ಅಧ್ಯಾತ್ಮಿಕ ಸ್ತರದಲ್ಲಿ ಉಪಾಯವನ್ನು ಮಾಡುತ್ತಿರುವಾಗ ಕೆಟ್ಟ ಶಕ್ತಿಗಳ ತೊಂದರೆ ಕಡಿಮೆ ಆಗದಿದ್ದಲ್ಲಿ ಧ್ಯಾನವನ್ನು ಮಾಡಿ ನಿರ್ಗುಣ ಸ್ತರದಲ್ಲಿ ಉಪಾಯವನ್ನು ಮಾಡಿರಿ !

ಸದ್ಗುರು (ಡಾ.) ಮುಕುಲ ಗಾಡಗೀಳ

‘೧೨.೩.೨೦೨೨ ಈ ದಿನದಂದು ನನಗೆ ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೇಕರ್ ಇವರ ದೂರವಾಣಿ ಕರೆ ಬಂದಿತು. ಅವರು “ಓರ್ವ ಸಂತರಿಗೆ ಬಹಳ ಅಸ್ವಸ್ಥವೆನಿಸುತ್ತಿದೆ ಹಾಗೂ ಅವರ ಪ್ರಾಣಶಕ್ತಿಯೂ ತುಂಬ ಕಡಿಮೆಯಾಗಿದೆ. ಅವರು ಮತ್ತು ನಾನು ಪ್ರಾಂತೀಯ ಹಿಂದೂ ಅಧಿವೇಶನದಲ್ಲಿ ಇದ್ದೇವೆ. ಅದರಲ್ಲಿನ ಸೇವೆಯಿಂದ ಆ ಸಂತರಿಗೆ ಈಗ ಆಧ್ಯಾತ್ಮಿಕ ಉಪಾಯ ಮಾಡಲು ಆಗುವುದಿಲ್ಲ. ಆದುದರಿಂದ ನೀವು ಅವರಿಗಾಗಿ ಉಪಾಯ ಮಾಡಬಹುದಾ ?” ಎಂದು ಕೇಳಿದರು. ಅದಕ್ಕೆ “ನಾನು ಅವರಿಗಾಗಿ ಉಪಾಯ ಮಾಡುತ್ತೇನೆ. ನೀವು ಸೇವೆ ಮಾಡಿ”, ಎಂದೆನು.

೧. ಉಪಾಯವನ್ನು ಹುಡುಕಿ ಅದರಂತೆ ನ್ಯಾಸ ಮತ್ತು ನಾಮಜಪವನ್ನು ಮಾಡುತ್ತಾ ಮುಕ್ಕಾಲು ಗಂಟೆ ಉಪಾಯ ಮಾಡಿದರೂ ಆ ಸಂತರ ಅನಾಹತಚಕ್ರದಲ್ಲಿನ ತೊಂದರೆಯುಕ್ತ ಶಕ್ತಿಯು ಕಡಿಮೆಯಾಗದಿರುವುದು

ನಾನು ಆ ಸಂತರಿಗೆ ಆಗುತ್ತಿರುವ ತೊಂದರೆಯ ಕಾರಣವನ್ನು ಹುಡುಕಿದೆ. ಅವರ ಅನಾಹತಚಕ್ರದಲ್ಲಿ ಬಹಳಷ್ಟು ತೊಂದರೆಯುಕ್ತ ಶಕ್ತಿ (ಕಪ್ಪು ಶಕ್ತಿ) ಇತ್ತು. ಅವರಿಗಾಗಿ ನನಗೆ ‘ನಿರ್ಗುಣ’ ಈ ನಾಮಜಪ ಹಾಗೂ ‘ಒಂದು ಅಂಗೈಯನ್ನು ಕಣ್ಣಿನ ಮುಂದೆ ಹಾಗೂ ಇನ್ನೊಂದು ಅಂಗೈಯನ್ನು ಅನಾಹತಚಕ್ರದ ಮೇಲಿಡುವುದು’, ಹೀಗೆ ಉಪಾಯ ಸಿಕ್ಕಿತು. ನಾನು ಆ ರೀತಿಯಲ್ಲಿ ಅವರ ಮೇಲೆ ಉಪಾಯವನ್ನು ಮಾಡಲು ಪ್ರಾರಂಭಿಸಿದೆನು. ನಾನು ಮೊದಲಿಗೆ ಅವರ ಚಕ್ರಗಳ ಮೇಲಿನ ತೊಂದರೆಯುಕ್ತ ಆವರಣವನ್ನು ತೆಗೆದೆನು ನಂತರ ಅವರಿಗೆ ತೊಂದರೆಯಾಗುತ್ತಿರುವ ಸ್ಥಾನದಲ್ಲಿ ನ್ಯಾಸವನ್ನು ಮಾಡಿ ನಾಮಜಪ ಮಾಡತೊಡಗಿದೆನು. ನಾನು ಅವರಿಗಾಗಿ ಮುಕ್ಕಾಲು ಗಂಟೆ ಉಪಾಯ ಮಾಡಿದರೂ ಅವರ ಅನಾಹತಚಕ್ರದಲ್ಲಿನ ತೊಂದರೆಯುಕ್ತ ಶಕ್ತಿ ಕಡಿಮೆಯಾಗಲಿಲ್ಲ. ಅದುದರಿಂದ ಆ ಸಂತರಿಗೆ ಇನ್ನೂ ಸ್ವಸ್ಥ ಎನಿಸುತ್ತಿಲ್ಲ ಎಂದು ಅವರು ತಿಳಿಸಿದರು.

