‘ಸಿಂಧೂ ಜಲ ಒಪ್ಪಂದ’ದ ಪುನರಾವಲೋಕನ ಆವಶ್ಯಕ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಸಿಂಧೂ ಜಲ ಒಪ್ಪಂದವು (ಕರಾರು) ಪಾಕಿಸ್ತಾನಕ್ಕೆ ಭಾರತಕ್ಕಿಂತ ಎಷ್ಟೋ ಪಟ್ಟು ಹೆಚ್ಚು ನೈಸರ್ಗಿಕ ಸಂಪನ್ಮೂಲಗಳನ್ನು ನೀಡುವುದಾಗಿದೆ. ಈ ಒಪ್ಪಂದದಿಂದ ಭಾರತಕ್ಕೆ ಹಾನಿ ಆಗುತ್ತಿರುವುದರಿಂದ ಅದನ್ನು ರದ್ದುಗೊಳಿಸಬೇಕು ಎಂಬುದು ಭಾರತದ ಇಚ್ಛೆಯಾಗಿದೆ. ಪಾಕಿಸ್ತಾನ ತನ್ನ ಭಾರತ ವಿರೋಧಿ ಚಟುವಟಿಕೆಗಳನ್ನು ತಡೆಯದಿದ್ದರೆ, ಈ ಒಪ್ಪಂದವನ್ನು ರದ್ದು ಗೊಳಿಸುವುದನ್ನು ಬಿಟ್ಟು ಭಾರತಕ್ಕೆ ಬೇರೆ ದಾರಿ ಉಳಿಯಲಾರದು, ಎಂದು ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ನೀಡಿದೆ. ಪಾಕಿಸ್ತಾನವನ್ನು ಸರಿದಾರಿಗೆ ತರಲು ಇದೊಂದು ಉತ್ತಮ ಉಪಾಯವಾಗಬಹುದು. ಇಂದು ಭಾರತವು ‘ಸಿಂಧೂ ಜಲ’ ಈ ಅನ್ಯಾಯಕರ ಒಪ್ಪಂದದ ಮರುಪರಿಶೀಲನೆಯ ಆವಶ್ಯಕತೆಯ ಮೇಲೆ ಒತ್ತು ನೀಡುವುದು ಆವಶಶ್ಯಕವಾಗಿದೆ.

೧. ಪಾಕಿಸ್ತಾನವು ‘ಸಿಂಧೂ ಜಲ ಒಪ್ಪಂದ’ದಲ್ಲಿನ ಏರ್ಪಾಡುಗಳನ್ನು ಬಳಸಿಕೊಂಡು ಭಾರತದ ವಿಕಾಸ ಯೋಜನೆಗಳಲ್ಲಿ ಅಡತಡೆಗಳನ್ನು ತರಲು ಪ್ರಯತ್ನಿಸುತ್ತಿದೆ

