ರಾಜಸ್ಥಾನದ ಕರೌಲಿಯಲ್ಲಿ ಯುಗಾದಿಯಂದು ಅಂದರೆ ಹಿಂದೂಗಳ ಹೊಸ ವರ್ಷದ ದಿನದಂದು ಹಿಂದೂಗಳು ದ್ವಿಚಕ್ರ ವಾಹನದ ಮೆರವಣಿಗೆಯನ್ನು ಆಯೋಜಿಸಿದ್ದರು. ಈ ಮೆರವಣಿಗೆ ಮತಾಂಧರ ಪ್ರದೇಶಕ್ಕೆ ಬಂದ ಕೂಡಲೇ ಮತಾಂಧರು ಕಲ್ಲು ತೂರಾಟ ಮಾಡಿದರು. ಅಲ್ಲದೆ ಹಿಂದೂಗಳ ಅಂಗಡಿಗಳ ಮೇಲೆ ಕಲ್ಲುತೂರಾಟ ನಡೆಸಿ ಬೆಂಕಿ ಹಚ್ಚಿದ್ದಾರೆ. ಈ ಘಟನೆಯ ಕುರಿತು ಒಂದು ವಾರ್ತಾವಾಹಿನಿಯ ವರದಿಗಾರರು ಸ್ಥಳಕ್ಕೆ ತೆರಳಿ ದೃಶ್ಯಾವಳಿಗಳನ್ನು ತೋರಿಸಿದ ಬಳಿಕ ಭಯಾನಕ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ದ್ವಿಚಕ್ರ ವಾಹನದ ಮೆರವಣಿಗೆ ಹಾದು ಹೋಗುತ್ತಿದ್ದ ಜಾಗದಲ್ಲಿ ಮತಾಂಧರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದು, ಸಮೀಪದಲ್ಲೇ ಪ್ರಾರ್ಥನಾಸ್ಥಳವೂ ಇದೆ. ಆ ಪ್ರದೇಶದಲ್ಲಿ, ಮತಾಂಧರ ಎರಡು ಅಂತಸ್ತಿನ ಕಟ್ಟಡಗಳ ಮೇಲ್ಭಾಗದ ಛಾವಣಿಯ ಮೇಲೆ ದೊಡ್ಡ ಸಿಮೆಂಟ್ ಬ್ಲಾಕ್‌ಗಳಿದ್ದವು. ಅವು ೧೦ ರಿಂದ ೧೫ ಕೆಜಿ ತೂಕವಿರುತ್ತವೆ. ಈ ಬ್ಲಾಕ್ ಅನ್ನು ಎರಡನೇ ಮಹಡಿಯಿಂದ ಹಿಂದೂಗಳ ಮೆರವಣಿಯ ಮೇಲೆ ತಳ್ಳಲಾಯಿತು. ಇದರ ದೃಶ್ಯಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತವೆ. ಜೊತೆಗೆ ಛಾವಣಿಯ ಮೇಲೆ ಕಲ್ಲುಗಳ ದೊಡ್ಡ ರಾಶಿಗಳನ್ನು ಹಾಕಿರುವುದು ಕಂಡುಬಂದಿದೆ. ಕಟ್ಟಡ ಸಾಮಗ್ರಿಗಳಿಂದ ಕಬ್ಬಿಣದ ರಾಡ್‌ಗಳ ದಾಸ್ತಾನು ಕೂಡ ಅದರಲ್ಲಿತ್ತು.
ಹಿಂದೂಗಳ ವಿರುದ್ಧ ಷಡ್ಯಂತ್ರ !
