ಅಮೇರಿಕೆಯ ನಡಿಗೆ ಹಿಂದೂ ರಾಷ್ಟ್ರದ ಕಡೆಗೆ ?

ಉತ್ತರ ಮತ್ತು ದಕ್ಷಿಣ ಖಂಡಗಳಲ್ಲಿ ವಿಭಜಿಸಲ್ಪಟ್ಟ ಅಮೇರಿಕಾದಲ್ಲಿ, ದಿನದಿಂದ ದಿನಕ್ಕೆ ಹಿಂದೂ ಧರ್ಮವು ಅತಿ ವೇಗದಿಂದ ಹರಡುತ್ತಿದೆ. ನಮ್ಮ ದೇಶದಲ್ಲಿ ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಕೋಲಾಹಲವಿದ್ದರೂ ಅಥವಾ ಹಿಂದುತ್ವದ ಅಡಿಯಲ್ಲಿ ಸಾಂಪ್ರದಾಯಿಕತೆಯ ಬಣ್ಣವನ್ನು ಹಚ್ಚುವ ಪ್ರಯತ್ನಗಳು ನಡೆದಿದ್ದರೂ, ಸಾಮಥ್ರ್ಯಶಾಲಿ ಅಮೇರಿಕಾ ದಿನದಿಂದ ದಿನಕ್ಕೆ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದೆ. ಅಮೇರಿಕಾದ ಜನರ ಸೆಳೆತ ಹಿಂದೂ ಧರ್ಮದ ಕಡೆಗೆ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಬರುವ ಪ್ರಶ್ನೆ ಎಂದರೆ, ಮುಂಬರುವ ಕಾಲದಲ್ಲಿ ಅಮೇರಿಕಾ ಹಿಂದೂ ರಾಷ್ಟ್ರದಲ್ಲಿ ಪರಿವರ್ತನೆ ಆಗಬಹುದೇ ?

