ಪ್ರಸ್ತುತ ದೆಹಲಿಯ ಜಹಾಂಗೀರಪುರಿಯಲ್ಲಿ ನಡೆಯುತ್ತಿರುವ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಇದೇ ಜಹಾಂಗೀರಪುರಿಯ ಮತಾಂಧ ಬಹುಸಂಖ್ಯಾತ ಪ್ರದೇಶದಿಂದ ಹನುಮ ಜಯಂತಿ ಮೆರವಣಿಗೆ ಆರಂಭವಾದಾಗ ಕಲ್ಲು ತೂರಾಟ ನಡೆದಿತ್ತು. ಈ ಕಲ್ಲು ತೂರಾಟದಲ್ಲಿ ಹಲವು ಪೊಲೀಸರಿಗೂ ಗಾಯಗಳಾಗಿವೆ. ಅದರ ನಂತರ, ಭಾಜಪ ಆಡಳಿತದ ದೆಹಲಿ ಮಹಾನಗರ ಪಾಲಿಕೆಯು ಈ ಅನಧಿಕೃತ ಕಟ್ಟಡ ಕಾಮಗಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿತು ಮತ್ತು ಬುಲ್ಡೋಜರ್‌ಗಳು ಅವುಗಳ ಮೇಲೆ ಚಲಿಸಲು ಪ್ರಾರಂಭಿಸಿದವು. ಅನಧಿಕೃತ ಕಟ್ಟಡಗಳ ನಿರ್ಮಿತಿಯಾಗದಂತೆ ಪುರಸಭೆಯ ಆಡಳಿತವು ಎಚ್ಚೆತ್ತುಕೊಳ್ಳಬೇಕಾಗಿತ್ತು. ಹಾಗಿದ್ದರೂ ಸಹ, ತಡವಾದರೂ ಸರಿ ಮಹಾನಗರ ಪಾಲಿಕೆಯು ಕೈಗೆತ್ತಿಕೊಂಡಿದ್ದ ‘ಬುಲ್ಡೋಜರ’ನ ಹೆಜ್ಜೆಯು ಸ್ವಾಗತಾರ್ಹವಾಗಿತ್ತು; ಆದರೆ ಆಡಳಿತ ಕ್ಷಿಪ್ರ ಕ್ರಮ ಆರಂಭಿಸಿದ ಕೂಡಲೇ ಹಲವು ಕಾಂಗ್ರೆಸಿಗರು, ಸಾಮ್ಯವಾದಿಗಳು ಮತ್ತಿತರರಿಗೆ ಹೊಟ್ಟೆಯುರಿಯಲು ಆರಂಭವಾಗಿ ಅವರು ನೇರ ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿದರು. ಏಕೆಂದರೆ ಜಹಾಂಗೀರಪುರಿಯಲ್ಲಿನ ಬಹುತೇಕ ಅನಧಿಕೃತ ಕಾಮಗಾರಿಗಳು ಮತಾಂಧರದ್ದಾಗಿವೆ. ಅಲ್ಲಿ ಅನೇಕ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರು ನೆಲೆಸಿದ್ದಾರೆ ಎಂಬ ಆರೋಪವೂ ಇದೆ. ಈ ಕ್ರಮದ ವಿರುದ್ಧ ‘ಜಮಿಯತ್-ಎ-ಹಿಂದ್’ ಈ ಸಂಘಟನೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಕಾಂಗ್ರೆಸ್ಸಿನ ಹಿರಿಯ ನಾಯಕ ಕಪಿಲ್ ಸಿಬಲ್ ಮತ್ತು ದುಷ್ಯಂತ್ ದವೆ ಇವರು ಯುಕ್ತಿವಾದ ಮಂಡಿಸಿದರು. ನ್ಯಾಯಾಲಯವು ಅನಧಿಕೃತ ಕಟ್ಟಡಗಳ ನೆಲಸಮಕ್ಕೆ ಎರಡು ವಾರಗಳ ತಡೆಯಾಜ್ಞೆ ನೀಡಿತು. ಈ ಸಂದರ್ಭದಲ್ಲಿ ಒಟ್ಟಾರೆ ಅನಧಿಕೃತ ಕಟ್ಟಡಗಳ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಅನಧಿಕೃತ ಕಾಮಗಾರಿ ಒಂದು ರಾಷ್ಟ್ರವ್ಯಾಪಿ ಸಮಸ್ಯೆಯಾಗಿದೆ. ಅದು ಜಟಿಲವಾಗಲು