ಮುಖದ ಮೇಲೆ ತೊಂದರೆದಾಯಕ ಶಕ್ತಿಯ ಆವರಣವು ಅರಿವಾದರೆ ಅದಕ್ಕೆ ಮಾಡಬೇಕಾದ ಆಧ್ಯಾತ್ಮಿಕ ಸ್ತರದ ಉಪಾಯಗಳು

ಕು. ಮಧುರಾ ಭೋಸಲೆ

ಕೆಟ್ಟ ಶಕ್ತಿಗಳು ಸಾಧಕರ ಪಂಚಜ್ಞಾನೇಂದ್ರಿಗಳನ್ನು ತಮ್ಮ ವಶದಲ್ಲಿ ತೆಗೆದುಕೊಳ್ಳಲು ಸಾಧಕರ ಮುಖಮುದ್ರೆಯ ಮೇಲೆ ತೊಂದರೆದಾಯಕ (ಕಪ್ಪು) ಆವರಣವನ್ನು ನಿರ್ಮಿಸುತ್ತವೆ. ಅದರಿಂದ ಸಾಧಕರ ಮುಖಮುದ್ರೆಯು ಕಪ್ಪಾಗಿ ಕಾಣುವುದು, ಮುಖಮುದ್ರೆಯ ಅಂಚು ಅಸ್ಪಷ್ಟವಾಗಿ ಕಾಣುವುದು, ಕಣ್ಣುಗಳು ಉರಿಯುವುದು, ಮುಖದ ಮೇಲೆ ಗುಳ್ಳೆಗಳು ಬರುವುದು, ಮುಖಮುದ್ರೆಯ ಮೇಲೆ ಕಪ್ಪು ಕಲೆ ಬೀಳುವುದು ಅಥವಾ ಮುಖಮುದ್ರೆಯು ನಿಸ್ತೇಜ ಅಥವಾ ದಣಿದ ಹಾಗೆ ಕಾಣುವುದು ಇಂತಹ ತೊಂದರೆಗಳು ಅರಿವಾಗುತ್ತವೆ. ಸಾಧಕರ ಮುಖಮುದ್ರೆಯ ಮೇಲೆ ಪಾತಾಳದ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಆಕ್ರಮಣವನ್ನು ಮಾಡಿದುದರಿಂದ ಮುಖಮುದ್ರೆಯ ಮೇಲೆ ತೊಂದರೆದಾಯಕ ಆವರಣವು ಬಂದಿದೆ’, ಎಂಬುವುದನ್ನು ತಿಳಿಯಬೇಕು. ಇದಕ್ಕಾಗಿ ಸಾಧಕರು ಮುಂದೆ ಹೇಳಿದ ಪ್ರಕ್ರಿಯೆಯನ್ನು ಸ್ಥೂಲದಿಂದ ಮಾಡಿ ತಮ್ಮ ಮುಖಮುದ್ರೆಯ ಮೇಲೆ ಆಧ್ಯಾತ್ಮಿಕ ಸ್ತರದ ಉಪಾಯವನ್ನು ಮಾಡಬಹುದು.

೧. ೧ ಅಥವಾ ಮುಕ್ಕಾಲು ಚಹಾ ಚಮಚದಷ್ಟು ಸನಾತನ-ನಿರ್ಮಿತ ಉಟಣೆಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಬೇಕು.

೨. ಅದರಲ್ಲಿ ಅರ್ಧ ಚಹಾ ಚಮಚದಷ್ಟು ಕೊಬ್ಬರಿಎಣ್ಣೆಯನ್ನು ಹಾಕಬೇಕು.

೩. ಈ ಮಿಶ್ರಣದಲ್ಲಿ ಅರ್ಧ ಚಮಚದಷ್ಟು ಗೋಮೂತ್ರ ಹಾಕಬೇಕು.

೪. ಈ ಮಿಶ್ರಣದಲ್ಲಿ ಒಂದು ಸಣ್ಣ ಕರ್ಪೂರದ ತುಂಡನ್ನು ಬೆರಳುಗಳಿಂದ ಒತ್ತಿ ನುಣ್ಣಗೆ ಪುಡಿಯನ್ನು ಹಾಕಬೇಕು.

೫. ಈ ಎಲ್ಲ ಘಟಕಗಳನ್ನು ಬೆರಳಿನಿಂದ ಕಲುಕಿಸಿ ಅದರ ಮಿಶ್ರಣವನ್ನು ಮಾಡಬೇಕು.

