ವ್ಯಕ್ತಿಯ ಹೆಸರು ಅಥವಾ ಅಡ್ಡಹೆಸರಿನಿಂದ ಅವನ ಮೇಲಾಗುವ ಪರಿಣಾಮ ಮತ್ತು ಆಧ್ಯಾತ್ಮಿಕ ಮಟ್ಟ, ಭಾವ ಮತ್ತು ತಳಮಳ ಈ ಘಟಕಗಳ ಅವನ ಹೆಸರು ಅಥವಾ ಅಡ್ಡಹೆಸರಿನ ಮೇಲಾಗುವ ಪರಿಣಾಮ

ಕು. ಮಧುರಾ ಭೋಸಲೆ

ಪ್ರಶ್ನೆ : ಕೆಲವರ ಅಡ್ಡಹೆಸರುಗಳು ಸಾತ್ತ್ವಿಕವಾಗಿರುವುದಿಲ್ಲ, ಉದಾ. ಅಂಧಾರೆ (ಅರ್ಥ : ಕತ್ತಲು), ಕೊತ್ತಂಬರಿ ಅವರು ಇಂತಹ ಹೆಸರುಗಳನ್ನು ಬದಲಾಯಿಸುವುದು ಯೋಗ್ಯವಾಗಿದೆಯೇ ? ಬದಲಾಯಿಸುವುದಿದ್ದರೆ ಯಾವುದು ಯೋಗ್ಯ ?  ನಮ್ಮ ಜಾತಿಯಲ್ಲಿನ ಒಳ್ಳೆಯ ಅಡ್ಡಹೆಸರನ್ನು ಸ್ವೀಕರಿಸಬೇಕೇ ?

ಉತ್ತರ : ‘ಶಬ್ದ, ಸ್ಪರ್ಶ, ರೂಪ, ರಸ. ಗಂಧ ಮತ್ತು ಶಕ್ತಿ’ ಇವು ಒಟ್ಟಿಗೆ ಕಾರ್ಯನಿರತವಾಗಿರುತ್ತವೆ. ವ್ಯಕ್ತಿಯ ಹೆಸರು ಮತ್ತು ಅಡ್ಡಹೆಸರು ಈ ಘಟಕಗಳ ಪರಿಣಾಮವು ಶೇ. ೫೦ ಮಟ್ಟದ ವರೆಗೆ ಆಗುತ್ತಿರುತ್ತದೆ.  ವರ್ಣಗಳೇ ಹಿಂದೂ ಧರ್ಮದ ಆಧಾರವಾಗಿದೆಯೇ ಹೊರತು ಜಾತಿಗಳಲ್ಲ. ಆದುದರಿಂದ ವ್ಯಕ್ತಿಯು ಅವನ ಜಾತಿಯಂತೆ ಅಡ್ಡಹೆಸರುಗಳನ್ನು ಇಟ್ಟುಕೊಳ್ಳಲು ಯಾವುದೇ ಆಧ್ಯಾತ್ಮಿಕ ಆಧಾರವಿಲ್ಲ. ವ್ಯಕ್ತಿಯ ಹೆಸರು ಮತ್ತು ಅಡ್ಡಹೆಸರು ಇವುಗಳ ಪರಿಣಾಮವು ಅವನ ಆಧ್ಯಾತ್ಮಿಕ ಮಟ್ಟ, ಭಾವ ಮತ್ತು ತಳಮಳ ಈ ಘಟಕಗಳನ್ನು ಅವಲಂಬಿಸಿರುತ್ತದೆ. ಶೇ. ೫೦ ರಷ್ಟು ಮಟ್ಟದ ಮುಂದೆ ವ್ಯಕ್ತಿಯ ಹೆಸರು ಮತ್ತು ಅಡ್ಡಹೆಸರುಗಳ ಅವನ ಮೇಲೆ ಸೂಕ್ಷ್ಮ ಸ್ತರದಲ್ಲಿ ಆಗುವ ಪರಿಣಾಮವು ಕಡಿಮೆ ಆಗತೊಡಗುತ್ತದೆ. ಶೇ. ೫೦ ರ ಮಟ್ಟದ ಮುಂದೆ ವ್ಯಕ್ತಿಯ ಹೆಸರು ಮತ್ತು ಅಡ್ಡಹೆಸರುಗಳ ಅವನ ಮೇಲೆ ಸೂಕ್ಷ್ಮಸ್ತರದಲ್ಲಿ ಆಗುವ ಪರಿಣಾಮವು ಶೇ. ೫೦  ಕ್ಕಿಂತಲೂ ಕಡಿಮೆಯಾಗುತ್ತದೆ ಮತ್ತು ಶೇ. ೭೦ ರ ಮಟ್ಟದ ನಂತರ ಈ ಪರಿಣಾಮವು ಶೇ. ೦ ಆಗುತ್ತದೆ. ಆದುದರಿಂದ ಪ.ಪೂ. ಝುರಳೆ ಮಹಾರಾಜರು, (ಅರ್ಥ : ಜಿರಲೆ), ಪ.ಪೂ. ಢೆಕಣೆ (ಅರ್ಥ: ತಿಗಣೆ) ಮಹಾರಾಜರಂತಹ ಸಂತರ ಮೇಲೆ ಸ್ವಲ್ಪವೂ ಪರಿಣಾಮವಾಗಲಿಲ್ಲ.ಆಧ್ಯಾತ್ಮಿಕ ಮಟ್ಟ ಶೇ. ೫೦ ಕ್ಕಿಂತಲೂ ಕಡಿಮೆಯಿರುವ ವ್ಯಕ್ತಿಯ ಹೆಸರು ಅಥವಾ ಅಡ್ಡಹೆಸರು ಸಾತ್ತ್ವಿಕವಿಲ್ಲದಿದ್ದರೆ, ಅವನ ಮೇಲೆ ಪರಿಣಾಮವಾಗಬಹುದು. ಆದುದರಿಂದ ಇಂತಹ ವ್ಯಕ್ತಿಗಳು ತಮ್ಮ ಹೆಸರು ಅಥವಾ ಅಡ್ಡಹೆಸರನ್ನು ಬದಲಾಯಿಸಿ ಸಾತ್ತ್ವಿಕ ಹೆಸರನ್ನು ಅಥವಾ ಅಡ್ಡಹೆಸರನ್ನು ಇಟ್ಟುಕೊಳ್ಳಬೇಕು.

