ರಾಮನಾಥಿ, ಗೋವಾ ಇಲ್ಲಿಯ ಸನಾತನದ ಆಶ್ರಮದ ಮುಂಭಾಗದಲ್ಲಿನ ಕಮಲಪೀಠದಲ್ಲಿ ಅರಳಿದ ‘ಲಕ್ಷ್ಮೀಕಮಲ’ದ ಸೂಕ್ಷ್ಮ ಪರೀಕ್ಷಣೆಯಲ್ಲಿ ಅರಿವಾದ ಆಧ್ಯಾತ್ಮಿಕ ವೈಶಿಷ್ಟ್ಯಗಳು !

ಕಮಲಪೀಠದಲ್ಲಿ ಅರಳಿದ ‘ಲಕ್ಷ್ಮೀಕಮಲ’

ಮಹರ್ಷಿಗಳ ಆಜ್ಞೆಯಂತೆ ರಾಮನಾಥಿ, ಗೋವಾ ಇಲ್ಲಿನ ಸನಾತನದ ಆಶ್ರಮದ ಮುಂಭಾಗದಲ್ಲಿ ಕಮಲಪೀಠವನ್ನು ಸ್ಥಾಪಿಸಲಾಗಿದೆ. ಕು. ಸೋನಾಲಿ ಖಟಾವಕರ ಎಂಬ ಸಾಧಕಿಯು ಈ ಕಮಲಪೀಠದ ಮತ್ತು ಆಶ್ರಮದಲ್ಲಿನ ತೋಟದ ನಿರ್ವಹಣೆಯನ್ನು ಮಾಡುತ್ತಾಳೆ. ಅವಳ ತೋಟದ ಸೇವೆಯನ್ನು ಅತ್ಯಂತ ಭಾವಪೂರ್ಣವಾಗಿ, ಪ್ರೀತಿಯಿಂದ ಮತ್ತು ತಳಮಳದಿಂದ ಮಾಡುತ್ತಾಳೆ. ಅವಳು ಆಶ್ರಮದ ಪರಿಸರದಲ್ಲಿ ವಿವಿಧ ಕುಂಡಗಳಲ್ಲಿ ಹಲವು ಸಸಿಗಳನ್ನು ನಾಟಿ ಮಾಡಿ ಅವುಗಳ ಸುಂದರವಾದ ರಚನೆ ಮಾಡಿದ್ದಾಳೆ. ಆದುದರಿಂದ ಆಶ್ರಮದ ಸೌಂದರ್ಯವು ಇನ್ನಷ್ಟು ವೃದ್ಧಿಯಾಗಿದೆ. ಕಮಲಪೀಠದಲ್ಲಿ ಕಮಲ ಅರಳಬೇಕೆಂದು ಶ್ರೀ. ಅಮೋಲ ಕುಳವಮುಡೆ ಇವರು ಕಮಲಪೀಠದಲ್ಲಿ ಫಲವತ್ತಾದ ಮಣ್ಣು ಮತ್ತು ಗೊಬ್ಬರವನ್ನು ಸೇರಿಸಿ ಅದನ್ನು ಮೃದುವಾದ ಹಸಿಮಣ್ಣು ಮಾಡುವುದು, ಅದರಲ್ಲಿ ಕಮಲದ ಸಸಿಗಳನ್ನು ನೆಡುವುದು ಇತ್ಯಾದಿ ಸಾಕಷ್ಟು ಶ್ರಮ ವಹಿಸಿದರು. ಶ್ರೀ. ಅಮೋಲ ಕುಳವಮುಡೆ ಮತ್ತು ಕು. ಸೋನಾಲಿ ಖಟಾವಕರ ಇವರಲ್ಲಿನ ಭಾವ ಮತ್ತು ತಳಮಳದಿಂದಾಗಿ ೧.೪.೨೦೨೨ ದಂದು ಕಮಲಪೀಠದಲ್ಲಿ ಗುಲಾಬಿ ಬಣ್ಣದ ‘ಲಕ್ಷ್ಮೀಕಮಲ’ ಅರಳಿದೆ. ಈ ಕಮಲವನ್ನು ನೋಡಿದಾಗ ಮುಂದಿನ ಅಂಶಗಳು ಗಮನಕ್ಕೆ ಬಂದವು.