ಹಿಂದೂ ಧರ್ಮವನ್ನು ಟೀಕಿಸುವ ಅಮೇರಿಕಾದಲ್ಲಿ ಹಿಂದೂ ಪರಂಪರೆಯ ಹೆಚ್ಚುತ್ತಿರುವ ಪ್ರಭಾವ

ಹಿಂದೂ ಧರ್ಮ ಕೆಲವರಿಗಾಗಿ ಸನಾತನ ಧರ್ಮ ಮತ್ತು ಇನ್ನು ಕೆಲವರಿಗಾಗಿ ಜೀವನವನ್ನು ಜೀವಿಸುವ ಪದ್ಧತಿಯಾಗಿದೆ. ಜಗತ್ತಿನಲ್ಲಿನ ಎಲ್ಲಕ್ಕಿಂತ ಪ್ರಾಚೀನ ಧರ್ಮವಾಗಿರುವ ಹಿಂದೂ ಧರ್ಮದ ತತ್ತ್ವಜ್ಞಾನ ಮತ್ತು ಸಂಸ್ಕೃತಿಯಿಂದ ಪ್ರಭಾವಿತವಾಗಿ ಸಂಪೂರ್ಣ ಅಮೇರಿಕಾ ಹಿಂದುತ್ವದ ಕಡೆಗೆ ಮಾರ್ಗಕ್ರಮಣ ಮಾಡುತ್ತಿದೆ. ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಜನರು ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ. ಸದ್ಯ ಜಗತ್ತಿನಲ್ಲಿ ಹಿಂದೂ ಧರ್ಮದ ಯಾವುದಾದರೊಂದು ಕೇಂದ್ರವಿದ್ದರೆ , ಅದು ಅಮೇರಿಕಾ ! ಎಂದು ಹೇಳಬಹುದು. ಒಂದು ಕಾಲ ಹೇಗಿತ್ತೆಂದರೆ, ಅಮೇರಿಕಾದಲ್ಲಿ ಹಿಂದೂ ಧರ್ಮದ ಅಪಹಾಸ್ಯವನ್ನು ಮಾಡಲಾಗುತ್ತಿತ್ತು, ಧರ್ಮದ ಮೇಲಿನ ವಿಶ್ವಾಸವನ್ನು ಅಂಧಶ್ರದ್ಧೆಯೆಂದು ತಿಳಿಯಲಾಗುತ್ತಿತ್ತು ಮತ್ತು ಧರ್ಮಕ್ಕೆ ಸಂಬಂಧಿಸಿದ ಶ್ರದ್ಧೆಯನ್ನು ಆಡಂಬರವೆಂದು ಹೇಳಲಾಗುತ್ತಿತ್ತು. ಇಂದು ಅದೇ ಅಮೇರಿಕಾದ ಭೂಮಿಯಲ್ಲಿ ಯೋಗವನ್ನು ಮಾಡುವುದರೊಂದಿಗೆ ಸೂರ್ಯನಮಸ್ಕಾರಗಳನ್ನೂ ಮಾಡುತ್ತಿದ್ದಾರೆ. ಗಾಯತ್ರಿಮಂತ್ರವನ್ನು ಹಿಡಿದು ಮಹಾಮೃತ್ಯುಂಜಯ ಮಂತ್ರದ ಜಪವನ್ನು ಮಾಡಲಾಗುತ್ತಿದೆ ಮತ್ತು ಹಿಂದೂ ಪರಂಪರೆಗಳಿಂದ ಪ್ರಭಾವಿತರಾಗಿ ಹಿಂದೂ ಧರ್ಮವನ್ನು ಸ್ವೀಕರಿಸಲಾಗುತ್ತಿದೆ. ಆದುದರಿಂದ ಜಗತ್ತಿನ ಎಲ್ಲಕ್ಕಿಂತ ಹೆಚ್ಚು ಜನನಿಬಿಡ (ಬಿಸಿ) ನ್ಯೂಯಾರ್ಕ್‍ನ ಟೈಮ್ಸ್ ವೃತ್ತದಲ್ಲಿ ಪ್ರತಿವರ್ಷ ಯೋಗದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ನಾಸ್ಟ್ರಾಡಾಮಸ್‍ನ ಹಿಂದೂ ಧರ್ಮದ ಪುನರುತ್ಥಾನದ ಭವಿಷ್ಯವಾಣಿಯು ಸತ್ಯವಾಗುವುದು ಕಂಡು ಬರುತ್ತಿದೆ

ಅಮೇರಿಕಾದ ಯಹೂದಿಗಳಿಂದ ಹಿಡಿದು ಕ್ರೈಸ್ತ ನಾಗರಿಕರು ತಮ್ಮ ಕೈಯಲ್ಲಿ ಕೆಂಪು ದಾರವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಹಿಂದೂ ಸಂಪ್ರದಾಯಕ್ಕನುಸಾರ ಆಪ್ತರ ಶ್ರಾದ್ಧವನ್ನು ಮಾಡುವುದರೊಂದಿಗೆ ಅದರ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ. ಅಮೇರಿಕಾದ ಸಾಮಾನ್ಯ ಜನರಿಂದ ಹಿಡಿದು ಗಣ್ಯ ವ್ಯಕ್ತಿಗಳು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಇವೆಲ್ಲ ವಿಷಯಗಳೆಂದರೆ ನಾಸ್ಟ್ರಾಡಾಮಸ್‍ನ ಹಿಂದೂ ಧರ್ಮದ ಪುನರುತ್ಥಾನದ ಭವಿಷ್ಯವಾಣಿಯು ಸತ್ಯವಾಗುವುದು ಕಂಡು ಬರುತ್ತಿದೆ ! ಇದೆಲ್ಲವನ್ನು ಹೇಳುವ ಕಾರಣವೆಂದರೆ, ಫೆಸಬುಕ್‍ನ ಮುಖ್ಯಸ್ಥ ಮಾರ್ಕ್ ಝುಕೆರಬರ್ಗ್ ಇವರು ತಮ್ಮ ಯಶಸ್ಸಿನ ಹಿಂದೆ ನೀಮ ಕರೌಲಿ ಬಾಬಾ ಇವರ ಆಶೀರ್ವಾದ ಇರುವುದಾಗಿ ಹೇಳಿದ್ದಾರೆ. ಅಮೇರಿಕಾದ ಸಂಸತ್ತಿನಲ್ಲಿ ಭಗವದ್ಗೀತೆಯ ಮೇಲೆ ಕೈಯನ್ನಿಟ್ಟು ಪ್ರಮಾಣವಚನವನ್ನು ತೆಗೆದುಕೊಳ್ಳಲಾಗುತ್ತದೆ. ಇನ್ನೊಂದೆಡೆ ಹಾಲಿವುಡ್‍ನ ಎಲ್ಲ ಪ್ರಖ್ಯಾತ ವ್ಯಕ್ತಿಗಳು ತಮ್ಮ ಜೀವನದಲ್ಲಿ ಹಿಂದುತ್ವದ ಬಣ್ಣವನ್ನು ಹಚ್ಚುತ್ತಿದ್ದಾರೆ.

