ಸಂತರಲ್ಲಿನ  ಚೈತನ್ಯದ ಲಾಭವಾಗಬೇಕೆಂದೇ ಅವರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕರಿಸುವ ಪದ್ಧತಿ ಇರುವುದು

ಪರಾತ್ಪರ ಗುರು ಡಾ. ಆಠವಲೆ

 

ಸದ್ಗುರು (ಡಾ.) ಮುಕುಲ ಗಾಡಗೀಳ

ಪರಾತ್ಪರ ಗುರು ಡಾಕ್ಟರರು ನಿರ್ಗುಣ ಸ್ಥಿತಿಯಲ್ಲಿರುವುದರಿಂದ ಅವರ ಮುಖಚರ್ಯೆಯತ್ತ ನೋಡಿದಾಗ ಶಾಂತಿಯ ಅರಿವಾಗುತ್ತದೆ; ಆದರೆ ಅವರ ಚರಣಗಳಿಂದ ಮಾತ್ರ ಚೈತನ್ಯವು ಪ್ರಕ್ಷೇಪಿಸುತ್ತಿರುತ್ತದೆ. ಆದುದರಿಂದಲೇ ಸಂತರಲ್ಲಿನ ಚೈತನ್ಯದ ಲಾಭವಾಗಬೇಕೆಂಬುದಕ್ಕಾಗಿ ಅವರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರವನ್ನು ಮಾಡುವ ಪದ್ಧತಿಯಿದೆ ‘ಪರಾತ್ಪರ ಗುರು ಡಾಕ್ಟರರ ನಿಂತ ಭಂಗಿಯಲ್ಲಿದ್ದ ಒಂದು ಛಾಯಾಚಿತ್ರವಿತ್ತು. ‘ಆ ಛಾಯಾಚಿತ್ರವನ್ನು ನೋಡಿ  ಏನು ಅರಿವಾಗುತ್ತದೆ ?’, ಇದರ ಪ್ರಯೋಗವನ್ನು ಮಾಡಲು ಪರಾತ್ಪರ ಗುರು ಡಾಕ್ಟರರು ನನಗೆ ಹೇಳಿದರು. ಪ್ರಯೋಗವನ್ನು ಮಾಡುವಾಗ ನನಗೆ ಪರಾತ್ಪರ ಗುರು ಡಾಕ್ಟರರ  ಮುಖವನ್ನು ನೋಡಿದಾಗ ಶಾಂತಿ ಎನಿಸಿತು. ಆದರೆ ಅವರ ಚರಣಗಳನ್ನು ನೋಡಿದಾಗ ಅದರಿಂದ ಚೈತನ್ಯವು ಪ್ರಕ್ಷೇಪಿತವಾಗುತ್ತಿದೆ ಎಂದೆನಿಸಿತು. ಇದರಿಂದ ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ಉಚ್ಚ ಆಧ್ಯಾತ್ಮಿಕ ಸ್ತರದಿಂದಾಗಿ ನಿರ್ಗುಣ ಸ್ಥಿತಿಯಲ್ಲಿದ್ದಾರೆ ಎಂಬುದರ ಅರಿವಾಯಿತು. ಆದುದರಿಂದ ಅವರ ಮುಖವನ್ನು ನೋಡಿದಾಗ ನನಗೆ ಶಾಂತಿಯ ಅರಿವಾಯಿತು. ಹೀಗಿದ್ದರೂ, ಅವರ ಚರಣಗಳಿಂದ ಸತತವಾಗಿ ಚೈತನ್ಯದ ಪ್ರಕ್ಷೇಪಣೆಯಾಗುತ್ತಿರುತ್ತದೆ. ಸಂತರಲ್ಲಿನ ಚೈತನ್ಯದ ಲಾಭವಾಗಬೇಕೆಂಬುದಕ್ಕಾಗಿಯೇ ಅವರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ಪದ್ಧತಿಯಿದೆ’, ಎಂಬುದನ್ನು ಪರಾತ್ಪರ ಗುರು ಡಾಕ್ಟರರು ಈ ಪ್ರಯೋಗದಿಂದ  ನನ್ನ ಅರಿವಿಗೆ  ತಂದುಕೊಟ್ಟರು. ಇದಕ್ಕಾಗಿ ನಾನು ಅವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಹೇಚ್.ಡಿ., ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೫.೧೨.೨೦೨೧)