೧೨ ಮಾರ್ಚ್ ೨೦೨೨ ರಂದು ‘ಸಿಂಧೂ ಜಲ ಒಪ್ಪಂದ’ ಬಗ್ಗೆ ಭಾರತ, ಪಾಕಿಸ್ತಾನ ಮತ್ತು ವಿಶ್ವ ಬ್ಯಾಂಕ್ ಇವುಗಳ ನಡುವಿನ ಮಾತುಕತೆ ವಿಫಲವಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ‘ಸಿಂಧೂ ಜಲ ಒಪ್ಪಂದ’ವನ್ನು ೧೯೬೦ ನೇ ಇಸವಿಯಲ್ಲಿ ಮಾಡಲಾಗಿದೆ. ಇದರಲ್ಲಿ ವಿಶ್ವ ಬ್ಯಾಂಕ್ ಸಹ ಭಾಗಿಯಾಗಿದೆ. ಪಾಕಿಸ್ತಾನ ಭಾರತದ ಹತ್ತಕ್ಕೂ ಹೆಚ್ಚು ಯೋಜನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನವು ಭಾರತದ ಈ ಯೋಜನೆಗಳ ೧೫ ರಿಂದ ೨೦ ಹೆಚ್ಚುವರಿ ಆಕ್ಷೇಪಣೆಗಳ ಒಂದು ಪಟ್ಟಿಯನ್ನು ನೀಡಿದೆ. ಅದರ ಬಗ್ಗೆ ಕಳೆದ ವರ್ಷ ಆಗಸ್ಟ್‌ನಲ್ಲಿಯೇ ಚರ್ಚಿಸಲಾಗಿತ್ತು, ಅದರಲ್ಲಿ ವಿಶ್ವ ಬ್ಯಾಂಕ್ ಸಹ ಭಾಗವಹಿಸಿತ್ತು. ಈ ವಿಷಯಗಳ ಬಗ್ಗೆ ೧೪ ಮತ್ತು ೧೫ ಸೆಪ್ಟೆಂಬರ್ ೨೦೨೧ ರಂದು ವಿಶ್ವ ಬ್ಯಾಂಕ್‌ನ ಮುಖ್ಯ ಕಚೇರಿಯಲ್ಲಿ ಪುನಃ ಚರ್ಚೆಯನ್ನು ಮಾಡಲಾಯಿತು. ‘ಸಿಂಧೂ ಜಲ ಸ್ಥಾಯಿ ಸಮಿತಿ (ಇಂಡಸ್ ವಾಟರ್ ಸ್ಟ್ಯಾಂಡಿಗ್ ಕಮಿಶನ್’)’ಯ ೧೧೭ ನೇ ಸಭೆಯು ೧ ರಿಂದ ೩ ಮಾರ್ಚ್ ೨೦೨೨ ರ ವರೆಗೆ ಇಸ್ಲಾಮಾಬಾದ್‌ನಲ್ಲಿ ನಡೆಯಿತು. ಈ ಬಾರಿ ಅದು ಒಪ್ಪಂದದ ‘ಕಲಮ್ ೯’ರ ಅಡಿಯಲ್ಲಿ ಜಾಗತಿಕ ಹಸ್ತಕ್ಷೇಪಕ್ಕೆ ಕರೆ ನೀಡಿತು; ಆದರೆ ಪಾಕಿಸ್ತಾನದ ಜಾಗತಿಕ ಮಧ್ಯಸ್ಥಿಕೆಯ ಬೇಡಿಕೆಯು ದ್ವಿಪಕ್ಷೀಯ ಮಾತುಕತೆಗಳಿಂದ ಉಪಾಯವನ್ನು ಕಂಡುಹಿಡಿಯುವ ಭಾವನೆಗೆ ವಿರುದ್ಧವಾಗಿದೆ. ಮಾತುಕತೆಗಳು ವಿಫಲವಾದರೂ, ಜಾಗತಿಕ ಬ್ಯಾಂಕ್ ಎರಡೂ ದೇಶಗಳೊಂದಿಗಿನ ಮಾತುಕತೆಗಳನ್ನು ಮುಂದುವರಿಸಲಿದೆ.

‘ಭಾರತದ ನಿಲುವು ‘ಸಿಂಧೂ ಜಲ ಒಪ್ಪಂದ’ವನ್ನು ಭಂಗ ಮಾಡುವುದಾಗಿಲ್ಲ. ಪಾಕಿಸ್ತಾನವು ಸಿಂಧೂ ನದಿಯ ನೀರನ್ನು ಕೃಷಿ ಮತ್ತು ಜಲವಿದ್ಯುತ್ ನಿರ್ಮಿತಿಗಾಗಿ ಉಪಯೋಗಿಸುತ್ತಿಲ್ಲ. ಆದ್ದರಿಂದ ಭಾರತಕ್ಕೆ ಜಲವಿದ್ಯುತ್‌ನ್ನು ನಿರ್ಮಿಸಲು ಪೂರ್ಣ ಅಧಿಕಾರವಿದೆ’. ಆಗ ಜಾಗತಿಕ ಶಕ್ತಿಗಳ ಒತ್ತಾಯದ ಮೇರೆಗೆ ‘ಸಿಂಧೂ ಜಲ ಒಪ್ಪಂದ’ಕ್ಕೆ ಸಹಿ ಹಾಕಲಾಯಿತು. ಅದರಲ್ಲಿ ಭಾರತದ ಹಿತಕ್ಕಿಂತ ಪಾಕಿಸ್ತಾನದ ಹಿತಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಯಿತು.