ಹಿಂದೂಗಳ ಮೆರವಣಿಗೆ ಹತ್ತಿರ ಬರುತ್ತಲೇ ಮತಾಂಧರು ಇದ್ದಕ್ಕಿದ್ದಂತೆ ನಡೆಸಿದ ಕಲ್ಲುತೂರಾಟ ಹಾಗೂ ಸೀಮೆ ಎಣ್ಣೆಯನ್ನು ಎರಚಿ ಸುಟ್ಟಿದ್ದರಿಂದ ಕರೌಲಿಯಲ್ಲಿ ಭಯಭೀತರಾದ ಹಿಂದೂ ಕುಟುಂಬಗಳು ಮತ್ತು ಅಂಗಡಿಯವರು ‘ನಮ್ಮ ಆಸ್ತಿಗಳು ಮಾರಾಟಕ್ಕಿವೆ’, ಎಂಬ ಫಲಕಗಳನ್ನು ಹಾಕಿಕೊಂಡು ಪಲಾಯನ ಮಾಡಲು ಸಿದ್ಧತೆ ನಡೆಸಿದ್ದಾರೆ. ಕೆಲವು ಹಿಂದೂ ಅಂಗಡಿಯವರು ಓಡಿ ಹೋಗಿದ್ದಾರೆ. ಈ ಪ್ರದೇಶದಲ್ಲಿ ೬೦ ವರ್ಷಕ್ಕೂ ಹೆಚ್ಚು ಸಮಯದಿಂದ ಅಂಗಡಿ ನಡೆಸುತ್ತಿರುವ ಅಂಗಡಿ ಮಾಲೀಕರು, “ಹಿಂದೆಂದೂ ಇಂತಹ ಭೀಕರ ದಾಳಿ ಅನುಭವಿಸಿರಲಿಲ್ಲ. ಇಂದಿಗೂ ಆ ದಿನದ ಭಯವಿದೆ. ನಮ್ಮ ಜೀವಕ್ಕೆ ಅಪಾಯವಿದೆ. ಹಾಗಾಗಿ ಇಲ್ಲಿಂದ ಪಲಾಯನ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಮತಾಂಧರ ಈ ದಾಳಿಯ ಕುರಿತು ರಾಜಸ್ಥಾನದ ಪೊಲೀಸ್ ಅಧೀಕ್ಷಕರ ಪ್ರಕಾರ, ಮೆರವಣಿಯಲ್ಲಿ ಆಕ್ಷೇಪಾರ್ಹ ಹಾಡುಗಳನ್ನು ಹಾಕಲಾಗಿತ್ತು. ಆದ್ದರಿಂದ ಅವರು ಪ್ರತ್ಯುತ್ತರ ನೀಡಿದರು. ಇದು ಪ್ರತ್ಯುತ್ತರವೋ ಅಥವಾ ಪಿತೂರಿಯೋ ? ಛಾವಣಿಯ ಮೇಲೆ ಇಷ್ಟು ದೊಡ್ಡ ಪ್ರಮಾಣದ ಕಲ್ಲುಗಳು ಮತ್ತು ಇತರ ಸಾಮಗ್ರಿಗಳು ಸಿಕ್ಕಿದ್ದು, ಇದು ಪೂರ್ವಯೋಜಿತ ಸಂಚಲ್ಲವೇ ? ಹಿಂದೂಗಳ ಬೆರಳೆಣಿಕೆಯಷ್ಟು ಅಂಗಡಿಗಳನ್ನು ಸುಡಲು ಸೀಮೆಎಣ್ಣೆ ಇದ್ದಕ್ಕಿದ್ದಂತೆ ಹೇಗೆ ಲಭ್ಯವಾಯಿತು ? ಮತಾಂಧರು ಓಣಿಯ ಎರಡೂ ಬದಿಯ ಕಟ್ಟಡಗಳ ಮೇಲೆ ಹತ್ತಿ ಕಲ್ಲು ತೂರುತ್ತಿದ್ದರು. ಹಿಂದೂ ಹಬ್ಬಗಳ ಸಂದರ್ಭದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗುತ್ತಾರೆ. ಈ ಅಜಾಗರೂಕತೆಯ ಲಾಭ ಪಡೆದು ಅವರಲ್ಲಿ ಭಯ ಹುಟ್ಟಿಸಲು ಈ ಎಲ್ಲ ಷಡ್ಯಂತ್ರಗಳನ್ನು ರೂಪಿಸಿರುವುದು ಸ್ಪಷ್ಟವಾಗಿದೆ. ಆದರೂ ‘ಹಿಂದೂಗಳು ಯಾರ ನಂಬಿಕೆಯ ಮೇಲೆ ಸುರಕ್ಷಿತವಾಗಿರಬಹುದು ? ಎಂಬುದು ಪ್ರಶ್ನೆ ಮೂಡುತ್ತದೆ. ಅಲ್ಲದೆ, ಆಕ್ಷೇಪಾರ್ಹ ಹಾಡುಗಳನ್ನು ಹಾಕಿದ್ದರಿಂದ ಹಿಂದೂಗಳ ಮೇಲೆ ಹಲ್ಲೆ ಮಾಡಲು ಮತಾಂಧರಿಗೆ ಪೊಲೀಸರು ಅನುಮತಿ ನೀಡಿದ್ದಾರೆಯೇ ? ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವಿದೆ. ಆದ್ದರಿಂದ ‘ಸಹಜವಾಗಿಯೇ ಮತಾಂಧರು ಉನ್ಮತ್ತರಾಗಿ ದ್ದಾರೆ, ಎಂದು ತೋರುತ್ತದೆ. ರಾಜಸ್ಥಾನವು ಯೋಧರ ನಾಡಾಗಿದೆ; ಆದರೆ ಅಲ್ಲಿ ಆಗುತ್ತಿರುವ ಹಿಂದೂಗಳ ಮೇಲಿನ ಹಲ್ಲೆ ಮತ್ತು ಹಿಂದೂಗಳ ಮೇಲಿನ ದೌರ್ಜನ್ಯದ ಘಟನೆಗಳನ್ನು ಗಮನಿಸಿದರೆ, ಅದು ಈಗ ಹಿಂದೂಗಳಿಗೆ ಅಸುರಕ್ಷಿತ ಪ್ರದೇಶವಾಗಿ ಬದಲಾಗುತ್ತಿದೆ, ಎಂದು ತಿಳಿಯುತ್ತಿದೆ.
ಹಿಂದೂಗಳ ಶೋಷಣೆ !
ಈ ಹಿಂದೆ, ಉತ್ತರ ಪ್ರದೇಶದ ಕೈರಾನಾ, ಹರಿಯಾಣದ ಮೇವಾತ್ ಮತ್ತು ಗುಜರಾತ್‌ನ ಗಡಿ ಗ್ರಾಮಗಳಲ್ಲಿ ಹಿಂದೂಗಳ ಮೇಲೆ ಇದೇ ರೀತಿಯ ದಾಳಿಗಳು ನಡೆದಿದ್ದರಿಂದ ಅವರಿಗೆ ಪಲಾಯನ ಮಾಡಬೇಕಾಯಿತು. ದೆಹಲಿಯಲ್ಲಿ ಮತಾಂಧರು ಹಿಂದೂಗಳ ವಸತಿಗಳಿಗೆ ಬಂದು ಥಳಿಸುವುದು, ಹಿಂದೂ ಹೆಣ್ಣು ಮಕ್ಕಳಿಗೆ ಅತ್ಯಾಚಾರದ ಬೆದರಿಕೆಯನ್ನು ಹಾಕುವುದು ಇತ್ಯಾದಿಗಳು ನಡೆಯುತ್ತಿರುವುದರಿಂದ ಅಲ್ಲಿಯ ಹಿಂದೂಗಳೂ ತಮ್ಮ ಮನೆಯ ಮುಂದೆ ‘ಈ ಮನೆ ಮಾರಾಟಕ್ಕಿದೆ’, ಎಂಬ ಫಲಕಗಳನ್ನು ಹಾಕಿದ್ದರು. ಈ ಘಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವೊಮ್ಮೆ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ವರದಿ ಯಾಗಿದ್ದರೂ, ಆ ಸ್ಥಳಗಳ ಆಡಳಿತಗಾರರು ಅವರ ವಿರುದ್ಧ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡು ಹಿಂದೂಗಳಿಗೆ ಧೈರ್ಯ ತುಂಬಿದರು ಹೀಗೆ ಆಗಲಿಲ್ಲ. ಆದುದರಿಂದ ‘ಇದು ಹಿಂದೂಗಳ ವಿರುದ್ಧ ‘ಲ್ಯಾಂಡ್ ಜಿಹಾದ್’ ಅನ್ನು ತಡೆಯುವಲ್ಲಿ ಮತ್ತು ನಾಶಪಡಿಸುವಲ್ಲಿ ಆಡಳಿತಗಾರರು ವಿಫಲರಾಗಿದ್ದಾರೆ’, ಎಂದೇ ಹೇಳಬೇಕಾಗುತ್ತದೆ.
