ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸನಾತನದ ೧೧೯ ನೇ ಸಂತರಾದ ಪೂ. (ಶ್ರೀಮತಿ) ಮಂದಾಕಿನಿ ಡಗವಾರ ಇವರ ಕುರಿತು ಸಂದರ್ಶನದಿಂದ ಬಿಡಿಸಿ ಹೇಳಿದ ಗುಣವೈಶಿಷ್ಟ್ಯಗಳು !

ಸಾಧಕರ ಪ್ರಗತಿಯಾಗಬೇಕೆಂದು, ಅವರಿಗೆ ಪ್ರೀತಿಯಿಂದ ಸಾಧನೆಯಲ್ಲಿ ಸಹಾಯ ಮಾಡುವ ಪರಿಪೂರ್ಣ ಮತ್ತು ಭಾವಪೂರ್ಣ ಸೇವೆಯನ್ನು ಮಾಡುವ ಮೂಲದ ವರ್ಧಾದಲ್ಲಿನ; ಸದ್ಯ ರಾಮನಾಥಿಯ ಸನಾತನದ ಆಶ್ರಮದಲ್ಲಿರುವ ಪೂ. (ಶ್ರೀಮತಿ) ಮಂದಾಕಿನಿ ಡಗವಾರ (೫೯ ವರ್ಷ) ಇವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದು ಅವರು ‘ಸಮಷ್ಟಿ ಸಂತರು’ ಎಂದು ಸನಾತನದ ೧೧೯ ನೇ ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿಯಾದ’ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ೧೦ ಏಪ್ರಿಲ್ ೨೦೨೨ ರಂದು ಘೋಷಿಸಿದರು. ಈ ವೇಳೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಪೂ. (ಶ್ರೀಮತಿ) ಮಂದಾಕಿನಿ ಡಗವಾರ ಇವರ ಕುರಿತು ಸಂದರ್ಶನದಿಂದ ಅವರ ಗುಣವೈಶಿಷ್ಟ್ಯಗಳು ತಿಳಿಯಿತು ! ಅದನ್ನು ಇಲ್ಲಿ ನೀಡುತ್ತಿದ್ದೇವೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

೧. ಶಾರೀರಿಕ ತೊಂದರೆಯಾಗುತ್ತಿರುವಾಗ ಭಾವಜಾಗೃತಿಗಾಗಿ ಪ್ರಯತ್ನಿಸಿದರೆ ಸಕಾರಾತ್ಮಕವಾಗಿರಲು ಸಾಧ್ಯವಾಗುತ್ತದೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಶಾರೀರಿಕ ತೊಂದರೆ ಆಗುತ್ತಿದ್ದರೂ ನೀವು ಸಾಧನೆಯ ಪ್ರಯತ್ನಗಳನ್ನು ಹೇಗೆ ಮಾಡುತ್ತೀರಿ ?

ಪೂ. (ಶ್ರೀಮತಿ) ಮಂದಾಕಿನಿ ಡಗವಾರ : ಶರೀರಕ್ಕೆ ತೊಂದರೆ ಆಗುತ್ತಿರುವಾಗ ಮನಸ್ಸಿನಿಂದ ಪ್ರಾರ್ಥನೆ, ಕೃತಜ್ಞತೆಯನ್ನು ವ್ಯಕ್ತಪಡಿಸುವುದು, ಸ್ವಯಂಸೂಚನೆಯನ್ನು ಕೊಡುವುದು, ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದೆನು. ‘ತೊಂದರೆ ಆಗುತ್ತಿದ್ದಾಗಲೂ ದೇವರು ಸಾಧನೆಯ ಪ್ರಯತ್ನಗಳನ್ನು ಮಾಡಿಸಿಕೊಳ್ಳುತ್ತಾನೆ’, ಎಂದು ಕೃತಜ್ಞತೆಯಿಂದ ಇರುತ್ತಿದ್ದೆನು. ಸಾಧ್ಯವಾದರೆ ಸತ್ಸಂಗಕ್ಕೆ ‘ಆನ್‌ಲೈನ್’ ಮೂಲಕ ಉಪಸ್ಥಿತವಿದ್ದು ಈಶ್ವರನ ಅನುಸಂಧಾನದಲ್ಲಿರಲು ಪ್ರಯತ್ನಿಸುತ್ತಿದ್ದೆನು. ಇದರಿಂದಾಗಿ ನಕಾರಾತ್ಮಕ ವಿಚಾರಗಳು ಬರಲಿಲ್ಲ. ‘ದೇವರು ಶಾರೀರ ಪ್ರಾರಬ್ಧವನ್ನು ನಷ್ಟಗೊಳಿಸುತ್ತಿದ್ದಾನೆ, ಔಷಧಿ ಎಂದರೆ ಪ್ರಸಾದವೇ ಇದೆ’, ಎಂಬ ಭಾವವನ್ನಿಡಬೇಕು. ಭಾವಜಾಗೃತಿಯ ಪ್ರಯತ್ನಗಳನ್ನು ಮಾಡುತ್ತಿದ್ದರೆ ‘ನಮಗೆ ತೊಂದರೆ ಆಗುತ್ತಿದೆ’, ಎಂದು ಎನಿಸುವುದಿಲ್ಲ ಮತ್ತು ಮನಸ್ಸು ಸಕಾರಾತ್ಮಕವಾಗಿರುತ್ತದೆ.

