ವೈಶಾಖ ಶುಕ್ಲ ದಶಮಿಯಂದು (ಮೇ ೧೧ ರಂದು) ಸನಾತನದ ಮೊದಲನೇ ಬಾಲಸಂತರಾದ ಮಂಗಳೂರಿನ ಪೂ. ಭಾರ್ಗವರಾಮ ಭರತ ಪ್ರಭು ಇವರ ಹುಟ್ಟುಹಬ್ಬವಿದೆ. ಆ ನಿಮಿತ್ತ ..
ಪೂ. ಭಾರ್ಗವರಾಮ ಇವರಿಗೆ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !
‘ವೈಶಾಖ ಶುಕ್ಲ ದಶಮಿಯಂದು (ಮೇ ೧೧ ರಂದು)ಮಂಗಳೂರಿನಲ್ಲಿರುವ ಸನಾತನದ ಮೊದಲ ಬಾಲ ಸಂತರ ಪೂ. ಭಾರ್ಗವರಾಮ ಇವರ ಹುಟ್ಟುಹಬ್ಬ ಇದೆ. ಆ ನಿಮಿತ್ತ, ಅವರ ತಾಯಿ ಸೌ. ಭವಾನಿ ಭರತ ಪ್ರಭು ಇವರಿಗೆ ಪೂ. ಭಾರ್ಗವರಾಮ ಇವರ ಬಗ್ಗೆ ಗಮನಕ್ಕೆ ಬಂದ ಗುಣ್ಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಶಾಲೆಯು ೨ ದಿನಗಳಲ್ಲಿ ಪ್ರಾರಂಭವಾಗುವುದಿತ್ತು. ಆದುದರಿಂದ ನಾನು ಅವರಿಗೆ, “ನೀವು ಶಾಲೆಗೆ ಹೋಗಿ ಏನು ಮಾಡುವಿರಿ ?” ಎಂದು ಕೇಳಿದೆ. ಆಗ ಅವರು “ನನಗೆ ಅಧ್ಯಯನವನ್ನು ಮಾಡಿ ಪ.ಪೂ. ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಬಹಳಷ್ಟು ಸೇವೆಯನ್ನು ಮಾಡಬೇಕಾಗಿದೆ” ಎಂದು ಹೇಳಿದರು. ನವೆಂಬರ್ ೨೦೨೧ ಈ ತಿಂಗಳಿನಿಂದ ಪೂ. ಭಾರ್ಗವರಾಮ ಪ್ರಭು ಇವರು ಶಾಲೆಗೆ ಹೋಗಲಾರಂಭಿಸಿದರು.
೧. ಪೂ. ಭಾರ್ಗವರಾಮ ಪ್ರಭು ಇವರ ಶಾಲೆಯಲ್ಲಿನ ಮೊದಲನೆಯ ದಿನ
೧ ಅ. ಶಾಲೆಗೆ ಹೋದ ನಂತರ ತಕ್ಷಣ ತಾಯಿಯ ಕೈಯನ್ನು ಬಿಟ್ಟು ಶಿಕ್ಷಕರ ಕೈ ಹಿಡಿದು ತರಗತಿಗೆ ಹೋಗುವುದು : ಶಾಲೆಯ ಮೊದಲನೆಯ ದಿನ ಪೂ. ಭಾರ್ಗವರಾಮ ಇವರನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ನಮಗೆಲ್ಲರಿಗೂ, ‘ಪೂ. ಭಾರ್ಗವರಾಮ ನಮ್ಮನ್ನು ಬಿಟ್ಟು ಹೋಗುವುದಿಲ್ಲ’, ಎಂದು ಅನಿಸುತ್ತಿತ್ತು. ಆದರೆ ಪೂ. ಭಾರ್ಗವರಾಮ ಇವರನ್ನು ಶಾಲೆಗೆ ಕರೆದುಕೊಂಡು ಹೋದ ನಂತರ ತಕ್ಷಣ ಅವರು ನನ್ನ ಕೈ ಬಿಟ್ಟು ಶಿಕ್ಷಕರ ಕೈ ಹಿಡಿದು ತರಗತಿಗೆ ಹೋದರು. (ಚಿಕ್ಕ ಮಕ್ಕಳು ಪರಿಚಯವಿಲ್ಲದ ಶಿಕ್ಷಕರ ಕೈ ಹಿಡಿಯುವುದಿಲ್ಲ. – ಸಂಕಲನಕಾರರು)