ಶೇ. ೫೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಗಳು ಅವರ ಹೆಸರು ಅಥವಾ ಅಡ್ಡಹೆಸರುಗಳನ್ನು ಬದಲಾಯಿಸುವುದಕ್ಕಿಂತ ಧರ್ಮಾಚರಣೆ ಮತ್ತು ವ್ಯಷ್ಟಿ, ಹಾಗೆಯೇ ಸಮಷ್ಟಿ ಸಾಧನೆಯನ್ನು ಮನಃಪೂರ್ವಕವಾಗಿ, ಭಾವಪೂರ್ಣ ಮತ್ತು ತಳಮಳದಿಂದ ಮಾಡುವುದರತ್ತ ಗಮನ ಕೊಡುವುದು ಹೆಚ್ಚು ಯೋಗ್ಯವಾಗಿದೆ.

ಶೇ. ೩೦ ಮಟ್ಟದ ವರೆಗೆ ಹೆಸರನ್ನು ಬದಲಾಯಿಸಿದರೂ, ಯಾವ ಲಾಭವೂ ಆಗುವುದಿಲ್ಲ; ಏಕೆಂದರೆ ಮನಸ್ಸು ಮಾಯೆಯಲ್ಲಿಯೇ ಸಿಲುಕಿರುತ್ತದೆ. ಶೇ. ೩೦ ರಿಂದ ಶೇ. ೬೦ ಮಟ್ಟದವರೆಗೆ ಹೆಸರಿನ ಪರಿಣಾಮವು ಕಡಿಮೆ ಕಡಿಮೆಯಾಗುತ್ತಾ ಹೋಗುತ್ತದೆ. ಶೇ. ೭೦ ರ ಮಟ್ಟದ ಮುಂದೆ ಹೆಸರು ಏನೇ ಇದ್ದರೂ, ಅದರಿಂದ ವ್ಯಕ್ತಿಯ ಮೇಲೆ (ಸಂತರ ಮೇಲೆ) ಯಾವುದೇ ಪರಿಣಾಮವಾಗುವುದಿಲ್ಲ.

  – ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಲಭಿಸಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೩.೮.೨೦೨೦, ರಾತ್ರಿ ೧೦.೩೦)