‘ಸಿಂಧೂ ಜಲ ಒಪ್ಪಂದ’ವು ಭಾರತ ಮತ್ತು ಪಾಕಿಸ್ತಾನದಲ್ಲಿ ಹರಿಯುವ ಸಿಂಧೂ ನದಿ ಮತ್ತು ಅದರ ಉಪನದಿಗಳಲ್ಲಿ  ಹರಿಯುವ ನೀರನ್ನು ಬಳಸಲು ವಿಶ್ಯ ಬ್ಯಾಂಕ್ ಮಾಡಿದ ಮಧ್ಯಸ್ಥಿಕೆಯ ಯೋಜನೆಯಾಗಿದೆ. ೧೯ ಸೆಪ್ಟೆಂಬರ್ ೧೯೬೦ ಈ ದಿನ ಭಾರತದ ಆಗಿನ ಪ್ರಧಾನಮಂತ್ರಿಗಳಾದ ಜವಾಹರಲಾಲ ನೆಹರು ಮತ್ತು ಪಾಕಿಸ್ತಾನದ ರಾಷ್ಟ್ರಪತಿಗಳಾದ ಅಯೂಬ್ ಖಾನ್ ಇವರು ಸಹಿ ಮಾಡಿದ್ದರು. ‘ಸಿಂಧೂ ಜಲ ಒಪ್ಪಂದ’ದ ವ್ಯವಸ್ಥೆಗನುಸಾರ ಪೂರ್ವದಿಕ್ಕಿನಲ್ಲಿ ಹರಿಯುವ ನದಿಗಳಾದ ಸತಲಜ್, ಬಿಯಾಸ್ ಮತ್ತು ರಾವಿ ಈ ನದಿಗಳ ವಾರ್ಷಿಕ ಸರಾಸರಿ ೩೩ ದಶಲಕ್ಷ ಘನ ಅಡಿಗಳಷ್ಟು ನೀರನ್ನು ಭಾರತದ ಉಪಯೋಗಕ್ಕಾಗಿ ನೀಡಲಾಯಿತು ಮತ್ತು ಪಶ್ಚಿಮ ದಿಕ್ಕಿಗೆ ಹರಿಯುವ  ನದಿಗಳಾದ ಸಿಂಧೂ, ಝೆಲಮ್ ಮತ್ತು ಚಿನಾಬ್ ಈ ನದಿಗಳ ಸುಮಾರು ೧೩೫ ದಶಲಕ್ಷ ಘನ ಅಡಿ ನೀರನ್ನು ಪಾಕಿಸ್ತಾನಕ್ಕೆ ನೀಡಲಾಯಿತು. ಇಲ್ಲಿಯೇ ಈ ಒಪ್ಪಂದದ ಭೇದಭಾವ ಸ್ಪಷ್ಟವಾಗಿ ಕಾಣಿಸುತ್ತದೆ. ಅಂದಿನಿಂದ ಇಂದಿನವರೆಗೆ ಈ ಒಪ್ಪಂದದಲ್ಲಿನ ವ್ಯವಸ್ಥೆಗಳನ್ನು ಬಳಸಿಕೊಂಡು ಪಾಕಿಸ್ತಾನ ಭಾರತದ ವಿಕಾಸ ಯೋಜನೆಗಳಲ್ಲಿ ಅಡಚಣೆಗಳನ್ನು ತರಲು ಪ್ರಯತ್ನಿಸುತ್ತಿದೆ.

೨. ಪಾಕಿಸ್ತಾನದ ಜಲಸಂಕಟದ ಮೂಲವು ಭಾರತದಲ್ಲಿಯಲ್ಲ ಅದು ಅಲ್ಲಿನ ರಾಜ್ಯಗಳ ಅಂತರ್ಗತವಿರುವ ಪ್ರಾಂತೀಯ ವಿವಾದಗಳಲ್ಲಿದೆ

