‘ಭಾರತದಲ್ಲಿ ಹಿಂದೂಗಳಿಂದ ಮುಸಲ್ಮಾನರ ಮೇಲೆ ದಾಳಿ !’(ಅಂತೆ)

ಭಾರತದಲ್ಲಾದ ಹಿಂಸಾಚಾರದ ಘಟನೆಯ ಕುರಿತು ಪಾಕಿಸ್ತಾನದ ವಿದೇಶಾಂಗ ಮಂತ್ರಾಲಯದ ಆರೋಪ

ಇಸ್ಲಾಮಾಬಾದ (ಪಾಕಿಸ್ತಾನ) – ರಾಜಧಾನಿ ದೆಹಲಿ ಸೇರಿದಂತೆ ಭಾರತದಲ್ಲಿನ ಕೆಲವು ನಗರಗಳಲ್ಲಿ ಹಿಂದೂಗಳು ಮುಸಲ್ಮಾನರ ಮೇಲೆ ದಾಳಿ ನಡೆಸುತ್ತಿದ್ದಾರೆ. ಆದ್ದರಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದು ಭಾರತವನ್ನು ಆರೋಪಿಯನ್ನಾಗಿಸಿ, ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಯವು ಹೇಳಿದೆ. ಕಳೆದ ಕೆಲವು ದಿನಗಳಲ್ಲಿ ಯುಗಾದಿ, ಶ್ರೀರಾಮನವಮಿ, ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ನಡೆದ ದಾಳಿಯ ಹಿನ್ನಲೆಯಲ್ಲಿ ಪಾಕಿಸ್ತಾನವು ಈ ಹೇಳಿಕೆ ನೀಡಿದೆ.

ಪಾಕಿಸ್ತಾನವು, ದೆಹಲಿಯ ಜಹಾಂಗೀರಪುರಿಯಲ್ಲಿನ ಘಟನೆಯಲ್ಲಿ ಮಸೀದಿಯ ಮೇಲೆ ಕೇಸರಿ ಧ್ವಜವನ್ನು ಹಾರಿಸುವ ಪ್ರಯತ್ನ ನಡೆಸಲಾಯಿತು ಹಾಗೂ ಆಕ್ಷೇಪಾರ್ಹ ಘೋಷಣೆಗಳನ್ನು ನೀಡಲಾಯಿತು. (ಇದು ಕೇವಲ ವದಂತಿಯಷ್ಟೇ ಹಾಗೂ ಅದು ಹುಸಿಯಾದ ಸುದ್ಧಿಯಾಗಿತ್ತು, ಎಂದು ದೆಹಲಿಯ ಆಯುಕ್ತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೂ ಕೂಡ ಪಾಕಿಸ್ತಾನವು ಈ ವದಂತಿಯನ್ನು ಬಂಡವಾಳವಾಗಿಸಿಕೊಳ್ಳುತ್ತಿದೆ ! – ಸಂಪಾದಕರು) ಮುಸಲ್ಮಾನರು ಇಫ್ತಾರ ಕೂಟಕ್ಕೆ ಹೋಗುತ್ತಿರುವಾಗ ಹಿಂದೂಗಳು ಅವರಿಗೆ ಶಸ್ತ್ರ ತೋರಿಸಿದರು.