ಗಾಯಕರು, ಉದ್ಯಮಿಗಳು, ರಾಜಕಾರಣಿಗಳು ಮುಂತಾದ ಎಲ್ಲರ ಸೆಳೆತ ಹಿಂದೂ ಧರ್ಮದ ಕಡೆಗೆ

ದಿನದಿಂದ ದಿನಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಮೇರಿಕಾದ ಜನರು ಹಿಂದೂ ಧರ್ಮದೊಂದಿಗೆ ಜೋಡಿಸಲ್ಪಡುತ್ತಿದ್ದಾರೆ. ಮಾರ್ಕ್ ಝುಕೆರಬರ್ಗ ಇವರು ಜನರ ಅದೃಷ್ಟವನ್ನು ಸೃಷ್ಟಿಸುವ ನೀಮ್ ಕರೌಲಿ ಬಾಬಾರವರೆದುರು ನತಮಸ್ತಕರಾಗಲು ಸ್ವತಃ ನೈನಿತಾಲ್‍ನ್ನು ತಲುಪಿದರು ಮತ್ತು ಅದು ಸಹ ‘ಆ್ಯಪಲ್’ನ ಸಂಸ್ಥಾಪಕರಾದ ಸ್ಟೀವ್ಹ್ ಜಾಬ್ಸ್ ಇವರ ಹೇಳಿಕೆಯ ಮೇರೆಗೆ ! ಸ್ಟೀವ್ಹ್ ಜಾಬ್ ಇವರೇ ಅವರಿಗೆ ಮಹಾಬಲಿ ಹನುಮಾನಸ್ವರೂಪ ನೀಮ್ ಕರೌಲಿ ಬಾಬಾರವರ ಕಡೆಗೆ ಹೋಗಲು ಹೇಳಿದ್ದರು. ಅಮೇರಿಕಾದ ಸೆನೆಟರ್ ತುಲಸಿ ಗಬಾರ್ಡ್ ಇವರು ಪವಿತ್ರ ಗೀತೆಯ ಮೇಲೆ ಕೈಯನ್ನಿಟ್ಟು ಪ್ರಮಾಣವಚನವನ್ನು ಸ್ವೀಕರಿಸಿದರು. ಇತ್ತೀಚೆಗೆ ಹಾಲಿವುಡ್‍ನ ಖ್ಯಾತ ನಟ ಸಿಲ್ವೆಸ್ಟರ್ ಸ್ಟೆಲಾನ್ ಇವರು ಹಿಂದೂ ಸಂಪ್ರದಾಯಕ್ಕನುಸಾರ ತಮ್ಮ ಮಗನ ಶ್ರಾದ್ಧವನ್ನು ಮಾಡಲು ಭಾರತಕ್ಕೆ ಬಂದಿದ್ದರು. ಅದೇ ರೀತಿ ದಕ್ಷಿಣ ಆಫ್ರಿಕಾದ ಪ್ರಸಿದ್ಧ ಕ್ರಿಕೆಟ್‍ಪಟು ಜಾಂಟಿ ಹ್ರೋಡ್ಸ್ ಇವರು ಮಾನಸಿಕ ಶಾಂತಿಗಾಗಿ ಹಿಂದೂ ದೇವಸ್ಥಾನಗಳಲ್ಲಿ ಯಜ್ಞಯಾಗಗಳನ್ನು ಮಾಡಿದರು. ಇಷ್ಟೇ ಅಲ್ಲದೇ, ಅವರು ಭಾರತೀಯ ಸಂಸ್ಕೃತಿಯಿಂದ ಎಷ್ಟು ಪ್ರಭಾವಿತರಾದರೆಂದರೆ, ಅವರು ತಮ್ಮ ಮಗಳ ಹೆಸರನ್ನು ‘ಇಂಡಿಯಾ’ ಎಂದಿಟ್ಟಿದ್ದಾರೆ. ಅಮೇರಿಕಾದಲ್ಲಿ ಜನಿಸಿದ ಜ್ಯುಲಿಯಾ ರಾಬಟ್ರ್ಸ್ ಇವರು ಅನೇಕ ಜನಪ್ರಿಯ ಚಲನಚಿತ್ರಗಳಲ್ಲಿ ನಟಿಸಿ ಹಾಲಿವುಡ್ ಚಲನಚಿತ್ರೋದ್ಯಮದಲ್ಲಿ ತಮ್ಮ ಪ್ರತ್ಯೇಕವಾದ ಛಾಪನ್ನು ಸೃಷ್ಟಿಸಿದ್ದಾರೆ. ಅವರು ಸಹ ಅನೇಕ ಪ್ರಸಂಗಗಳಲ್ಲಿ ತಾವು ಹಿಂದೂ ಇರುವುದಾಗಿ ಹೇಳಿದ್ದಾರೆ. ಪ್ರಸಿದ್ಧ ಸಂಗೀತಕಾರ ಜಾನ್ ಕಾಲ್ಡ್ರಾನ್ ಇವರ ಪಾಲನೆಪೋಷಣೆಯು ಒಂದು ಕ್ರೈಸ್ತ ಕುಟುಂಬದಲ್ಲಿ ಆಯಿತು; ಆದರೆ ಈಗ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಅಮೇರಿಕಾದ ಗಾಯಕ ಟ್ರೆವರ್ ಹ್ವಾಲ್ ಇವರು ಯಾವ ರೀತಿ ಹಿಂದೂ ಧರ್ಮದಿಂದ ಪ್ರಭಾವಿತರಾದರೆಂದರೆ, ಅವರ ಹಾಡುಗಳಲ್ಲಿ ಸಂಸ್ಕೃತ ಮಂತ್ರಗಳಿಗೆ ಸ್ಥಾನವಿರುತ್ತದೆ. ಇಂದು ಅಮೇರಿಕೆಯ ನಡಿಗೆ ಹಿಂದೂ ರಾಷ್ಟ್ರದ ಕಡೆಗೆ ? ಉತ್ತರ ಮತ್ತು ದಕ್ಷಿಣ ಖಂಡಗಳಲ್ಲಿ ವಿಭಜಿಸಲ್ಪಟ್ಟ ಅಮೇರಿಕಾದಲ್ಲಿ, ದಿನದಿಂದ ದಿನಕ್ಕೆ ಹಿಂದೂ ಧರ್ಮವು ಅತಿ ವೇಗದಿಂದ ಹರಡುತ್ತಿದೆ.

