತದಲ್ಲಿ ಕುಟುಂಬದಲ್ಲಿನ ಎಲ್ಲ ಕರ್ತವ್ಯಗಳನ್ನು ಪೂರ್ಣಗೊಳಿಸಿ ಸಾಧನೆಯನ್ನು ಮಾಡುತ್ತಿದ್ದೇನೆ, ಎಂದರೆ ಈಶ್ವರಪ್ರಾಪ್ತಿಗಾಗಿ ಪ್ರಯತ್ನಿಸುತ್ತಿದ್ದೇನೆ. ‘ಇದರಲ್ಲಿ ಯಾವ ಪಾಪವೂ ಇಲ್ಲ’, ಎಂದು ಸಂತ ಶಿರೋಮಣಿ ತುಕಾರಾಮ ಮಹಾರಾಜರು ಹೇಳುತ್ತಾರೆ.

‘ನನ್ನ ಪೂರ್ವಜನ್ಮದ ಭಾಗ್ಯವೆಂದು ದೇವರಿಂದ ನನಗೆ ಮೋಕ್ಷಗುರು ಶ್ರೀವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಪ್ರಾಪ್ತಿಯಾಗಿದೆ. ಅದಕ್ಕಾಗಿ ನಾನು ಅವರ ಸುಕೋಮಲ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞನಾಗಿದ್ದೇನೆ’. ‘ಈ ಲೇಖನವನ್ನು ಪರಾತ್ಪರ ಗುರು ಡಾಕ್ಟರರು ನನ್ನಿಂದ ಮಾಡಿಸಿಕೊಂಡರು’, ಇದಕ್ಕಾಗಿ ಅವರ ಚರಣಗಳಲ್ಲಿ ನನ್ನ ಕೋಟಿ ಕೋಟಿ ಸಾಷ್ಟಾಂಗ ನಮಸ್ಕಾರಗಳು !

– (ಪೂ.) ಶ್ರೀ. ಭಾವೂ (ಸದಾಶಿವ) ಪರಬ, ಸನಾತನ ಆಶ್ರಮ, ದೇವದ, ಪನವೇಲ. (೧೬.೧೦.೨೦೧೮)

ಪರಾತ್ಪರ ಗುರು ಡಾ. ಆಠವಲೆ

‘ಪೂ. ಭಾವೂ (ಸದಾಶಿವ) ಪರಬ ಇವರು ಬರೆದ ಈ ಅತ್ಯುತ್ತಮ ಲೇಖನದಿಂದ ಎಲ್ಲ ಸಾಧಕರಿಗೆ ಇತರರು ಇಂತಹ ಪ್ರಶ್ನೆಗಳನ್ನು ಕೇಳಿದಾಗ ಹೇಗೆ ಉತ್ತರಿಸಬೇಕು’, ಎಂಬುದು ಕಲಿಯಲು ಸಿಗುವುದು. ಭಾವೂರವರ ಈ ಲೇಖನವೆಂದರೆ ಸಾಧಕರಿಗಾಗಿ ಒಂದು ಬಹುದೊಡ್ಡ ಸತ್ಸಂಗವೇ ಆಗಿದೆ. ಸಾಧಕರಿಗಷ್ಟೇ ಅಲ್ಲ, ಕೆಲವು ಸಂತರಿಗೂ ಇದರಲ್ಲಿನ ಅಂಶಗಳಿಂದ ಏನಾದರೂ ಕಲಿಯಲು ಸಿಕ್ಕಿದ ಬಗ್ಗೆ ಆನಂದವಾಗುವುದು. ಈ ಲೇಖನದ ಬಗ್ಗೆ ಭಾವೂರವರನ್ನು ಎಷ್ಟು ಅಭಿನಂದಿಸಿದರೂ ಅದು ಕಡಿಮೆಯೇ ಆಗಿದೆ !’

– (ಪರಾತ್ಪರ ಗುರು) ಡಾ. ಆಠವಲೆ

ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು  ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು