‘ಭಾರತಕ್ಕೆ ಕಿರುಕುಳ ನೀಡಿದರೆ ಬಿಡುವುದಿಲ್ಲ’, ಎಂಬ ಸಂದೇಶ ಚೀನಾಗೆ ತಲುಪಿದೆ !

ಅಮೇರಿಕಾದಿಂದ ರಾಜನಾಥ ಸಿಂಹರಿಂದ ಚೀನಾಗೆ ನೇರ ಎಚ್ಚರಿಕೆ

‘ಭಾರತಕ್ಕೆ ಯಾರಾದರೂ ಕಿರುಕುಳ ನೀಡಬಹುದು ಎಂಬ ವಿಚಾರವನ್ನು ಕೂಡ ಮನಸ್ಸಿನಲ್ಲಿ ತರದಿರಲಿ’, ಎಂಬ ರೀತಿಯ ಪ್ರತಿಮೆಯನ್ನು ಭಾರತವು ನಿರ್ಮಿಸಬೇಕು ! ಪಾಕಿಸ್ತಾನವು ಜಿಹಾದಿ ಭಯೋತ್ಪಾದಕರ ಮೂಲಕ ಕಾಶ್ಮೀರದಲ್ಲಿ ಹಿಂದೂಗಳನ್ನು ಹಾಗೂ ಭದ್ರತಾಪಡೆಯವರನ್ನು ಗುರಿ ಮಾಡಲಾಗುತ್ತದೆ ಇದನ್ನು ಶಾಶ್ವತವಾಗಿ ಬಂದೋಬಸ್ತು ಮಾಡುವ ಅಗತ್ಯವಿದೆ !

ಸ್ಯಾನಫ್ರಾನ್ಸಿಸ್ಕೋ (ಅಮೇರಿಕಾ) – ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಬಲಶಾಲಿ ದೇಶವಾಗಿದೆ. ಈಗ ಜಗತ್ತಿನಲ್ಲಿ ಮೂರು ದೊಡ್ಡ ಆರ್ಥಿಕವ್ಯವಸ್ಥೆಯಲ್ಲಿ ಭಾರತವನ್ನು ಸಮಾವೇಶಗೊಳಿಸಲಾಗುತ್ತದೆ. ಆದ್ದರಿಂದ ‘ಭಾರತವನ್ನು ಯಾರಾದರುಕಿರುಕುಳ ನೀಡಿದರೆ ನಾವು ಅವರನ್ನು ಬಿಡುವುದಿಲ್ಲ’, ಈ ಸಂದೇಶ ಚೀನಾಗೆ ತಲುಪಿದೆ, ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಎಚ್ಚರಿಕೆಯನ್ನು ನೀಡಿದ್ದಾರೆ. ಅವರು ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದೊಂದಿಗೆ ಮಾತನಾಡುತ್ತಿದ್ದರು.

ರಷ್ಯಾ ಹಾಗೂ ಉಕ್ರೇನನ ನಡುವೆ ಯುದ್ಧದ ಹಿನ್ನಲೆಯಲ್ಲಿ ಅಮೇರಿಕಾವು ಭಾರತದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿರುವುದು ತಿಳಿದು ಬಂದಿದೆ. ಈ ಕುರಿತು ಅಮೇರಿಕಾದ ಹೆಸರು ತೆಗೆದುಕೊಳ್ಳದೆ ರಾಜನಾಥ ಸಿಂಹರವರು ‘ಭಾರತಕ್ಕೆ ಒಂದು ದೇಶದೊಂದಿಗೆ ಒಳ್ಳೆಯ ಸಂಬಂಧವಿದೆ, ಅದರ ಅರ್ಥ ಮತ್ತೊಂದು ದೇಶಕ್ಕೆ ಕೆಡುಕಾಗಲಿ, ಎಂದಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಬಂಧ ಬೆಳಸುವಾಗ ಎರಡೂ ದೇಶಗಳಿಗೂ ಅದರಿಂದ ಪ್ರಯೋಜನವಾಗಲಿ, ಎಂಬ ಧೋರಣೆಯ ಮೇಲೆ ಭಾರತವು ಯಾವಾಗಲೂ ವಿಶ್ವಾಸವಿಡುತ್ತದೆ’, ಎಂದು ಹೇಳಿದರು.