ರಾಜಕಾರಣಿಗಳ ಮತಪೆಟ್ಟಿಗೆಯು ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ‘ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುವವರನ್ನು ಮಾನವೀಯತೆಯ ಹೆಸರಲ್ಲಿ ಬೆಂಬಲಿಸದಿದ್ದರೆ ಚುನಾವಣೆ ಸಂದರ್ಭದಲ್ಲಿ ಅವರ ಮತಗಳು ಕಡಿಮೆ ಬರುತ್ತದೆ, ಈ ವಿಚಾರದಿಂದ ಎಲ್ಲ ಪಕ್ಷಗಳ ಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇಲ್ಲಿಯವರೆಗೆ, ಅನೇಕ ಬಾರಿ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲಾಗಿದೆ. ಆದರೆ ಇದರಿಂದ ಮೂಲ ಸಮಸ್ಯೆ ಬಗೆಹರಿಯುತ್ತಿಲ್ಲ, ಬದಲಾಗಿ ಅನಧಿಕೃತ ಕಟ್ಟಡಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಮೂಲದಲ್ಲಿ ಅತಿಕ್ರಮಣಗಳನ್ನು ತಡೆಯುವುದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ. ಇಷ್ಟೊಂದು ಪ್ರಮಾಣದ ಅನಧಿಕೃತ ಕಟ್ಟಡಗಳು ನಡೆಯುವವರೆಗೂ ಆಡಳಿತ ನಿದ್ರೆ ಮಾಡುತ್ತಿತ್ತೇ ? ಇದು ನಿಜವಾದ ಪ್ರಶ್ನೆಯಾಗಿದೆ. ಇಂತಹ ಅನಧಿಕೃತ ನಿರ್ಮಾಣ ಖಂಡಿತವಾಗಿಯೂ ಒಬ್ಬರಿಬ್ಬರದ್ದಲ್ಲ. ಅದಕ್ಕಾಗಿ ಯಾವುದಾದರೂ ಸರಪಳಿ ಕೆಲಸ ಮಾಡುತ್ತಿದೆಯೇ ? ಅದರಲ್ಲಿ ಯಾವೆಲ್ಲ ಅಧಿಕಾರಿಗಳು ಮತ್ತು ನಾಯಕರು ಇದ್ದಾರೆ ? ಇತ್ಯಾದಿ ತನಿಖೆಯಾಗಬೇಕು. ಅಧಿಕಾರಿಗಳು ಮತ್ತು ಮುಖಂಡರ ನಡುವಿನ ಅರ್ಥಪೂರ್ಣ ಹೊಂದಾಣಿಕೆಯ ಮೂಲಕ ಇಂತಹ ನಿರ್ಮಾಣಗಳು ನಡೆಯುತ್ತಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಡಳಿತಗಾರರು ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಹೊರತು ನಿಜವಾಗಿಯೂ ಜನಪ್ರಿಯತೆಗಾಗಿ ಅಲ್ಲ; ಆದರೆ ಮತದ ಆಸೆಯಿಂದ ರಾಜಕಾರಣಿಗಳು ಮತ್ತು ಧೃತರಾಷ್ಟ್ರ-ಗಾಂಧಾರಿ ವೃತ್ತಿಯ ಆಡಳಿತ ಅಧಿಕಾರಿಗಳು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ವ್ಯರ್ಥವಾಗಿದೆ. ತಮ್ಮ ವೈಯಕ್ತಿಕ ಜಾಗವನ್ನು ಇಂಚಿನಷ್ಟೂ ಅತಿಕ್ರಮಿಸುವುದನ್ನು ಸಹಿಸದ ವ್ಯಕ್ತಿಗಳು, ಸರಕಾರಿ ಅಥವಾ ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿದರೂ ಅದನ್ನು ನಿರ್ಮೂಲನೆ ಮಾಡಲು ತಮ್ಮದೇ ಹಕ್ಕುಗಳನ್ನು ಬಳಸಲು ಹಿಂಜರಿಯುವುದು ಜಾತ್ಯತೀತ ಪ್ರಜಾಪ್ರಭುತ್ವದ ವೈಫಲ್ಯವೇ ಆಗಿದೆ. ದೇಶದ ಕಾಯಿದೆಯನ್ನು ದುರ್ಲಕ್ಷಿಸಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿದರೆ, ಅದು ಜನರ ಅಸಹಾಯಕತೆಯೇ; ಆದರೆ ಇಂತಹ ಅನಧಿಕೃತ ನಿರ್ಮಾಣಗಳ ವಿರುದ್ಧ ಕ್ರಮ ಕೈಗೊಂಡರೆ ದುರಹಂಕಾರ, ಇದು ಯಾವ ತರ್ಕವಾಗಿದೆ ? ಅನಧಿಕೃತ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮತಿ ಅಗತ್ಯವಿಲ್ಲ; ಆದರೆ ಅದನ್ನು ನೆಲಸಮ ಮಾಡುವಾಗ ‘ನೋಟೀಸ್’ಗಳನ್ನು ನೀಡುತ್ತಾರೆ, ಹೀಗೇಕೆ ?
ಜನಪ್ರತಿನಿಧಿಗಳ ಸಮಾಜದ್ರೋಹ !
ಅನಧಿಕೃತ ಕಾಮಗಾರಿಯನ್ನು ತಡೆಗಟ್ಟಲು ಅದು ಆಗಿರುವುದು ಗಮನಕ್ಕೆ ಬಂದ ಕೂಡಲೇ ನೆಲಸಮ ಮಾಡುವುದು ಮತ್ತು ಸಂಬಂಧಿತರಿಗೆ ತಕ್ಷಣ ಕಠಿಣ ಶಿಕ್ಷೆ ವಿಧಿಸುವುದೇ ಅತಿಕ್ರಮಣದ ಸಮಸ್ಯೆ ಮೇಲಿನ ಪರಿಣಾಮಕಾರಿಯಾದ ಉಪಾಯವಾಗಿದೆ. ಹೀಗೆ ಮಾಡಿದರೆ ಮಾತ್ರ ಭವಿಷ್ಯದಲ್ಲಿ ಕಾನೂನಿನ ಭಯ ಹುಟ್ಟುಹಾಕಿ ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕಬಹುದು. ಅಪರಾಧಿಗಳ ವಿರುದ್ಧ ಮೇಲು ಮೇಲಿನ ಕ್ರಮ ಕೈಗೊಂಡರೆ ಅಪರಾಧ ನಿಲ್ಲುವುದು ಯಾವಾಗ ? ಅನಧಿಕೃತ ನಿರ್ಮಾಣವನ್ನು ತಡೆಯಲು ಅದನ್ನು ಅಧಿಕೃತಗೊಳಿಸುವುದೇ ನಿಜವಾದ ಉಪಾಯವಲ್ಲ. ಹಾಗೆ ಮಾಡಿದರೆ ಉತ್ತೀರ್ಣರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಅನುತ್ತೀರ್ಣವಾಗುವ ಮಾನದಂಡವನ್ನು ಸಡಿಲಿಸಿದಂತೆಯಾಗಿದೆ ! ಜಹಾಂಗೀರ್‌ಪುರಿಯಲ್ಲಿನ ಕಾರ್ಯಾಚರಣೆಯ ಸಂದರ್ಭದಲ್ಲಿ ನ್ಯಾಯಾಲಯವು ತಡೆ ಆಜ್ಞೆ ನೀಡಿದ ನಂತರ ಅದು ಪ್ರತ್ಯಕ್ಷ ಸಿಗುವ ತನಕ ಮಹಾನಗರಪಾಲಿಕೆಯ ಆಯುಕ್ತರೂ ಕ್ರಮವನ್ನು ಮುಂದುವರೆಸಿದ್ದರು. ಅದಕ್ಕೆ ಸಾಮ್ಯವಾದಿ ನಾಯಕಿ ವೃಂದಾ ಕಾರತ ಅವರು ಕೂಗಾಡುತ್ತಾ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಮವನ್ನು ತಡೆಯಲು ಪ್ರಯತ್ನಿಸಿದರು. ಇಂತಹವರೆಲ್ಲ ಈ ರೀತಿಯ ತತ್ಪರತೆಯನ್ನು ಅನಧಿಕೃತ ನಿರ್ಮಾಣಗಳನ್ನು ತಡೆಯಲು ಏಕೆ ತೋರಿಸುತ್ತಿಲ್ಲ ? ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿದೆ ಇದೇ ರೀತಿ ಈ ಹಿಂದೆ ಪುಣೆಯ ಅನಧಿಕೃತ ಪ್ರಾರ್ಥನಾಸ್ಥಳಕ್ಕೆ ಸಂಬಂಧಿಸಿದಂತೆ ಘಟನೆ ನಡೆದಿತ್ತು. ಪುರಸಭೆ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಪ್ರಾರ್ಥನಾಸ್ಥಳವನ್ನು ಕೆಡವಲು ಆಡಳಿತ ಮಂಡಳಿ ಮುಂದಾದಾಗ ಅಂದಿನ ಕಾಂಗ್ರೆಸ್ ಮುಖಂಡರು ಬಂದು ‘ಮೊದಲು ನನ್ನ ಮೇಲೆ ಬುಲ್ಡೋಜರ್ ಓಡಿಸಿ’ ಎಂದು ಹೇಳಿದರು. ಸರಕಾರಿ ಭೂಮಿ ಒತ್ತುವರಿ ತೆರವಿಗೆ ಕೇವಲ ಸರಕಾರದ ಪ್ರತಿನಿಧಿಗಳೇ ವಿರೋಧ ವ್ಯಕ್ತಪಡಿಸಿದರೆ, ‘ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ ?’ ಇಂದು ಪ್ರಾರ್ಥನಾ ಸ್ಥಳಗಳಿಂದ ಅನಧಿಕೃತ ಧ್ವನಿವರ್ಧಕಗಳನ್ನು ತೆಗೆಯಬೇಕೆಂಬ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ, ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದರಿಂದ ಪ್ರಗತಿ (ಅಧೋಗತಿ)ಪರರ ಗುಂಪು ಎಂದು ಕರೆಯಲ್ಪಡುವವರ ದ್ವಿಮುಖ ನೀತಿ ತೋರಿಸುತ್ತದೆ. ವಾಸ್ತವದಲ್ಲಿ ಅನಧಿಕೃತರನ್ನು ಬೆಂಬಲಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅನಧಿಕೃತ ನಿರ್ಮಾಣದಿಂದ ನಾಗರಿಕ ಸೌಲಭ್ಯಗಳ ಮೇಲೆ ಒತ್ತಡ ಬೀಳುತ್ತದೆ. ಈ ಸಮಸ್ಯೆಯು ಕೇವಲ ನಗರ ಯೋಜನೆಗೆ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಗೂ ಸಂಬಂಧಿಸಿದೆ. ಇಂತಹ ಸ್ಥಳಗಳಿಂದ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿರುವುದು ಹಲವು ಬಾರಿ ಬಹಿರಂಗವಾಗಿದೆ. ಜಹಾಂಗೀರಪುರಿಯ ಗಲಭೆಗಳು ಇತ್ತೀಚಿನ ಉದಾಹರಣೆಯಾಗಿದೆ. ಆದ್ದರಿಂದ ಈ ಸಮಸ್ಯೆ ಕೇವಲ ಅನಧಿಕೃತ ನಿರ್ಮಾಣದ ದೃಷ್ಟಿಯಿಂದ ಕ್ರಮ ಕೈಗೊಳ್ಳದೇ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ ಈ ಸಮಸ್ಯೆ ನಿಭಾಯಿಸುವುದು ಅವಶ್ಯಕತೆಯಾಗಿದೆ !