೨. ಅವಶ್ಯಕವಿದ್ದಲ್ಲಿ ಸಾಧಕರ ಸಹಾಯ ಪಡೆದು ಸೇವೆಯನ್ನು ಮಾಡುವುದರಿಂದ ಆನಂದ ಸಿಕ್ಕಿತು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ತಾವು ವರ್ಧಾದಲ್ಲಿ ಜಿಲ್ಲಾಸೇವಕರೆಂದು ಹೇಗೆ ಸೇವೆ ಮಾಡಿದ್ದೀರಿ ?

ಪೂ. (ಶ್ರೀಮತಿ) ಮಂದಾಕಿನಿ ಡಗವಾರ : ನಾನು ಜಿಲ್ಲೆಯಲ್ಲಿನ ಅಧ್ಯಾತ್ಮಪ್ರಸಾರದ ಸಮನ್ವಯದ ಸೇವೆಯನ್ನು ಮಾಡುವಾಗ ಚಿಕ್ಕವಳಾಗಿಯೇ (ಸ್ವತಃದ ಕಡೆಗೆ ಕಡಿಮೆತನವನ್ನು ತೆಗೆದುಕೊಂಡು) ಮಾಡುತ್ತಿದ್ದೆನು. ಗುರುದೇವರೇ ಎಲ್ಲವನ್ನು ಮಾಡಿಸಿಕೊಳ್ಳುತ್ತಿದ್ದಾರೆ. ನನಗೆ ಬೆರಳಚ್ಚು ಬರುತ್ತಿರಲಿಲ್ಲ. ಆದುದರಿಂದ ಸಾಧಕರ ಸಹಾಯ ವನ್ನು ಪಡೆದು ಸೇವೆಯನ್ನು ಮಾಡುತ್ತಿದ್ದೆನು. ನನ್ನ ಇದ್ದ ಸ್ಥಿತಿ ಯನ್ನು ಹೇಳಿ, ಸಾಧಕರ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೆನು. ಇದರಿಂದಾಗಿ ಆನಂದ ಸಿಗತೊಡಗಿತು.

೩. ಕೇಂದ್ರದಲ್ಲಿನ ಸಾಧಕರಿಗೆ ಆಧಾರವೆನಿಸಬೇಕೆಂದು ಪ್ರಯತ್ನಿಸಿದೆನು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ವರ್ಧಾದಲ್ಲಿ ಸಾಧಕರ ಸಂಖ್ಯೆಯು ತುಲನೆಯಲ್ಲಿ ಕಡಿಮೆ ಇದೆ, ಆದರೂ ನೀವು ಹೇಗೆ ಪ್ರಯತ್ನಿಸಿದಿರಿ ?

ಪೂ. (ಶ್ರೀಮತಿ) ಮಂದಾಕಿನಿ ಡಗವಾರ : ಅಧ್ಯಾತ್ಮಪ್ರಸಾರದ ಸೇವೆಯನ್ನು ಮಾಡುವಾಗ ಆಯೋಜನೆಯನ್ನು ಮಾಡಿ ಸೇವೆಗಳಿಗೆ ಸಮಯಮಿತಿಯನ್ನು ಹಾಕುತ್ತಿದ್ದೆನು. ನಾವು ಲಭ್ಯವಿರುವ ಸಾಧಕರಲ್ಲಿ ಸೇವೆಯನ್ನು ಹೇಗೆ ಮಾಡಬಹುದು, ಎಂಬ ಆಯೋಜನೆಯನ್ನು ಮಾಡುತ್ತಿದ್ದೆವು. ‘ಕೇಂದ್ರದಲ್ಲಿನ ಸಾಧಕರಿಗೆ ನಮ್ಮ ಆಧಾರವೆನಿಸಬೇಕು’, ಎಂದು ಎನಿಸುತ್ತದೆ. ಅವರೊಂದಿಗೆ ಮಾತನಾಡುವಾಗಲೂ ಹಾಗೆ ಪ್ರಯತ್ನಿಸುತ್ತಿದ್ದೆನು. ಸೇವೆಗಳಲ್ಲಿ ಅಡಚಣೆ ಉಂಟಾದರೆ ಧರ್ಮಪ್ರಚಾರಕ ಸಂತರ ಮಾರ್ಗದರ್ಶನವನ್ನು ಪಡೆಯುತ್ತಿದ್ದೆನು; ಆದರೆ ಸೇವೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸಿದೆನು.

