ಅರ್ಜಿದಾರ ವಿಭೊರ ಆನಂದ ಇವರಿಗೆ ಅಭಿನಂದನೆ. ವಾಸ್ತವದಲ್ಲಿ ರಾಷ್ಟ್ರಪ್ರೇಮಿ-ಧರ್ಮಪ್ರೇಮಿಗಳಿಗೆ ಇಂತಹ ಅರ್ಜಿಗಳನ್ನು ದಾಖಲಿಸುವ ಪ್ರಮೇಯವೇ ಬರಬಾರದು. ಸರಕಾರವು ತಾನಾಗಿ ಭಾರತೀಯ ಅರ್ಥವ್ಯವಸ್ಥೆಗೆ ಸಮನಾಂತರವಿರುವ ಹಲಾಲ್ ಅರ್ಥವ್ಯವಸ್ಥೆ ಮತ್ತು ಅದಕ್ಕಾಗಿ ನೀಡಲಾಗುವ ಹಲಾಲ್ ಪ್ರಮಾಣಪತ್ರವನ್ನು ನಿಲ್ಲಿಸಲು ಹೆಜ್ಜೆಯಿಡುವುದು ಆವಶ್ಯಕವಾಗಿದೆ ! |
ನವ ದೆಹಲಿ : ವಿಭೋರ ಆನಂದ್ ಅವರು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ನಿಷೇಧ ಮತ್ತು ಹಲಾಲ್ ಪ್ರಮಾಣಪತ್ರದ ಮೇಲೆ ನಿಷೇಧ ಹೇರುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯಲ್ಲಿ ಮುಂದಿನಂತೆ ಹೆಳಲಾಗಿದೆ,
೧. ದೇಶದ ಶೇ. ೧೫ ರಷ್ಟು ಜನಸಂಖ್ಯೆಗಾಗಿ, ಉಳಿದ ಶೇ. ೮೫ರಷ್ಟು ಜನರನ್ನು ತಮ್ಮ ಇಚ್ಛೆಗೆ ವಿರುದ್ಧವಾಗಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಬಳಸುವಂತೆ ಒತ್ತಾಯಿಸುತ್ತಿದ್ದಾರೆ. ಇದು ಮುಸಲ್ಮಾನೇತರ ಸಮುದಾಯಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಜಾತ್ಯತೀತ ದೇಶದಲ್ಲಿ ಒಂದು ಧರ್ಮದ ಶ್ರದ್ಧೆಯನ್ನು ಇನ್ನೊಂದು ಧರ್ಮದ ಮೇಲೆ ಹೇರುವಂತಿಲ್ಲ. ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಖರೀದಿಸಲು ಅವರನ್ನು ಒತ್ತಾಯಿಸಲಾಗುತ್ತಿದೆ.
೨. ಷರಿಯಾ ಕಾನೂನಿನ ಅನುಸಾರ ನೀಡಲಾದ ಹಲಾಲ್ ಪ್ರಮಾಣಪತ್ರವು ಸಂವಿಧಾನದ ಕಲಂ ೧೪ ರಿಂದ ೨೧ ನೇ ಅಡಿಯಲ್ಲಿ ಮೂಲಭೂತ ಸ್ವಾತಂತ್ರ್ಯದ ಉಲ್ಲಂಘನೆಯಲ್ಲವೇ ?, ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
೩. ಜಮಿಯತ್ ಉಲೇಮಾ-ಎ-ಹಿಂದ್ ಮತ್ತು ಇತರ ಕೆಲವು ಖಾಸಗಿ ಇಸ್ಲಾಮಿಕ್ ಸಂಸ್ಥೆಗಳಿಂದ ಹಲಾಲ್ ಪ್ರಮಾಣೀಕರಣವನ್ನು ನೀಡಲಾಗುತ್ತದೆ, ಅಂದರೆ ಉತ್ಪನ್ನಗಳನ್ನು ‘ಭಾರತೀಯ ಗುಣಮಟ್ಟ ಸಂಸ್ಥೆ’ (ಐ.ಎಸ್.ಐ) ಮತ್ತು ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (ಎಫ್.ಎಸ್.ಎಸ್.ಎ.ಐ.) ಇಂತಹ ಸರಕಾರಿ ಪ್ರಮಾಣಪತ್ರ ಸಾಕಾಗುವುದಿಲ್ಲವೇ ? ಇದು ಇತರ ಸಮುದಾಯಗಳ ವಿರುದ್ಧದ ತಾರತಮ್ಯವಲ್ಲವೇ ?
೪. ೧೯೭೪ ರ ಮೊದಲು, ಹಲಾಲ್ ಪ್ರಮಾಣಪತ್ರದಂತಹ ವಿಷಯ ಇರಲಿಲ್ಲ. ೧೯೭೪ ರಿಂದ ಮಾಂಸ ಉತ್ಪನ್ನಗಳಿಗೆ ಹಲಾಲ್ ಪ್ರಮಾಣೀಕರಣವು ಪ್ರಾರಂಭವಾಯಿತು.
೧೯೭೪ ರಿಂದ ೧೯೯೩ ರವರೆಗೆ ಹಲಾಲ್ ಪ್ರಮಾಣೀಕರಣವು ಮಾಂಸ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ, ಹಲಾಲ್ ಪ್ರಮಾಣಪತ್ರಗಳನ್ನು ಕ್ರಮೇಣ ಇತರ ಉತ್ಪನ್ನಗಳಿಗೆ ನೀಡಲಾಯಿತು. ಇವುಗಳಲ್ಲಿ ಆಹಾರ, ಸಿಹಿತಿಂಡಿಗಳು, ಧಾನ್ಯಗಳು, ನೇಲ್ ಪಾಲೀಶ, ಲಿಪ್ಸ್ಟಿಕ್ ಮತ್ತು ಇತ್ಯಾದಿಗಳು ಸೇರಿವೆ.
೫. ಹಲಾಲ್ ಪ್ರಮಾಣಪತ್ರಗಳನ್ನು ನೀಡುವ ಇಸ್ಲಾಮಿಕ್ ಸಂಸ್ಥೆಗಳು ಇದಕ್ಕಾಗಿ ಸಂಸ್ಥೆಗಳಿಂದ ಹಣವನ್ನು ಸಂಗ್ರಹಿಸುತ್ತವೆ. ಈ ಹಣವನ್ನು ಈ ಸಂಸ್ಥೆಗಳು ತಮ್ಮ ಇಚ್ಛೆಯಂತೆ ಖರ್ಚು ಮಾಡುತ್ತವೆ. ಇದರಲ್ಲಿ ಎಲ್ಲಾ ಸಂಸ್ಥೆಗಳು ಖಾಸಗಿಯಾಗಿವೆ.