Halal Tea : ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ಕ್ಕೆ ಬೊಟ್ಟು ಮಾಡಿದ IRCTC !

  • ರೈಲಿನಲ್ಲಿ ಸಿಕ್ಕ ಟೀ ಪ್ಯಾಕೆಟ್ ಮೇಲೆ ‘ಹಲಾಲ್ ಸರ್ಟಿಫಿಕೇಟ್’ ಉಲ್ಲೇಖ!

  • ಚಹಾ ಸಸ್ಯಾಹಾರಿ ಎಂದು ದಾವೆ !

(IRCTC ಎಂದರೆ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ)

ನವದೆಹಲಿ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಪ್ರಯಾಣಿಕರೊಬ್ಬರು ರೈಲಿನಲ್ಲಿನ ಟೀ ಪ್ಯಾಕೆಟ್‌ನಲ್ಲಿ ಹಲಾಲ್ ಪ್ರಮಾಣೀಕರಣದ ಉಲ್ಲೇಖವನ್ನು ಆಕ್ಷೇಪಿಸುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋ ಕೂಡ ಹಳೆಯದು ಎನ್ನಲಾಗಿದೆ. ಇದು ದಾರಿತಪ್ಪಿಸುವ ವಿಡಿಯೋ ಎಂದು IRCTC ಪ್ರತಿಕ್ರಿಯಿಸಿದೆ. ಅದು, ದಯವಿಟ್ಟು ಇದನ್ನು ನಂಬಬೇಡಿ ಮತ್ತು ಫಾರ್ವರ್ಡ್ ಮಾಡಬೇಡಿ. IRCTC ಅದರ ಆಹಾರ ಉತ್ಪನ್ನಗಳಿಗೆ ‘FSSAI’ ಅನ್ನು ಮಾತ್ರ ಅನುಸರಿಸುತ್ತಿದೆ, ಎಂದು ಹೇಳಿದೆ.

ಈ ವಿಡಿಯೋದಲ್ಲಿ ಪ್ರಯಾಣಿಕರೊಬ್ಬರು ‘ಶ್ರಾವಣ ಮಾಸದಲ್ಲಿ (ಪ್ರಸ್ತುತ ಉತ್ತರ ಭಾರತದಲ್ಲಿ ಶ್ರಾವಣ ಮಾಸ ನಡೆಯುತ್ತಿದೆ) ಹಲಾಲ್ ಪ್ರಮಾಣೀಕೃತ ಆಹಾರ ನೀಡುವುದು ನಮ್ಮ (ಹಿಂದೂಗಳ) ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ಹೇಳುತ್ತಿರುವುದು ಕಂಡುಬಂದಿದೆ. ಅದೇ ಸಮಯದಲ್ಲಿ, ರೈಲ್ವೇ ಸಿಬ್ಬಂದಿ ಪ್ರಯಾಣಿಕರಿಗೆ, ‘ಚಹಾ ಮಾಂಸಾಹಾರಿ ಅಲ್ಲ ಸಸ್ಯಾಹಾರಿಯಾಗಿದೆ !’ ಎಂದು ತಿಳಿಸಲು ಪ್ರಯತ್ನಿಸುತ್ತಾರೆ.

ಸಂಪಾದಕೀಯ ನಿಲುವು

  • ರೈಲ್ವೇಯಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳು ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (F.S.A.I.) ನಿಂದ ಪ್ರಮಾಣೀಕರಿಸಲ್ಪಟ್ಟಿದ್ದರೂ, ‘ಹಲಾಲ್ ಪ್ರಮಾಣಪತ್ರ’ ನಮೂದಿಸಿರುವ ಆಹಾರ ಪದಾರ್ಥಗಳನ್ನು ರೈಲ್ವೇಯು ಏಕೆ ಮಾರಾಟ ಮಾಡುತ್ತದೆ?
  • ಉತ್ತರ ಪ್ರದೇಶ ಸರ್ಕಾರವು ಕೆಲವು ತಿಂಗಳ ಹಿಂದೆ ಸ್ವಯಂಘೋಷಿತ ಹಲಾಲ್ ಪ್ರಮಾಣೀಕರಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡು ಮುಖ್ಯಸ್ಥರನ್ನು ಬಂಧಿಸಿತು. ಆದ್ದರಿಂದ ರೈಲ್ವೆ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಮತ್ತು ಅಂತಹ ಪ್ರಮಾಣಪತ್ರ ಹೊಂದಿರುವವರಿಗೆ ‘ಎಫ್‌ಎಸ್‌ಎಸ್‌ಎಐ’ ಕೂಡ ಅನುಮೋದನೆ ನೀಡಬಾರದು !
  • ‘ಚಹಾ ಸಸ್ಯಾಹಾರಿ ಆಗಿದ್ದರೂ ಅದಕ್ಕೆ ಹಲಾಲ್ ಪ್ರಮಾಣಪತ್ರ ಏಕೆ ಬೇಕು?’, ಇದಕ್ಕೆ ರೈಲ್ವೇ ಇಲಾಖೆ ಉತ್ತರಿಸಬೇಕು !