ಈ ಘಟನೆಯಿಂದ ಭಾರತದಲ್ಲಿನ ಸರಕಾರವು ಮುಸಲ್ಮಾನರ ವಿರುದ್ಧದ ನಿಲುವು ಹೇಗಿದೆ, ಎಂಬುದು ತೋರಿಸುತ್ತದೆ. ಈ ಘಟನೆಯಿಂದ ಭಾರತವು ವೇಗವಾಗಿ ಹಿಂದೂರಾಷ್ಟ್ರದ ದಿಕ್ಕಿಗೆ ಹೋಗುತ್ತಿದೆ. ಮಧ್ಯಪ್ರದೇಶದಲ್ಲಿ ಹಾಗೂ ಗುಜರಾತ ರಾಜ್ಯದಲ್ಲಿನ ಮುಸಲ್ಮಾನರ ಮನೆಗಳನ್ನು ಧ್ವಂಸಗೊಳಿಸಲಾಯಿತು. ಈ ರಾಜ್ಯಗಳಲ್ಲಿ ನಡೆದ ಘಟನೆಯಿಂದ ಭಾರತ ಸರಕಾರ ಹಾಗೂ ಸಮಾಜದಲ್ಲಿ ಹಿಂದುತ್ವದ ವಿಚಾರಧಾರೆಯು ಎಷ್ಟು ರುಜವಾತಾಗಿದೆ, ಎಂಬುದನ್ನು ತೋರಿಸುತ್ತದೆ. ಮತ್ತೊಂದು ಕಡೆ ಭಾರತದಲ್ಲಿ ಕಥಿತ ಗಲಭೆಗಾರರೆಂದು ಮುಸಲ್ಮಾನರ ವಿರುದ್ಧ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದನ್ನೇ ಕಳ್ಳನಿಗೊಂದು ಪಿಳ್ಳೇನೆವ ಎಂದು ಹೇಳುತ್ತಾರೆ ! ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಧಾರ್ಮಿಕ ಹಿಂಸಾಚಾರವಾಯಿತು, ಅದು ಕೂಡ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಮತಾಂಧರು ಹಿಂದೂಗಳ ವಿರುದ್ಧ ನಡೆದಿದೆ ಹಾಗೂ ಇದು ಸತ್ಯವಾಗಿದೆ; ಆದರೆ ಪಾಕಿಸ್ತಾನವು ತನ್ನ ಅಸಮಾಧಾನ ಸೂಚಿಸುತ್ತಾ ಹಿಂದೂಗಳನ್ನೇ ಆರೋಪಿಯೆಂದು ನಿರ್ಧರಿಸುತ್ತಿದೆ, ಇದರಿಂದ ಪಾಕಿಸ್ತಾನವು ತಂತ್ರ ಹೂಡುವುದರಲ್ಲಿ ಎಷ್ಟು ಚತುರವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ !

ಅಮೇರಿಕಾದ ವಿದೇಂಶಾಂಗ ಸಚಿವಾಲಯವು ಭಾರತದಲ್ಲಿ ಮಾನವ ಹಕ್ಕುಗಳ ವಿಷಯದಲ್ಲಿ ಹೇಳಿಕೆ ನೀಡಿತ್ತು. ಆಗ ಭಾರತದ ವಿದೇಶಾಂಗ ಸಚಿವರು ಅದಕ್ಕೆ ತಕ್ಕ ಉತ್ತರ ನೀಡಿದ್ದರು. ಪಾಕಿಸ್ತಾನದ ಈ ಆರೋಪಗಳ ಮೇಲೆ ಭಾರತ ಸರಕಾರವು ಕೂಡಲೇ ಸಮರ್ಪಕ ಉತ್ತರ ನೀಡಿ ಅವರ ಬಾಯಿ ಮುಚ್ಚಿಸಬೇಕು !

ಪಾಕಿಸ್ತಾನದಲ್ಲಿ ಹಿಂದೂಗಳು ಹಾಗೂ ಕ್ರೈಸ್ತ ಹೆಣ್ಣುಮಕ್ಕಳನ್ನು ಅಪಹರಿಸಿ ಅವರನ್ನು ಬಲವಂತವಾಗಿ ಮತಾಂತರಗೊಳಿಸಿ ಅವರನ್ನು ಮುಸಲ್ಮಾನ ಯುವಕನೊಂದಿಗೆ ನಿಕಾಹ ಮಾಡಿಸಲಾಗುತ್ತದೆ, ಅಲ್ಪಸಂಖ್ಯಾತರ ನರಮೇಧ ಮಾಡಲಾಗುತ್ತದೆ, ಈ ಬಗ್ಗೆ ಪಾಕಿಸ್ತಾನವು ಏಕೆ ಮಾತನಾಡುವುದಿಲ್ಲ ?