೧. ಆ. ಅಳುವ ಮಕ್ಕಳ ಕೈ ಹಿಡಿದು ತರಗತಿಯೊಳಗೆ ಕರೆದುಕೊಂಡು ಹೋಗುವುದು : ತರಗತಿಯ ಹೊರಗೆ ಕೆಲವು ಚಿಕ್ಕಮಕ್ಕಳು ಅಳುತ್ತಿದ್ದರು. ಆಗ ಪೂ. ಭಾರ್ಗವರಾಮ ತರಗತಿಯ ಹೊರಗೆ ಬಂದು ಹೊರಗಿರುವ ಇಬ್ಬರು ಮಕ್ಕಳ ಕೈಗಳನ್ನು ಹಿಡಿದು ಆ ಮಕ್ಕಳನ್ನು ತರಗತಿಯೊಳಗೆ ಕರೆದುಕೊಂಡು ಹೋದರು.
೨. ಪೂ. ಭಾರ್ಗವರಾಮ ಪ್ರಭು ಇವರ ಶಾಲೆಯಲ್ಲಿನ ಎರಡನೆಯ ದಿನ
೨ ಅ. ಅಳುತ್ತಿರುವ ಓರ್ವ ಚಿಕ್ಕ ಹುಡುಗಿಗೆ ತಿಳುವಳಿಕೆಯನ್ನು ಹೇಳುವುದು : ಎರಡನೆಯ ದಿನ ಅವರು ಶಾಲೆಗೆ ಹೋದಾಗ ಅವರಿಗೆ ‘ಓರ್ವ ಚಿಕ್ಕ ಹುಡುಗಿ ಅಳುತ್ತಿರುವುದು’ ಕಾಣಿಸಿತು. ಪೂ. ಭಾರ್ಗವರಾಮರು ಅವಳಿಗೆ ನೀರನ್ನು ಕುಡಿಯಲು ಕೊಟ್ಟು ಶಾಂತ ಮಾಡಿದರು. ಅವರು ಆ ಹುಡುಗಿಗೆ, “ನೀನು ಅಳಬೇಡ. ನಾವಿಬ್ಬರೂ ಕೂಡಿ ಆಡೋಣ” ಎಂದು ಹೇಳಿದರು.
೨ ಆ. ಗುಣಗ್ರಾಹಕತೆ : ಪೂ. ಭಾರ್ಗವರಾಮರು ನಮಗೆ, “ಶಾಲೆಯಲ್ಲಿ ನಮ್ಮನ್ನು ನೋಡಿಕೊಳ್ಳುವ ಚಿಕ್ಕಮ್ಮ (ಆಯಾ) ಒಳ್ಳೆಯವರಿದ್ದಾರೆ. ಅವರು ಕೇವಲ ನನ್ನನ್ನು ಮಾತ್ರವಲ್ಲ, ಎಲ್ಲ ಮಕ್ಕಳಿಗೂ ಸಹಾಯ ಮಾಡುತ್ತಾರೆ” ಎಂದು ಹೇಳಿದರು.
೨ ಇ. ಗುರುದೇವರ ಬಗೆಗಿನ ಭಾವ
೨ ಇ ೧. ಪೂ. ಭಾರ್ಗವರಾಮರು ತಮ್ಮ ತಾಯಿಗೆ, ‘ಗುರುದೇವರು ನಮ್ಮ ಜೊತೆಗಿರುವಾಗ ಶಾಲೆಯಲ್ಲಿ ಮಕ್ಕಳು ಏಕೆ ಅಳುತ್ತಾರೆ ?’, ಎಂದು ಕೇಳುವುದು : ಮರುದಿನ ಪೂ. ಭಾರ್ಗವರಾಮ ಶಾಲೆಯಿಂದ ಮನೆಗೆ ಬಂದ ಮೇಲೆ ನಮ್ಮಲ್ಲಿ ಮುಂದಿನ ಸಂಭಾಷಣೆಯಾಯಿತು.