ಶಿಷ್ಯನು ಗುರುಗಳಿಗೆ ಜ್ಞಾನವನ್ನು ನೀಡುವ ಒಂದು ವಿಸ್ಮಯಕಾರಿ ಉದಾಹರಣೆ ಎಂದರೆ ಸನಾತನದ ಜ್ಞಾನಪ್ರಾಪ್ತಿ ಮಾಡುವ ಸಾಧಕರು !

ಹಿಂದೆ ನಾನು ನನ್ನ ಬರುವ ಪ್ರಶ್ನೆಗಳಿಗೆ ಧ್ಯಾನದ ಮೂಲಕ ಉತ್ತರಗಳನ್ನು ಪಡೆಯುತ್ತಿದ್ದೆನು ಮತ್ತು ಆ ಜ್ಞಾನದ ಆಧಾರದಲ್ಲಿ ಗ್ರಂಥಗಳನ್ನು ಬರೆಯುತ್ತಿದ್ದೆನು. ಈಗ ನಾನು ನನ್ನ ಪ್ರಶ್ನೆಗಳನ್ನು ಜ್ಞಾನಪ್ರಾಪ್ತಿ ಮಾಡುವ ಸಾಧಕರಿಗೆ ಕೇಳುತ್ತೇನೆ ಹಾಗೂ ಜ್ಞಾನಪ್ರಾಪ್ತಿ ಮಾಡುವ ಸಾಧಕರಿಗೆ ಆ ಪ್ರಶ್ನೆಗಳಿಗೆ ಉತ್ತರದಲ್ಲಿ ದೊರಕುವ ಜ್ಞಾನವನ್ನು ಗ್ರಂಥಗಳಿಗಾಗಿ ಸಂಕಲನ ಮಾಡುತ್ತಿದ್ದೇನೆ.

– ಪರಾತ್ಪರ ಗುರು ಡಾ. ಆಠವಲೆ (೨೩.೧.೨೦೨೨)

ಆಧುನಿಕ ವೈದ್ಯಕೀಯ ಶಾಸ್ತ್ರಕ್ಕಿರುವ ಮಿತಿ !

‘ಆಧುನಿಕ ವೈದ್ಯಕೀಯ ಶಾಸ್ತ್ರ (ಅಲೊಪ್ಯಥಿ) ಇದು ರೋಗವನ್ನು ಕೇವಲ ದೈಹಿಕವಾಗಿ ಅಂದರೆ ಮೇಲ್ನೋಟಕ್ಕೆ ಗುರುತಿಸುತ್ತದೆ. ಮೂಲ ಕಾರಣವನ್ನು ಕಂಡುಹಿಡಿಯುವುದಿಲ್ಲ.ಅನಾರೋಗ್ಯದ ಮೂಲ ಕಾರಣ ಆಧ್ಯಾತ್ಮಿಕವಾಗಿರುತ್ತದೆ, ಉದಾ. ಆ ರೋಗಿಯ ಪ್ರಾರಬ್ಧ, ಅವನಿಗೆ ಇರುವ ಕೆಟ್ಟ ಶಕ್ತಿಗಳ ತೊಂದರೆ ಇತ್ಯಾದಿ. ಆಧುನಿಕ ವೈದ್ಯಕೀಯ ಶಾಸ್ತ್ರವು ಇದನ್ನು ಪತ್ತೆ ಹಚ್ಚಿ ಪರಿಹಾರ ನೀಡಲು ಸಾಧ್ಯವಿಲ್ಲ.

– (ಪರಾತ್ಪರ ಗುರು) ಡಾ. ಆಠವಲೆ