ತನು, ಮನ, ಧನದ ಜೊತೆ ಸರ್ವಸ್ವದ ತ್ಯಾಗ ಮಾಡಿ ಗುರುಕೃಪೆಯನ್ನು ಪಡೆಯೋಣ ! –  ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಮುಂಬರುವ ಗುರುಪೂರ್ಣಿಮಾ ಮಹೋತ್ಸವದ ನಿಮಿತ್ತ ಕರ್ನಾಟಕ ರಾಜ್ಯದ ಸಾಧಕರಿಗೆ ಶಿಬಿರ ಸಂಪನ್ನ !

ಪೂ. ರಮಾನಂದ ಗೌಡ

ಮಂಗಳೂರು : ‘ಶಿಷ್ಯನ ಜನ್ಮ ಜನ್ಮದ ಅಜ್ಞಾನ, ಅಂಧಃಕಾರವನ್ನು ದೂರ ಮಾಡಿ ಜ್ಞಾನರೂಪಿ ಬೆಳಕನ್ನು ನೀಡಿ ಶಿಷ್ಯನನ್ನು ಮೋಕ್ಷದ ದಾರಿಯಲ್ಲಿ ಮುಂದೆ ಕರೆದುಕೊಂಡು ಹೋಗುವವರೆ ಗುರುಗಳು. ಅದಕ್ಕಾಗಿ ನಾವು ಗುರುಗಳ ಗುಲಾಮರಾಗಬೇಕು, ಮಹಾನ್ ಗುರುಗಳ ಮಾರ್ಗದರ್ಶನ ಮತ್ತು ಅವರ ತೋರಿದ ಕೃಪೆಗಾಗಿ ಅವರಿಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವೇ ಗುರುಪೂರ್ಣಿಮೆ. ನಿತ್ಯದ ತುಲನೆಯಲ್ಲಿ ಗುರುಪೂರ್ಣಿಮೆಯ ಸಮಯದಲ್ಲಿ ಗುರುತತ್ತ್ವವು ೧೦೦೦ ಪಟ್ಟು ಕಾರ್ಯರತವಿರುತ್ತದೆ. ಇಂತಹ ಪರ್ವಕಾಲದಲ್ಲಿ ನಾವು ತಾನು, ಮನ, ಧನ ಮತ್ತು ಸರ್ವಸ್ವದ ತ್ಯಾಗ ಮಾಡಲು ಯಾರು ವಿಚಾರ ಮಾಡಿ ನೇತೃತ್ವ ವಹಿಸಿ ಸೇವೆ ಮಾಡುತ್ತಾರೆ ಅವರಿಗೆ ಗುರುಗಳೇ ಸೇವೆ ಮಾಡುವ ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತಾರೆ. ನಾವೆಲ್ಲರೂ ತೀವ್ರ ತಳಮಳ, ಶ್ರದ್ಧೆ, ಭಾವದಿಂದ ಸೇವೆ ಮಾಡಿ ಗುರುತತ್ತ್ವದ ಲಾಭವನ್ನು ಪಡೆಯಲು ನಿಶ್ಚಯ ಮಾಡಿಕೊಳ್ಳೋಣ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ಮುಂಬರುವ ಗುರುಪೂರ್ಣಿಮಾ ಮಹೋತ್ಸವದ ನಿಮಿತ್ತ ರಾಜ್ಯದ ಸಾಧಕರು, ಧರ್ಮಪ್ರೇಮಿಗಳು, ಧರ್ಮಶಿಕ್ಷಣ ವರ್ಗದವರಿಗಾಗಿ ಸಾಧನೆಯ ಮತ್ತು ಸೇವೆಯ ಮಹತ್ವವನ್ನು ತಿಳಿಸುವ ಸಲುವಾಗಿ ಏಪ್ರಿಲ್ ೭ ರಂದು ಆನ್‌ಲೈನ್ ಮೂಲಕ ಆಯೋಜಿಸಿದ್ದ ಶಿಬಿರದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು.

ಈ ವೇಳೆ ಶಿಬಿರದ ಉದ್ದೇಶವನ್ನು ತಿಳಿಸಿದ ಕರ್ನಾಟಕ ರಾಜ್ಯದ ಧರ್ಮಪ್ರಚಾರಕರಾದ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಕಾಶಿನಾಥ ಪ್ರಭು ಅವರು ಮಾತನಾಡುತ್ತಾ, ‘ನಾವೆಲ್ಲರೂ ಈ ಗುರುಪೂರ್ಣಿಮೆಯ ಸೇವೆಯನ್ನು ಸಾಧನಾಸ್ತರದಲ್ಲಿ ಮಾಡಬೇಕು. ನಾವೆಲ್ಲರೂ ಭೌತಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಗುರುಪೂರ್ಣಿಮೆಯ ಲಾಭ ಪಡೆಯೋಣ ಎಂದರು. ಈ ಶಿಬಿರದಲ್ಲಿ ಗುರುಪೂರ್ಣಿಮೆಯ ಅಂತರ್ಗತ ಬರುವ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಲಾಯಿತು.  ರಾಜ್ಯದ ವಿವಿಧ ಜಿಲ್ಲೆಗಳಿಂದ ೮೯೨ ಕ್ಕೂ ಹೆಚ್ಚು ಸಾಧಕರು, ಧರ್ಮಪ್ರೇಮಿಗಳು ಮುಂತಾದವರು ಶಿಬಿರದ ಲಾಭವನ್ನು ಪಡೆದರು.

ಮನೋಗತ

೧. ಶ್ರೀ. ಆಕಾಶ ನಾರಾಯಣ, ತುಮಕೂರು – ಇನ್ನು ನನಗೆ ಈಶ್ವರಪ್ರಾಪ್ತಿ ಆಗುವ ವರೆಗೆ ಪಟ್ಟುಹಿಡಿದು ಸಾತತ್ಯದಿಂದ ಗುರುಸೇವೆಯನ್ನು ಮಾಡಿ ಇದೇ ಜನ್ಮದಲ್ಲಿ ಮೋಕ್ಷ ಆಗುವ ವರೆಗೆ ನಾನು ಪ್ರಯತ್ನ ಮಾಡಬೇಕು ಎಂದು ಅನಿಸಿತು.

೨. ಶ್ರೀ. ಪರೇಶ ಗೋವೇಕರ್, ಕಾರವಾರ – ನನ್ನ ಜೀವನದಲ್ಲಿ ಮೊದಲನೇ ಬಾರಿ ಎಲ್ಲ ಸಾಧಕರ ಜೊತೆಯಲ್ಲಿ ಗುರುಪೂರ್ಣಿಮೆ ಸೇವೆ ಮಾಡುವ ಅವಕಾಶವನ್ನು ಪರಮಪೂಜ್ಯ ಗುರುದೇವರ ಕೃಪೆಯಿಂದ ಸಿಕ್ಕಿದೆ. ಇದರ ಪೂರ್ಣ ಲಾಭ ಪಡೆಯಲು ಪ್ರಯತ್ನ ಮಾಡುತ್ತೇನೆ.

೩. ಸೌ. ನಾಗರತ್ನ, ಬೆಂಗಳೂರು – ಇತರ ದಿನದಲ್ಲಿ ವಾತಾವರಣದಲ್ಲಿ ತುಂಬಾ ಸೆಕೆ ಆಗ್ತಾ ಇತ್ತು. ಆದರೆ ಇವತ್ತು ಶಿಬಿರದ ಪ್ರಾರಂಭದಿಂದ ಕೊನೆಯದ ವರೆಗೂ ತುಂಬಾ ತಂಪಾಗಿ ಇತ್ತು, ಶಿಬಿರದಲ್ಲಿ ಹೇಳುತ್ತಿದ್ದ ಅಂಶಗಳೆಲ್ಲವೂ ತುಂಬಾ ಒಳ್ಳೆಯ ರೀತಿಯಲ್ಲಿ ಅರ್ಥವಾಗುತ್ತಿತ್ತು. ತುಂಬಾ ಚೈತನ್ಯ ಪ್ರಕ್ಷೇಪಣೆ ಆಗುತ್ತಿದೆ ಮತ್ತು ಈ ಶಿಬಿರದ ಮೂಲಕ ಗುರುದೇವರ ಕೃಪೆಯು ಪ್ರತ್ಯಕ್ಷವಾಗಿ ಸಿಗುತ್ತಿದೆ ಎಂದು ತುಂಬಾ ಆನಂದ ಅನಿಸಿತು.