ಪೂ. ಭಾರ್ಗವರಾಮ ಪ್ರಭು : ಗುರುದೇವರು ನಮ್ಮ ಜೊತೆಯಲ್ಲಿ ಯಾವಾಗಲೂ ಇರುತ್ತಾರಲ್ಲ ! ಹಾಗಾದರೆ ಶಾಲೆಯಲ್ಲಿ ಮಕ್ಕಳು ಏಕೆ ಅಳುತ್ತಾರೆ ?
ನಾನು (ಸೌ. ಭವಾನಿ ಪ್ರಭು) : ಆ ಮಕ್ಕಳಿಗೆ ಗುರುದೇವರ ಬಗ್ಗೆ ಮಾಹಿತಿಯಿಲ್ಲ
ಪೂ. ಭಾರ್ಗವರಾಮ ಪ್ರಭು : ಅವರಿಗೆ ಗುರುದೇವರ ಬಗ್ಗೆ ಏಕೆ ಮಾಹಿತಿಯಿಲ್ಲ ?
ನಾನು : ಮಕ್ಕಳ ತಾಯಿ-ತಂದೆಯರಿಗೂ ಗುರುದೇವರ ಬಗ್ಗೆ ಮಾಹಿತಿಯಿಲ್ಲ. ಆದುದರಿಂದ ಅವರಿಗೆ ಹೇಳುವವರು ಯಾರೂ ಇಲ್ಲ.
ಪೂ. ಭಾರ್ಗವರಾಮ ಪ್ರಭು : ನಾನು ಅವರಿಗೆ, ‘ಗುರುದೇವರೆಂದರೆ ವಿಷ್ಣು ಮತ್ತು ಅವರು ನಮ್ಮ ಜೊತೆಗೆ ಇರುತ್ತಾರೆ; ಆದುದರಿಂದ ನಾವು ಯಾರೂ ಅಳಬಾರದು’ ಎಂದು ಹೇಳುತ್ತೇನೆ ಎಂದರು.
೩. ಪೂ. ಭಾರ್ಗವರಾಮ ಇವರ ಶಾಲೆಯಲ್ಲಿನ ಮೂರನೆಯ ದಿನ
೩ ಅ. ಪೂ. ಭಾರ್ಗವರಾಮರು ತಮ್ಮ ಕೊರಳಲ್ಲಿನ ಶ್ರೀಕೃಷ್ಣನ ಚಿತ್ರವಿರುವ ಪದಕವನ್ನು ಶಾಲೆಯ ಮಕ್ಕಳಿಗೆ ತೋರಿಸಿ ‘ಇವರು ಯಾವಾಗಲೂ ನಮ್ಮ ಜೊತೆಗಿರುತ್ತಾರೆ’, ಎಂದು ಹೇಳುವುದು : ಪೂ. ಭಾರ್ಗವರಾಮ ಶಾಲೆಯಿಂದ ಮನೆಗೆ ಬಂದ ಮೇಲೆ ನಾನು ಅವರಿಗೆ ಕೇಳಿದೆ, “ನೀವು ಎಲ್ಲರಿಗೂ ಗುರುಗಳ ಬಗ್ಗೆ ಹೇಳಿದಿರಾ ?” ಆಗ ಪೂ. ಭಾರ್ಗವರಾಮರು, ‘ನಾನು ಅವರಿಗೆ ಹೇಳಿದೆ; ಆದರೆ ಅವರಿಗೆ ಅದು ತಿಳಿಯಲಿಲ್ಲ. ನಂತರ ನಾನು ಅವರಿಗೆ ನನ್ನ ಕೊರಳಲ್ಲಿನ ಪದಕವನ್ನು(‘ಲಾಕೇಟ’) ತೋರಿಸಿ, “ಇವರು ಯಾವಾಗಲೂ ನಮ್ಮ ಜೊತೆಯಲ್ಲಿರುತ್ತಾರೆ” ಎಂದು ಹೇಳಿದೆನು’, ಎಂದರು. (ಪೂ. ಭಾರ್ಗವರಾಮರ ಕೊರಳಲ್ಲಿ ಶ್ರೀಕೃಷ್ಣನ ಛಾಯಾಚಿತ್ರವಿರುವ ಪದಕ (ಲಾಕೇಟ್) ಇದೆ.)