೬. ಮುಖಕ್ಕೆ ನೀರು ಚಿಮುಕಿಸಿ ನಂತರ ಮೇಲಿನ ರೀತಿಯಲ್ಲಿ ಸಿದ್ಧಪಡಿಸಿದ ಉಟಣೆಯ ಮಿಶ್ರಣವನ್ನು ಸಂಪೂರ್ಣ ಮುಖಕ್ಕೆ ಹಚ್ಚಬೇಕು.

೭. ಮಿಶ್ರಣವನ್ನು ಹಚ್ಚಿದ ನಂತರ ಶ್ರೀಕೃಷ್ಣನಲ್ಲಿ ಅಥವಾ ಉಪಾಸ್ಯದೇವತೆಯಲ್ಲಿ ‘ನನ್ನ ಮುಖಮುದ್ರೆಯ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ಸಂಪೂರ್ಣವಾಗಿ ನಾಶವಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.

೮. ತದನಂತರ ೩ ರಿಂದ ೫ ನಿಮಿಷಗಳ ನಂತರ ಮುಖಮುದ್ರೆಯನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು.

ಈ ರೀತಿಯಾಗಿ ನಮಗೆ ಒಳ್ಳೆಯದೆನಿಸುವವರೆಗೂ, ಅಂದರೆ ೨-೩ ವಾರಗಳ ಕಾಲ ಮುಖಮುದ್ರೆಯ ಮೇಲೆ ಉಟಣೆಯಿಂದ ಆಧ್ಯಾತ್ಮಿಕ ಸ್ತರದ ಉಪಾಯವನ್ನು ಮಾಡಿದರೆ ಸಂಪೂರ್ಣ ತೊಂದರೆದಾಯಕ ಆವರಣವು ನಾಶವಾಗಿ ಮನಸ್ಸಿಗೆ ಹಗುರತೆ, ಉತ್ಸಾಹ ಮತ್ತು ಆನಂದದ ಅರಿವಾಗುವುದು. ಮೇಲೆ ಹೇಳಿದಂತೆ ಮುಖಮುದ್ರೆಗಾಗಿ ಮಾಡಿದ ಉಪಾಯವನ್ನು ದೇಹದಲ್ಲಿನ ಸಪ್ತಕುಂಡಲಿನಿಚಕ್ರದ ಮೇಲಿನ ತೊಂದರೆದಾಯಕ ಆವರಣವನ್ನು ದೂರ ಮಾಡಲು ಸಹ ಮಾಡಬಹುದು.

ಕೃತಜ್ಞತೆ

ದೇವರ ಕೃಪೆಯಿಂದ ತೋಚಿದ ಈ ಉಪಾಯವನ್ನು ನಾನು ಕಳೆದ ೩-೪ ತಿಂಗಳಿನಿಂದ ಮಾಡುತ್ತಿದ್ದೇನೆ. ಅದರಿಂದ ನನಗೆ ಬಹಳಷ್ಟು ಪ್ರಮಾಣದಲ್ಲಿ ಲಾಭವಾಗಿದೆ. ಈ ಉಪಾಯವು ಸೂಚಿಸಿದ್ದಕ್ಕೆ ಶ್ರೀ ಗುರುಚರಣಗಳಲ್ಲಿ ಕೃತಜ್ಞಳಾಗಿದ್ದೇನೆ.

– ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೩) (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧. ೩.೨೦೨೨)

ಬಟ್ಟೆಗಳಲ್ಲಿ ತೊಂದರೆದಾಯಕ ಶಕ್ತಿಗಳು ಕಂಡುಬಂದಲ್ಲಿ ಮಾಡಬೇಕಾದ ಆಧ್ಯಾತ್ಮಿಕ ಉಪಾಯಗಳು !

೧. ಬಟ್ಟೆಗಳ ಮೇಲೆ ತೊಂದರೆದಾಯಕ(ಕಪ್ಪು) ಆವರಣವು ಬಂದಿದ್ದಲ್ಲಿ ಅಥವಾ ಬಟ್ಟೆಗಳಲ್ಲಿ ತೊಂದರೆದಾಯಕ ಕಪ್ಪು ಶಕ್ತಿ ಕಾರ್ಯನಿರತವಾಗಿದ್ದರೆ ಅದನ್ನು ಗುರುತಿಸುವ ವಿಧಾನ

೧ ಅ. ಬಟ್ಟೆಗಳ ಕಡೆಗೆ ನೋಡಿದಾಗ ‘ಅದನ್ನು ಧರಿಸಬಾರದು’ ಎಂಬ ವಿಚಾರ ಬರುವುದು ಅಥವಾ ಅದನ್ನು ನೋಡಿದಾಗ ಕಣ್ಣುಗಳು ಉರಿಯುವುದು, ತಲೆ ಸುತ್ತುವುದು, ವಾಂತಿಯಾಗುವುದು ಇತ್ಯಾದಿ ತೊಂದರೆಗಳು ಆಗಬಹುದು.