೪. ಸಾಧನೆಯಲ್ಲಿ ನಕಾರಾತ್ಮಕತೆ ಎಂದಿಗೂ ಬರಲಿಲ್ಲ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಸಾಧನೆಯನ್ನು ಮಾಡತೊಡಗಿದ ನಂತರ ಪ್ರಾರಂಭದಲ್ಲಿ ನಿಮ್ಮ ಯಜಮಾನರಿಂದ ಸಾಧನೆಗೆ ವಿಶೇಷವಾಗಿ ಅನುಕೂಲವಿರಲಿಲ್ಲ. ಆಗ ‘ನನಗೆ ಸೇವೆ ಮಾಡಲು ಆಗುವುದಿಲ್ಲ, ಎಂದು ಯಾವಾಗಲಾದರೂ ಅನಿಸಿತೇ ?

ಪೂ. (ಶ್ರೀಮತಿ) ಮಂದಾಕಿನಿ ಡಗವಾರ : ಗುರುದೇವರ ಕೃಪೆಯಿಂದ ‘ಸೇವೆ ಮಾಡಲು ಆಗುವುದಿಲ್ಲ’, ಎಂದು ಯಾವಾಗಲೂ ಅನಿಸಲಿಲ್ಲ. ಅವರೇ ಅದನ್ನು ಮಾಡಿಸಿಕೊಂಡರು. ಯಾವತ್ತೂ ನಕಾರಾತ್ಮಕತೆ ಬರಲಿಲ್ಲ. ಪ್ರಾರಂಭದಲ್ಲಿ ಯಜಮಾನರಿಗೆ ನಾನು ಸಾಧನೆಯ ಪ್ರಯತ್ನಗಳನ್ನು ಮಾಡುವುದು ಇಷ್ಟವಾಗುತ್ತಿರಲಿಲ್ಲ, ಆದರೂ ಗುರುದೇವರು ಸಾಧನೆಯನ್ನು ಮಾಡಿಸಿಕೊಂಡರು. ನಂತರ ಯಜಮಾನರೂ ಸಕಾರಾತ್ಮಕರಾದರು. ಈಗ ಹಿಂದೆ ತಿರುಗಿ ನೋಡಿದಾಗ, ದೇವರು ಹೇಗೆ ಮಾಡಿಸಿ ಕೊಂಡರು, ಎಂಬುದರ ಬಗ್ಗೆ ಕೃತಜ್ಞತೆ ಅನಿಸುತ್ತದೆ. ನಾನು ಯಾವ ಸೇವೆ ಬಂದರೂ ಅದಕ್ಕೆ ಕೇವಲ ‘ಆಗಲಿ’ ಎನ್ನುತ್ತಿದ್ದೆನು.

೫. ಯಜಮಾನರ ಪ್ರಕೃತಿಯನ್ನು ತಿಳಿದುಕೊಂಡು ಪ್ರಯತ್ನಗಳನ್ನು ಮಾಡುತ್ತಿರುವುದರಿಂದ ಅವರಲ್ಲಿ ಪರಿವರ್ತನೆಯಾಗಿ ಅವರು ಸಾಧನೆ ಮಾಡಲು ಆರಂಭಿಸಿದರು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಸಾಧನೆ ಬಗ್ಗೆ ಯಜಮಾನರ ಸಹಾಯ ಇಲ್ಲದಿದ್ದರೂ ನೀವು ಹೇಗೆ ಸೇವೆ ಮಾಡಿದಿರಿ ?

