ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕ

‘ಒಂದು ರಾಷ್ಟ್ರವು ಉತ್ತಮವಾಗಿರುವುದೆಂದರೆ, ಅಲ್ಲಿಯ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವವುಳ್ಳವರಾಗಿರಬೇಕು ಮತ್ತು ಅಲ್ಲಿಯ ನಾಗರಿಕರು ಜ್ಞಾನಿಗಳು ಮತ್ತು ದೇಶಭಕ್ತರಾಗಿರಬೇಕು. ಇಂತಹ ಸ್ಥಿತಿ ಬರಲು ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಮಹತ್ವದ್ದಾಗಿದೆ !’

– ಪೂ. ಶ್ರೀ ಶ್ರೀ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ, ಧಾರವಾಡ (೧೦.೧೨.೨೦೦೮)

ವಿಶ್ವಕಲ್ಯಾಣಕ್ಕಾಗಿ ಭಾರತದ ರಕ್ಷಣೆ ಅಗತ್ಯ  !

‘ವಿಶ್ವದ ಕಲ್ಯಾಣ ಮತ್ತು ಲಾಭ’ ಇವುಗಳಿಗಾಗಿ ಭಾರತದ ರಕ್ಷಣೆ ಮಾಡುವುದು ಅತ್ಯಗತ್ಯವಿದೆ; ಏಕೆಂದರೆ ಕೇವಲ ಭಾರತವೇ ವಿಶ್ವದ ಶಾಂತಿ ಮತ್ತು ನ್ಯಾಯವ್ಯವಸ್ಥೆ ಕೊಡಬಲ್ಲದು.

– ಮದರ, ಅರವಿಂದ ಆಶ್ರಮ (ಹಿಂದೂ ಚಿಂತನ)

ಭಾರತದಲ್ಲಿ ಹಬ್ಬಿದ ವಿವಿಧ ಸಮಸ್ಯೆಗಳ ಕತ್ತಲೆಯು ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತಲೆ ನಾಶವಾಗುವುದು ಎಂಬುದನ್ನು ಅರಿತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಘಟಿತರಾಗಿ

ಸೂರ್ಯ ಹುಟ್ಟುವ ಮೊದಲು ಎಲ್ಲೆಡೆಯು ಕತ್ತಲೆಯು ತುಂಬಿರುತ್ತದೆ. ಆದರೆ ಸೂರ್ಯೋದಯವಾಗುತ್ತಲೇ ಕತ್ತಲೆಯು ತನ್ನಿಂದ ತಾನೆ ನಾಶವಾಗುತ್ತದೆ, ವಾತಾವರಣದಲ್ಲಿಯ ಒತ್ತಡವು ಹೋಗಿ ಹಗುರತೆಯ ಅರಿವಾಗುತ್ತದೆ. ನೀನು ದೂರ ಹೋಗು ಸೂರ್ಯನ ಉದಯವಾಗುತ್ತಿದೆ ಎಂದು ಕತ್ತಲೆಗೆ ಹೇಳಬೇಕಾಗುವುದಿಲ್ಲ. ಇದೆಲ್ಲವು ತನ್ನಿಂದ ತಾನೆ ನಡೆಯುತ್ತದೆ. ಅದರಂತೆ ಇಂದು ಭಾರತದಲ್ಲಿ ಹಬ್ಬಿದಂತಹ ವಿವಿಧ ಸಮಸ್ಯೆಗಳ ಕತ್ತಲೆಯು ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತಲೇ ನಾಶವಾಗುತ್ತದೆ. ಧರ್ಮಾಚರಣಿ ರಾಜಕಾರಣಿಗಳಿಂದ ಭಾರತದ ಮುಂದಿರುವ ಎಲ್ಲ ಸಮಸ್ಯೆಗಳು ಸರಿಯಾಗುವುದು ಹಾಗೂ ಒಳ್ಳೆಯ ಆಚರಣೆಯಿಂದ ಜನರೆಲ್ಲರೂ ಸುಖವಾಗಿರುವರು. ಹಿಂದೂ ರಾಷ್ಟ್ರದ ಉದಯ ನೋಡುವುದಕ್ಕಾಗಿ ನಾವೆಲ್ಲರೂ ಸಿದ್ಧರಾಗೋಣ.