೨. ದೇವರು ಅನಾಹತಚಕ್ರದ ಮೇಲೆ ಧ್ಯಾನವನ್ನು ಕೇಂದ್ರೀಕರಿಸಿ ಉಪಾಯವನ್ನು ಮಾಡಲು ಸೂಚಿಸುವುದು ಮತ್ತು ಆ ರೀತಿಯಲ್ಲಿ ಮಾಡಿದ ನಂತರ ೩ ನಿಮಿಷಗಳಲ್ಲಿಯೇ ಲಾಭವಾಗಿ ತೊಂದರೆಯು ಶೇ. ೫೦ ರಷ್ಟು ಕಡಿಮೆಯಾಯಿತೆಂದು ಆ ಸಂತರು ತಿಳಿಸಿದರು.

ಆಗ ದೇವರು ನನಗೆ, ‘ನ್ಯಾಸ ಮತ್ತು ನಾಮಜಪವನ್ನು ಮಾಡದೆ ಕೇವಲ ಅನಾಹತಚಕ್ರದ ಮೇಲೆ ಗಮನವನ್ನು ಕೇಂದ್ರೀಕರಿಸಿ ಧ್ಯಾನವನ್ನು ಮಾಡಿರಿ’, ಎಂದು ಸೂಚಿಸಿದರು. ಅದರಂತೆ ನಾನು ಧ್ಯಾನವನ್ನು ಮಾಡಲು ಆರಂಭಿಸಿದೆನು. ಆಗ ತಕ್ಷಣ ೩ ನಿಮಿಷಗಳಲ್ಲಿಯೇ ನನಗೆ ‘ಆ ಸಂತರ ಅನಾಹತಚಕ್ರದಲ್ಲಿನ ಕಪ್ಪು ಶಕ್ತಿಯು ಈಗ ಬಹಳಷ್ಟು ಕಡಿಮೆಯಾಗಿದೆ’ ಎಂದೆನಿಸಿತು. ಅದೇ ಸಮಯಕ್ಕೆ ನನಗೆ ಆ ಸಂತರು ಸಂಚಾರವಾಣಿಕರೆ ಮಾಡಿ, ‘ಶೇ. ೫೦ ರಷ್ಟು ಬದಲಾವಣೆಯಾಗಿದೆ. ಅಸ್ವಸ್ಥತೆಯು ಕಡಿಮೆಯಾಗಿದೆ; ಅದರೆ ಪ್ರಾಣಶಕ್ತಿಯು ಇನ್ನೂ ಕಡಿಮೆ ಇದೆ’, ಎಂದು ಹೇಳಿದರು.

೩. ಇದರಿಂದ ‘ಯಾವಾಗ ಕೆಟ್ಟ ಶಕ್ತಿಗಳು ನಿರ್ಗುಣ ಸ್ತರದಲ್ಲಿ ಆಕ್ರಮಣ ಮಾಡುತ್ತವೆಯೋ, ಆಗ ಪ್ರತ್ಯಕ್ಷವಾಗಿ ಮುದ್ರೆ, ನ್ಯಾಸ ಮತ್ತು ನಾಮಜಪ ಮಾಡದೆ ಕಪ್ಪು ಶಕ್ತಿಯಿಂದ ಬಾಧಿತಗೊಂಡ ಚಕ್ರಗಳ ಮೇಲೆ ಧ್ಯಾನವನ್ನು ಕೇಂದ್ರೀಕರಿಸಿ ಉಪಾಯವನ್ನು ಮಾಡಿದರೆ ತಕ್ಷಣ ಪರಿಣಾಮವಾಗುತ್ತದೆ; ಏಕೆಂದರೆ ಆಗ ನಮ್ಮ ಉಪಾಯಗಳು ಸಹ ನಿರ್ಗುಣ ಸ್ತರದಾಗಿರುತ್ತವೆ’ ಎಂಬುದು ಗಮನಕ್ಕೆ ಬಂದಿತು.