೪. ಶಾಲೆಯಿಂದ ಬಂದ ನಂತರ ತೊಂದರೆಯಾಗುತ್ತಿರುವಾಗ ಅಮ್ಮನಿಗೆ ಆವರಣ ಬಂದಿರುವುದನ್ನು ಹೇಳಿ ಉಪಾಯವನ್ನು ಮಾಡುವುದು ಮತ್ತು ಅದರಿಂದ ಪೂ. ಭಾರ್ಗವರಾಮರಿಗೆ ಆರಾಮವಾಗುವುದು
ಶಾಲೆಗೆ ಹೋಗುವುದೆಂದರೆ ಅವರಿಗೆ ಒಂದು ನಿತ್ಯಕರ್ಮದಂತೆ ಆಗಿದೆ. ಶಾಲೆಗೆ ಹೋಗಿ ಬಂದ ನಂತರ ಕೆಲವೊಮ್ಮೆ ಅವರಿಗೆ ತೊಂದರೆಯಾಗುತ್ತದೆ, ಆದರೂ ಅದರ ಬಗ್ಗೆ ಅವರು ತಕರಾರು ಮಾಡುವುದಿಲ್ಲ. ಕೆಲವೊಮ್ಮೆ ಪೂ. ಭಾರ್ಗವರಾಮರವರು, “ಶಾಲೆಯಲ್ಲಿ ಮಕ್ಕಳು ಅಳುತ್ತಾರೆ, ಕೂಗಾಡುತ್ತಾರೆ ಅಥವಾ ಪರಸ್ಪರ ಹೊಡೆದಾಡುತ್ತಾರೆ ಮತ್ತು ಜಗಳವಾಡುತ್ತಾರೆ, ಇದು ನನಗೆ ಇಷ್ಟವಾಗುವುದಿಲ್ಲ” ಎಂದು ಹೇಳುತ್ತಾರೆ. ಇಂತಹ ಪ್ರಸಂಗದಲ್ಲಿ ಅಥವಾ ಅವರಿಗೆ ತೊಂದರೆಯಾದಾಗ, ಆ ಪರಿಸ್ಥಿತಿಯಿಂದ ಅವರಲ್ಲಿ ಹೊರಗೆ ಬರುವ ಪ್ರಯತ್ನವಿರುತ್ತದೆ. ಒಂದು ದಿನ ಶಾಲೆಯಿಂದ ಬಂದ ನಂತರ ಅವರು ಬಹಳ (ಸಿಟ್ಟು) ಸಿಡಿಮಿಡಿಗೊಂಡಿದ್ದರು. ನಾನು ಅವರ ದೃಷ್ಟಿಯನ್ನು ತೆಗೆದ ನಂತರ ಪೂ. ಭಾರ್ಗವರಾಮರವರು, “ಇವತ್ತು ಶಾಲೆಯಲ್ಲಿ ನನ್ನ ಮೇಲೆ ಬಹಳಷ್ಟು ಆವರಣ ಬಂದಿದೆ. ಆದುದರಿಂದ ನನಗೆ (ಅನಿಷ್ಟ)ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ” ಎಂದು ಹೇಳಿದರು. ಅನಂತರ ಉಪಾಯ ಮತ್ತು ನಾಮಜಪವನ್ನು ಮಾಡಿದ ಮೇಲೆ ಅವರಿಗೆ ಆರಾಮವಾಯಿತು.
