ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಬೆಳಗಾವಿಯ ಶ್ರೀಮತಿ ಸರಸ್ವತಿ ಶೆಟ್ಟಿ (೮೩ ವರ್ಷ) ಮತ್ತು ನಂದಿಹಳ್ಳಿಯ ಶ್ರೀ. ಉತ್ತಮ ಕಲ್ಲಪ್ಪಾ ಗುರವ !

 

ಬೆಳಗಾವಿ – ಸತತ ಉತ್ಸಾಹದಲ್ಲಿರುವ, ಪ್ರೇಮಭಾವ ಮತ್ತು ಶ್ರದ್ಧೆ ಇವುಗಳ ಬಲದಿಂದ ಬೆಳಗಾವಿಯ ಶ್ರೀಮತಿ ಸರಸ್ವತಿ ಶೆಟ್ಟಿ (೮೬ ವರ್ಷ) ಇವರು ಹಾಗೆಯೇ ತಮ್ಮ ಎಲ್ಲ ಮಕ್ಕಳನ್ನು ಪೂರ್ಣವೇಳೆ ಸಾಧನೆ ಮಾಡಲು ಅನುಮತಿ ನೀಡುವ, ಕೃಷಿಯನ್ನು ಭಾವವಿಟ್ಟು ಮಾಡುವ ಅಲ್ಲದೇ ಪ್ರೇಮಭಾವ, ತ್ಯಾಗಿವೃತ್ತಿ, ಶಾಂತ ಸ್ವಭಾವ ಈ ಗುಣಗಳಿರುವ ಮತ್ತು ಗುರುಗಳ ಬಗ್ಗೆ ಅಪಾರ ಶ್ರದ್ಧೆಗಳಿಂದಾಗಿ ನಂದಿಹಳ್ಳಿಯ ಶ್ರೀ. ಉತ್ತಮ ಕಲ್ಲಪ್ಪ ಗುರವ (ವಯಸ್ಸು ೬೧) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು ಎಂದು ಏಪ್ರಿಲ್ ೧೯ ರಂದು ಘೋಷಿಸಲಾಯಿತು. ಡಾ. (ಸೌ.) ನಮ್ರತಾ ಕುಟ್ರೆಯವರ ಮನೆಯಲ್ಲಿ ನಡೆದ ಒಂದು ಸತ್ಸಂಗದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಘೋಷಿಸಿದರು. ಪೂ. ರಮಾನಂದ ಗೌಡ ಇವರ ಹಸ್ತದಿಂದ ಶ್ರೀಕೃಷ್ಣನ ಭಾವಚಿತ್ರ ನೀಡಿ ಇಬ್ಬರ ಸತ್ಕಾರ ಮಾಡಲಾಯಿತು. ಇದರಿಂದ ಬೆಳಗಾವಿಯ ಸಾಧಕರ ಆನಂದ ದ್ವಿಗುಣವಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರು ಆಧ್ಯಾತ್ಮಿಕ ಪ್ರಗತಿ ಮಾಡಿಕೊಂಡವರ ಗುಣವೈಶಿಷ್ಟ್ಯಗಳನ್ನು ಹೇಳಿದರು.