ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನಲ್ಲಿ ಹಿಂದೂ ರಾಷ್ಟ್ರ ಅಧಿವೇಶನ
ಮಂಗಳೂರು : ಇವತ್ತು ಹಿಂದೂ ರಾಷ್ಟ್ರದ ಬಗ್ಗೆ ಮಾತಾಡಿದರೆ ಅದು ಕೋಮುವಾದ ಆಗುವುದು. ಆದರೆ ಯಾವಾಗ ಪೋಪ್‌ರವರು ಭಾರತಕ್ಕೆ ಬಂದು ಬಹಿರಂಗವಾಗಿ ಭಾರತವನ್ನು ಕ್ರೈಸ್ತೀಕರಣ ಮಾಡುವುದೇ ನಮ್ಮ ಧ್ಯೇಯ ಎಂದು ಹೇಳಿದಾಗ ಮಾಧ್ಯಮಗಳಿಗೆ ಇದು ಕೋಮುವಾದ ಎಂದು ಅನಿಸುವುದಿಲ್ಲ. ಇವತ್ತು ಹಿಂದೂ ಶಿಕ್ಷಣ ಸಂಸ್ಥೆಗಳೇ ನಮಾಜ಼್ ಸಮಯಕ್ಕೆ ಸರಿಯಾಗಿ ಟೈಮ್‌ಟೇಬಲ್ ಸೆಟ್ ಮಾಡುತ್ತಾರೆ. ಇದರ ಬಗ್ಗೆ ಮಾಧ್ಯಮದಲ್ಲಿ ಚರ್ಚೆಯಾಗುವುದಿಲ್ಲ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಒಟ್ಟಾಗಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ಕಟಿಬದ್ಧರಾಗಬೇಕಾಗಿದೆ, ಎಂದು ಮಂಗಳೂರಿನ ಇತಿಹಾಸಕಾರರಾದ ಶ್ರೀ. ಲಕ್ಷ್ಮೀಶ ಹೆಗಡೆಯವರು ತಮ್ಮ ವಿಚಾರ ವ್ಯಕ್ತ ಪಡಿಸಿದರು. ಅವರು ನಗರದ ಶಾರದಾ ವಿದ್ಯಾಲಯದ ಸಭಾಭವನದಲ್ಲಿ, ಏಪ್ರಿಲ್ ೨೪ ರಂದು, ಬೆಳಿಗ್ಗೆ ೧೦.೩೦ ಕ್ಕೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾದ ಹಿಂದೂ ಅಧಿವೇಶನ ದಲ್ಲಿ ಮಾತನಾಡುತ್ತಿದ್ದರು.
ದೇವಸ್ಥಾನಗಳು ವ್ಯಾಪಾರಿ ಕೇಂದ್ರಗಳಾಗುತ್ತಿರುವುದು ದುರ್ದೈವ ! – ಶ್ರೀ. ದಿನೇಶ ಜೈನ್, ಸಾಮಾಜಿಕ ಹೋರಾಟಗಾರರು
‘ದೇವಸ್ಥಾನಗಳು ಉಳಿದರೆ ಮಾತ್ರ ಧರ್ಮ ಉಳಿಯುತ್ತದೆ ಮತ್ತು ಧರ್ಮ ಉಳಿದರೆ ಮಾತ್ರ ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತದೆ. ಹಿಂದೆ ನಮ್ಮ ದೇವಸ್ಥಾನಗಳು ಊರಿನ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ಇವತ್ತು ದುರ್ದೈವದಿಂದ ವ್ಯಾಪಾರ ಕೇಂದ್ರಗಳಾಗಿವೆ. ಇವತ್ತು ಧರ್ಮಶಿಕ್ಷಣದ ಕೊರತೆಯಿಂದ ವ್ಯಾಪಕವಾಗಿ ಮತಾಂತರ ಮತ್ತು ಲವ್ ಜಿಹಾದ್ ನಡೆಯುತ್ತಿದೆ. ಈ ಎಲ್ಲಾ ಪಿಡುಗುಗಳು ಧರ್ಮಶಿಕ್ಷಣದ ಕೊರತೆಯಿಂದ ಆಗುತ್ತಿದೆ. ಅದಕ್ಕಾಗಿ ಇಂದು ದೇವಸ್ಥಾನಗಳು ಮತ್ತೊಮ್ಮೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿ ಪರಿವರ್ತಿತವಾಗಬೇಕಾಗಿದೆ.
ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಶ್ರೀ. ಗುರುಪ್ರಸಾದ ಗೌಡ ಅದೇ ರೀತಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸೌ. ಮಂಜುಳಾ ಗೌಡ ಇವರು ಸಹ ಉಪಸ್ಥಿತರಿಗೆ ಮಾರ್ಗದರ್ಶನ ಮಾತನಾಡಿದರು. ಈ ಅಧಿವೇಶನದಲ್ಲಿ ಮಂಗಳೂರು, ಬಂಟ್ವಾಳ, ಬಿ.ಸಿ. ರೋಡ್, ಬೆಂಜನಪದವು, ಬೆಳ್ತಂಗಡಿ, ಪುತ್ತೂರು, ಉಪ್ಪಿನಂಗಡಿ, ಉಳ್ಳಾಲ ಹಾಗೂ ಇನ್ನೂ ಅನೇಕ ಕಡೆಗಳಿಂದ ಹಿಂದೂ ಸಂಘಟನೆಗಳ ಪ್ರತಿನಿಧಿಗಳು, ಉದ್ಯಮಿಗಳು, ನ್ಯಾಯವಾದಿಗಳು ಉಪಸ್ಥಿತರಿದ್ದರು.