ಸಮಾಜದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಭಾರತದ ತಥಾಕಥಿತ ‘ಸುಧಾರಣಾವಾದ’ದಿಂದ ಆಧ್ಯಾತ್ಮಿಕ ಕ್ಷೇತ್ರದಲ್ಲಾಗುವ ಹಾನಿ !

ಪರಾತ್ಪರ ಗುರು ಡಾ. ಆಠವಲೆ

ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಸಮಾಜ ಮುಖಂಡರು ಸಮಾಜಕ್ಕೆ ‘ಅಧ್ಯಾತ್ಮ ಮತ್ತು ಸಾಧನೆ’ಯ ವಿಷಯಗಳನ್ನು ಕಲಿಸಲೇ ಇಲ್ಲ. ತಥಾಕಥಿತ ‘ಸುಧಾರಣಾವಾದ’ದ ಹೆಸರಿನಲ್ಲಿ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು. ಪ್ರಜಾಪ್ರಭುತ್ವದಲ್ಲಿ ಕಾನೂನುಗಳನ್ನು ರೂಪಿಸುವಾಗಲೂ ಅದರ ವಿಚಾರ ಮಾಡಲಿಲ್ಲ. ಆದುದರಿಂದ, ಈಗ ಒಂದು ಚಿಕ್ಕ ಮಗುವು ತನ್ನ ಪೂರ್ವಜನ್ಮದ ಸಾಧನೆಯ ಸಂಸ್ಕಾರದಿಂದ ಈ ಜನ್ಮದಲ್ಲಿ ಸಾಧನೆ ಎಂದು ಸೇವೆಯನ್ನು ಮಾಡತೊಡಗಿದರೆ, ಅವನ ಪ್ರಶಂಸೆಯಾಗುವುದಿಲ್ಲ, ತದ್ವಿರುದ್ಧವಾಗಿ, ಅವನನ್ನು ಟೀಕಿಸಲಾಗುತ್ತದೆ ಮತ್ತು ಸಾತ್ತ್ವಿಕ ಜೀವವು ಸಹ ಸಾಧನೆಯನ್ನು ಮಾಡದಿರುವುದರಿಂದ ರಜ-ತಮ ಪ್ರಧಾನವಾಗುತ್ತದೆ. ಇಂತಹ ಸಮಾಜವ್ಯವಸ್ಥೆಯಲ್ಲಿ ಬಾಲ್ಯದಲ್ಲಿ ಸಾಧನೆಗಾಗಿ ದೇಶಾದ್ಯಂತ ಸಂಚರಿಸುತ್ತಿದ್ದ ಆದಿಶಂಕರಾಚಾರ್ಯರ ಮೇಲೆಯೂ ಟೀಕೆಯಾಗುತ್ತಿತ್ತು.

– (ಪರಾತ್ಪರ ಗುರು) ಡಾ. ಆಠವಲೆ (೧೪.೨.೨೦೨೨)

‘ಯಾವಾಗ ಸಚಿವರೊಬ್ಬರು ಭ್ರಷ್ಟಾಚಾರ ಮಾಡುತ್ತಾರೆಯೋ, ಆಗ ಅವರ ಸಹಾಯಕ್ಕೆಂದು ಬರುವ ಅವರ ಆಪ್ತ ಸಹಾಯಕರೂ ಭ್ರಷ್ಟಾಚಾರಿಯೇ ಇರುತ್ತಾರೆ; ಏಕೆಂದರೆ ಹೆಚ್ಚಾಗಿ ಅವರಿಗೆ ಎಲ್ಲ ಹಂತಗಳಲ್ಲಿ ಅವರೇ ಸಹಾಯ ಮಾಡುತ್ತಿರುತ್ತಾರೆ !’

– ಪರಾತ್ಪರ ಗುರು ಡಾ. ಆಠವಲೆ (೩೦.೧.೨೦೨೨)

‘ಕಿರಿಕಿರಿ ಮಾಡುವ ಮಗಳು ಮದುವೆಯಾಗಿ ಅವಳು ಅತ್ತೆಯ ಮನೆಗೆ ಹೋದ ನಂತರ ‘ಈಗ ಅವಳ ಕಿರಿಕಿರಿ ಇರುವುದಿಲ್ಲ’ ಎಂಬ ವಿಚಾರದಿಂದ ಅವಳ ತಂದೆ-ತಾಯಿಗಳಿಗೆ ಆನಂದವಾಗುತ್ತದೆ. ತದ್ವಿರುದ್ಧ ಕಿರಿಕಿರಿ ಮಾಡುವ ಮಗ ಇದ್ದರೆ ಅವನು ಮನೆಯಲ್ಲಿಯೇ ಉಳಿಯುತ್ತಾನೆ ಮತ್ತು ತಂದೆ-ತಾಯಿಗಳಿಗೆ ಅವನ ತೊಂದರೆಯನ್ನು ಜೀವನದಾದ್ಯಂತ ಸಹಿಸಬೇಕಾಗುತ್ತದೆ.’

– ಪರಾತ್ಪರ ಗುರು ಡಾ. ಆಠವಲೆ (೨.೨.೨೦೨೨)

ವೃದ್ಧಾಪ್ಯದಲ್ಲಿ ಕಡಿಮೆ ಕೇಳಿಸುವುದು

‘ವೃದ್ಧಾಪ್ಯದಲ್ಲಿ ವಿವಿಧ ಅವಯವಗಳ ಕ್ಷಮತೆ ಕಡಿಮೆಯಾಗುತ್ತದೆ, ಅದೇ ರೀತಿ ಕೇಳಿಸುವ ಕ್ಷಮತೆಯೂ ಕಡಿಮೆಯಾಗುತ್ತದೆ. ಆದುದರಿಂದ ಇತರರು ಮಾತನಾಡುವುದು ಕೇಳಿಸದಿದ್ದಾಗ ವಯಸ್ಕರರಿಗೆ ‘ಇತರರು ಇಷ್ಟು ಕಡಿಮೆ ಧ್ವನಿಯಲ್ಲಿ ಏಕೆ ಮಾತನಾಡುತ್ತಾರೆ ?’, ಎಂಬ ಪ್ರಶ್ನೆ ಮೂಡುತ್ತದೆ; ಆದರೆ ‘ತಮಗೆ ಕಿವಿಕೇಳುವ ಕ್ಷಮತೆ ಕಡಿಮೆಯಾಗಿದೆ’, ಎಂಬುದು ಅವರ ಗಮನಕ್ಕೆ ಬರುವುದಿಲ್ಲ. ಇದನ್ನು ನಾನೂ ಅನುಭವಿಸುತ್ತಿದ್ದೇನೆ.’

– (ಪರಾತ್ಪರ ಗುರು) ಡಾ. ಆಠವಲೆ (೬.೧೦.೨೦೨೧)