ಹಿಂದೂಗಳ ವಿರೋಧದ ನಂತರ ‘ಮಲಬಾರ ಗೋಲ್ಡ್’ನಿಂದ ಟಿಕಲಿ ಇಟ್ಟಿರುವ ನಟಿ ತಮನ್ನಾ ಭಾಟಿಯಾ ಇವರ ಜಾಹೀರಾತು ಬಿತ್ತರ !

ಮುಂಬಯಿ – ಬಂಗಾರ ಮತ್ತು ವಜ್ರದ ಆಭರಣಗಳನ್ನು ಮಾರಾಟ ಮಾಡುವ ಎಮ್.ಪಿ. ಅಹಮ್ಮದ ಇವರ ಒಡೆತನದ ‘ಮಲಬಾರ ಗೋಲ್ಡ್ ಆಂಡ್ ಡೈಮಂಡ್ಸ್’ ಎಂಬ ಕಂಪನಿಯು ಅಕ್ಷಯ ತದಿಗೆಯ ಆಭರಣಗಳ ಜಾಹೀರಾತನ್ನು ಬಿತ್ತರಿಸುವಾಗ ನಟಿ ಕರಿನಾ ಕಪೂರ ಖಾನ ಇವರನ್ನು ಆಭರಣ ಹಾಕಿ ತೋರಿಸಲಾಗಿದೆ. ಆದರೆ ಅವರ ಹಣೆಯಲ್ಲಿ ಟಿಕಲಿ ಇರಲಿಲ್ಲ. (‘ಮುಸಲ್ಮಾನರ ಮಾಲೀಕತ್ವದ ಕಂಪನಿಯು ಈದ್ ಸಮಯದಲ್ಲಿ ಜಾಹೀರಾತನ್ನು ಪ್ರಸಾರ ಮಾಡುವಾಗ ಮುಸಲ್ಮಾನರ ಉಡುಗೆತೊಡುಗೆ ಬಗ್ಗೆ ಖಂಡಿತವಾಗಿ ವಿಚಾರ ಮೂಡುತ್ತದೆ; ಆದರೆ ಅದೇ ಹಿಂದೂಗಳ ಹಬ್ಬಗಳ ಸಮಯದಲ್ಲಿ ಜಾಹೀರಾತನ್ನು ಪ್ರಸಾರ ಮಾಡುವಾಗ ಹಿಂದೂಗಳ ಉಡುಗೆತೊಡುಗೆ ಹಾಗೂ ಅವರ ಸಂಸ್ಕೃತಿಯ ವಿಚಾರವನ್ನು ಏಕೆ ಮಾಡುವುದಿಲ್ಲ ?’, ಎಂದು ಹಿಂದೂಗಳು ಈ ಕಂಪನಿಗೆ ಪ್ರಶ್ನಿಸಬೇಕು ! – ಸಂಪಾದಕರು) ಇದನ್ನು ಹಿಂದೂಗಳು ವಿರೋಧಿಸಿದ ನಂತರ ಈಗ ಕರೀನಾ ಕಪೂರ ಖಾನ್ ಇವರ ಬದಲು ನಟಿ ತಮನ್ನಾ ಭಾಟಿಯಾ ಇವರು ಟಿಕಲಿ ಹಚ್ಚಿಕೊಂಡ ಮತ್ತು ಆಭರಣ ಹಾಕಿದ ಜಾಹೀರಾತನ್ನು ಬಿತ್ತರಿಸಲಾಗಿದೆ. ಆದರೆ ಹಿಂದೂಗಳು ವಿರೋಧಿಸಿದ ನಂತರ ಈ ಕಂಪನಿಯು ಯಾವುದೇ ಕ್ಷಮೆಯಾಚನೆ ಮಾಡಿಲ್ಲ ಅಥವಾ ಅಧಿಕೃತವಾಗಿ ಈ ಬಗ್ಗೆ ವಿವರಣೆ ನೀಡಿಲ್ಲ. (ಈ ಮೊದಲು ಕೂಡ ದೀಪಾವಳಿಯಲ್ಲಿ ಅನೇಕ ಕಂಪನಿಗಳು ತಮ್ಮ ಜಾಹೀರಾತಿನಲ್ಲಿ ಮಹಿಳೆಯರನ್ನು ಹಣೆಯಲ್ಲಿ ಕುಂಕುಮವಿಟ್ಟುಕೊಳ್ಳದೆ ತೋರಿಸಿದ್ದರು. ಅನಂತರ ಹಿಂದೂ ಗಳು ವಿರೋಧಿಸಿದಾಗ ಆ ಜಾಹೀರಾತನ್ನು ಬದಲಾಯಿಸಿ ಮಹಿಳೆ ಯರು ಕುಂಕುಮವಿಟ್ಟುಕೊಂಡಿರುವುದನ್ನು ತೋರಿಸಲಾಯಿತು. ಇದು ಜಾಹೀರಾತಿನ ಮಾಧ್ಯಮದಿಂದ ಹಿಂದೂಗಳ ಪರಂಪರೆಗೆ ಘಾಸಿ ಮಾಡುವ ಸಂಚಾಗಿದೆ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕೀಯ) ಇದು ತೋರಿಕೆಯ ಬದಲಾವಣೆಯಾಗಿರುವುದರಿಂದ ಈ ಕಂಪನಿಯ ಹಿಂದೂವಿರೋಧಿ ನಿಲುವಿಗೆ ಹಿಂದೂಗಳ ವಿರೋಧವು ಮುಂದುವರಿಯುವುದು ಎಂದು ಹೇಳಲಾಗುತ್ತಿದೆ.

#Boycott_MalabarGold ಹೆಸರಿನ ಟ್ವಿಟರ್ ಟ್ರೆಂಡ್ ರಾಷ್ಟ್ರೀಯ ಸ್ತರದಲ್ಲಿ ೫ ನೇ ಸ್ಥಾನದಲ್ಲಿ !

ಮಲಬಾರ್ ಗೋಲ್ಡ್ ಜಾಹೀರಾತಿನ ವಿರುದ್ಧ ಟ್ವಿಟರ್‌ನಲ್ಲಿ #Boycott_MalabarGold ಮತ್ತು #No _Bindi _ No_ Business ಹ್ಯಾಷಟ್ಯಾಗ್ ಟ್ರೆಂಡ್ ಆಯಿತು. ಈ ಟ್ರೆಂಡ್ ಮೂಲಕ ಧರ್ಮಪ್ರೇಮಿ ಹಿಂದೂಗಳು ಮಲಬಾರ್ ಗೋಲ್ಡ್ ಅನ್ನು ನಿಷೇಧಿಸಿ ಅದನ್ನು ಬಹಿಷ್ಕರಿಸುವಂತೆ ಕೋರಿದ್ದರು. ಈ ಟ್ರೆಂಡ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು, ಈ ೨ ಹ್ಯಾಷಟ್ಯಾಗ್ ರಾಷ್ಟ್ರೀಯ ಸ್ತರದಲ್ಲಿ ಅನುಕ್ರಮವಾಗಿ ೫ ಮತ್ತು ೬ ನೇ ಸ್ಥಾನ ಪಡೆದವು. ಈ ವಿಷಯದಲ್ಲಿ ೨೫ ಸಾವಿರಕ್ಕೂ ಹೆಚ್ಚಿನ ಟ್ವೀಟ್ ಮಾಡಲಾಯಿತು.

ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿರುವುದರಿಂದ ಕೆಲವು ಆಕರ್ಷಕ ಟ್ವೀಟ್ಸ್ !

೧. ಅಕ್ಷಯ ತೃತೀಯಾ ಇದು ಹಿಂದೂಗಳ ಹಬ್ಬವಾಗಿದೆ. ಅದನ್ನು ರಂಜಾನ್‌ನ ಹಾಗೆ ಪ್ರಚಾರ ಮಾಡಬಾರದು ಎಂದು ಮಲಬಾರ್ ಗೋಲ್ಡ್ ಕಂಪನಿ ಗಮನದಲ್ಲಿಟ್ಟುಕೊಳ್ಳಬೇಕು ! – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದು ಜನಜಾಗೃತಿ ಸಮಿತಿ

೨. ಮಲಬಾರ್ ಗೋಲ್ಡ್ ಈ ಜಾಹೀರಾತು ಹಿಂದೂಗಳ ಹಬ್ಬವನ್ನು ಅವಮಾನಿಸಿದೆ. ಕುಂಕುಮ ಹಚ್ಚುವುದು ಇದು ಪಾರಂಪಾರಿಕ ಹಿಂದೂ ವೇಷಭೂಷಣದಲ್ಲಿ ಮಹತ್ವಪೂರ್ಣ ಭಾಗವಾಗಿದೆ. ಹಿಂದೂಗಳ ಪರಂಪರೆಯನ್ನು ವಿಡಂಬನೆ ಮಾಡುವವರ ಮೇಲೆ ಹಿಂದೂಗಳು ತಮ್ಮ ಹಣ ವೆಚ್ಚ ಮಾಡಬೇಕೆ ? ಇದು ಎಂದಿಗೂ ಸಾಧ್ಯವಿಲ್ಲ ! – ಹಿಂದುತ್ವನಿಷ್ಠ ಅಪರ್ಣಾ ನಾಯಿಕ