ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿನ ಸಂಗೀತದ ಅಧ್ಯಯನ (ಅಭ್ಯಾಸ) ಮಾಡುವ ಸಾಧಕರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನದಂತೆ ಧ್ವನಿಮುದ್ರಣ ಮಾಡಿದ ನಾಮಜಪ ಮಾಡುವ ಯೋಗ್ಯ ಪದ್ಧತಿ !
ಯಾವುದೇ ವಿಷಯವನ್ನು ಕಾಲಕ್ಕನುಸಾರ ಮಾಡಿದರೆ, ಅದರಿಂದ ಹೆಚ್ಚು ಲಾಭವಾಗುತ್ತದೆ. ‘ಈಗಿನ ಕಾಲಕ್ಕನುಸಾರ ಯಾವ ವಿಧದ (ಸಗುಣ-ನಿರ್ಗುಣ ಇತ್ಯಾದಿ) ನಾಮಜಪವನ್ನು ಮಾಡಬೇಕು ?’, ಎಂಬುದರ ಅಧ್ಯಾತ್ಮ ಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಿ ವಿವಿಧ ನಾಮಜಪಗಳನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಧ್ವನಿಮುದ್ರಣ ಮಾಡಿದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಂಗೀತ ಸಮನ್ವಯಕರಾದ ಕು. ತೇಜಲ ಪಾತ್ರೀಕರ (ಸಂಗೀತ ವಿಶಾರದೆ) ಇವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನಕ್ಕನುಸಾರ ‘ಶೂನ್ಯ’, ‘ಮಹಾಶೂನ್ಯ’ ಮತ್ತು ‘ನಿರ್ಗುಣ’ ಈ ನಾಮಜಪಗಳನ್ನು ಧ್ವನಿಮುದ್ರಣ ಮಾಡಿ ಅವುಗಳನ್ನು ಸನಾತನ ಸಂಸ್ಥೆಯ ಜಾಲತಾಣ ಮತ್ತು ‘ಸನಾತನ ಚೈತನ್ಯವಾಣಿ’ಯಲ್ಲಿ ಎಲ್ಲರಿಗಾಗಿ ಲಭ್ಯ ಮಾಡಿಕೊಟ್ಟಿದ್ದಾರೆ.
೧. ನಿರ್ಗುಣಕ್ಕೆ ಸಂಬಂಧಿಸಿದ ನಾಮಜಪಗಳ ಆವಶ್ಯಕತೆ
‘ಶೂನ್ಯ’, ‘ಮಹಾಶೂನ್ಯ’ ಮತ್ತು ‘ನಿರ್ಗುಣ’ ಇವು ನಿರ್ಗುಣಕ್ಕೆ ಸಂಬಂಧಿಸಿದ ನಾಮಜಪಗಳಾಗಿವೆ. ಈ ಎಲ್ಲ ನಾಮಜಪಗಳು ನಿರ್ಗುಣಕ್ಕೆ ಸಂಬಂಧಿಸಿದ್ದರೂ, ಅವು ಕ್ರಮವಾಗಿ ಹೆಚ್ಚೆಚ್ಚು ನಿರ್ಗುಣಕ್ಕೆ ಸಂಬಂಧಿಸಿವೆ. ಇದರಲ್ಲಿನ ‘ಓಂ’ ಇದು ಸರ್ವೋಚ್ಚ ನಿರ್ಗುಣ ಸ್ತರದಲ್ಲಿನ ನಾಮಜಪವಾಗಿದೆ ಮತ್ತು ಅದರ ಧ್ವನಿಮುದ್ರಣವನ್ನು ಸನಾತನ ಸಂಸ್ಥೆಯ ಜಾಲತಾಣ ಮತ್ತು ‘ಸನಾತನದ ಚೈತನ್ಯವಾಣಿ’ಯಲ್ಲಿ ‘ಬೀಜಮಂತ್ರ’ ಈ ವಿಧದಲ್ಲಿ ಈ ಮೊದಲೇ ಲಭ್ಯ ಮಾಡಿಕೊಡಲಾಗಿದೆ. ಪ್ರಸ್ತುತ ಕಾಲಕ್ಕನುಸಾರ ಆಧ್ಯಾತ್ಮಿಕ ತೊಂದರೆಗಳ ತೀವ್ರತೆಯು ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯವನ್ನು ಮಾಡಲು ಕೆಲವೊಮ್ಮೆ ದೇವತೆಗಳ ಸಗುಣ-ನಿರ್ಗುಣ ಸ್ವರೂಪದಲ್ಲಿನ ನಾಮಜಪಗಳು ಉಪಯೋಗವಾಗುವುದಿಲ್ಲ. ಇಂತಹ ಸಮಯದಲ್ಲಿ ‘ಶೂನ್ಯ’, ‘ಮಹಾಶೂನ್ಯ’, ‘ನಿರ್ಗುಣ’ ಮತ್ತು ‘ಓಂ’ ಈ ನಿರ್ಗುಣಕ್ಕೆ ಸಂಬಂಧಿಸಿದ ನಾಮಜಪಗಳನ್ನು ಮಾಡಬೇಕಾಗುತ್ತದೆ. ವಿಶೇಷ ವಾಗಿ ಆಧ್ಯಾತ್ಮಿಕ ತೊಂದರೆಗಳಿರುವವರಿಗೆ ಈ ನಾಮಜಪಗಳು ಉಪಾಯಕ್ಕಾಗಿ ಹೆಚ್ಚು ಉಪಯೋಗವಾಗಿವೆ. ತೀವ್ರ ಆಧ್ಯಾತ್ಮಿಕ ತೊಂದರೆಯಿಂದ ಕೆಲವೊಮ್ಮೆ ಸಾಧಕರಿಗೆ ನಾಮಜಪ ಮಾಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ನಿರ್ಗುಣಕ್ಕೆ ಸಂಬಂಧಿಸಿದ ನಾಮಜಪ ಮಾಡುವಾಗ ದೇವತೆಗಳ ರೂಪ ನಮ್ಮ ಕಣ್ಣುಗಳ ಮುಂದೆ ಬರದಿದ್ದರೆ, ಆ ನಾಮಜಪವನ್ನು ಭಾವಪೂರ್ಣವಾಗಿ ಮಾಡಲು ಕೆಲವರಿಗೆ ಕಠಿಣವಾಗಬಹುದು. ಆಗ ಸಾಧಕರು ಈ ನಾಮಜಪವನ್ನು ಕೇಳುತ್ತ ಸ್ವತಃ ನಾಮಜಪ ಮಾಡಬಹುದು.
೨. ನಾಮಜಪವನ್ನು ಮಾಡುವ ವೇಗ
ಪ್ರತಿಯೊಬ್ಬ ಮನುಷ್ಯನ ಪ್ರಕೃತಿಯಂತೆ ಅವನ ಜಪ ಮಾಡುವ ವೇಗ ಬೇರೆ ಬೇರೆ ಆಗಿರುತ್ತದೆ. ನಿರ್ಗುಣಕ್ಕೆ ಸಂಬಂಧಿಸಿದ ನಾಮಜಪಗಳಾದ ‘ಶೂನ್ಯ’, ‘ಮಹಾಶೂನ್ಯ’ ಮತ್ತು ‘ನಿರ್ಗುಣ’ ಇವುಗಳನ್ನು ಮೊದಲ ಬಾರಿ ಕೊಡಲಾಗಿದೆ ಮತ್ತು ಈ ನಾಮಜಪಗಳನ್ನು ಮಧ್ಯಮ ಗತಿಯಲ್ಲಿ ಹೇಳಲಾಗಿದೆ. ಯಾರಿಗೆ ಶೀಘ್ರಗತಿಯಲ್ಲಿ ನಾಮಜಪವನ್ನು ಮಾಡುವುದಿದೆಯೋ, ಅವರು ಜಪವನ್ನು ಶೀಘ್ರಗತಿಯಲ್ಲಿ ಮಾಡಬಹುದು; ಆದರೆ ಜಪ ಮಾಡುವ ಪದ್ಧತಿಯನ್ನು ಮಾತ್ರ ಬದಲಾಯಿಸಬಾರದು. ‘ಎಷ್ಟು ವ್ಯಕ್ತಿಗಳೋ ಅಷ್ಟೇ ಪ್ರಕೃತಿಗಳು ಮತ್ತು ಅಷ್ಟೇ ಸಾಧನೆಯ ಮಾರ್ಗಗಳು’, ಎಂಬ ಸಾಧನೆಯ ಸಿದ್ಧಾಂತವಿರುವುದರಿಂದ ಯಾವ ವೇಗದಿಂದ ನಾಮಜಪವನ್ನು ಮಾಡಿದರೆ ಭಾವ ಹೆಚ್ಚು ಪ್ರಮಾಣದಲ್ಲಿ ಜಾಗೃತವಾಗುತ್ತದೆಯೋ, ಆ ವೇಗದಿಂದ ನಾಮಜಪವನ್ನು ಮಾಡಬೇಕು.