ಪೂ. (ಶ್ರೀಮತಿ) ಮಂದಾಕಿನಿ ಡಗವಾರ : ನಾನು ವೃತ್ತಿಯಿಂದ ಶಿಕ್ಷಕಿಯಾಗಿದ್ದೆನು; ಆದರೆ ನನಗೆ ಸಾಧನೆಯ ಪ್ರಸಾರವನ್ನು ಮಾಡಲು ಸತ್ಸಂಗವನ್ನು ತೆಗೆದುಕೊಳ್ಳುವ ತಳಮಳವಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿದರೆ ಅದರಿಂದ ಹಣ ಸಿಗುತ್ತದೆ, ಆದರೆ ‘ಸಮಾಜದಲ್ಲಿ ಅಧ್ಯಾತ್ಮಪ್ರಸಾರ ಮಾಡಲು ಸತ್ಸಂಗವನ್ನು ತೆಗೆದುಕೊಂಡರೆ ನನ್ನ ಸಾಧನೆಯಾಗುತ್ತದೆ’, ಎಂದು ನನಗೆ ಅನಿಸುತ್ತಿತ್ತು. ನಾನು ಸೇವೆಗೆ ಹೋಗುವ ಮೊದಲು ಮನೆಯಲ್ಲಿನ ಎಲ್ಲ ಕೆಲಸಗಳು, ಅಡುಗೆ ಹೀಗೆಲ್ಲ ಮಾಡಿಯೇ ಹೋಗುತ್ತಿದ್ದೆನು. ಸೇವೆಗೆ ಹೋದ ನಂತರವೂ ‘ಊಟ ಆಯಿತೇ ?’, ‘ಔಷಧಗಳನ್ನು ತೆಗೆದುಕೊಂಡಿದ್ದೀರಾ ?’, ಎಂದು ಅವರಿಗೆ ಕೇಳುತ್ತಿದ್ದೆನು. ನಾನು ಅವರ ಪ್ರಕೃತಿಯನ್ನು ತಿಳಿದುಕೊಂಡು ಪ್ರಯತ್ನಿಸುತ್ತಿದ್ದೆನು. ಇದರಿಂದ ಕಾಲಾಂತರದಿಂದ ಅವರಲ್ಲಿ ಸಾಧನೆಯ ಬಗ್ಗೆ ಪರಿವರ್ತನೆ ಆಯಿತು ಮತ್ತು ಯಜಮಾನರೂ ಸಾಧನೆಯನ್ನು ಮಾಡತೊಡಗಿದರು. ಮಕ್ಕಳೂ ನನಗೆ ಸಾಧನೆಯಲ್ಲಿ ಸಹಾಯ ಮಾಡಿದರು.

ಯಜಮಾನರು ರಾಮನಾಥಿ ಆಶ್ರಮಕ್ಕೆ ಬಂದಾಗ, ಅವರಿಗೆ ‘ಪರಾತ್ಪರ ಗುರು ಡಾಕ್ಟರರು ವಿಶಾಲವಾಗಿದ್ದು ಅವರು ಮಹಾವಿಷ್ಣುಸ್ವರೂಪರಾಗಿದ್ದಾರೆ’, ಎಂಬ ದೃಶ್ಯವು ಕಾಣಿಸಿತ್ತು. ಆದುದರಿಂದ ಅವರಿಗೆ ತುಂಬಾ ಭಾವಜಾಗೃತಿಯಾಗಿತ್ತು. ಗುರುದೇವರಿಗೆ ಸಾಧಕನಲ್ಲಿ ಶ್ರದ್ಧೆಯನ್ನು ಹೆಚ್ಚಿಸಲು ಏನೇನು ಮಾಡಬೇಕಾಗುತ್ತದೆ’, ಎಂಬುದನ್ನು ನನಗೆ ಆಗ ಗಮನಕ್ಕೆ ಬಂದಿತು. ನನ್ನ ಮಗ ಅಮಿತನಿಗೆ ಪೂರ್ಣವೇಳೆ ಸಾಧನೆ ಮಾಡುವ ಇಚ್ಛೆ ಇತ್ತು, ಆ ಸಮಯದಲ್ಲಿಯೂ ಅದಕ್ಕಾಗಿ ಯಜಮಾನರಿಂದ ವಿಶೇಷವಾಗಿ ಅನುಮತಿ ಸಿಗುತ್ತಿರಲಿಲ್ಲ. ಅಂತಹ ಪ್ರಸಂಗದಲ್ಲಿಯೂ ನನ್ನ ಮನಸ್ಸಿನಲ್ಲಿ ಯಾವುದೇ ವಿಚಾರಗಳು ಬರಲಿಲ್ಲ. ಇದೆಲ್ಲ ಕೃಷ್ಣಲೀಲೆಯೇ ಆಗಿತ್ತು.