ಕಾಶ್ಮೀರದಲ್ಲಿ ೩೨ ವರ್ಷಗಳ ಹಿಂದೆ ಹೊಂಚು ಹಾಕಿ ಹಾಗೂ ವ್ಯವಸ್ಥಿತ ರೀತಿಯಲ್ಲಿ ಪಿತೂರಿಯನ್ನು ರೂಪಿಸಲಾಯಿತು ಮತ್ತು ಕಾಶ್ಮೀರಿ ಹಿಂದೂಗಳನ್ನು ತೊಡೆದುಹಾಕಲು ಕಾಶ್ಮೀರದ ಮಸೀದಿಗಳಿಂದ ಏಕಕಾಲದಲ್ಲಿ ಹಿಂದೂಗಳನ್ನು ‘ಮತಾಂತರವಾಗಿ, ಓಡಿಹೋಗಿ ಅಥವಾ ಸಾಯಿರಿ’, ಎಂದು ಬೆದರಿಕೆ ಹಾಕಲಾಯಿತು ಮತ್ತು ತಕ್ಷಣದ ಕ್ರಮವನ್ನು ತೆಗೆದುಕೊಳ್ಳಲಾಯಿತು. ಹಿಂದೂಗಳು ಬೇಗನೆ ಪಲಾಯನ ಮಾಡಬೇಕೆಂದು ಅವರ ಮೇಲೆ ದಾಳಿ ಮಾಡಿ ಕೊಲ್ಲಲಾಯಿತು, ಹಿಂದೂಗಳ ಅಂಗಡಿಗಳು, ಮನೆಗಳು ಮತ್ತು ದೇವಾಲಯಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ಹಿಂದೂ ಮಹಿಳೆ ಯರ ಮೇಲೆ ಅತ್ಯಾಚಾರ ಮಾಡಲಾಯಿತು. ಕೆಲವು ದಿನಗಳ ಹಿಂದಷ್ಟೇ ಶ್ರೀನಗರದ ದೊಡ್ಡ ಮಸೀದಿಯಲ್ಲಿ ‘ಆಜಾದಿ’ಯ ಘೋಷಣೆ ಮರುಕಳಿಸಿತ್ತು. ಹಿಂದೂಗಳಿಗಾಗಿ ಅವರು ಬಹುಸಂಖ್ಯಾತವಾಗಿರುವ ದೇಶದಲ್ಲಿ ಈ ರೀತಿಯ ದಯನೀಯ ಸ್ಥಿತಿ ಇರುವಾಗ ಓರ್ವ ವಿವಾದಿತ ಪತ್ರಕರ್ತೆ ರಾಣಾ ಅಯೂಬ್ ಇವರು ‘ಈ ಬಾರಿಯ ರಂಜಾನ್‌ಗೆ ಭಾರತದ ೨೨ ಕೋಟಿ ಮುಸಲ್ಮಾನರ ಸುರಕ್ಷತೆಗಾಗಿ ಪ್ರಾರ್ಥನೆಯಾಗಬೇಕು. ಭಾರತದಲ್ಲಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ’, ಎಂದು ಟ್ವೀಟ್ ಮಾಡಿ ವಿಷಾದಿಸಿದರು. ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶದಲ್ಲಿ ಒಂದು ಘಟನೆ ನಡೆದಿದೆ. ಅಲ್ಲಿ ಪತ್ರಿಕೆ ವಿತರಕನಾಗಿ ಕೆಲಸ ಮಾಡುತ್ತಿದ್ದ ಮತಾಂಧನೊಬ್ಬ ನಿತ್ಯ ಪತ್ರಿಕೆ ನೀಡುತ್ತಿದ್ದ ಹಿಂದೂ ಕುಟುಂಬದ ೧೫ ವರ್ಷದ ಬಾಲಕಿಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಪ್ರತಿಭಟಿಸಿದ್ದರಿಂದ ಮತಾಂಧನು ಆಕೆಯ ಕತ್ತು ಸೀಳಿ ಕೊಂದನು. ಈ ಘಟನೆಗಳಿಂದ ಭಾರತದಲ್ಲಿ ಯಾರ ಜೀವನ ಅಸುರಕ್ಷಿತವಾಗಿದೆ ? ಬಹುಸಂಖ್ಯಾತ ಹಿಂದೂಗಳದ್ದೋ ಮತಾಂಧರದ್ದೋ ? ಈ ಬಗ್ಗೆ ರಾಣಾ ಅಯೂಬ್ ಮಾತನಾಡುತ್ತಾರೆಯೇ ? ಬಹುಸಂಖ್ಯಾತ ಹಿಂದೂಗಳ ಮೇಲೆ ಅತ್ಯಾಚಾರ ನಡೆಸಿದರೂ ಅಲ್ಪಸಂಖ್ಯಾತ ಮತಾಂಧರು ಹೇಗೆ ಅಸುರಕ್ಷಿತತೆಯನ್ನು ಅನುಭವಿಸುತ್ತಾರೆ ? ಅಲ್ಲದೆ, ಇಸ್ಲಾಮಿ ದೇಶಗಳ ಸಂಘಟನೆ ಮುಸಲ್ಮಾನರ ಮೇಲಿನ ತಥಾಕಥಿತ ಅತ್ಯಾಚಾರದ ಬಗ್ಗೆ ಭಾರತ ಸರಕಾರಕ್ಕೆ ಏಕೆ ಪ್ರಶ್ನಿಸುತ್ತದೆ ? ಇದು ಅಂತಾರಾಷ್ಟ್ರೀಯ ಪಿತೂರಿಯ ಭಾಗವಲ್ಲವೇ ? ಹಿಜಾಬ್-ಅಲ್ಲದ ಪ್ರಕರಣವನ್ನು ಜಗತ್ತಿನಾದ್ಯಂತ ದಬ್ಬಾಳಿಕೆಯೆಂದು ಬಿಂಬಿಸಲಾಗುತ್ತಿದೆ; ಆದರೆ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಯಾವುದೇ ಪ್ರತಿಭಟನೆ ಇಲ್ಲ. ಇಂದು ಹಿಂದೂಗಳು ಒಗ್ಗಟ್ಟಾಗಿ ಉಳಿಯಲು, ಆತ್ಮರಕ್ಷಣೆಯ ತರಬೇತಿಯನ್ನು ತೆಗೆದುಕೊಳ್ಳಲು ಮತ್ತು ಸಮರ್ಥ ಪ್ರಚಾರ ವ್ಯವಸ್ಥೆಯನ್ನು ರಚಿಸಲು ಕೆಲವು ಪರಿಹಾರಗಳಾಗಿವೆ. ಹಾಗಿದ್ದಲ್ಲಿ ಈ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳನ್ನು ಎಲ್ಲ ರೀತಿಯಲ್ಲಿ ರಕ್ಷಿಸುವುದು ಖಚಿತವಾಗಿದೆ !