೩. ಎರಡು ನಾಮಜಪಗಳಲ್ಲಿನ ಅಂತರ
‘ಒಂದು ನಾಮಜಪದ ನಂತರ ಅದೇ ನಾಮಜಪವನ್ನು ಹೇಳಲು ನಡುವೆ ಎಷ್ಟು ಅಂತರವಿರಬೇಕು ?’, ಈ ಕುರಿತು ಪರಾತ್ಪರ ಗುರು ಡಾ. ಆಠವಲೆಯವರು ಮಾರ್ಗದರ್ಶನ ಮಾಡುವಾಗ, ‘ವ್ಯಕ್ತಿಯ ಪ್ರಕೃತಿಗನುಸಾರ ಎರಡು ಜಪಗಳಲ್ಲಿನ ಅಂತರವು ಹೆಚ್ಚು-ಕಡಿಮೆ ಇರಬಹುದು. ಆದುದರಿಂದ ನಮ್ಮ ಅನುಕೂಲದಂತೆ ನಾವು ನಾಮಜಪವನ್ನು ಮಾಡುವಾಗ ಈ ಅಂತರವನ್ನು ಹೆಚ್ಚುಕಡಿಮೆ ಮಾಡಬಹುದು’ ಎಂದು ಹೇಳಿದರು. ಧ್ವನಿಮುದ್ರಣ ವನ್ನು ಮಾಡಿದ ಈ ನಾಮಜಪಗಳಲ್ಲಿ ಸರ್ವಸಾಮಾನ್ಯ ಅಂತರವನ್ನು ಇಡಲಾಗಿದೆ.
ಸನಾತನ ಸಂಸ್ಥೆಯಲ್ಲಿ ಈ ರೀತಿ ಸೂಕ್ಷ್ಮದ ಕಡೆಗೆ ಒಯ್ಯುವ ಅಧ್ಯಯನವನ್ನು ಮಾಡಲು ಕಲಿಸಲಾಗುತ್ತದೆ. ಆದುದರಿಂದಲೇ ಇತರ ಸಂಪ್ರದಾಯಗಳ ತುಲನೆಯಲ್ಲಿ ಸನಾತನದ ಸಾಧಕರ ಪ್ರಗತಿಯು ಶೀಘ್ರಗತಿಯಲ್ಲಿ ಆಗುತ್ತದೆ.
೪. ನಾಮಜಪ ಕೇಳಲು ಸನಾತನದ ಜಾಲತಾಣದ ಸಂಪರ್ಕಕೊಂಡಿ : https://www.sanatan.org/mr/a/85898.html
೫. ‘ಸನಾತನ ಚೈತನ್ಯವಾಣಿ’ಯನ್ನು ಡೌನಲೋಡ್ ಮಾಡಲು ಭೇಟಿ ನೀಡಿ : https://Sanatan.org/Chaitanyavani
‘ಶೂನ್ಯ’, ‘ಮಹಾಶೂನ್ಯ’ ಮತ್ತು ‘ನಿರ್ಗುಣ’ ಈ ನಾಮಜಪಗಳನ್ನು ಕೇಳಿ ಏನು ಅರಿವಾಗುತ್ತದೆ ?’, ಎಂಬುದರ ಅಧ್ಯಯನವನ್ನು ಮಾಡಿರಿ ಮತ್ತು ಏನಾದರೂ ವೈಶಿಷ್ಟ್ಯಪೂರ್ಣ ಅನುಭೂತಿ ಬಂದಿದ್ದರೆ ಅದನ್ನು [email protected] ಈ ವಿ-ಅಂಚೆ (ಈ-ಮೇಲ್) ವಿಳಾಸಕ್ಕೆ ಅಥವಾ ಈ-ಮೇಲ್ ಇಲ್ಲದವರು ಮುಂದಿನ ವಿಳಾಸಕ್ಕೆ ಅವಶ್ಯಕ ತಿಳಿಸಿರಿ.
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