ಆ ಸಂತರು ಹಿಂದೂ ರಾಷ್ಟ್ರದ (ಈಶ್ವರೀ ರಾಜ್ಯದ) ಸ್ಥಾಪನೆಗಾಗಿ ಮಹತ್ವಪೂರ್ಣ ಸೇವೆಯನ್ನು ಮಾಡುತ್ತಿರುವುದರಿಂದ ‘ಅವರಿಂದ ಆ ಸೇವೆ ಆಗಬಾರದೆಂದು, ಕೆಟ್ಟ ಶಕ್ತಿಗಳು ಅವರ ಮೇಲೆ ನಿರ್ಗುಣ ಸ್ತರದಲ್ಲಿ ಆಕ್ರಣವನ್ನು ಮಾಡಿರುವುದು’. ಆ ಸಂತರು ಹಿಂದೂ ರಾಷ್ಟ್ರದ (ಈಶ್ವರೀ ರಾಜ್ಯದ) ಸ್ಥಾಪನೆಗಾಗಿ ಜಿಜ್ಞಾಸುಗಳು, ಹಿತಚಿಂತಕರು ಹಿಂದುತ್ವನಿಷ್ಠರು ಇವರ ಅಧಿವೇಶನವನ್ನು ತೆಗೆದುಕೊಳ್ಳುವ ಮಹತ್ವದ ಸೇವೆಯನ್ನು ಮಾಡುತ್ತಿರುವುದರಿಂದ ‘ಅವರಿಗೆ ಆ ಸೇವೆ ಮಾಡಲು ಆಗಬಾರದೆಂದು’, ಕೆಟ್ಟ ಶಕ್ತಿಗಳು ಎಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಅವರ ಮೇಲೆ ನಿರ್ಗುಣ ಸ್ತರದಲ್ಲಿ ಆಕ್ರಮಣವನ್ನು ಮಾಡಿದ್ದವು. ಧ್ಯಾನ ಮಾಡಿ ನಿರ್ಗುಣ ಸ್ತರದ ಉಪಾಯವನ್ನು ಮಾಡಿ ಈ ಆಕ್ರಮಣವನ್ನು ದೂರ ಮಾಡಲು ಸಾಧ್ಯವಾಯಿತು. ಅನಂತರ ನಾನು ಆ ಸಂತರಿಗಾಗಿ ಇನ್ನು ೨೦ ನಿಮಿಷ ಉಪಾಯವನ್ನು ಮಾಡಿದ ಮೇಲೆ ಅವರ ಅಸ್ವಸ್ಥತೆಯು ಸಂಪೂರ್ಣವಾಗಿ ಕಡಿಮೆಯಾಯಿತು ಹಾಗೂ ಅವರ ಪ್ರಾಣಶಕ್ತಿಯು ಹೆಚ್ಚಾಯಿತು.

‘ಆಯಾ ಸಮಯದಲ್ಲಿ ದೇವರು ಹೇಗೆ ಸೂಚಿಸುತ್ತಾನೆ ಮತ್ತು ಆ ರೀತಿಯಲ್ಲಿ ಕೃತಿಯನ್ನು ಮಾಡಿಸಿಕೊಳ್ಳುತ್ತಾನೆ’, ಇದು ಈ ಪ್ರಸಂಗದಿಂದ ಗಮನಕ್ಕೆ ಬಂದಿತು. ಪರಾತ್ಪರ ಗುರು ಡಾ. ಆಠವಲೆ ಇವರ ಕೃಪೆಯಿಂದ ಇಂತಹ ನಾವೀನ್ಯಪೂರ್ಣ ವಿಷಯಗಳು ಕಲಿಯಲು ಸಿಗುತ್ತವೆ, ಇದಕ್ಕಾಗಿ ನಾನು ಅವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೨.೩.೨೦೨೨)