ನಮ್ಮ ದೇಶದಲ್ಲಿ ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಕೋಲಾಹಲವಿದ್ದರೂ ಅಥವಾ ಹಿಂದುತ್ವದ ಅಡಿಯಲ್ಲಿ ಸಾಂಪ್ರದಾಯಿಕತೆಯ ಬಣ್ಣವನ್ನು ಹಚ್ಚುವ ಪ್ರಯತ್ನಗಳು ನಡೆದಿದ್ದರೂ, ಸಾಮಥ್ರ್ಯಶಾಲಿ ಅಮೇರಿಕಾ ದಿನದಿಂದ ದಿನಕ್ಕೆ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದೆ. ಅಮೇರಿಕಾದ ಜನರ ಸೆಳೆತ ಹಿಂದೂ ಧರ್ಮದ ಕಡೆಗೆ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಬರುವ ಪ್ರಶ್ನೆ ಎಂದರೆ, ಮುಂಬರುವ ಕಾಲದಲ್ಲಿ ಅಮೇರಿಕಾ ಹಿಂದೂ ರಾಷ್ಟ್ರದಲ್ಲಿ ಪರಿವರ್ತನೆ ಆಗಬಹುದೇ ? ಅವರು ಭಾರತದಲ್ಲಿ ಸಾಧುವಿನ ಜೀವನವನ್ನು ನಡೆಸುತ್ತಿದ್ದಾರೆ. ಗ್ಯಾರೀ ಜಾನ್ಸನ್ ಇವರು ಒಂದು `ಬ್ಯಾಂಡ್’ (ವಾದ್ಯವೃಂದ) ಅನ್ನು 30 ವರ್ಷಗಳ ಕಾಲ ನಡೆಸಿದರು, ಬಾಲ್ಯದಿಂದಲೇ ಅವರ ಸೆಳೆತ ಹಿಂದೂ ಧರ್ಮದ ಕಡೆಗಿತ್ತು. ಮೃತ್ಯುವಿನ ನಂತರ ಅವರ ಅಸ್ಥಿಗಳನ್ನು ಋಷಿಕೇಶದ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು.

ಜಾರ್ಜ್ ಹ್ಯಾರಿಸನ್ ಇವರನ್ನು ಜಗತ್ತಿನಲ್ಲಿನ ಸುಪ್ರಸಿದ್ಧ ರಾಕ್ ಸ್ಟಾರ್ ಎಂದು ಗುರುತಿಸಲಾಗುತ್ತದೆ. ಅವರು 1960 ರಲ್ಲಿ ಕ್ರೈಸ್ತ ಧರ್ಮವನ್ನು ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸಿದರು. ಅವರು ಯಾವಾಗಲೂ ಅವರ `ಬ್ಯಾಂಡ್’ನಲ್ಲಿ ಹಿಂದೂ ಧರ್ಮದ ಪ್ರಚಾರವನ್ನು ಮಾಡುತ್ತಿದ್ದರು. ಮೃತ್ಯುವಿನ ನಂತರ ಅವರ ಅಸ್ಥಿಗಳನ್ನು ಗಂಗಾ-ಯಮುನಾ ನದಿಗಳಲ್ಲಿ ಪ್ರವಹಿಸಲಾಯಿತು. ಇಷ್ಟೇ ಅಲ್ಲ, ಅಮೇರಿಕಾದ ಮಾಜಿ ರಾಷ್ಟ್ರಪತಿಗಳಾದ ಬರಾಕ್ ಓಬಾಮಾ ಇವರು ತಮ್ಮ ಕಿಸೆಯಲ್ಲಿ ಹನುಮಾನ ಚಾಲಿಸಾ ಮತ್ತು ಹನುಮಾನ ಮೂರ್ತಿಯನ್ನು ಇಟ್ಟುಕೊಳ್ಳುತ್ತಾರೆ. ಅಮೇರಿಕಾದ ಹಿಂದಿನ ರಾಷ್ಟ್ರಪತಿಗಳಾದ ಡೋನಾಲ್ಡ್ ಟ್ರಂಪ್

