ಇನ್ನು ಮುಂದೆ ಮಾಂಸ ಮಾರುವ ಅಂಗಡಿಯ ಮುಂದೆ `ಹಲಾಲ್ ಅಥವಾ ಝಟಕಾ’ ಎಂದು ಬರೆಯಲೇ ಬೇಕು ! – ಜೈಪುರ ಮಹಾನಗರಪಾಲಿಕೆ

ಜೈಪುರ ಮಹಾನಗರಪಾಲಿಕೆಯ ನಿರ್ಣಯ

ಜೈಪುರ (ರಾಜಸ್ಥಾನ) – ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ `ಹಲಾಲ್ ಅಥವಾ ಝಟಕಾ ಮಾಂಸ’ ಎಂದು ಅಂಗಡಿಯ ಮೇಲೆ ಬರೆಯುವುದು ಕಡ್ಡಾಯಗೊಳಿಸಲಾಗಿದೆ. ಜೈಪುರ ಮಹಾನಗರಪಾಲಿಕೆಯು ಮಾಂಸ ಮಾರಾಟ ಮಾಡುವ ಎಲ್ಲಾ ಅಂಗಡಿಕಾರರಿಗೆ ಈ ಬಗ್ಗೆ ಆದೇಶ ನೀಡಲಾಗಿದ್ದು, ಶೀಘ್ರದಲ್ಲಿ ಅದನ್ನು ಜಾರಿಗೊಳಿಸಲಾಗುವುದು ಎಂದು ಜೈಪುರ ಮಹಾಪೌರರಾದ(ಮೇಯರ್) ಡಾ. ಸೌಮ್ಯ ಗುರ್ಜರ ಅವರು ತಿಳಿಸಿದ್ದಾರೆ. ನಗರದಲ್ಲಿ ಮಾಂಸ ಮಾರಾಟದ ಅಂಗಡಿ ತೆರೆಯುವ ಮುನ್ನ ಮಹಾನಗರಪಾಲಿಕೆಯಿಂದ ಪರವಾನಗಿ ಪಡೆಯಬೇಕಾಗಿದ್ದು, ಅಂತಹ ಅಂಗಡಿಕಾರರಿಗೆ ವಾಣಿಜ್ಯ ಸ್ಥಳದಲ್ಲಿಯೇ ಮಾಂಸದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು.

ಡಾ.ಗುರ್ಜರ್ ಮುಂದೆ ಮಾತನಾಡಿ, ”ಜನತೆಯ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೈಪುರದಲ್ಲಿ 150 ವಿಭಾಗಗಳಿವೆ. ಅಲ್ಲಿನ ಜನರು ಅನೇಕ ಬಾರಿ ನನ್ನ ಬಳಿ ಈ ಬಗ್ಗೆ ದೂರುಗಳನ್ನು ನೀಡಿದ್ದಾರೆ. ಮಾಂಸದ ಅಂಗಡಿಯ ಬಳಿ ಕಸವನ್ನು ಎಸೆಯುತ್ತಿರುವುದರಿಂದ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದೆಯೆಂದೂ ದೂರುಗಳು ಬಂದಿವೆ. ಈ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ನಮ್ಮ ಕಾರ್ಯಕಾರಿಣಿ ಸಭೆಯಲ್ಲಿ `ಮಾಂಸ ಮಾರಾಟ ಮಾಡುವ ಅಂಗಡಿಗಳು ವಸತಿ ಪ್ರದೇಶದಿಂದ ಹೊರಗಿರಬೇಕು’ ಎಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ನಾನು ಸ್ವತಃ ಶಾಖಾಹಾರಿಯಾಗಿದ್ದೇನೆ, ದುರ್ಗಂಧವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ನನಗಾಗುವಂತಹ ಸಮಸ್ಯೆ ಇತರ ಅನೇಕ ನಾಗರಿಕರಿಗೂ ಆಗುತ್ತಿರಬಹುದು’ ಎಂದವರು ಹೇಳಿದರು.

ಹಲಾಲ್ ಮತ್ತು ಝಟಕಾ ಮಾಂಸದ ನಡುವಿನ ವ್ಯತ್ಯಾಸ

ಹಲಾಲ್ ಮಾಂಸವೆಂದರೆ ಪ್ರಾಣಿಗಳ ಮುಖವನ್ನು ಮಕ್ಕಾ ಕಡೆಗೆ ಮಾಡಿ ಅದರ ಕುತ್ತಿಗೆಯ ಒಂದು ರಕ್ತನಾಳವನ್ನು ಕತ್ತರಿಸುತ್ತಾರೆ ಮತ್ತು ಅದನ್ನು ಚಡಪಡಿಸಿ ಸಾಯಲು ಬಿಡುತ್ತಾರೆ. ಈ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳ ರಕ್ತಸ್ರಾವವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಹಿಂದೂ ಅಥವಾ ಸಿಖ್ ಧರ್ಮಗಳಲ್ಲಿ, `ಝಟಕಾ’ ಪದ್ಧತಿಯಿಂದ ಪ್ರಾಣಿಗಳನ್ನು ಕೊಲ್ಲಲಾಗುತ್ತದೆ. ಅಂದರೆ, ಪ್ರಾಣಿಗಳ ಕುತ್ತಿಗೆಯನ್ನು ಒಂದೇ ಏಟಿಗೆ ಕತ್ತರಿಸುವುದರಿಂದ ಅದಕ್ಕೆ ಅಲ್ಪ ಪ್ರಮಾಣದಲ್ಲಿ ನೋವಾಗುತ್ತದೆ.