ಕು. ಮಧುರಾ ಭೋಸಲೆ

೧. ಕಮಲವನ್ನು ನೋಡಿ ತುಂಬಾ ಚೈತನ್ಯ ಮತ್ತು ಆನಂದದ ಅರಿವಾಗುತ್ತದೆ. ಆದುದರಿಂದ ವಾತಾವರಣವು ಚೈತನ್ಯದಾಯಿ ಮತ್ತು ಆನಂದಮಯವಾಗಿದೆ. (ನನಗೂ ಹೀಗಿಯೇ ಎನಿಸಿತು. – ಸದ್ಗುರು ಡಾ. ಮುಕುಲ ಗಾಡಗೀಳ)

೨. ಈ ಕಮಲ ಪುಷ್ಪದಲ್ಲಿ ಶ್ರೀಮಹಾಲಕ್ಷ್ಮೀ ದೇವಿಯ ಶೇ. ೨ ರಷ್ಟು ತತ್ತ್ವ ಕಾರ್ಯನಿರತವಾಗಿರುವುದು ಕಂಡುಬರುತ್ತದೆ. ಈ ಕಮಲ ಪುಷ್ಪದಿಂದ ವಾತಾವರಣದಲ್ಲಿ ಗುಲಾಬಿ ಬಣ್ಣದ ಲಕ್ಷ್ಮೀತತ್ತ್ವವು ಪ್ರಕ್ಷೇಪಿತವಾಗುತ್ತದೆ. ಆದುದರಿಂದ ವಾತಾವರಣವು ಪ್ರಸನ್ನವೆನಿಸುತ್ತದೆ.

೩. ಕಮಲಪೀಠದಲ್ಲಿ ಯುಗಾದಿ ಹಬ್ಬದ ಹಿಂದಿನ ದಿನ ಅರಳಿರುವ ‘ಲಕ್ಷ್ಮೀಕಮಲ’ ಇದು ಶುಭ ಸಂಕೇತವಾಗಿದೆ. ಇದರ ಮೇಲಿಂದ ‘ಪೃಥ್ವಿಯ ಮೇಲೆ ಹಿಂದೂ ರಾಷ್ಟ್ರವು ಬೇಗನೆ ಉದಯಿಸಲಿದೆ’, ಎಂಬ ಸಂಕೇತವನ್ನು ಲಕ್ಷ್ಮೀಕಮಲವು ನೀಡುತ್ತಿದೆ’, ಎಂದು ಎನಿಸುತ್ತದೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ.(೧.೪.೨೦೨೨)

ಕಮಲಪೀಠದ ಸ್ಥಾಪನೆಯಾದಾಗಿನಿಂದ ಅಲ್ಲಿ ಮೊದಲಿಗೆ ಕಮಲಗಳು ಅರಳುತ್ತಿದ್ದವು; ಆದರೆ ಅನಂತರ ಕಮಲಗಳು ಅರಳುವುದು ನಿಂತು ಹೋಗಿತ್ತು. ಒಂದು ದಿನ ನಾನು ಶ್ರೀ ಮಹಾಲಕ್ಷ್ಮೀದೇವಿಯಲ್ಲಿ, ‘ಹೇ ಮಹಾಲಕ್ಷ್ಮೀದೇವಿ, ನಿನ್ನ ಸಲುವಾಗಿಯಾದರೂ ಈ ಕಮಲಪೀಠದಲ್ಲಿ ಕಮಲಗಳು ಅರಳಲಿ. ನಿನ್ನ ಕೃಪಾಶೀರ್ವಾದವು ನಮ್ಮ ಮೇಲೆ ಸದಾ ಇರಲಿ’ ಎಂದು ಪ್ರಾರ್ಥನೆ ಮಾಡಿದೆನು. ಅನಂತರ ಸೂಕ್ಷ್ಮದಲ್ಲಿಂದ ಶ್ರೀಮಹಾಲಕ್ಷ್ಮೀದೇವಿಯ ಚಿತ್ರವನ್ನು ಕಮಲಪೀಠದಲ್ಲಿ ಇರಿಸಿದೆನು. ಆ ಬಳಿಕ ೨ ದಿನಗಳ ನಂತರ ಒಂದು ಸಣ್ಣ ಮೊಗ್ಗು ಎಲೆಗಳ ನಡುವೆ ಕಾಣಿಸಿತು. ನನ್ನ ಪ್ರಾರ್ಥನೆ ದೇವಿಯ ತನಕ ತಲುಪಿದುದನ್ನು ನೋಡಿ ನನ್ನ ಭಾವಜಾಗೃತವಾಯಿತು. ಈ ಕಮಲಪುಷ್ಪವೆಂದರೆ ಶ್ರೀಮಹಾಲಕ್ಷ್ಮೀ ದೇವಿಯ ಪ್ರಸಾದ ಮತ್ತು ಆಶೀರ್ವಾದವೇ ಆಗಿದೆ.

– ಕು. ಸೋನಾಲೀ ಖಟಾವಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.