ಇವರಿಗೆ ತಮ್ಮ ದೇಶದ ಬಹುಸಂಖ್ಯೆ ಜನರು ಹಿಂದುತ್ವದ ಕಡೆಗೆ ಹೊರಳುತ್ತಿದ್ದಾರೆ ಮತ್ತು ಅಲ್ಲಿ ಹಿಂದೂಗಳ ಜನಸಂಖ್ಯೆ ಬಹಳ ದೊಡ್ಡ ಪ್ರಮಾಣದಲ್ಲಿದೆ ಎಂದು ಚೆನ್ನಾಗಿ ಗೊತ್ತಿದೆ. ಆದುದರಿಂದ ಅವರಿಗೆ ರಾಷ್ಟ್ರಪತಿ ಚುನಾವಣೆಯ ಮೊದಲು ಭಾರತಕ್ಕೆ ಪ್ರವಾಸ ಮಾಡಬೇಕಾಯಿತು.

ಅಮೇರಿಕಾ ಹಿಂದೂ ರಾಷ್ಟ್ರವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ

ಹಿಂದೂ ಧರ್ಮವು ಎಂತಹ ಒಂದು ಧರ್ಮವಾಗಿದೆ ಎಂದರೆ, ಅದು ಜನರನ್ನು ನಿಸರ್ಗಕ್ಕೆ ಜೋಡಿಸುತ್ತದೆ. ಅಹಿಂಸೆ ಮತ್ತು ಶಾಂತಿಯನ್ನು ಕಲಿಸುತ್ತದೆ. ಜಗತ್ತಿನಲ್ಲಿನ ಎಲ್ಲಕ್ಕಿಂತ ಪ್ರಾಚೀನ ಮತ್ತು ಮೂರನೇಯ ದೊಡ್ಡ ಧರ್ಮವೆಂದು ಪರಿಗಣಿಸಲ್ಪಡುತ್ತಿದೆ. ಒಂದು ದೃಷ್ಟಿಯಿಂದ ನೋಡಿದರೆ, ಹಿಂದೂ ಧರ್ಮವು ‘ಜೀವನವನ್ನು ಹೇಗೆ ಜೀವಿಸಬೇಕು ?’, ಎಂಬುದನ್ನು ಕಲಿಸುತ್ತದೆ. ಹಿಂದೂ ಧರ್ಮದ ಈ ವಿಷಯಗಳಿಂದ ಪ್ರಭಾವಿತರಾಗಿ ಅಮೇರಿಕಾದ ಹೆಚ್ಚೆಚ್ಚು ಜನರು ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ. ಆದುದರಿಂದ ಅಮೇರಿಕಾ ಹಿಂದೂ ರಾಷ್ಟ್ರವಾಗಿ ಪರಿವರ್ತನೆಗೊಳ್ಳುವ ದಿನವು ಬಹಳ ದೂರವಿಲ್ಲ. ತಮಗೇನು ಅನಿಸುತ್ತದೆ ? ಯಾವ ರೀತಿ ಅಮೇರಿಕಾದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಿಂದುತ್ವದ ಕಡೆಗೆ ಹೊರಳುತ್ತಿರುವುದು ಮತ್ತು ಹಿಂದೂ ಧರ್ಮವನ್ನು ಸ್ವೀಕರಿಸುತ್ತಿರುವುದನ್ನು ನೋಡಿದರೆ, ಅಮೇರಿಕಾ ಮುಂದೊಂದು ದಿನ ಹಿಂದೂ ಬಹುಸಂಖ್ಯಾತ ದೇಶವಾಗಬಹುದು ? ಎಂದು ಅನಿಸುತ್ತದೆ.

ಆಧಾರ : ಜಾಲತಾಣ