ಕಾಶ್ಮೀರದ ಕಿಶ್ತವಾಡ ಜಿಲ್ಲೆಯಲ್ಲಿನ ಚೀನಾಬ್ ನದಿಯ ಉಪನದಿಯಾದ ಮರುಸುದರ್ ಮೇಲೆ ಆಣೆಕಟ್ಟನ್ನು ಕಟ್ಟುವುದಿದ್ದು, ಜಲವಿದ್ಯುತ್ ನಿರ್ಮಿತಿಯೇ ಅದರ ಮೂಲ ಉದ್ದೇಶವಾಗಿದೆ. ಭಾರತೀಯ ಯೋಜನೆಗಳಿಂದ ಪಾಕಿಸ್ತಾನದಲ್ಲಿನ ಚಿನಾಬ್ ನದಿಯ ಪ್ರವಾಹದ ಮೇಲೆ ಪರಿಣಾಮವಾಗುವುದು’, ಎಂದು ಪಾಕಿಸ್ತಾನವು ಆರೋಪಿಸುತ್ತಿರುತ್ತದೆ. ಚಿನಾಬ್ ನದಿಯ ಮೇಲೆ ೧ ಸಾವಿರ ಮೆಗಾವ್ಯಾಟ್ ಪಾಕುಲ್ ದಲ್ ಜಲವಿದ್ಯುತ್ ಯೋಜನೆಯ ವಿಷಯದ ಮೇಲೆ  ಪಾಕಿಸ್ತಾನದ ಸಿಂಧೂ ಜಲ ಆಯುಕ್ತರು ಒಪ್ಪಂದದ ಕಲಮ್ ೯ ನ್ನು ಉಪಯೋಗಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.  ಈ ಕಲಮ್‌ನಲ್ಲಿ ವಿವಿಧ ವಿಶ್ವ ವೇದಿಕೆಗಳ ಮಾಧ್ಯಮಗಳಿಂದ ಭಿನ್ನಾಭಿಪ್ರಾಯ ಮತ್ತು ವಿವಾದಗಳಿಗೆ ಉತ್ತರ ಕಂಡು ಹಿಡಿಯುವ ವ್ಯವಸ್ಥೆ ಇದೆ. ಪಾಕಿಸ್ತಾನದ ಅರ್ಥವ್ಯವಸ್ಥೆಯನ್ನು ಕೃಷಿಪ್ರಧಾನ ಎಂದು ಪರಿಗಣಿಸಲಾಗುತ್ತದೆ. ನಿರಂತರವಾಗಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ಪಾಕಿಸ್ತಾನದ ಪರಿಸರದ ಮೇಲೆ ವ್ಯಾಪಕ ಪರಿಣಾಮವಾಗುತ್ತಿದ್ದು ವಿಶೇಷವಾಗಿ ಅಲ್ಲಿನ ನೈಸರ್ಗಿಕ ಜಲ ಸಂಪನ್ಮೂಲಗಳ ಮೇಲೆ ಭೀಕರ ಪರಿಣಾಮವಾಗುವುದು ಕಂಡುಬರುತ್ತದೆ.

ತೀವ್ರ ನೀರಿನ ಕೊರತೆಯನ್ನು ಎದುರಿಸುವ ಪಾಕಿಸ್ತಾನದಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ದೊಡ್ಡ ಸಮಸ್ಯೆ ಉದ್ಭವಿಸಿದೆ. ಪಾಕಿಸ್ತಾನದಲ್ಲಿ ವೇಗದಿಂದ ಬೆಳೆಯುತ್ತಿರುವ ನಗರೀಕರಣ, ಅಂತರ್ಜಲ ಮಟ್ಟದ ಕುಸಿಯುವಿಕೆ, ನೀರಿನ ಗುಣಮಟ್ಟದಲ್ಲಿ ಆಗುವ ಕುಸಿತ ಮತ್ತು ಅದರಲ್ಲಿಯೇ ಜಲ ಸಂಪನ್ಮೂಲಗಳಿಗಾಗಿ ಗರಿಷ್ಠಮಿತಿಗೆ ತಲುಪಿದ ಅಂತರರಾಜ್ಯ ಸಮಸ್ಯೆಗಳು ಆತಂಕಕಾರಿಯಾಗಿವೆ. ವಿಪರ್ಯಾಸದ ವಿಷಯವೆಂದರೆ ಪಾಕಿಸ್ತಾನದಲ್ಲಿ ನೀರಿನ ಅಭಾವದ ಚರ್ಚೆಯಾದಾಗಲೆಲ್ಲಾ ಆ ಸಮಸ್ಯೆಗೆ ಭಾರತವನ್ನು ಹೊಣೆಗಾರನನ್ನಾಗಿ ಮಾಡಲು ಪಾಕಿಸ್ತಾನವು ಯಾವಾಗಲೂ ಮರೆಯುವುದಿಲ್ಲ. ೧೯೬೦ ನೇ ಇಸವಿಯಲ್ಲಿನ ‘ಸಿಂಧೂ ಜಲ ಒಪ್ಪಂದ’ದಿಂದ ಭಾರತಕ್ಕಿಂತ ಪಾಕಿಸ್ತಾನಕ್ಕೆ ಅತ್ಯಧಿಕ ಲಾಭವಾಗಿದೆ. ಆದ್ದರಿಂದ ಪಾಕಿಸ್ತಾನದ ಈ ನೀರಿನ ಬಿಕ್ಕಟ್ಟಿನ ಮೂಲವು ಭಾರತದಲ್ಲಿರದೇ ಅದರ ಆಂತರಿಕ ಪ್ರಾಂತೀಯ ಸಂಘರ್ಷದಲ್ಲಿದೆ.