(‘ಸಾಧಾರಣ ಈ ವಯಸ್ಸಿನ ಮಕ್ಕಳಿಗೆ ಶಾಲೆಯಲ್ಲಿ ಏನಾದರೂ ಇಷ್ಟವಾಗದಿದ್ದರೆ ಅಥವಾ ಒಪ್ಪಿಗೆಯಾಗದಿದ್ದರೆ, ಅವರಿಗೆ ಶಾಲೆಗೆ ಹೋಗಬಾರದು ಎಂದು ಅನಿಸುತ್ತದೆ. ಆದರೆ ಪೂ. ಭಾರ್ಗವರಾಮ ಇವರ ‘ಕಲಿತು ಮುಂದೆ ಪರಾತ್ಪರ ಗುರು ಡಾ. ಆಠವಲೆಯವರ ಸೇವೆ ಮಾಡಬೇಕಾಗಿದೆ’, ಎಂಬ ದೃಷ್ಟಿಕೋನವಿರುವುದರಿಂದ ಅವರು ತೊಂದರೆದಾಯಕ ಸ್ಥಿತಿಯ ಕಡೆಗೆ ಉಪಾಯಾತ್ಮಕ ಅಥವಾ ಸಾಧನೆಯ ದೃಷ್ಟಿಯಿಂದ ನೋಡುತ್ತಾರೆ. ಇದು ಅವರ ವಯಸ್ಸಿನ ದೃಷ್ಟಿಯಲ್ಲಿ ಪ್ರಶಂಸನೀಯವಾಗಿದ್ದು ಅವರ ವಿಚಾರಗಳು ಅವರ ಸಂತತ್ವವನ್ನು ತೋರಿಸುತ್ತವೆ. – ಸಂಕಲನಕಾರರು)
೫. ಪ್ರಗಲ್ಭತೆ
ನಾವು ಯಾವಾಗಲಾದರೂ ಹೊರಗೆ ಹೊದರೆ ಪೂ. ಭಾರ್ಗವರಾಮ ಇವರು ಯಾವಾಗಲೂ ಹಣ್ಣಿನ ರಸ ಅಥವಾ ಐಸ್ಕ್ರೀಮ ಕೇಳುತ್ತಾರೆ. ಆದರೆ ಶಾಲೆಯಿಂದ ಮನೆಗೆ ಬರುವಾಗ ನಾವು ಐಸ್ಕ್ರೀಮ ಅಂಗಡಿಯ ಮುಂದಿನಿಂದ ಹೋಗುತ್ತಿದ್ದರೂ, ಅವರು ಏನನ್ನೂ ಕೇಳುವುದಿಲ್ಲ. ಅವರು ‘ವಿಹಾರಕ್ಕೆ ಹೋದಾಗ ಮಾತ್ರ ತಿಂಡಿತಿನಸಗಳನ್ನು ಕೇಳುತ್ತಾರೆ; ಆದರೆ ಶಾಲೆಯಿಂದ ಬರುವಾಗ ಅವರ ‘ನಾನು ಒಳ್ಳೆಯವನಾಗಬೇಕು’ ಎಂಬ ದೃಷ್ಟಿಕೋನವಿರುವುದರಿಂದ ಅವರು ಏನನ್ನೂ ಕೇಳುವುದಿಲ್ಲ, ಎಂಬುದು ನನ್ನ ಗಮನಕ್ಕೆ ಬಂದಿತು.
ನನಗೆ ‘ಪೂ. ಭಾರ್ಗವರಾಮರ ಲೀಲೆಗಳನ್ನು ನೋಡುತ್ತಲೇ ಇರಬೇಕು ಎಂದು ಅನಿಸುತ್ತದೆ. ಗುರುದೇವರೇ ನಮ್ಮನ್ನು ಇಂತಹ ಜೀವದ ಲೀಲೆಗಳ ಸಾಕ್ಷಿದಾರರನ್ನಾಗಿ ಮಾಡಿದಿರಿ’, ಅದಕ್ಕಾಗಿ ತಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
– ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ), ಮಂಗಳೂರು. (೧೯.೧೨.೨೦೨೧)