
|
ಕೈಯಲ್ಲಿ ತಕ್ಕಡಿ ಹಿಡಿದಿರುವುದು ವಿದೇಶ ಸಮಾಜಸೇವಕಿಯ ಪ್ರತಿಮೆ ಈ ರೀತಿಯಲ್ಲಿ ಏಕೆ ಆಗ್ರಹಿಸಬೇಕಾಗುತ್ತದೆ ? ಸರಕಾರ ತಾನಾಗಿ ಇಂತಹ ವಿಚಾರ ಮಾಡಿ ಭಗವಾನ್ ಚಿತ್ರಗುಪ್ತನ ಮೂರ್ತಿ ಸ್ಥಾಪಿಸಬೇಕು ! |
ಸೋನಭದ್ರ (ಉತ್ತರಪ್ರದೇಶ) – ಭಾರತದ ಎಲ್ಲ ನ್ಯಾಯಾಲಯಗಳಲ್ಲಿ ಕೈಯಲ್ಲಿ ತಕ್ಕಡಿ ಹಿಡಿದಿರುವ ಹಾಗೂ ಕಣ್ಣಿನ ಮೇಲೆ ಕಪ್ಪುಪಟ್ಟಿ ಕಟ್ಟಿರುವ ಮಹಿಳೆಯ ಪ್ರತಿಮೆ ಇರುತ್ತದೆ. ಈ ಪ್ರತಿಮೆ ಗ್ರೀಕ್ ಸಮಾಜಸೇವಕಿ ಡಿಕಿ ಇವರದ್ದಾಗಿದೆ. ಈ ಪ್ರತಿಮೆ ತೆರವುಗೊಳಿಸಿ ಆ ಸ್ಥಾನದಲ್ಲಿ ಹಿಂದೂಗಳ ದೇವತೆ ಭಗವಾನ್ ಚಿತ್ರಗುಪ್ತ ಇವರ ಮೂರ್ತಿ ಸ್ಥಾಪಿಸಬೇಕು, ಎಂದು ಆಗ್ರಹಿಸಿ ಉತ್ತರ ಪ್ರದೇಶದ ಸಂಯುಕ್ತ ವಕೀಲರ ಮಹಾಸಂಘಡದ ಪ್ರದೇಶಾಧ್ಯಕ್ಷ ರಾಕೇಶ ಶರಣ ಮಿಶ್ರಾ ಅವರು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರದ ಒಂದು ಪ್ರತಿಯನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳು ಮುಂತಾದವರಿಗೆ ಕಳುಹಿಸಲಾಗಿದೆ.
ಈ ಪತ್ರದಲ್ಲಿ ಮಿಶ್ರಾ ಅವರು, ಡಿಕಿ ಹಾಗೂ ಭಾರತೀಯ ಸಂಸ್ಕೃತಿಗೆ ಯಾವುದೇ ಸಂಬಂಧವಿಲ್ಲ. ಈ ಪ್ರತಿಮೆ ಕೇವಲ ಬ್ರಿಟಿಷರ ಗುಲಾಮಗಿರಿಯ ಪ್ರತೀಕವಾಗಿದೆ. ಅದನ್ನು ಸತತ ನೋಡಿದರೆ ಗುಲಾಮಗಿರಿಯದ್ದೇ ಅರಿವಾಗುತ್ತದೆ. ಭಾರತೀಯ ಹಿಂದೂ ಧರ್ಮದ ಪ್ರಕಾರ ಮತ್ತು ಶಾಸ್ತ್ರಗಳಲ್ಲಿ ಬರೆದಿರುವ ಪ್ರಕಾರ ಭಗವಾನ್ ಚಿತ್ರಗುಪ್ತರು ಪರಮ ನ್ಯಾಯಾಧೀಶರಾಗಿದ್ದಾರೆ. ಆದ್ದರಿಂದ ಡಿಕಿಯ ಮೂರ್ತಿ ತೆರವುಗೊಳಿಸಿ ಅದರ ಜಾಗದಲ್ಲಿ ಚಿತ್ರಗುಪ್ತರ ಮೂರ್ತಿ ಸ್ಥಾಪಿಸಬೇಕು.
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
|| ಶ್ರೀ ರಾಜಮಾತಂಗಿ ಮಹಾಯಾಗ ||
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ಮನೆಗೆ ವಿದ್ಯುತ್ ಬರಲಿಲ್ಲವೆಂದು ಇಡೀ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನ್ಯಾಯಾಧೀಶರು : Judge Cut Off Electricity
ಬಕ್ರೀದ್ ದಿನದಂದು ಮುಗ್ಧ ಪ್ರಾಣಿಗಳ ಬಲಿಯಿಂದ ಬೇಸತ್ತ ಬಿಲಾಲ್ ‘ವಿಶಾಲ್’ ಆದನು!
ಉಚ್ಚ ನ್ಯಾಯಾಲಯಗಳು 3 ತಿಂಗಳಿಗಿಂತ ಹೆಚ್ಚು ಕಾಲ ತೀರ್ಪನ್ನು ಕಾಯ್ದಿರಿಸಬಾರದು! – ಸರ್ವೋಚ್ಚ ನ್ಯಾಯಾಲಯ