೩. ‘ಸಿಂಧೂ ಜಲ ಒಪ್ಪಂದ’ಕ್ಕನುಸಾರ ತಮ್ಮ ಪಾಲಿಗೆ ಬಂದ ನೀರನ್ನು ಸಂಪೂರ್ಣವಾಗಿ ಬಳಸಲು ಭಾರತ ಪ್ರಯತ್ನಿಸುತ್ತಿದೆ

ಭಾರತದ ನಿಲುವು ‘ಸಿಂಧೂ ಜಲ ಒಪ್ಪಂದ’ಕ್ಕನುಸಾರ ಭಾರತದ ಪಾಲಿಗೆ ಬರುವ ನೀರನ್ನು ಪಾಕಿಸ್ತಾನಕ್ಕೆ ಹೋಗಲು ಬಿಡಬಾರದು, ಎಂಬುದಾಗಿದೆ. ಅದಕ್ಕಾಗಿ ಭಾರತ ಪಂಜಾಬ್‌ನಲ್ಲಿನ ಶಾಹಪೂರ ಕಾಂಡಿ ಯೋಜನೆ, ಸತಲಜ್-ಬ್ಯಾಸ್‌ನ ಎರಡನೇಯ ಲಿಂಕ್ ಯೋಜನೆ ಮತ್ತು ಜಮ್ಮು-ಕಾಶ್ಮೀರನ ಪ್ರಸ್ತಾವಿತ ಉಜ್ಜ ಆಣೆಕಟ್ಟು ಯೋಜನೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದೆ. ನದಿಗಳ ಒಟ್ಟು ನೀರಿನಲ್ಲಿ ಭಾರತಕ್ಕೆ ಸಿಕ್ಕಿರುವ ಕೇವಲ ೩೩ ದಶಲಕ್ಷ ಘನಅಡಿ ಇಷ್ಟೇ ಇದ್ದು ಅದು ಎಲ್ಲ ನದಿಗಳ ಒಟ್ಟು ನೀರಿನ ಕೇವಲ ಶೇ. ೨೦ ರಷ್ಟೇ ಆಗಿದೆ. ಉಳಿದ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತದೆ. ಒಂದು ವೇಳೆ ನಮ್ಮ ಯೋಜನೆಗಳು ಪೂರ್ಣಗೊಂಡರೆ, ಭಾರತಕ್ಕೆ ಸಿಗುವ ಎಲ್ಲ ನೀರನ್ನು ಭಾರತ ಬಳಸಿಕೊಳ್ಳಬಹುದು. ೧೯೬೦ ರ ‘ಸಿಂಧೂ ಜಲ ಒಪ್ಪಂದ’ವು ಭಾರತಕ್ಕಿಂತ ಅನೇಕ ಪಟ್ಟು ಹೆಚ್ಚು ನೈಸರ್ಗಿಕ ಸಾಧನ ಸಂಪನ್ಮೂಲಗಳನ್ನು ಪಾಕಿಸ್ತಾನಕ್ಕೆ ಒದಗಿಸಿಕೊಡುವುದಾಗಿದೆ. ಅಮೇರಿಕಾದ ಆಗಿನ ಅಧ್ಯಕ್ಷ ಐಝೆನ್ಹಾವರ್ ಇವರು ಸಿಂಧೂ ಒಪ್ಪಂದದಲ್ಲಿ ಪಾಕಿಸ್ತಾನದ ಕಲೆಯನ್ನು ಹೊಗಳಿದ್ದರು. ‘ಈ ಒಪ್ಪಂದದಿಂದ ಭಾರತಕ್ಕೆ ಹಾನಿಯಾಗುತ್ತಿದ್ದು ಈ ಒಪ್ಪಂದವನ್ನು ರದ್ದುಗೊಳಿಸಬೇಕು’, ಎಂಬುದು  ಭಾರತದ ಮನಸ್ಸಿನಲ್ಲಿದೆ ಎಂದು ಅವರು ಹೇಳಿದ್ದರು. ‘ಪಾಕಿಸ್ತಾನವು ತನ್ನ ಭಾರತವಿರೋಧಿ ಕಾರ್ಯಗಳನ್ನು ತಡೆಯದಿದ್ದರೆ, ಈ ಒಪ್ಪಂದವನ್ನು ರದ್ದುಗೊಳಿಸದೇ ಬೇರೆ ಯಾವುದೇ ಉಪಾಯ ಉಳಿಯಲಾರದು’, ಎಂದು ಸಹ ಭಾರತವು ಅದಕ್ಕೆ ಎಚ್ಚರಿಕೆಯನ್ನು ನೀಡಿದೆ. ಪಾಕಿಸ್ತಾನವನ್ನು ಸರಿದಾರಿಗೆ ತರಲು ಇದೊಂದು  ಉತ್ತಮ ಉಪಾಯವಾಗಬಹುದು. ಇಂದು ಮಾತ್ರ ಭಾರತವು ಅನ್ಯಾಯದ ‘ಸಿಂಧೂ ಜಲ’ ಒಪ್ಪಂದದ ಪುನರಾವಲೋಕನದ ಆವಶ್ಯಕತೆಯನ್ನು ಒತ್ತಿ ಹೇಳಬೇಕು. ಭಾರತದ ಆರ್ಥಿಕ ಮತ್ತು ಸಾಮರಿಕ ಮಹತ್ವಕ್ಕಾಗಿ ಇದು ಆವಶ್ಯಕವಾಗಿದೆ.’