೧ ಆ. ಬಟ್ಟೆಗಳನ್ನು ಕೈಗೆತ್ತಿಕೊಂಡಾಗ ಕೈ ಭಾರ ಎನಿಸುವುದು, ಕೈ ನೋವಾಗುವುದು ಅಥವಾ ಬಟ್ಟೆಯ ಸ್ಪರ್ಶ ಬೇಡ ಎನಿಸುವಂತಹ ತೊಂದರೆಯಾಗುತ್ತವೆ.

೧ ಇ. ಬಟ್ಟೆಗಳಿಗೆ ದುರ್ಗಂಧ ಬರುವುದು, ಬಟ್ಟೆಗಳನ್ನು ಮಡಚಿಟ್ಟಾಗ ಅವುಗಳ ಅಂಚು ಅಸ್ಪಷ್ಟವಾಗಿ ಕಾಣಿಸುವುದು

೨. ಬಟ್ಟೆಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ನಾಶಗೊಳಿಸಲು ಮಾಡಬೇಕಾದ ಉಪಾಯಗಳು

೨ ಅ. ಬಟ್ಟೆಗಳನ್ನು ಕಲ್ಲುಪ್ಪು ಹಾಕಿದ ನೀರಿನಲ್ಲಿ ಕಡಿಮೆಪಕ್ಷ ಅರ್ಧದಿಂದ ೧ ಗಂಟೆಯ ವರೆಗೆ ನೆನೆಸಿಡಬೇಕು ಮತ್ತು ಅನಂತರ ಅದನ್ನು ಒಗೆದು ಒಣಗಿಸಬೇಕು.

೨ ಆ. ಬಟ್ಟೆಗಳಲ್ಲಿನ ತೊಂದರೆದಾಯಕ ಆವರಣ ಕಡಿಮೆಯಾಗದಿದ್ದಲ್ಲಿ ಸನಾತನದ ಸಾತ್ತ್ವಿಕ ಉತ್ಪಾದನೆ ‘ಸನಾತನ ಗೋಮೂತ್ರ ಅರ್ಕ’ ವನ್ನು ಅರ್ಧ ಬಕೆಟ್ ನೀರಿನಲ್ಲಿ ೨-೩ ಚಹಾ ಚಮಚದಷ್ಟು ಹಾಕಿ ಆ ನೀರಿನಲ್ಲಿ ಬಟ್ಟೆಗಳನ್ನು ಕಡಿಮೆಪಕ್ಷ ಅರ್ಧ ಗಂಟೆಯಿಂದ ೧ ಗಂಟೆ ವರೆಗೆ ನೆನೆಸಿಡಬೇಕು ಮತ್ತು ಅನಂತರ ಅದನ್ನು ಒಗೆದು ಬಿಸಿಲಿನಲ್ಲಿ ಒಣಗಿಸಬೇಕು.

೩. ಬಟ್ಟೆಗಳಲ್ಲಿನ ತೊಂದರೆದಾಯಕ ಶಕ್ತಿಗಳು ಹೆಚ್ಚಾಗಬಾರದು ಮತ್ತು ಅದನ್ನು ಭರಿತಗೊಳಿಸಲು ಬಟ್ಟೆಗಳಿಗೆ ನಿಯಮಿತವಾಗಿ ಮಾಡಬೇಕಾದ ಉಪಾಯಗಳು

೩ ಅ. ಬಟ್ಟೆಗಳಲ್ಲಿ ದೇವತೆಗಳ ನಾಮಪಟ್ಟಿಗಳು ಅಥವಾ ಸನಾತನದ ನಿರ್ಮಿತ ಕರ್ಪೂರವನ್ನು ಹಾಕಿಡಬೇಕು.

೩ ಆ. ಬಟ್ಟೆಗಳನ್ನು ೧೫-೨೦ ನಿಮಿಷಗಳು ಬಿಸಿಲಿನಲ್ಲಿಡಬೇಕು.

೩ ಆ. ಈ ರೀತಿ ಉಪಾಯಗಳನ್ನು ಮಾಡುವುದರಿಂದ ಬಟ್ಟೆಗಳಲ್ಲಿನ ತೊಂದರೆದಾಯಕ ಕಪ್ಪು ಶಕ್ತಿ ನಾಶವಾಗಿ ಅದರಲ್ಲಿ ಸಕಾರಾತ್ಮಕ ಶಕ್ತಿಯು ಕಾರ್ಯನಿರತವಾಗಲು ಸಹಾಯವಾಗುತ್ತದೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಪಡೆದಿರುವ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ.( ೩೧.೩.೨೦೨೨)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.