– (ನಿವೃತ್ತ) ಬ್ರಿಗೆಡಿಯರ್ ಹೇಮಂತ ಮಹಾಜನ

(ಆಧಾರ : ದೈನಿಕ ‘ಸಾಮನಾ ಆನ್‌ಲೈನ್’)

ಹಿಂದೂ ಯುವತಿಯರಿಗೆ ಲವ್ ಜಿಹಾದಿನ ಅಪಾಯವು ಗಮನಕ್ಕೆ ಬರುವಂತೆ ಮಾಡಲು ಅವರಿಗೆ ಧರ್ಮಶಿಕ್ಷಣವನ್ನು ನೀಡಬೇಕು ! – ವಕೀಲ ವೀರೇಂದ್ರ ಇಕಲಕರಂಜಿಕರ, ಹಿಂದೂ ವಿಧಿಜ್ಞ ಪರಿಷತ್

ಶರಿಯತ್ (ಇಸ್ಲಾಮಿ) ಕಾನೂನಿನಂತೆ ಮುಸಲ್ಮಾನರಲ್ಲಿ ವಿವಾಹದ ನಂತರ ಮತಾಂತರವಾದ ಹಿಂದೂ ಮಹಿಳೆಯರಿಗೆ ಸಂಪತ್ತಿನಲ್ಲಿ ಹಾಗೂ ಅನ್ಯ ಯಾವುದೇ ಅಧಿಕಾರವು ಸಿಗುವುದಿಲ್ಲ ಆದರೆ ಹಿಂದೂ ಕಾಯಿದೆಯನುಸಾರ ವಿವಾಹದ ನಂತರ ಹಿಂದೂ ಮಹಿಳೆಯರಿಗೆ ಅನೇಕ ಅಧಿಕಾರಗಳಿವೆ. ಇಂತಹ ಸ್ವರೂಪದ ತೊಂದರೆಗಳ ಬಗ್ಗೆ ‘ಲವ್ ಜಿಹಾದ್’ ಪ್ರಕರಣದೊಳಗೆ ಜಾಗೃತಿಯಾಗಬೇಕು. ಹಿಂದೂ ಯುವತಿಯರಿಗೆ ಇಂತಹ ಅನೇಕ ಅಪಾಯಗಳು ಗಮನಕ್ಕೆ ಬರುವುದ್ದಕ್ಕಾಗಿ ಧರ್ಮಶಿಕ್ಷಣವನ್ನು ಪಡೆದುಕೊಂಡು ಧರ್ಮಾಚರಣೆಯನ್ನು ಮಾಡಬೇಕು.